ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯನಗರದಲ್ಲಿ ವಿ.ಸೋಮಣ್ಣ v/s ಎಂ.ಕೃಷ್ಣಪ್ಪ ಕದನ!

|
Google Oneindia Kannada News

ಬೆಂಗಳೂರು, ಫೆಬ್ರವರಿ 21 : ಬೆಂಗಳೂರು ನಗರದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರ ವಿಜಯನಗರ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುವ ಕ್ಷೇತ್ರವಿದು. ಕ್ಷೇತ್ರದ ಹಾಲಿ ಶಾಸಕರು ವಸತಿ ಸಚಿವ ಎಂ.ಕೃಷ್ಣಪ್ಪ.

ಕಾಂಗ್ರೆಸ್‌ನ ಎಂ.ಕೃಷ್ಣಪ್ಪ ಮತ್ತು ಬಿಜೆಪಿಯ ವಿ.ಸೋಮಣ್ಣ ಅವರ ಸ್ಪರ್ಧೆಯಿಂದ ಕ್ಷೇತ್ರ ಗಮನಸೆಳೆಯುತ್ತದೆ. 2008 ಮತ್ತು 2013ರ ಚುನಾವಣೆಯಲ್ಲಿ ಎಂ.ಕೃಷ್ಣಪ್ಪ ಅವರು ಜಯಗಳಿಸಿದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ.

ಯಶವಂತಪುರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು?ಯಶವಂತಪುರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು?

ಕುರುಬರು, ಒಕ್ಕಲಿಗರು, ಲಿಂಗಾಯತರು ಶಾಸಕರು ಯಾರಾಗಬೇಕು? ಎಂದು ನಿರ್ಧರಿಸುವ ಕ್ಷೇತ್ರ ವಿಜಯನಗರ. ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಕ್ಷೇತ್ರವಿದು. ಕಳೆದ ಎರಡು ಚುನಾವಣೆಯಲ್ಲಿ ಜೆಡಿಎಸ್‌ ಪ್ರಬಲ ಪೈಪೋಟಿ ನೀಡಿಲ್ಲ. ಆದರೆ, ಈ ಬಾರಿಯ ಚುನಾವಣೆಯ ಚಿತ್ರಣ ಬೇರೆಯಾಗಿದೆ.

ಮಹದೇವಪುರದಲ್ಲಿ ಲಿಂಬಾವಳಿ ಹ್ಯಾಟ್ರಿಕ್ ಬಾರಿಸುವರೇ?ಮಹದೇವಪುರದಲ್ಲಿ ಲಿಂಬಾವಳಿ ಹ್ಯಾಟ್ರಿಕ್ ಬಾರಿಸುವರೇ?

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪ್ತ, ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಅವರು ಕ್ಷೇತ್ರದ ಪ್ರಭಾವಿ ನಾಯಕರು. ಅವರು ಈ ಬಾರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವರೇ? ಎಂಬುದರ ಮೇಲೆ ಹಣಾಹಣಿ ನಿರ್ಧರಿತವಾಗಲಿದೆ. ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರು? ಎಂಬದು ಇನ್ನೂ ಅಂತಿಮವಾಗಿಲ್ಲ..

ಎಂ.ಕೃಷ್ಣಪ್ಪ ಕಾಂಗ್ರೆಸ್ ಅಭ್ಯರ್ಥಿ

ಎಂ.ಕೃಷ್ಣಪ್ಪ ಕಾಂಗ್ರೆಸ್ ಅಭ್ಯರ್ಥಿ

ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿರುವ ಎಂ.ಕೃಷ್ಣಪ್ಪ ಅವರು ವಿಧಾನಪರಿಷತ್ ಸದಸ್ಯರಾಗಿದ್ದರು. 2004ರಲ್ಲಿ ಅನಂತ್ ಕುಮಾರ್ ವಿರುದ್ಧ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿ ಸೋತಿದ್ದರು. 2008 ಮತ್ತು 2013ರ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್ ನಿರಾಕರಿಸಲು ಕಾರಣಗಳಿಲ್ಲ.

