ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ ನೋಡಿ : ಮಡಿಕೇರಿಯಲ್ಲಿ ಮಳೆ ತಂದ ಅವಾಂತರ

By ಮೈಸೂರು ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಮೇ 17: ಮಡಿಕೇರಿ ಪಟ್ಟಣ ಸೇರಿದಂತೆ ಸುತ್ತಮುತ್ತ ಸುರಿದ ಮಳೆಗೆ ಭಾರೀ ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ನಗರದ ವಿವಿಧೆಡೆಗಳಲ್ಲಿ ಮನೆ, ವಸತಿ ಗೃಹಗಳು ನೆಲಕಚ್ಚಿವೆ. ಕೆಲವೆಡೆಗಳಲ್ಲಿ ರಸ್ತೆಗಳ ಮೇಲೆ ಮರಗಳು ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಡಿಕೇರಿ ಸುತ್ತ ಮುತ್ತಾ ಸುರಿದಿರುವ ಮುಂಗಾರು ಪೂರ್ವ ಮಳೆ ಅವಾಂತರದ ಚಿತ್ರಗಳು ಇಲ್ಲಿವೆ

ಮನೆಗಳಿಗೆ, ವಸತಿ ಗೃಹಗಳಿಗೆ ಬಹಳಷ್ಟು ಹಾನಿಯುಂಟಾಗಿ ನಷ್ಟ ಸಂಭವಿಸಿದ್ದರೂ ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.[ಮಲೆನಾಡಿನಲ್ಲೂ ಜಲಕ್ಷಾಮ! ಇದಕ್ಕೆ ಕಾರಣಗಳು ಇಲ್ಲಿವೆ]

ನಗರದ ಜಿಲ್ಲಾ ಪೊಲೀಸ್ ಕಚೇರಿ ಬಳಿಯ ವಸತಿ ಗೃಹ ಹಾಗೂ ಕೆಲವು ಮನೆಗಳ ಹೆಂಚುಗಳು ಮತ್ತು ಸೀಟುಗಳು ಹಾರಿ ಹೋಗಿವೆ. ರಾಣಿ ಪೇಟೆಯ ಮನೆಯೊಂದರ ಹೆಂಚುಗಳು ಕೆಳ ಬಿದ್ದುದರಿಂದ ಮನೆಯೊಳಗಿನ ಸಾಮಗ್ರಿಗಳು ಸಂಪೂರ್ಣವಾಗಿ ಒಡೆದು ಹಾನಿಗೊಳಗಾಗಿದೆ.[ಮಳೆಗಾಗಿ ತಲಕಾವೇರಿಯಲ್ಲಿ ವಿಶೇಷ ಪೂಜೆ]

Madikeri Pre- Monsoon havoc in pictures

ಕೆಲವು ಕಡೆಗಳಲ್ಲಿ ಬೀಸಿದ ಗಾಳಿಯ ರಭಸಕ್ಕೆ ಮನೆಗಳ ಮೇಲೆ ಹೊದಿಸಿದ ಸೀಟುಗಳು ಮೇಲಕ್ಕೆ ಹಾರಿ ಅಕ್ಕಪಕ್ಕದ ಮರಗಳ ಮೇಲೆ ಸಿಕ್ಕಿ ಹಾಕಿಕೊಂಡಿವೆ. ಮತ್ತೆ ಕೆಲವು ಸೀಟುಗಳು ಬೇರೊಬ್ಬರ ಮನೆಗಳ ಮೇಲೆ, ಅಂಗಳಗಳಲ್ಲಿ ಬಿದ್ದಿವೆ.[ಮಂಡ್ಯದಲ್ಲಿ ಬತ್ತಿದ ನದಿ, ಕೆರೆಗಳು]

ರಾಣಿಪೇಟೆಯಲ್ಲಿ ಬರೆ ಜರಿದು ಮನೆಗಳ ಮೇಲೆ ಬಿದ್ದು ಅಪಾಯದ ಸ್ಥಿತಿಯುಂಟಾಗಿದೆ, ನಗರದಿಂದ ಅಬ್ಬಿಫಾಲ್ಸ್‍ನತ್ತ ತೆರಳುವ ರಸ್ತೆ ಮೇಲೆ ಮರಗಳು ಬಿದ್ದುದರಿಂದ ಆ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.[ಕಾವೇರಿ ತವರಲ್ಲೂ ಬತ್ತಿದ ಜೀವಸೆಲೆ, ನೀರಿಗೆ ಬರ]

ಮಡಿಕೇರಿಯಲ್ಲಿ ಮಳೆ ತಂದ ಅವಾಂತರ

ನಗರದ ವಿವಿಧೆಡೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಕಾವೇರಿ ಬಡಾವಣೆ, ಭಗವತಿನಗರ, ಗದ್ದಿಗೆ, ಆಜಾದ್ ನಗರ, ತ್ಯಾಗರಾಜಕಾಲೋನಿ, ರಾಣಿಪೇಟೆ ಮುಂತಾದೆಡೆಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಆ ಪ್ರದೇಶಗಳು ಕತ್ತಲ ಕೂಪದಲ್ಲಿ ಮುಳುಗಿವೆ.

ನಗರದ ನಾಗರಿಕರಿಗೆ ವಿದ್ಯುತ್ ನೀಡಲು ಸೆಸ್ಕ್ ಇಲಾಖೆಯವರು ಹರಸಾಹಸ ಪಡುತ್ತಿದ್ದಾರೆ. ಮುರಿದ ಕಂಬಗಳನ್ನು ಮತ್ತೆ ಹೊಸ ಕಂಬಗಳನ್ನು ನೆಟ್ಟು ವಿದ್ಯುತ್ ಸಂಪರ್ಕಗಳನ್ನು ಕಲ್ಪಿಸಲು ಪ್ರಯತ್ನ ಪಡುತ್ತಿದ್ದಾರೆ.

English summary
Madikeri Pre monsoon havoc in pictures. It has been raining heavily in Kodagu district for the past few days. Though river, tanks have filled, rain has caused widespread damage to the properties in the entire district. Harangi dam is also nearing it's maximum capacity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X