ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹದಾಯಿ : ಕರ್ನಾಟಕದ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಗೋವಾ

By Gururaj
|
Google Oneindia Kannada News

Recommended Video

Mahadayi : ಮಹದಾಯಿ ವಿಚಾರವಾಗಿ ಕರ್ನಾಟಕದ ಮೇಲೆ ಆರೋಪ ಮಾಡಿದ ಗೋವಾ..! | Oneindia Kannada

ಬೆಂಗಳೂರು, ಆಗಸ್ಟ್ 21 : ಮಹದಾಯಿ ವಿವಾದದ ಕುರಿತು ನೀಡಿದ ತೀರ್ಪನ್ನು ಪಾಲನೆ ಮಾಡುವಲ್ಲಿ ಕರ್ನಾಟಕ ವಿಫಲವಾಗಿದೆ ಎಂದು ಗೋವಾ ಸರ್ಕಾರ ಆರೋಪ ಮಾಡಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

'ಮಹದಾಯಿ ನ್ಯಾಯಾಧಿಕರಣ ನೀಡಿದ ಮಧ್ಯಂತರ ಆದೇಶವನ್ನು ಕರ್ನಾಟಕ ಪಾಲನೆ ಮಾಡಿಲ್ಲ ಎಂಬುದು ಗೋವಾದ ಆರೋಪವಾಗಿದೆ. ಮಹದಾಯಿ ನದಿ ನೀರನ್ನು ಅಕ್ರಮವಾಗಿ ಮಲಪ್ರಭಾ ನದಿಗೆ ಕರ್ನಾಟಕ ತಿರುಗಿಸಿದೆ ಎಂದು ಗೋವಾ ದೂರಿದೆ.

ಮಹದಾಯಿ ತೀರ್ಪು: ಗೋವಾದಿಂದಲೂ ಮೇಲ್ಮನವಿ ಸಾಧ್ಯತೆ ಮಹದಾಯಿ ತೀರ್ಪು: ಗೋವಾದಿಂದಲೂ ಮೇಲ್ಮನವಿ ಸಾಧ್ಯತೆ

ನ್ಯಾಯಾಧಿಕರಣ ಮತ್ತು ಸುಪ್ರೀಂಕೋರ್ಟ್ ನೀಡಿದ ಯಾವುದೇ ಸೂಚನೆಗಳನ್ನು ಉಲ್ಲಂಘನೆ ಮಾಡಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟನೆ ನೀಡಿದೆ. ಆದರೆ, ನ್ಯಾಯಾಧಿಕರಣದ ಅಂತಿಮ ತೀರ್ಪು ಪ್ರಕಟಗೊಂಡ ಆ.14ರಂದೇ ಕರ್ನಾಟಕ ನಿಯಮ ಉಲ್ಲಂಘಿಸಿದೆ ಎಂದು ಗೋವಾ ಆರೋಪಿಸಿದೆ.

Mahadayi : Goa filed a disobedience petition against Karnataka

ಮೇಲ್ಮನವಿ ಸಲ್ಲಿಕೆ? : ಮಹದಾಯಿ ನ್ಯಾಯಾಧಿಕರಣದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಗೋವಾ ಸರ್ಕಾರ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಅಮೆರಿಕದಲ್ಲಿದ್ದು, ಅವರು ವಾಪಸ್ ಆದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಶೀಘ್ರದಲ್ಲೇ ಮಹದಾಯಿ ಮೇಲುಸ್ತುವಾರಿ ಸಮಿತಿ ರಚನೆ ಶೀಘ್ರದಲ್ಲೇ ಮಹದಾಯಿ ಮೇಲುಸ್ತುವಾರಿ ಸಮಿತಿ ರಚನೆ

ನ್ಯಾಯಾಧಿಕರಣದ ಅಂತಿಮ ತೀರ್ಪಿನಲ್ಲಿ ಗೋವಾ ರಾಜ್ಯಕ್ಕೆ 24 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ರಾಜ್ಯದ ಕಾನೂನು ತಜ್ಞರ ತಂಡ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಸಲಹೆ ನೀಡಿದೆ.

ಮಹದಾಯಿ ತೀರ್ಪು ಮುಂದೇನು? ಶೀಘ್ರ ಸರ್ವಪಕ್ಷ ಸಭೆ ಎಂದ ಸಿಎಂ ಮಹದಾಯಿ ತೀರ್ಪು ಮುಂದೇನು? ಶೀಘ್ರ ಸರ್ವಪಕ್ಷ ಸಭೆ ಎಂದ ಸಿಎಂ

ಮಹದಾಯಿ ನ್ಯಾಯಾಧಿಕರಣದ ಮುಂದೆ ಕರ್ನಾಟಕ 36.55 ಟಿಎಂಸಿ ನೀರಿಗಾಗಿ ಬೇಡಿಕೆ ಇಟ್ಟಿತ್ತು. ನ್ಯಾಯಾಧಿಕರಣ 13.42 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಆದ್ದರಿಂದ, ರಾಜ್ಯ ಸರ್ಕಾರ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದೆ.

English summary
Goa filed a disobedience petition against Karnataka in the issue of Mahadayi water dispute. Goa alleged that, Karnataka violates the injunction given by the Mahadayi tribunal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X