ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Free Booster Dose: ಕರ್ನಾಟಕದಲ್ಲಿ ಕೊರೊನಾ ವೈರಸ್ ಲಸಿಕೆ ವಿತರಣೆ ಯಾವಾಗ ಶುರು?

|
Google Oneindia Kannada News

ಬೆಂಗಳೂರು, ಜುಲೈ 14: ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ ಮೊದಲ ಎರಡು ಡೋಸ್ ಅನ್ನು ಉಚಿತವಾಗಿ ನೀಡಿದ್ದು ಆಗಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಕೇಂದ್ರ ಸರ್ಕಾರ ಮೂರನೇ ಡೋಸ್ ಅನ್ನೂ ಸಹ ಉಚಿತವಾಗಿ ನೀಡುವುದಾಗಿ ಘೋಷಿಸಿದೆ.

ಜುಲೈ 15ರಿಂದ ಮುಂದಿನ 75 ದಿನಗಳವರೆಗೂ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮೂರನೇ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಈಗಾಗಲೇ ಘೋಷಿಸಿದ್ದಾರೆ.

Breaking: ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಉಚಿತ!Breaking: ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಉಚಿತ!

ಕರ್ನಾಟಕದಲ್ಲಿ ಉಚಿತವಾಗಿ ಕೋವಿಡ್-19 ಬೂಸ್ಟರ್ ಡೋಸ್ ಅನ್ನು ವಿತರಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಯನ್ನು ಎದುರು ನೋಡಲಾಗುತ್ತಿದೆ. ಮೂರನೇ ಡೋಸ್ ವಿತರಣೆಗೆ ಏನೆಲ್ಲಾ ಸಿದ್ಧತೆ ಆಗಿದೆ, ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಬೂಸ್ಟರ್ ಡೋಸ್ ಮಾರ್ಗಸೂಚಿ ಎದುರು ನೋಡುತ್ತಿರುವ ರಾಜ್ಯ

ಬೂಸ್ಟರ್ ಡೋಸ್ ಮಾರ್ಗಸೂಚಿ ಎದುರು ನೋಡುತ್ತಿರುವ ರಾಜ್ಯ

ಭಾರತದಲ್ಲಿ 'ಆಜಾದಿ ಕಾ ಅಮೃತ್ ಮಹೋತ್ಸವ'ದ ಅಂಗವಾಗಿ ಜುಲೈ 15 ರಿಂದ 75 ದಿನಗಳವರೆಗೆ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿದೆ. ರಾಜ್ಯ ಸರ್ಕಾರವು ಈ ಲಸಿಕೆ ಅಭಿಯಾನವನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಎದುರು ನೋಡುತ್ತಿದೆ," ಎಂದು ಲಸಿಕೆ ಅಭಿಯಾನದ ಉಸ್ತುವಾರಿ ವಹಿಸಿರುವ ರಾಷ್ಟ್ರೀಯ ಆರೋಗ್ಯ ಮಿಷನ್‌ನ ರಾಜ್ಯ ಮಿಷನ್ ನಿರ್ದೇಶಕಿ ಡಾ.ಅರುಂದತಿ ಚಂದ್ರಶೇಖರ್ ಹೇಳಿದ್ದಾರೆ.

ದೇಶದಲ್ಲಿ 12 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ವಿತರಣೆ

ದೇಶದಲ್ಲಿ 12 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ವಿತರಣೆ

"ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಗುರುವಾರ ಎಲ್ಲಾ ರಾಜ್ಯಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಲಿದೆ. ಈ ವೇಳೆಯಲ್ಲಿ ಉಚಿತ ಲಸಿಕೆ ಚಾಲನೆಗೆ ಸಂಬಂಧಿಸಿದ ವಿವರಗಳನ್ನು ಸ್ಪಷ್ಟಪಡಿಸಲಾಗುತ್ತದೆ. ಕೇಂದ್ರ ಆರೋಗ್ಯ ಸಚಿವಾಲಯವು 12 ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ಲಸಿಕೆಗೆ ಅನುಮೋದಿಸಿದೆ. ಕೇಂದ್ರವು ಮಾರ್ಗಸೂಚಿಗಳನ್ನು ಕಳುಹಿಸಿದ ನಂತರ ಲಸಿಕೆ ವಿತರಣೆಯನ್ನು ಪ್ರಾರಂಭವಾಗುತ್ತದೆ," ಎಂದು ಡಾ. ಅರುಂದತಿ ಚಂದ್ರಶೇಖರ್ ತಿಳಿಸಿದ್ದಾರೆ.

