• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹದಾಯಿ: ಕರ್ನಾಟಕ ಕೇಳಿದ್ದೆಷ್ಟು? ನ್ಯಾಯಾಧಿಕರಣ ಕೊಟ್ಟಿದ್ದೆಷ್ಟು?

By Manjunatha
|

ಬೆಂಗಳೂರು, ಆಗಸ್ಟ್ 14: ಗೋವಾ-ಕರ್ನಾಟಕ ರಾಜ್ಯಗಳ ಮಧ್ಯೆ ಕಂದಕ ಉಂಟುಮಾಡಿದ್ದ ಮಾಡಿದ್ದ ಮಹದಾಯಿ ವಿವಾದದ ಕುರಿತು ಇಂದು ನ್ಯಾಯಾಧಿಕರ ತಮ್ಮ ಅಂತಿಮ ಪೀರ್ಪು ಪ್ರಕಟಿಸಿದೆ.

ನ್ಯಾಯಾಧಿಕರಣದ ಅಂತಿಮ ತೀರ್ಪಿನ ಪ್ರಕಾರ ಕರ್ನಾಟಕಕ್ಕೆ 13.42 ಟಿಎಂಸಿ ಅಡಿ , ಗೋವಾಕ್ಕೆ 24 ಟಿಎಂಸಿ ಮತ್ತು ಮಹರಾಷ್ಟ್ರಕ್ಕೆ 1.30 ಟಿಎಂಸಿ ನೀರು ದೊರೆಯಲಿದೆ.

ಮಹದಾಯಿ ತೀರ್ಪು : ಕರ್ನಾಟಕಕ್ಕೆ ನಿಜಕ್ಕೂ ಸಿಗಬೇಕಾದದ್ದು ಸಿಕ್ಕಿದೆಯಾ?

ಈ ತೀರ್ಪಿನ ಬಗ್ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ತೀರ್ಪು ರಾಜ್ಯಕ್ಕೆ ಸಿಕ್ಕ ಜಯವೆಂದಿದ್ದರೆ. ಇನ್ನು ಕೆಲವರು ಅನ್ಯಾಯವಾಗಿದೆ ಎಂದು ಹುಯಿಲಿಟ್ಟಿದ್ದಾರೆ.

ಮಹದಾಯಿ ತೀರ್ಪು ಪ್ರಕಟ: ಉ.ಕರ್ನಾಟಕ ಹೋರಾಟಗಾರರಿಗೆ ಸಂದ ಜಯ

ರಾಜ್ಯ ಸರ್ಕಾರವು ಮಹದಾಯಿ ಜಲಾನಯನ ಪ್ರದೇಶದಿಂದ ತಮಗೆ 36.558 ಟಿಎಂಸಿ ಅಡಿ ನೀರು ಬೇಕೆಂದು ಮನವಿ ಮಾಡಿತ್ತು. ಆದರೆ ಸಿಕ್ಕಿರುವುದು 13.42 ಟಿಎಂಸಿ ಅಡಿ ಮಾತ್ರ. ಈ ನೀರನ್ನು ಯಾವುದಕ್ಕೆ ಬಳಸಿಕೊಳ್ಳಬೇಕು ಎಂದು ಸಹ ನ್ಯಾಯಾಧಿಕರಣ ಹೇಳಿದೆ.

3.90 ಟಿಎಂಸಿ ಅಡಿ ನೀರು ಮಾತ್ರ ತಿರುವ ಬಹುದು

3.90 ಟಿಎಂಸಿ ಅಡಿ ನೀರು ಮಾತ್ರ ತಿರುವ ಬಹುದು

ಮಹದಾಯಿ ಜಲಾನಯನ ಪ್ರದೇಶದಿಂದ 3.90 ಟಿಎಂಸಿ ಅಡಿ ನೀರು ಮಾತ್ರ ತಿರುವಬಹುದಾಗಿದೆ. ಮಹದಾಯಿ ಜಲಾನಯನದಿಂದ ಮಲಪ್ರಭಾ ಅಣೆಕಟ್ಟೆಗೆ 1.8 ಟಿಎಂಸಿ ನೀರನ್ನು ಹರಿಸಲು ಕೋರ್ಟ್ ಅನುಮತಿಸಿದೆ. ಜೊತೆಗೆ ಕಳಸಾ-ಬಂಡೂರಿ ಯೋಜನೆಗೆ 2.72 ಟಿಎಂಸಿ ಅಡಿ ನೀರನ್ನು ಹರಿಸಬಹುದಾಗಿದೆ. ಮಹದಾಯಿ ಜಲಾನಯನ ಪ್ರದೇಶದಿಂದ ಹೊರಕ್ಕೆ ಒಟ್ಟು 3.90 ಟಿಎಂಸಿ ಅಡಿ ನೀರನ್ನು ಮಾತ್ರವೇ ಹರಿಸಲು ಕೋರ್ಟ್‌ ಹೇಳಿದೆ.

