ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಗ್ರಾಮಾಂತರದಲ್ಲಿ ಆರ್.ಅಶೋಕ್ v/s ಡಿಕೆ ಸುರೇಶ್?

|
Google Oneindia Kannada News

Recommended Video

ಆರ್ ಅಶೋಕ್ v/s ಡಿ ಕೆ ಸುರೇಶ್ | ಬೆಂಗಳೂರು ಗ್ರಾಮಾಂತರದಲ್ಲಿ ಜಟಾಪಟಿ | Oneindia Kannada

ಬೆಂಗಳೂರು, ಜನವರಿ 18: ಬಿ ಎಸ್ ಯಡಿಯೂರಪ್ಪ ಅವರ 'ಆಪರೇಶನ್ ಕಮಲ' ಬಹುತೇಕ ಫೇಲ್ ಆಗಿದ್ದು ಸತ್ಯ. ಆದರೆ ಹಲವು ವರ್ಷಗಳ ರಾಜಕೀಯ ಅನುಭವ ಯಡಿಯೂರಪ್ಪ ಅವರಲ್ಲಿ ಮತ್ತಷ್ಟು ಕಾರ್ಯತಂತ್ರ ರೂಪಿಸುವ ಶಕ್ತಿಯನ್ನು ಈಗಲೂ ಉಳಿಸಿದೆ.

ಪಕ್ಷದೊಳಗೇ ಇದ್ದುಕೊಂಡು ತಮ್ಮ ವಿರುದ್ಧ ಷಡ್ಯಂತ್ರ ರಚಿಸುತ್ತಿರುವ ಕೆಲವರಿಗೆ ಲೋಕಸಭಾ ಚುನಾವಣೆಯ ಸಮಯದಲ್ಲಿ ಪಾಠ ಕಲಿಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಸಿಎಂ ಆಗ್ತಾರೆ ಎಂದಿದ್ದ ಕೇರಳ ಜ್ಯೋತಿಷಿ ಮಾತು ನಿಜವಾಗುತ್ತಾ?ಯಡಿಯೂರಪ್ಪ ಸಿಎಂ ಆಗ್ತಾರೆ ಎಂದಿದ್ದ ಕೇರಳ ಜ್ಯೋತಿಷಿ ಮಾತು ನಿಜವಾಗುತ್ತಾ?

ಕರ್ನಾಟಕ ರಾಜ್ಯಾಧ್ಯಕ್ಷರ ಹುದ್ದೆ ಯಡಿಯೂರಪ್ಪ ಅವರ ಕೈಯಲ್ಲಿರುವುದರಿಂದ ಲೋಕಸಸಭಾ ಚುನಾವಣೆಯ ಸಮಯದಲ್ಲಿ ಸೀಟು ಹಂಚಿಕೆಯ ನಿರ್ಧಾರದಲ್ಲೂ ಹೈಕಮಾಂಡ್ ಮುಖ್ಯವಾಗಿ ಅವರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೆ. ಯಡಿಯೂರಪ್ಪ ಅವರು ಮನಸ್ಸು ಮಾಡಿದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಆರ್ ಅಶೋಕ್ ಅವರನ್ನು ಕಣಕ್ಕಿಳಿಸಲು ಸಾಧ್ಯವಿದೆ.

ಆರ್ ಅಶೋಕ್ v/s ಡಿಕೆ ಸುರೇಶ್

ಆರ್ ಅಶೋಕ್ v/s ಡಿಕೆ ಸುರೇಶ್

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ ಕಾಂಗ್ರೆಸ್ ನ ಡಿಕೆ ಸುರೇಶ್ 2019 ರ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿ, ಇದೇ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತ. ಆದರೆ ಬಿಜೆಪಿಯಿಂದ ಆರ್ ಅಶೋಕ್ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ಯಡಿಯೂರಪ್ಪ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಬೆಂಗಳೂರು ಕ್ರಾಮಾಂತರ, ಕನಕಪುರ, ತುಮಕೂರುಗಳಲ್ಲಿ ಒಕ್ಕಲಿಗರ ಸಂಖ್ಯೆ ಜಾಸ್ತಿ. ಇವರ ಮತವೇ ನಿರ್ಣಾಯಕ. ಈ ಕ್ಷೇತ್ರದಲ್ಲಿ ಬಿಜೆಪಿಯೂ ಒಕ್ಕಲಿಗ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದರೆ ಕಾಂಗ್ರೆಸ್ಸಿಗೆ ಪ್ರಬಲ ಪ್ರತಿಸ್ಪರ್ಧೆ ನೀಡಿದಂತಾಗಬಹುದು ಎಂಬುದು ಒಂದು ಲೆಕ್ಕಾಚಾರ.

ಒಲ್ಲೆ ಅಂದ್ರೆ ಅವಮಾನ!

ಒಲ್ಲೆ ಅಂದ್ರೆ ಅವಮಾನ!

