ಕಾನೂನು ಚೌಕಟ್ಟಿನಲ್ಲಿ ಸಿಲುಕಿದ ಮಹದಾಯಿ ಹೋರಾಟಗಾರರು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 11 : ಮಹದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸಿದಾಗ ಬಂಧಿತರಾಗಿರುವ ರೈತರನ್ನು ತಕ್ಷಣ ಬಿಡುಗಡೆ ಮಾಡುವುದಿಲ್ಲ. ಬಂಧಿತ ರೈತರು ಜಾಮೀನು ಪಡೆಯಲು ಸಹಕಾರ ನೀಡುವುದಾಗಿ ಸರ್ಕಾರ ಹೇಳಿದೆ.

ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಬಂಧಿತರಾಗಿರುವ 187 ರೈತರ ಮೇಲೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ಚರ್ಚೆ ನಡೆಯಿತು. ಕಾನೂನಿನ ತೊಡಕುಗಳು ಇರುವುದರಿಂದ ರೈತರನ್ನು ತಕ್ಷಣ ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎಂದು ತೀರ್ಮಾನಿಸಲಾಯಿತು.[ಮಹದಾಯಿ ಹೋರಾಟ : ರೈತರ ಬಿಡುಗಡೆ ಶೀಘ್ರ]

siddaramaiah

ಸಭೆಯ ಬಳಿಕ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, 'ಪ್ರತಿಭಟನೆ ನಡೆಸಿದ ಕುರಿತು 25 ಎಫ್‌ಐಆರ್ ದಾಖಲಾಗಿದೆ. 187 ಜನರನ್ನು ಬಂಧಿಸಲಾಗಿದೆ. ಇವುಗಳಲ್ಲಿ 7 ಜಾಮೀನುರಹಿತ ಮೊಕದ್ದಮೆಗಳು. ಸಿಆರ್‌ಪಿಸಿ 321ನೇ ಸೆಕ್ಷನ್‌ ಪ್ರಕಾರ, ಇಂತಹ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸದೇ ಯಾವುದೇ ಪ್ರಕ್ರಿಯೆ ಮುಂದುವರಿಸುವಂತಿಲ್ಲ' ಎಂದು ಹೇಳಿದರು.[ಮಹದಾಯಿ: ಸರ್ವಪಕ್ಷಗಳ ಸಭೆ ತೆಗೆದುಕೊಂಡ ನಿರ್ಧಾರವೇನು?]

ಆಕ್ಷೇಪಣೆ ಸಲ್ಲಿಸುವುದಿಲ್ಲ : ಬಂಧಿತರಾಗಿರುವ ರೈತರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದಾಗ ಸರ್ಕಾರ ಆಕ್ಷೇಪಣೆ ಸಲ್ಲಿಸುವುದಿಲ್ಲ. ಈ ಕುರಿತು ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರಿಗೆ ವಹಿಸಲಾಗಿದೆ.

ಹಲವು ರೈತರ ಮೇಲೆ ಗಲಭೆ, ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿದ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ. ಈ ಕುರಿತು ತನಿಖೆ ನಡೆದು, ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ ಅವುಗಳನ್ನು ವಾಪಸ್ ಪಡೆಯಬಹುದು. ಎಲ್ಲಾ ರೈತರು ಸದ್ಯ, ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದ್ದರಿಂದ, ಮೊದಲು ಕೋರ್ಟ್‌ನಲ್ಲಿ ಅವರ ವಿಚಾರಣೆ ನಡೆಯಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka government has said that it would not be possible to immediately withdraw cases against farmers who arrested during the Mahadayi protests.
Please Wait while comments are loading...