ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಗಡಿ ತಹಶೀಲ್ದಾರ್ ವರ್ಗಾವಣೆ; ಅಶೋಕ, ಅಶ್ವತ್ಥ ನಾರಾಯಣ ಜಟಾಪಟಿ

|
Google Oneindia Kannada News

ಬೆಂಗಳೂರು, ಮಾರ್ಚ್ 18; ರಾಮನಗರ ಜಿಲ್ಲೆಯ ಮಾಗಡಿ ತಹಶೀಲ್ದಾರ್ ವರ್ಗಾವಣೆ ಸಂಬಂಧ ಇಬ್ಬರು ಸಚಿವರ ನಡುವೆ ಜಟಾಪಟಿ ನಡೆದಿದೆ. ಒಬ್ಬರು ಸಚಿವರು ಈ ಕುರಿತು ಮಾತನಾಡಿ "ಜಸ್ಟ್ ಮಾತುಕತೆ ನಡೆದಿದೆ" ಎಂದು ಹೇಳಿದ್ದಾರೆ.

ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥ ನಾರಾಯಣ ಮತ್ತು ಕಂದಾಯ ಸಚಿವ ಆರ್. ಅಶೋಕ ನಡುವೆ ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ ಎಂಬುದು ಸುದ್ದಿ.

ಬಿಜೆಪಿ ಸದಸ್ಯೆ ಬೆಂಬಲದಿಂದ ಮಾಗಡಿ ಪುರಸಭೆ ಜೆಡಿಎಸ್ ತೆಕ್ಕೆಗೆಬಿಜೆಪಿ ಸದಸ್ಯೆ ಬೆಂಬಲದಿಂದ ಮಾಗಡಿ ಪುರಸಭೆ ಜೆಡಿಎಸ್ ತೆಕ್ಕೆಗೆ

ಮಾಗಡಿ ತಹಶೀಲ್ದಾರ್ ವರ್ಗಾವಣೆಗೆ ಡಾ. ಅಶ್ವತ್ಥ ನಾರಾಯಣ ಬಿಗಿಪಟ್ಟು ಹಿಡಿದಿದ್ದಾರೆ. ಮೂರು ಬಾರಿ ಈ ಕುರಿತು ಹೇಳಿದರೂ ಕಂದಾಯ ಸಚಿವ ಆರ್. ಅಶೋಕ ವರ್ಗಾವಣೆಗೆ ಒಪ್ಪಿಗೆ ನೀಡಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಚಿವರ ನಡುವೆ ಮಾತಿನ ಚಕಮಕಿ ನಡೆದಿದೆ.

ರಾಮನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಂತಿಮ?ರಾಮನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಂತಿಮ?

Magadi Tahsildar Transfer Issue R Ashok Ashwath Narayan Fight

ಬಿಜೆಪಿಯ ಹಿರಿಯ ನಾಯಕರು ಹೇಳಿ ತಹಶೀಲ್ದಾರ್ ಹಾಕಿಸಿದ್ದಾರೆ. ಆದ್ದರಿಂದ ಅಶೋಕ ವರ್ಗಾವಣೆಗೆ ಒಪ್ಪಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಉಸ್ತುವಾರಿ ಸಚಿವನಾದ ನಾನು ಹೇಳಿದರೂ ವರ್ಗಾವಣೆಯಾಗಿಲ್ಲ ಎಂದರೆ ಹೇಗೆ? ಎಂಬುದು ಡಾ. ಅಶ್ವತ್ಥ ನಾರಾಯಣ ಪ್ರಶ್ನೆಯಾಗಿದೆ.

ಬಿಜೆಪಿ ನಾಯಕರ ಮಕ್ಕಳೂ ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ; ಎಚ್‌ಡಿಕೆಗೆ ಟಾಂಗ್ ಕೊಟ್ಟ ಅಶ್ವಥ್ ನಾರಾಯಣಬಿಜೆಪಿ ನಾಯಕರ ಮಕ್ಕಳೂ ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ; ಎಚ್‌ಡಿಕೆಗೆ ಟಾಂಗ್ ಕೊಟ್ಟ ಅಶ್ವಥ್ ನಾರಾಯಣ

ಒಬ್ಬರು ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ಇಬ್ಬರು ಸಚಿವರ ಕಿತ್ತಾಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನಕ ತಲುಪಿದೆ. ಮಾಗಡಿ ತಹಶೀಲ್ದಾರ್ ವರ್ಗಾವಣೆ ಆದೇಶ ಸಿದ್ದವಾಗಲಿದೆಯೇ? ಕಾದು ನೋಡಬೇಕಿದೆ.