ವಿ.ಸೋಮಣ್ಣ ಕ್ಷೇತ್ರದ ಪ್ರಭಾವಿ ನಾಯಕರು

ವಿ.ಸೋಮಣ್ಣ ಕ್ಷೇತ್ರದ ಪ್ರಭಾವಿ ನಾಯಕರು

ಬಿಜೆಪಿಯ ವಿ.ಸೋಮಣ್ಣ ಸಹ ಕ್ಷೇತ್ರದ ಪ್ರಭಾವಿ ನಾಯಕರು. ಕಾಂಗ್ರೆಸ್‌ ಶಾಸಕರಾಗಿದ್ದ ಅವರು ನಂತರ ಬಿಜೆಪಿ ಸೇರಿದದರು. ಪರಿಷತ್ ಸದ್ಯರಾಗಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು. 2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಎಂ.ಕೃಷ್ಣಪ್ಪ ವಿರುದ್ಧ ಸೋಲು ಕಂಡಿದ್ದಾರೆ.

ಸೋಮಣ್ಣ ಸ್ಪರ್ಧೆ ಇಲ್ಲ?

ಸೋಮಣ್ಣ ಸ್ಪರ್ಧೆ ಇಲ್ಲ?

ಈ ಬಾರಿ ವಿ.ಸೋಮಣ್ಣ ಅವರು ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂಬ ಸುದ್ದಿ ಹಬ್ಬಿದೆ. ಅವರು ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಎಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ? ಎಂಬುದು ಇನ್ನೂ ಅಂತಿಮವಾಗಿಲ್ಲ.

ಜೆಡಿಎಸ್ ಶಕ್ತಿ ಏನು?

ಜೆಡಿಎಸ್ ಶಕ್ತಿ ಏನು?

2008 ರ ಚುನಾಣೆಯಲ್ಲಿ 4,870, 2013ರ ಚುನಾವಣೆಯಲ್ಲಿ 4,253 ಮತಗಳನ್ನು ಮಾತ್ರ ಜೆಡಿಎಸ್ ಅಭ್ಯರ್ಥಿ ಪಡೆದಿದ್ದರು. ಆದರೆ, ಈ ಬಾರಿ ಯಾರು ಅಭ್ಯರ್ಥಿಯಾಗಲಿದ್ದಾರೆ? ಎಂಬುದರ ಮೇಲೆ ಹಣಾಹಣಿ ನಿರ್ಧರಿತವಾಗಲಿದೆ. ಕಳೆದ ಬಾರಿ ಬಿ.ಎಸ್.ಕನ್ಯಾಕುಮಾರಿ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಈ ಬಾರಿ ಯಾರು ಅಭ್ಯರ್ಥಿ ಎಂಬುದು ಇನ್ನೂ ನಿಗೂಢವಾಗಿದೆ.

2013ರ ಫಲಿತಾಂಶ ನೋಡಿ

2013ರ ಫಲಿತಾಂಶ ನೋಡಿ

2013ರ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಲ್ಲಿ ಎಂ.ಕೃಷ್ಣಪ್ಪ 76,891 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ವಿ.ಸೋಮಣ್ಣ 44,249 ಮತ, ಜೆಡಿಎಸ್‌ನ ಬಿ.ಎಸ್.ಕನ್ಯಾಕುಮಾರಿ 4,253 ಮತಗಳನ್ನು ಪಡೆದಿದ್ದರು.

English summary
Vijay Nagar assembly constituency famous for M.Krishnappa and V.Somanna fight. Housing Minister of Karnataka M.Krishnappa sitting MLA of the constituency. He won in 2008 and 2013 elections. Legislative council member V.Somanna may BJP candidate for 2018 elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X