ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರಿಗೆ ಜಾಫರ್ ಷರೀಫ್ ಅಕ್ಷರಶಃ ಬೆಂಬಲ ಏಕೆ?

By Srinath
|
Google Oneindia Kannada News

ಬೆಂಗಳೂರು, ಮಾರ್ಚ್ 7: ಜೆಡಿಎಸ್ ಅಧಿನಾಯಕ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಅವರ ಸಮಕಾಲೀನ ಮಿತ್ರನಿಂದ ಭರಪೂರ್ ಬೆಂಬಲ ವ್ಯಕ್ತವಾಗಿದೆ. ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷಗಳು ಪರಸ್ಪರ ಕೆಸೆರೆರೆಚಾದಲ್ಲಿ ತೊಡಗುವುದು ಸಾಮಾನ್ಯ. ಆದರೆ ಇದಕ್ಕೆ ಅಪವಾದವೆಂಬಂತೆ ಕಾಂಗ್ರೆಸ್ಸಿನ ಹಿರಿಯ ನಾಯಕ ಸಿಕೆ ಜಾಫರ್ ಷರೀಫ್ ಅವರು ದೇವೇಗೌಡರಿಗೆ 'ಅಕ್ಷರಶಃ' ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದು ಬರಿ ಬಾಯಿಮಾತಿಗೆ ಸೀಮಿತಗೊಳ್ಳದೆ, ಈ ಬಗ್ಗೆ ತಮ್ಮ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರವನ್ನು ಬರೆದಿರುವ ಜಾಫರ್ ಷರೀಫ್, ಪತ್ರದ ಪ್ರತಿಯನ್ನು ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಾ. ಜಿ ಪರಮೇಶ್ವರ್ ಅವರಿಗೂ ಕಳುಹಿಸಿಕೊಟ್ಟಿದ್ದಾರೆ. ಅಂದಹಾಗೆ, ಕಳೆದೆರಡು ಬಾರಿಯಂತೆ ಗೌಡರು ಈ ಬಾರಿಯೂ ಪ್ರತಿಷ್ಠಿತ ಹಾಸನ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಷರೀಫ್ ದಿಢೀರ್ ಪ್ರೀತಿಗೆ ಕಾರಣವೇನು?
ಅಂದಹಾಗೆ 2009ರಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಜಾಫರ್ ಷರೀಫ್ ಅವರು ಕಣಕ್ಕಿಳಿಯುವುದಾದರೆ ಜೆಡಿಎಸ್ಸಿನಿಂದ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲ ಎಂದು ಗೌಡರು ಅಭಯ ನೀಡಿದ್ದರು. ಆದರೆ ಜಾಫರ್ ಷರೀಫ್ ಅವರು ಬೆಂಗಳೂರು ಉತ್ತರದಿಂದ ಸ್ಪರ್ಧಿಸಿ, (ಬಿಜೆಪಿಯ ಡಿಬಿ ಚಂದ್ರೇಗೌಡರಿಗೆ) ಸೋತರು ಎಂಬುದು ಬೇರೆ ಮಾತು.

ದೇವೇಗೌಡರಿಗೆ ಒಲಿದ ಸಮಕಾಲೀನ ಮಿತ್ರ

ದೇವೇಗೌಡರಿಗೆ ಒಲಿದ ಸಮಕಾಲೀನ ಮಿತ್ರ

'ಇಳಿ ವಯಸ್ಸಿನಲ್ಲೂ ಜನರ ಮಧ್ಯೆ ಸಕ್ರಿಯವಾಗಿದ್ದುಕೊಂಡು ಜನರ ಒಳಿತಿಗಾಗಿ ಶ್ರಮಿಸುತ್ತಿರುವ ಹಿರಿಯ ಜೀವ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ವಿರುದ್ಧ ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಕಡೆಯಿಂದ ಯಾವೊಬ್ಬ ಅಭ್ಯರ್ಥಿಯನ್ನೂ ನಿಲ್ಲಿಸುವುದು ಬೇಡ. ಸಂಸತ್ತಿಗೆ ದೇವೇಗೌಡರಂತಹ ಹಿರಿಯರ ಮಾರ್ಗದರ್ಶನ ಬೇಕಿದೆ. ಇಂತಹ ಸಂತ್ಸಂಪ್ರದಾಯ ಪಾಲಿಸುವುದರಿಂದ ಕಾಂಗ್ರೆಸ್ ಪಕ್ಷದ ಹಿರಿಮೆ ಹೆಚ್ಚುತ್ತದೆ' ಎಂದು ಜಾಫರ್ ಷರೀಫ್ ತಾಕೀತು ಮಾಡಿದ್ದಾರೆ.

ಸಲಹೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸುತ್ತದಾ?:

ಸಲಹೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸುತ್ತದಾ?:

ಕಾಂಗ್ರೆಸ್, ಅದರಲ್ಲೂ ಗೌಡರ ಕುಟುಂಬದ ವಿರುದ್ಧ ಸದಾ ತೊಡೆ ತಟ್ಟುವ ಸಿದ್ದರಾಮಯ್ಯ ಅವರಾಗಲಿ ಅಥವಾ ಡಿಕೆ ಶಿವಕುಮಾರ್ ಅವರಾಗಲಿ ಇದಕ್ಕೆ ಅನುವು ಮಾಡಿಕೊಡುತ್ತಾರಾ? ಎಂಬುದು ಸದ್ಯದ ಕುತೂಹಲ. ಗಮನಾರ್ಹವೆಂದರೆ ಕಾಂಗ್ರೆಸ್ ಹೈಕಮಾಂಡ್ ಇಂದು ದಿಲ್ಲಿಯಲ್ಲಿ ಸಭೆ ಸೇರಿ, ಮೊದಲ ಕಂತಿನಲ್ಲಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ.

ದೇವೇಗೌಡರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಇಲ್ಲ?

ದೇವೇಗೌಡರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಇಲ್ಲ?

ಬೆಂಗಳೂರು ಉತ್ತರ ಕ್ಷೇತ್ರವನ್ನು 7 ಬಾರಿ ಪ್ರತಿನಿಧಿಸಿರುವ ಜಾಫರ್ ಷರೀಫ್ ಅವರ ಪತ್ರವಂತೂ ಸಿಎಂ ಸಿದ್ದರಾಮಯ್ಯಗೆ ಮುಜುಗರ ತಂದಿದೆ. ರಾಜಕೀಯ ನೆಲೆಯಲ್ಲಿ ಗೌಡರನ್ನು ಬದ್ಧ ವೈರಿ ಎಂದು ಭಾವಿಸಿರುವ ಸಿದ್ದರಾಮಯ್ಯ ಅವರು ಅದಾಗಲೇ ಗೌಡರನ್ನು ಮಣಿಸಲು ಮಹಾಚುನಾವಣೆಗೆ ರಣತಂತ್ರ ರೂಪಿಸುತ್ತಿದ್ದಾರೆ. ಅರಕಲಗೂಡು ಶಾಸಕ ಎ ಮಂಜು ಅವರನ್ನು ಕಣಕ್ಕಿಳಿಸಲು ಸಿಎಂ ಸಿದ್ದು ಬಯಸಿದ್ದಾರೆ. ಪರಿಸ್ಥಿತಿ ಹೀಗಿರವಾಗ ಜಾಫರ್ ಷರೀಫ್ ಅವರ ಪತ್ರ ಸಲಹೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸುತ್ತದಾ?

ದೇವೇಗೌಡರಿಗೆ ಜಾಫರ್ ಷರೀಫ್ 'ಅಕ್ಷರಶಃ' ಬೆಂಬಲ

ದೇವೇಗೌಡರಿಗೆ ಜಾಫರ್ ಷರೀಫ್ 'ಅಕ್ಷರಶಃ' ಬೆಂಬಲ

ಕೆಲವೊಮ್ಮೆ ರಾಜಕಾರಣವನ್ನು ಮೀರಿ ಯೋಚಿಕಸಬೇಕಾಗುತ್ತದೆ. ಗೌಡರು ತಮ್ಮ ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷದಂತೆ ಜಾತ್ಯತೀತ ನಿಲುವನ್ನು ಪ್ರತಿಪಾದಿಸಿಕೊಂಡು ಬಂದವರು. ಕೋಮುವಾದಿ ಪಕ್ಷಗಳ ವಿರುದ್ಧ ಹೋಟಾಡುವವರು ನಾವೊಬ್ಬರೇ ಎಂದು ಕಾಂಗ್ರೆಸ್ ಪಕ್ಷ ಬಿಂಬಿಸಿಕೊಳ್ಳುವುದೂ ತರವಲ್ಲ. ಅಷ್ಟಕ್ಕೂ ಕಾಂಗ್ರೆಸ್ ಎಲ್ಲ 28 ಸ್ಥಾನಗಳಲ್ಲೂ ಗೆಲುವು ಸಾಧಿಸುವುದಕ್ಕೆ ಆಗುವುದಿಲ್ಲ. ಹಾಗಾಗಿ ಗೌಡರು ಸ್ಪರ್ಧಿಸುವ ಹಾಸನ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ಕಾಂಗ್ರೆಸ್ಸಿಗೆ ನಷ್ಟವಾಗುವುದೇನೂ ಇಲ್ಲ ಎಂದು ಜಾಫರ್ ಷರೀಫ್ ಕಿವಿಮಾತು ಹೇಳಿದ್ದಾರೆ.

English summary
Lok Sabha Polls 2014- Dont field candidate against former Prime Minister HD Deve Gowda in Hassan - Congress veteran, 7 times MP, Ex union minister CK Jaffer Sharief writes letter to AICC president Sonia Gandhi. In 2009, Gowda had announced that he will not field a candidate if Sharief was given a ticket in Bangalore Central. However, Sharief was fielded from Bangalore North.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X