ಅಶ್ವತ್ಥ ನಾರಾಯಣ ಮಾತು; ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಡಾ. ಅಶ್ವತ್ಥ ನಾರಾಯಣ, "ಜಸ್ಟ್ ಮಾತುಕತೆ ನಡೆದಿದೆ. ಮಾಗಡಿಯಲ್ಲಿ ಯಾರನ್ನು ತಹಶೀಲ್ದಾರ್ ಆಗಿ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ನಮ್ಮ ಸನ್ಮಾನ್ಯ ಕಂದಾಯ ಸಚಿವರು ಅದನ್ನು ಪರಿಗಣಿಸಿ, ನೋಡುತ್ತೇನೆ ಎಂದು ಹೇಳಿದ್ದಾರೆ" ಎಂದರು.

"ಇದು ಅವರ ಇಲಾಖೆಗೆ ಬಿಟ್ಟಿದ್ದು. ಬೇರೆ ಯಾವುದೇ ರೀತಿಯ ಚರ್ಚೆ, ವಿವಾದ, ಮಾತು ನಡೆದಿಲ್ಲ. ಆಯಾ ಇಲಾಖೆಯಲ್ಲಿ ಅವರ ಇತಿಮಿತಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ನಮ್ಮ ಬೇಡಿಕೆ ಇರುತ್ತದೆ. ನಮಗೆ ಈ ರೀತಿ ಆಗಬೇಕು, ಈ ರೀತಿ ಬದಲಾವಣೆ ಬೇಕು ಎಂಬ ಒತ್ತಾಯ ಇರುತ್ತದೆ. ಒತ್ತಾಯಗಳನ್ನು ಸಂಬಂಧಪಟ್ಟ ಸಚಿವರಿಗೆ ನಾವು ತಿಳಿಸುತ್ತೇವೆ. ಅವಕಾಶ ಇದ್ದರೆ ಸಹಾಯ ಮಾಡುತ್ತಾರೆ. ಇಲ್ಲವಾದಲ್ಲಿ ಇಲ್ಲ ಎಂದು ಹೇಳುತ್ತಾರೆ" ಎಂದು ಡಾ. ಅಶ್ವತ್ಥ ನಾರಾಯಣ ಹೇಳಿದರು.

"ನಮ್ಮ ಒತ್ತಾಯಗಳು ಇರುತ್ತವೆ. ಅವುಗಳನ್ನು ಪರಿಗಣಿಸಬೇಕು ಎಂಬುದೇನಿಲ್ಲ. ಅವರ ಇಲಾಖೆಯಲ್ಲಿನ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತಾರೆ. ನಾವಿಬ್ಬರು ಸೋದರರಂತೆ ಒಂದೇ ಪಕ್ಷದಲ್ಲಿದ್ದೇವೆ. ವ್ಯತ್ಯಾಸ ಅಲ್ಲೇ ಬಿಟ್ಟು ಮುಂದಕ್ಕೆ ಹೋಗಬೇಕು" ಎಂದು ತಿಳಿಸಿದರು.

ಈ ಹಿಂದೆ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನಕ್ಕಾಗಿ ಡಾ. ಅಶ್ವತ್ಥ ನಾರಾಯಣ ಮತ್ತು ಆರ್. ಅಶೋಕ ನಡುವೆ ಜಟಾಪಟಿ ನಡೆದಿತ್ತು. ಆಗ ಯಡಿಯೂರಪ್ಪ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕವೂ ಬೆಂಗಳೂರು ಉಸ್ತುವಾರಿ ಅವರೇ ಇಟ್ಟುಕೊಂಡಿದ್ದಾರೆ. ಡಾ. ಅಶ್ವತ್ಥ ನಾರಾಯಣಗೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿದೆ.

English summary
Ramangara district in-charge minister Dr. Ashwath Narayan and Revenue minister R. Ashok fight in the issue of Magadi tahsildar transfer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X