ಈ ಕ್ಷೇತ್ರದಿಂದ ಕಣಕ್ಕಿಳಿಯುವುದಿಲ್ಲ ಎಂದು ಆರ್ ಅಶೋಕ್ ಏನಾದರೂ ಹಿಂದೆ ಸರಿದರೆ ಡಿಕೆ ಸುರೇಶ್ ಅವರನ್ನು ಎದುರಿಸುವ ಧೈರ್ಯವಿಲ್ಲದೆ ಒಲ್ಲೆ ಎಂದಿದ್ದಾರೆ ಎಂಬ ಆರೋಪ ಕೇಳಿಬರಬಹುದು. ಕಣಕ್ಕಿಳಿದರೂ ಡಿಕೆ ಸುರೇಶ್ ಅವರನ್ನು ಗೆಲ್ಲಿಸಲು ಶಾಸಕ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಎಲ್ಲರೂ ಪ್ರಚಾರಕ್ಕಿಳಿದು, ಆರ್ ಅಶೋಕ್ ಸೋಲುವ ಸಾಧ್ಯತೆ ಹೆಚ್ಚು. ಒಟ್ಟಿಲ್ಲಿ 'ಒಲ್ಲೆ' ಎಂದರೂ ಕಷ್ಟ, 'ಹ್ಞು' ಎಂದರೂ ಕಷ್ಟ ಎಂಬ ಸಂದಿಗ್ಧದಲ್ಲಿ ಆರ್ ಅಶೋಕ್ ಸಿಲುಕಬಹುದು.

ಕಾಂಗ್ರೆಸ್ ಶಾಸಕಾಂಗ ಸಭೆಗೆ 3 ರಿಂದ 6 ಮಂದಿ ಗೈರು ಸಾಧ್ಯತೆ? ಕಾಂಗ್ರೆಸ್ ಶಾಸಕಾಂಗ ಸಭೆಗೆ 3 ರಿಂದ 6 ಮಂದಿ ಗೈರು ಸಾಧ್ಯತೆ?

ವಿಜಯೇಂದ್ರ ಘಟನೆಗೆ ಪ್ರತೀಕಾರ?

ವಿಜಯೇಂದ್ರ ಘಟನೆಗೆ ಪ್ರತೀಕಾರ?

ಕಳೆದ ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ವರುಣಾ ಕ್ಷೇತ್ರದಿಂದ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರು ಸ್ಪರ್ಧಿಸಲು ಬಿಜೆಪಿ ನಾಯಕರೇ ಅಡ್ಡಗಾಲಾಗಿದ್ದರು ಎಂಬ ವದಂತಿ ಹಬ್ಬಿತ್ತು. ಹೀಗೆ ಅಡ್ಡಗಾಲಾದವರ ಪಟ್ಟಿಯಲ್ಲಿ ಆರ್ ಅಶೋಕ್ ಮತ್ತು ವಿ ಸೋಮಣ್ಣ ಅವರ ಹೆಸರು ಕೇಳಿಬಂದಿತ್ತು. ವಿಜಯೇಂದ್ರ ಅವರ ರಾಜಕೀಯ ಬೆಳವಣಿಗೆ ಸಹಿಸದೆ ಬೇಕೆಂದೇ ಅವರನ್ನು ಸ್ಪರ್ಧೆಯಿಂದ ಹಿಂದೆ ಕಳಿಸಲಾಗಿದೆ ಎಂಬುದು ಬಿ ಎಸ್ ಯಡಿಯೂರಪ್ಪನವರಿಗೆ ತೀವ್ರ ನೋವುಂಟು ಮಾಡಿತ್ತು. ಆ ಪ್ರತೀಕಾರವನ್ನು ಬಿ ಎಸ್ ವೈ ಹೀಗೆ ತೀರಿಸಿಕೊಳ್ಳುತ್ತಾರೆ ಎಂಬ ಮಾತೂ ಕೇಳಿಬರುತ್ತಿದೆ.

ಪಕ್ಷದೊಳಗೇ ಬಿರುಕು?

ಪಕ್ಷದೊಳಗೇ ಬಿರುಕು?

ಬಿ ಎಸ್ ಯಡಿಯೂರಪ್ಪ ಅವರು ಇದೇ ಉದ್ದೇಶ ಇಟ್ಟುಕೊಂದು ಆರ್ ಅಶೋಕ್ ಅವರನ್ನು ಬೆಂಗಳೂರು ಗ್ರಾಮಾಂತರದಿಂದ ಕಣಕ್ಕಿಳಿಸಿದರೆ ಪಕ್ಷದೊಳಗೇ ಒಡಕು ಮೂಡಬಹುದು. ಇದು ಲೋಕಸಭಾ ಚುನಾವಣೆಯ ಮೇಲೂ ಪರಿಣಾಮ ಬೀರಬಹುದು. "ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ. ಆರ್ ಅಶೊಕ್ ಅವರನ್ನು ಬೆಂಗಳೂರು ಗ್ರಾಮಾಂತರದಿಂದ ಕಣಕ್ಕಿಳಿಸಿದರೂ, ಅದರಲ್ಲಿ ಯಾವುದೇ ದುರುದ್ದೇಶವಿಲ್ಲ. ಹೈಕಮಾಂಡ್ ಅವರ ಮೇಲೆ ನಂಬಿಕೆ ಇಟ್ಟು ಕಣಕ್ಕಿಳಿಸಿದರೆ, ಅವರು ಸತತ ಪ್ರಯತ್ನದ ಮೂಲಕ ಗೆಲ್ಲುತ್ತಾರೆ" ಎಂದು ಮಲ್ಲೇಶ್ವರ ಶಾಸಕ ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಆಪರೇಷನ್ ಕಮಲ ಹಾಳುಗೆಡವಿದ್ದೇ ಈ ಪಂಚ ಪಾಂಡವರುಯಡಿಯೂರಪ್ಪ ಆಪರೇಷನ್ ಕಮಲ ಹಾಳುಗೆಡವಿದ್ದೇ ಈ ಪಂಚ ಪಾಂಡವರು

English summary
According to Some sources BS Yeddyurappa will suggest MLA R Ashok's name for Bengaluru rural constituency to BJP highcommand in Lok Sabha elections 2019. Congress may field present MP DK Suresh in this constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X