ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಜನಾದ್ರಿ ಬೆಟ್ಟ ಆಂಜನೇಯನ ಜನ್ಮಸ್ಥಳ ಅಲ್ವಂತೆ, ತಿರುಮಲ ಅಂತೆ: ಟಿಟಿಡಿ ಹೊಸ ಕ್ಯಾತೆ

|
Google Oneindia Kannada News

ತಿರುಪತಿ, ಏಪ್ರಿಲ್ 10: ಹಿಂದೂ ಧರ್ಮಗ್ರಂಥ, ಪುರಾಣಗಳು ಹೇಳುವಂತೆ ಭಗವಾನ್ ಆಂಜನೇಯನ ಜನ್ಮಸ್ಥಳ ಹಂಪಿ ಬಳಿ ಇರುವ ಅಂಜನಾದ್ರಿ ಎಂದು ನಮಗೆಲ್ಲ ತಿಳಿದಿದೆ.

ಆದರೆ, ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಪ್ರಕಾರ, ಭಗವಾನ್ ವೆಂಕಟೇಶ್ವರನ ವಾಸಸ್ಥಾನವಾದ ತಿರುಮಲವು ಭಗವಾನ್ ಅಂಜನೇಯನ ಜನ್ಮಸ್ಥಳ ಎಂದು ಹೇಳುತ್ತಿದೆ. ಇದನ್ನು ಸಾಬೀತುಪಡಿಸಲು ಶಿಲಾಶಾಸನ ಮತ್ತು ವೈಜ್ಞಾನಿಕ ಪುರಾವೆಗಳನ್ನು ಪ್ರಸ್ತುತಪಡಿಸಲೂ ಅದು ಸಜ್ಜಾಗಿದೆ.

ಟಿಟಿಡಿಯು ತೆಲುಗು ಹೊಸ ವರ್ಷವಾದ ಯುಗಾದಿಯಂದು(ಏಪ್ರಿಲ್ 13) ಸಾಕ್ಷ್ಯವನ್ನು ಸಾಬೀತುಪಡಿಸಲಿದ್ದು, ತಿರುಮಲದಲ್ಲಿರುವ ಅಂಜನಾದ್ರಿ ಭಗವಾನ್ ಅಂಜನೇಯನ ಜನ್ಮಸ್ಥಳವಾಗಿದ್ದು, ಕರ್ನಾಟಕದ ಹಂಪಿಯಲ್ಲಿರುವ ಅಂಜನಾದ್ರಿ ಬೆಟ್ಟವಲ್ಲ ಎಂದು ಟಿಟಿಡಿ ಹೇಳುತ್ತಿದೆ.

 Lord Anjaneya Birthplace Is Tirumala Tirupati Not Karnatakas Anjanadri Hill: TTD

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಅಂಜನಿ ದೇವಿ ಆಕಾಶ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಿ, ಭಗವಾನ್ ಆಂಜನೇಯನಿಗೆ ಜನ್ಮ ನೀಡುವ ಮೊದಲು ತಪಸ್ಸು ಮಾಡಿದರು ಎಂಬುದು ಟಿಟಿಡಿಯ ಅಭಿಪ್ರಾಯವಾಗಿದೆ. ಈ ಕುರಿತು 2020ರ ಡಿಸೆಂಬರ್‌ನಲ್ಲಿ ಟಿಟಿಡಿ ಭಗವಾನ್ ಆಂಜನೇಯ ಜನ್ಮಸ್ಥಳದ ಬಗ್ಗೆ ವಿವರವಾಗಿ ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ರಚಿಸಿತು.

ಸಮಿತಿಯಲ್ಲಿ ಶ್ರೀ ವೆಂಕಟೇಶ್ವರ ವೈದಿಕ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಸನ್ನೀಧನಂ ಸುದರ್ಶನ ಶರ್ಮಾ, ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಮುರಳಿಧರ ಶರ್ಮಾ, ಪ್ರೊ.ರಾಣಿ ಸದಾಶಿವ ಮೂರ್ತಿ, ಪ್ರೊ.ಜೆ.ರಾಮಕೃಷ್ಣ ಮತ್ತು ಪ್ರೊ.ಶಂಕರನಾರಾಯಣ, ಇಸ್ರೋ ವಿಜ್ಞಾನಿ ಮೂರ್ತಿ ರೆಮಿಲಾ ಕುಮಾರ್. ಎಸ್‌ವಿ ಉನ್ನತ ವೈದಿಕ ಅಧ್ಯಯನ ಯೋಜನಾ ಅಧಿಕಾರಿ ವಿಭೀಷಣ ಶರ್ಮಾ ಇದರ ಸಮಿತಿಯಲ್ಲಿದ್ದಾರೆ.