ರಾಜ್ಯದ ಬೇಡಿಕೆ ಎಷ್ಟಿತ್ತು?

ರಾಜ್ಯದ ಬೇಡಿಕೆ ಎಷ್ಟಿತ್ತು?

ಮಹದಾಯಿ ಜಲಾನಯನ ಪ್ರದೇಶದಿಂದ ನೀರನ್ನು ತಿರುವು ಮಾಡಿಕೊಳ್ಳಲು ಅಥವಾ ಹೊರಕ್ಕೆ ಹರಿಸಿಕೊಂಡು ಬೇರೆಯ ಯೋಜನೆಗಳಿಗೆ ಬಳಸಿಕೊಳ್ಳಲು ರಾಜ್ಯ ಸರ್ಕಾರವು 13.08 ಟಿಎಂಸಿ ಅಡಿ ನೀರಿನ ಬೇಡಿಕೆ ಇಟ್ಟಿತ್ತು. ಕಳಸಾ ನಾಲೆಗೆ 3.56 ಟಿಎಂಸಿ ಅಡಿ, ಬಂಡೂರಾ ನಾಲೆಗೆ 4 ಟಿಎಂಸಿ ಮತ್ತು ಕಾಳಿ ನದಿಗೆ ಹರಿಸಿ ಕೆಎಚ್‌ಪಿಇ ಯೋಜನೆ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು 5.52 ಟಿಎಂಸಿ ಅಡಿ ನೀರಿನ ಬೇಡಿಕೆ ಇಟ್ಟಿತ್ತು. ನ್ಯಾಯಾಧಿಕರಣವು 3.90 ಟಿಎಂಸಿ ಅಡಿ ನೀರು ಮಾತ್ರ ನೀಡಿದ್ದು, ಕಾಳಿ ನದಿಗೆ ಹರಿಸುವ ನೀರಿನ ಬೇಡಿಕೆಯನ್ನು ತಳ್ಳಿ ಹಾಕಿದೆ.

ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ

ಕುಡಿಯುವ ನೀರಿಗೆ ಮತ್ತು ನೀರಾವರಿಗೆ

ಕುಡಿಯುವ ನೀರಿಗೆ ಮತ್ತು ನೀರಾವರಿಗೆ

ಮಹದಾಯಿ ಜಲಾನಯನ ಪ್ರದೇಶದಿಂದ ಕುಡಿಯುವ ನೀರಿಗೆ ಮತ್ತು ನೀರಾವರಿಗೆ ರಾಜ್ಯ ಸರ್ಕಾರವು 1.5 ಟಿಎಂಸಿ ನೀರಿನ ಬೇಡಿಕೆ ಇಟ್ಟಿತ್ತು ಅದನ್ನು ನ್ಯಾಯಾಧಿಕರಣ ಮಾನ್ಯ ಮಾಡಿದೆ. ಇದು ಮಹದಾಯಿ ಜಲಾನಯನ ಪ್ರದೇಶದಿಂದ ನೇರವಾಗಿ ಬಳಸಿಕೊಳ್ಳಬೇಕಿರುವ ನೀರು. ಇದನ್ನು ಸ್ಥಳೀಯವಾಗಿಯಷ್ಟೆ ಬಳಸಿಕೊಳ್ಳಬಹುದೇ ವಿನಃ ನಾಲೆಗಳಿಗೆ ಹರಿಸುವಂತಿಲ್ಲ.

