ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಮ್ಯಾಗಿಗೆ ಮತ್ತೊಂದು ಪರೀಕ್ಷೆ

|
Google Oneindia Kannada News

ನವದೆಹಲಿ, ಜನವರಿ 13 : ಮ್ಯಾಗಿಗೆ ಮತ್ತೊಂದು ಪರೀಕ್ಷೆ ಎದುರಾಗಿದೆ. ಮ್ಯಾಗಿ ನೂಡಲ್ಸ್‌ನಲ್ಲಿನ ಸೀಸ ಹಾಗೂ ಮಾನೊಸೋಡಿಯಂ ಗುಟ್ಲಮೆಟ್ ಪ್ರಮಾಣ ಎಷ್ಟಿದೆ? ಎಂದು ಸ್ಪಷ್ಟವಾಗಿ ತಿಳಿಸುವಂತೆ ಸುಪ್ರೀಂಕೋರ್ಟ್ ಮೈಸೂರಿನ ಸಿಎಫ್‌ಟಿಆರ್‌ಐಗೆ ಸೂಚನೆ ನೀಡಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬುಧವಾರ ಮುಂದುವರೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಪೀಠ, ಯಾವುದೇ ಮಧ್ಯಂತರ ಆದೇಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು. [ಮ್ಯಾಗಿಗೆ ಮೈಸೂರಿನಲ್ಲಿ ಪರೀಕ್ಷೆ]

maggi

ಮ್ಯಾಗಿಯಲ್ಲಿನ ಸೀಸ ಹಾಗೂ ಮಾನೊಸೋಡಿಯಂ ಗುಟ್ಲಮೆಟ್ ಪ್ರಮಾಣವು ಕಾಯ್ದೆಯನ್ವಯ ಅನುಮತಿ ನೀಡಬಹುದಾದ ಅಳತೆಯಲ್ಲೇ ಇದೆಯೇ? ಎಂಬ ಬಗ್ಗೆ ಹೆಚ್ಚಿನ ವಿವರದ ಅಗತ್ಯವಿದೆ ಎಂದು ಹೇಳಿದ ಕೋರ್ಟ್, ಮತ್ತೊಮ್ಮೆ ವರದಿ ನೀಡುವಂತೆ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ)ಗೆ ಸೂಚನೆ ನೀಡಿತು. [ಮ್ಯಾಗಿ ಮ್ಯಾಜಿಕ್: 21 ದಿನದಲ್ಲಿ 50 ಮಿಲಿಯನ್ ಮಾರಾಟ]

2015ರ ಡಿಸೆಂಬರ್ 16ರಂದು ಅರ್ಜಿಯ ವಿಚಾರಣೆ ವೇಳೆ ಮ್ಯಾಗಿ ಪರೀಕ್ಷೆ ನಡೆಸುವಂತೆ ಕೋರ್ಟ್ ಸಿಎಫ್‌ಟಿಆರ್‌ಐಗೆ ಸೂಚನೆ ನೀಡಿತ್ತು. ಪ್ರಯೋಗಾಲಯ ಸಲ್ಲಿಸಿದ್ದ ಎರಡು ಪ್ರಮಾಣ ಪತ್ರಗಳನ್ನು ಇಂದು ಪರಿಶೀಲಿಸಿದ ಕೋರ್ಟ್, ಹೆಚ್ಚಿನ ವಿವರಣೆ ಬೇಕಾದ ಅಗತ್ಯವಿದೆ ಎಂದು ಹೇಳಿತು. [ವಾವ್! ಮತ್ತೆ ಭಾರತೀಯರ ಹೊಟ್ಟೆ ಸೇರಲಿದೆ ಮ್ಯಾಗಿ?]

ಪರೀಕ್ಷೆಗೆ ಅಗತ್ಯವಿದ್ದರೆ ಪುನಃ ಮ್ಯಾಗಿ ಮಾದರಿಗಳನ್ನು ಸಂಗ್ರಹಣೆ ಮಾಡಬಹುದು ಎಂದು ಹೇಳಿರುವ ಕೋರ್ಟ್ ವರದಿ ಸಲ್ಲಿಕೆಗೆ 8 ವಾರಗಳ ಕಾಲವಕಾಶವನ್ನು ನೀಡಿದೆ. ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿದೆ.

English summary
Supreme Court of India on Wednesday asked the Mysuru laboratory to clarify whether the the levels of lead and glutamic acid in Maggi noodles are within permissible limits as prescribed by the law. A bench headed by Justice Dipak Misra clear that it was not passing any interim order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X