ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್‌ 7 ರಂದು ದೇಶಾದ್ಯಂತ ಲಾರಿ ಸೇವೆ ಬಂದ್

By Manjunatha
|
Google Oneindia Kannada News

ಬೆಂಗಳೂರು ಮಾರ್ಚ್ 24: ವಿಮೆ ಕಂತು ಏರಿಕೆಯನ್ನು ಖಂಡಿಸಿ ಏಪ್ರಿಲ್ 7 ರಿಂದ ರಾಷ್ಟ್ರದಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ನಡೆಸಲು ಅಖಿಲ ಕರ್ನಾಟಕ ಲಾರಿ ಮಾಲೀಕರ ಸಂಘದ ತೀರ್ಮಾನಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನಗರದಲ್ಲಿ ಇಂದು ಕರೆಯಲಾಗಿದ್ದ ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ. ಚನ್ನಾರೆಡ್ಡಿ ಅವರು, ಮೂರನೇ ವಕ್ತಿಯ ವಾಹನ ವಿಮೆ ಹಣ ವರ್ಷದಿಂದ ವರ್ಷಕ್ಕೆ ಅಗಾಧ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದನ್ನು ವಿರೋಧಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದರು. ರಾಷ್ಟ್ರೀಯ ವಿಮಾ ನಿಯಂತ್ರಣ ಪ್ರಾಧಿಕಾರ ನಮ್ಮ ಕರೆಗೆ ಸ್ಪಂದಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಅನಿವಾರ್ಯವಾಗಿದೆ ಎಂದರು.

3 ನೇ ವ್ಯಕ್ತಿಯ ವಾಹನ ವಿಮೆಯನ್ನು ಕಡಿತಗೊಳಿಸುವಂತೆ ವಿಮಾ ನಿಯಂತ್ರಣ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ವಿಮಾ ನಿಯಂತ್ರಣ ಪ್ರಾಧಿಕಾರ ದರ ಪರಿಷ್ಕರಣೆ ಮಾಡದಿರುವುದು ಇದಕ್ಕೆ ಕಾರಣ ಎಂದು ಅವರು ಹೇಳಿದರು.

Lorry Association stricke on April 7th

ಫಸ್ಟ್ ಪಾರ್ಟಿ ಇನ್ಸೂರೆನ್ಸ್‌ಗೆ ಶೇ.70 ರಷ್ಟು ರಿಯಾಯಿತಿ ಕೊಡುತ್ತಿದೆ. ಆದರೆ ಧರ್ಡ್ ಪಾರ್ಟಿ ಇನ್ಸೂರೆನ್ಸ್‌ಗೆ ಯಾವುದೇ ರಿಯಾಯಿತಿ ದೊರಕುತ್ತಿಲ್ಲ. ಇದಕ್ಕೆ ವಿಮಾ ನಿಯಂತ್ರಣ ಪ್ರಾಧಿಕಾರ ಥರ್ಡ್‌ ಪಾರ್ಟಿ ಇನ್ಸೂರೆನ್ಸ್‌ನ ದರವನ್ನು ಡಿ ರೆಗ್ಯುಲರೈಸ್ ಮಾಡದೇ ಇರುವುದು ಪ್ರಮುಖ ಕಾರಣ ಎಂದು ಅವರು ಆರೋಪಿಸಿದರು.

ಫಸ್ಟ್ ಪಾರ್ಟಿ ಇನ್ಸೂರೆನ್ಸ್ ಡಿ ರೆಗ್ಯುಲರೈಸ್ ಮಾಡಿದ್ದರಿಂದ ನಮಗೆ ಬಹಳಷ್ಟು ರಿಯಾಯಿತಿ ದೊರೆಯುತ್ತಿದೆ. ಇದೇ ಅಂಶವನ್ನು ಥರ್ಡ್ ಪಾರ್ಟಿಗೂ ಅನ್ವಯಿಸುವಂತೆ ದಿನಾಂಕ 10/03/2018 ರಂದು ಮನವಿಯನ್ನು ಸಲ್ಲಿಸಿದ್ದೆವೆ. ಆದರೆ ಇದರ ಬಗ್ಗೆ ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಖಾಸಗಿ ವಿಮಾ ಕಂಪನಿಗಳು ಮಾರುಕಟ್ಟೆಗೆ ಬಂದ ಕಾರಣ ಫಸ್ಟ್ ಪಾರ್ಟಿ ವಿಮಾ ಕಂತಿನಲ್ಲಿ ಬಹಳಷ್ಟು ಇಳಿಕೆಯನ್ನು ಕಾಣಲು ಸಾಧ್ಯವಾಯಿತು. ಆದರೆ, ಥರ್ಡ ಪಾರ್ಟಿ ವಿಮೆಯನ್ನು ಡಿ ರೆಗ್ಯುಲರೈಸ್ ಮಾಡದೇ ಇರುವ ಕಾರಣ ಪ್ರತಿವರ್ಷ ಕಂತಿನ ಹಣ ಹೆಚ್ಚಾಗುತ್ತಲೇ ಇದೆ. ಶೇಕಡಾ 439 ರಿಂದ 1117 ರಷ್ಟಕ್ಕೆ ಹೆಚ್ಚಾಗಿದೆ, ಗೂಡ್ಸ್ ವಾಹನಗಳಿಗೆ ಮೂರನೇ ವ್ಯಕ್ತಿ ವಿಮಾ ಪಾಲಿಸಿ ಕಡ್ಡಾಯ ಮಾಡಿರುವುದು ಇದಕ್ಕೆ ಕಾರಣ ಎಂದರು.

ರಾಷ್ಟ್ರೀಯ ವಿಮಾ ನಿಯಂತ್ರಣ ಪ್ರಾಧಿಕಾರಕ್ಕೆ ವಿಮಾ ಕಂತಿನ ಹೆಚ್ಚಳದ ಬಗ್ಗೆ ಆಗಾಗ್ಗೆ ಮನವಿಯನ್ನು ನೀಡಿದ್ದರೂ ಕೂಡಾ ಇದರ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ವಿಮಾ ಕಂಪನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿರುವ ವಿಮಾ ನಿಯಂತ್ರಣ ಪ್ರಾಧಿಕಾರದ ಕ್ರಮವನ್ನು ವಿರೋಧಿಸಿ ಏಪ್ರಿಲ್ 7 ರಿಂದ ದೇಶಾದ್ಯಂತ ಆಲ್ ಇಂಡಿಯಾ ಕಾನ್ಫೆಡರೇಷನ್ ಆಫ್ ಗೂಡ್ಸ್ ವೆಹಿಕಲ್ ಓನರ್ಸ್ ಅಸೋಸಿಯೇಷನ್ಸ್ ಅಡಿಯಲ್ಲಿ ಮುಷ್ಟರಕ್ಕೆ ಕರೆ ನೀಡಿದ್ದೇವೆ ಎಂದರು.

English summary
Lorry owners Association doing strike all over India on April 7th. They demanding to reduce the price of third party insurance premium instantly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X