ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದಂಕಿ ಲಾಟರಿ ಹಗರಣ, ಸಿಬಿಐ ತನಿಖೆ ಎಲ್ಲಿಗೆ ಬಂತು?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜೂ. 26 : ಕರ್ನಾಟಕ ಸರ್ಕಾರ ಬಹುಕೋಟಿ ರೂಪಾಯಿ ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಘೋಷಿಸಿ ಒಂದು ತಿಂಗಳು ಕಳೆದಿದೆ. ಆದರೆ, ಅಧಿಕೃತವಾಗಿ ಸಿಬಿಐ ತನಿಖೆ ಇನ್ನೂ ಆರಂಭವಾಗಿಲ್ಲ. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವ ಕುರಿತು ಸಿಬಿಐ ಇನ್ನೂ ತೀರ್ಮಾನ ಕೈಗೊಂಡಿಲ್ಲ.

ಒನ್ ಇಂಡಿಯಾಕ್ಕೆ ದೊರಕಿರುವ ಮಾಹಿತಿಯಂತೆ ಒಂದಂಕಿ ಲಾಟರಿ ಹಗರಣ ತನಿಖೆಯನ್ನು ನಡೆಸುವಂತೆ ಸರ್ಕಾರ ಮಾಡಿರುವ ಮನವಿಯ ಕಡತಗಳು ಇನ್ನೂ ಸಿಬಿಐ ಕಚೇರಿ ತಲುಪಿಲ್ಲ. ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ನಂತರ ಲಾಟರಿ ಹಗರಣ ತನಿಖೆ ಆರಂಭಿಸುವ ಸಾಧ್ಯತೆ ಇದೆ. [ಲಾಟರಿ ಹಗರಣ : ಸರ್ಕಾರ ಸಿಬಿಐಗೆ ಬರೆದ ಪತ್ರದಲ್ಲೇನಿದೆ?]

cbi

ಸಿಬಿಐ ತನಿಖೆ ಬಗ್ಗೆ ನಿರ್ಧಾರವಾಗಿಲ್ಲ : ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ. ಆದರೆ, ತನಿಖೆ ನಡೆಸಬೇಕೆ?, ಬೇಡವೇ ಎಂಬ ತೀರ್ಮಾನವನ್ನು ಕೇಂದ್ರ ಗೃಹ ಸಚಿವಾಲಯದ ಜೊತೆ ಚರ್ಚಿಸಿದ ಬಳಿಕ ಸಿಬಿಐ ತೆಗೆದುಕೊಳ್ಳಲಿದೆ. [ಸಿಐಡಿ ಹಾಗೂ ಸಿಬಿಐ ತನಿಖೆ ವ್ಯತ್ಯಾಸವೇನು?]

ಒಂದಂಕಿ ಲಾಟರಿ ಹಗರಣದ ತನಿಖೆಯಲ್ಲಿ ಆಗಿರುವುವುದೇ ಅದೇ. ಕರ್ನಾಟಕ ಸರ್ಕಾರ ತನಿಖೆ ನಡೆಸುವಂತೆ ಸಿಬಿಐಗೆ ಪತ್ರ ಬರೆದಿದೆ. ಆದರೆ, ಈ ಕುರಿತು ಸಿಬಿಐ ಜೂನ್ 26ರ ವರೆಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. [ಈತ 7,000ಕೋಟಿ ಲಾಟರಿ ಹಗರಣದ ಕಿಂಗ್ ಪಿನ್ !]

ಜನರ ಮತ್ತು ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿಯುವ ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಘೋಷಣೆ ಮಾಡುತ್ತದೆ. ಆದರೆ, ಇದು ತನಿಖೆ ನಡೆಸಲು ಸೂಕ್ತವಾದ ಪ್ರಕರಣವೇ? ಎಂಬುದನ್ನು ಅಧ್ಯಯನ ಮಾಡಿದ ಬಳಿಕ ಸಿಬಿಐ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.

ಹಲವಾರು ಬಾರಿ ರಾಜ್ಯ ಸರ್ಕಾರಗಳು ತನಿಖೆಗೆ ನೀಡಿದ ಪ್ರಸ್ತಾವನೆಗಳನ್ನು ಸಿಬಿಐ ತಿರಸ್ಕಾರ ಮಾಡಿದ ಉದಾಹರಣೆಗಳಿವೆ. ರಾಜ್ಯದಲ್ಲಿನ ತನಿಖಾ ಸಂಸ್ಥೆಗಳು ಈ ಕುರಿತು ತನಿಖೆ ನಡೆಸಬಹುದು ಎಂದು ಸಿಬಿಐಗೆ ನಿರ್ಧಾರ ತೆಗೆದುಕೊಂಡರೆ, ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಬಹುದಾಗಿದೆ. [ಲಾಟರಿ ಮಾರ್ಟಿನ್ ಕರಾಳ ಸಾಮ್ರಾಜ್ಯದಲ್ಲಿ ಒಂದು ಸುತ್ತು]

ಒಂದಂಕಿ ಲಾಟರಿ ಹಗರಣದಲ್ಲೂ ಸಿಬಿಐ ಮತ್ತು ರಾಜ್ಯ ಸರ್ಕಾರದ ನಡುವೆ ಯಾವುದೇ ಮಾತುಕತೆ ಇನ್ನೂ ನಡೆದಿಲ್ಲ. ಸಿಬಿಐ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿ ಎಂದು ಸರ್ಕಾರ ಕಾಯುತ್ತಿದೆ. ಈ ಹಗರಣ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೂ ಸಂಬಂಧಿಸಿದ್ದಾಗಿದೆ. ಆದ್ದರಿಂದ ಸಿಬಿಐ ತನಿಖೆ ನಡೆಸಲು ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ.

ಏನಿದು ಹಗರಣ : ಕರ್ನಾಟಕದಲ್ಲಿ 2007 ರ ಮಾರ್ಚ್ 27 ರಂದು ಲಾಟರಿ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಅನಂತರವೂ ಆನ್‌ಲೈನ್ ಸೇರಿದಂತೆ ಅಕ್ರಮ ಲಾಟರಿ ವಹಿವಾಟು ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದವು.

ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಅಕ್ರಮ ಲಾಟರಿ ದಂಧೆಯ ಬಗ್ಗೆ ಮೊಕದ್ದಮೆ ದಾಖಲಿಸಲಾಗಿದೆ. ಲಾಟರಿ ಅಕ್ರಮದ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರು 2015 ರ ಮೇ 6 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಮೇ 8 ರಂದು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

ಸಿಐಡಿ ವರದಿ ಸಲ್ಲಿಸಿದಾಗ ಈ ದಂಧೆಯಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಮತ್ತು ಇತರರು ಶಾಮೀಲಾಗಿರುವುದು ತಿಳಿದುಬಂದಿತ್ತು. ಆದ್ದರಿಂದ ಪ್ರತಿಪಕ್ಷಗಳು ಈ ಬಗ್ಗೆ ಸಿಬಿಐ ತನಿಖೆಗೆ ಪಟ್ಟು ಹಿಡಿದಿದ್ದವು. ಸರ್ಕಾರ ಮೇ 26ರಂದು ಸಿಬಿಐ ತನಿಖೆಗೆ ವಹಿಸಿ ಆದೇಶ ಹೊರಡಿಸಿತ್ತು.

English summary
It has been a months since the Karnataka government handed over the investigation into the lottery scam to the Central Bureau of Investigation (CBI). However there has been no progress in the investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X