ಹೈಡ್ರೋ ಎಲೆಕ್ಟ್ರಿಕ್ ಮಾದರಿ ವಿದ್ಯುತ್ ಉತ್ಪಾದನೆ

ಹೈಡ್ರೋ ಎಲೆಕ್ಟ್ರಿಕ್ ಮಾದರಿ ವಿದ್ಯುತ್ ಉತ್ಪಾದನೆ

ಹೈಡ್ರೋ ಎಲೆಕ್ಟ್ರಿಕ್ ಯೋಜನೆ ಮೂಲಕ ವಿದ್ಯುತ್ ಉತ್ಪಾದಿಸಲು ರಾಜ್ಯ ಸರ್ಕಾರವು 14.971 ಟಿಎಂಸಿ ಅಡಿ ನೀರನ್ನು ಕೇಳಿತ್ತು. ಇದರಲ್ಲಿ ಆವಿಯಾಗುವ 0.40 ಟಿಎಂಸಿ ಅಡಿಯೂ ಸೇರಿತ್ತು. ಆದರೆ ನ್ಯಾಯಾಧಿಕರಣವು 8.02 ಟಿಎಂಸಿ ಅಡಿ ನೀರನ್ನು ನೀಡಿದೆ. ಇದರಲ್ಲಿ ಆವಿಯಾಗುವ ಅಂದಾಜು 0.40 ಟಿಎಂಸಿ ಅಡಿ ನೀರು ಸಹ ಸೇರಿದೆ.

ಮಹದಾಯಿ ಅಂತಿಮ ತೀರ್ಪು : ಏನಿದು ಮೂರು ರಾಜ್ಯಗಳ ನಡುವಿನ ವಿವಾದ?

ಮಲಪ್ರಭಾ ನದಿಪಾತ್ರಕ್ಕೆ ಹರಿಸಲು ನೀರು

ಮಲಪ್ರಭಾ ನದಿಪಾತ್ರಕ್ಕೆ ಹರಿಸಲು ನೀರು

ಮಲಪ್ರಭಾ ನದಿಪಾತ್ರದಲ್ಲಿ ನಿರ್ಮಿಸಲು ಯೋಜಿಸಿರುವ ಕೊಟ್ನಿ ಅಣೆಕಟ್ಟೆಗೆ ಮಹದಾಯಿ ಜಲಾನಯನದಿಂದ 7 ಟಿಎಂಸಿ ಅಡಿ ನೀರು ಕೇಳಲಾಗಿತ್ತು. ಆ ನೀರನ್ನು ಮಲಪ್ರಭಾ ನದಿ ಪಾತ್ರಕ್ಕೆ ಹರಿಸುವ ಯೋಜನೆ ಇದಾಗಿತ್ತು. ಆದರೆ ಇದಕ್ಕೆ ನ್ಯಾಯಾಧಿಕರಣ ಒಪ್ಪಿಗೆ ನೀಡಿಲ್ಲ.

ಮಲಪ್ರಭಾ ಅಣೆಕಟ್ಟೆಗೆ ನೀರು

ಮಲಪ್ರಭಾ ಅಣೆಕಟ್ಟೆಗೆ ನೀರು

ರಾಮದುರ್ಗ, ಸವದತ್ತಿ ಮತ್ತು ಬೈಲಹೊಂಗಲ ತಾಲ್ಲೂಕುಗಳಿಗೆ ಕುಡಿಯುವ ನೀರಿಗೆ 2 ಟಿಎಂಸಿ ಅಡಿ ನೀರು, ಇದೇ ತಾಲ್ಲೂಕುಗಳಿಗೆ ಕೃಷಿಗೆ ಮತ್ತು ಅಂತರ್ಜಲ ಹೆಚ್ಚಿಸಲು 3 ಟಿಎಂಸಿ ಅಡಿ ನೀರು ಮತ್ತು ಮಲಪ್ರಭಾ ಅಣೆಕಟ್ಟೆಗೆ ಪಂಪ್‌ ಮಾಡಲು 2 ಟಿಎಂಸಿ ಅಂದರೆ ಒಟ್ಟು 7 ಟಿಎಂಸಿ ಅಡಿ ನೀರನ್ನು ರಾಜ್ಯ ಸರ್ಕಾರ ಕೇಳಿತ್ತು. ಆದರೆ ಗೋವಾ ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಹಾಗಾಗಿ ಅಂತಿಮ ತೀರ್ಪಿನಲ್ಲಿ ನ್ಯಾಯಾಧಿಕರಣವು ಇದಕ್ಕೆ ಒಪ್ಪಿಗೆ ನೀಡಿಲ್ಲ.

English summary
Karnataka requested for 36.55 TMC feet water but Mahadayi water tribunal gave only 13.42 TMC feet water. Here is complete detail of how much water Karnataka requested and why it was important.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X