ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮನವಿ

By Madhusoodhan
|
Google Oneindia Kannada News

ನವದೆಹಲಿ, ಆಗಸ್ಟ್, 19: ಮಹಾದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಕರ್ನಾಟಕ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.

ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಶುಕ್ರವಾರ ತಿಳಿಸಿದ್ದಾರೆ.[ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಏನಿದೆ?]

supreme court

ಸಲಹೆ ಸೂಚನೆಗಳ ಅನ್ಬಯ ವಕೀಲ ಫಾಲಿ ಎಸ್‌. ನಾರಿಮನ್‌ ಅವರ ಭೇಟಿಯ ಬಳಿಕ ಮಾತನಾಡಿದ ಎಂ.ಬಿ. ಪಾಟೀಲ್ ಅವರು, ನಾರಿಮನ್ ಸಲಹೆಯಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.[ಜೈಲಿನಿಂದ ಬಿಡುಗಡೆಯಾದ ಮಹಾದಾಯಿ ರೈತರು ಹೇಳಿದ್ದೇನು?]

ಕಳೆದ ಜುಲೈ 28 ರಂದು ಕಳಸಾ ಬಂಡೂರಿ ಮಹಾದಾಯಿಗೆ ಸಂಬಂಧಿಸಿ ನ್ಯಾಯಾಧೀಕರಣ ನೀಡಿರುವ ಮಧ್ಯಂತರ ತೀರ್ಪು ರಾಜ್ಯದಲ್ಲಿ ಆಕ್ರೋಶದ ಕಿಡಿ ಹೊತ್ತಿಸಿತ್ತು. ಕರ್ನಾಟಕ ಕೇಳಿದ 7.5 ಟಿಎಂಸಿ ನೀರಿನ ಏತ ನೀರಾವರಿಗೆ ಅವಕಾಶ ನೀಡಿದರೆ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ನದಿಗೆ ಅಡ್ಡವಾಗಿ ಅಣೆಕಟ್ಟನ್ನು ನಿರ್ಮಾಣ ಮಾಡದೆನೀರನ್ನು ಹೇಗೆ ಮೇಲಕ್ಕೆ ಎತ್ತಿತ್ತೀರಿ ಎಂದು ಪ್ರಶ್ನೆ ಮಾಡಿದ್ದ ನ್ಯಾಯಾಧಿಕರಣ ರಾಜ್ಯದ ಮನವಿಯನ್ನು ತಳ್ಳಿಹಾಕಿತ್ತು.

English summary
The Karnataka state government has decided to file a special leave petition to Supreme Court challenging the order of the Mahadayi Water Dispute Tribunal rejecting Karnataka's application seeking seven tmcft water for the Kalasa-Banduri Nala drinking water project. On Friday, Water Resources Minister M.B. Patil met State Counsel Fali Nariman in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X