 Lord Anjaneya Birthplace Is Tirumala Tirupati Not Karnatakas Anjanadri Hill: TTD


"ಸಮಿತಿಯು ಹಲವಾರು ಬಾರಿ ಸಭೆ ಸೇರಿ ವಿವಿಧ ಸಾಕ್ಷ್ಯಗಳ ಬಗ್ಗೆ ಸಂಶೋಧನೆ ನಡೆಸಿತು, ತಿರುಮಲದ ಅಂಜನಾದ್ರಿಯು ಭಗವಾನ್ ಆಂಜನೇಯ ಅವರ ಜನ್ಮಸ್ಥಳ ಎಂಬ ಅಂಶವನ್ನು ಬಲವಾಗಿ ಹೇಳಿದೆ. ಶಿವ, ಬ್ರಹ್ಮ, ಬ್ರಹ್ಮಾಂಡ, ವರಾಹ ಮತ್ತು ಮತ್ಸ್ಯ ಪುರಾಣಗಳು, ವೆಂಕಟಾಚಲ ಮಹಾತ್ಯಂ ಮತ್ತು ವರಾಹಮಿಹಿರಾ ಬೃಹತ್ ಸಂಹಿತಾದ ಸಾಕ್ಷ್ಯಗಳು ತಿರುಮಲದಲ್ಲಿರುವ ಅಂಜನಾದ್ರಿ ಭಗವಾನ್ ಆಂಜನೇಯನ ಜನ್ಮಸ್ಥಳವಾಗಿದೆ'' ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್ ಜವಾಹರ್ ರೆಡ್ಡಿ ಅವರು ತಜ್ಞರ ಸಮಿತಿಯ ಸದಸ್ಯರೊಂದಿಗೆ ಗುರುವಾರ ಸಭೆ ನಡೆಸಿ ಹೇಳಿದರು.

ಅಂಜನಾದ್ರಿಯು ಭಗವಾನ್ ಆಂಜನೇಯನ ಜನ್ಮಸ್ಥಳ ಎಂಬ ಸತ್ಯವನ್ನು ಸ್ಥಾಪಿಸಲು ಖಗೋಳ, ಶಿಲಾಶಾಸನ, ವೈಜ್ಞಾನಿಕ ಮತ್ತು ಪುರಾಣ ಸಾಕ್ಷ್ಯಗಳೊಂದಿಗೆ ಬರಬೇಕೆಂದು ಟಿಟಿಡಿ ಇಒ ವಿದ್ವಾಂಸರನ್ನು ಕೋರಿದ್ದಾರೆ. ಒಂದೆರಡು ತಿಂಗಳಲ್ಲಿ ಭಗವಾನ್ ಆಂಜನೇಯನ ಜನ್ಮಸ್ಥಳ ಎಂದು ದೃಢಪಡಿಸುವ ಎಲ್ಲಾ ಪುರಾವೆಗಳೊಂದಿಗೆ ಸಮಗ್ರ ಪುಸ್ತಕವನ್ನು ಹೊರತರುವಂತೆ ಅವರು ಆಗ್ರಹಿಸಿದ್ದಾರೆ.

ತಿರುಮಲ ಬೆಟ್ಟದಲ್ಲಿ ಆಂಜನೇಯ ಭಗವಾನ್ ಎಲ್ಲಿ ಜನಿಸಿದನೆಂಬುದಕ್ಕೆ ಯಾವುದೇ ನಿರ್ದಿಷ್ಟ ಸ್ಥಳವಿರುವುದಿಲ್ಲ ಎಂದು ಡಾ.ವಿಭೀಷಣ ಶರ್ಮಾ ಖಾಸಗಿ ಸುದ್ದಿ ಪತ್ರಿಕೆಗೆ ತಿಳಿಸಿದ್ದು, ಆದರೆ ತಿರುಮಲದಲ್ಲೇ ಆಂಜನೇಯ ಜನಿಸಿದ್ದಾನೆ ಎಂಬುದನ್ನು ಸಾಬೀತುಪಡಿಸಲು ವೈಜ್ಞಾನಿಕ ಮತ್ತು ಶಿಲಾಶಾಸನ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಲಾಗುತ್ತದೆ ಎಂದರು.

English summary
According to the Tirumala Tirupati Devasthanam (TTD), Tirupati Tirumala place is claiming to be the birthplace of Lord Anjaneya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X