ಬೂಸ್ಟರ್ ಡೋಸ್ ಲಸಿಕೆ ವಿತರಣೆಗೆ ಅನುಮತಿ ನೀಡುದ್ದು ಯಾವಾಗ?

ಬೂಸ್ಟರ್ ಡೋಸ್ ಲಸಿಕೆ ವಿತರಣೆಗೆ ಅನುಮತಿ ನೀಡುದ್ದು ಯಾವಾಗ?

ದೇಶದ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಏಪ್ರಿಲ್ 10 ರಿಂದ ಕೋವಿಡ್-19 ಬೂಸ್ಟರ್ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಘೋಷಿಸಿತ್ತು. ಮೊದಲ ಎರಡು ಅಲೆಗಳ ನಂತರ ಆರಂಭಿಸಲಾದ ಲಸಿಕೆ ವಿತರಣೆ ಅಭಿಯಾನದಿಂದ ಸಾವಿನ ಪ್ರಕರಣಗಳು ಮತ್ತು ತೀವ್ರ ಅಸ್ವಸ್ಥತೆಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಎರಡು ಡೋಸ್ ಲಸಿಕೆ ಪಡೆದುಕೊಂಡವರು ಮೂರನೇ ಡೋಸ್ ಲಸಿಕೆ ಪಡೆದುಕೊಳ್ಳುವುದಕ್ಕೂ ಅನುಮತಿ ನೀಡಲಾಗಿದೆ. ಈ ಹಂತದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಾವು ಎರಡನೇ ಡೋಸ್ ಪಡೆದುಕೊಂಡು 9 ತಿಂಗಳು ಕಳೆದಿದ್ದರೆ ಮೂರನೇ ಡೋಸ್ ಲಸಿಕೆಯನ್ನೂ ಪಡೆದುಕೊಳ್ಳಬಹುದು.

ಬೂಸ್ಟರ್ ಡೋಸ್ ಲಸಿಕೆ ಪಡೆದವರ ಸಂಖ್ಯೆ ಎಷ್ಟಿದೆ?

ಬೂಸ್ಟರ್ ಡೋಸ್ ಲಸಿಕೆ ಪಡೆದವರ ಸಂಖ್ಯೆ ಎಷ್ಟಿದೆ?

ಭಾರತದಲ್ಲಿ 18 ರಿಂದ 59 ವಯೋಮಾನದ 77 ಕೋಟಿ ಜನಸಂಖ್ಯೆಯಲ್ಲಿ ಶೇ.1ಕ್ಕಿಂತಲೂ ಕಡಿಮೆ ಜನರು ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದಾಗ್ಯೂ, 60 ವರ್ಷ ಮೇಲ್ಪಟ್ಟ ಅಂದಾಜು 16 ಕೋಟಿ ಜನರಲ್ಲಿ ಶೇ.26ರಷ್ಟು ಮಂದಿ ಬೂಸ್ಟರ್ ಡೋಸ್ ತೆಗೆದುಕೊಂಡಿದ್ದಾರೆ. ಅದೇ ರೀತಿ ಶೇ.16ರಷ್ಟು ಆರೋಗ್ಯ ಕಾರ್ಯಕರ್ತರು ಮತ್ತು ಮೊದಲ ಶ್ರೇಣಿ ಕಾರ್ಯಕರ್ತರು ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕರ್ನಾಟಕದಲ್ಲಿ 18 ವರ್ಷ ಮೇಲ್ಪಟ್ಟವರ ಒಟ್ಟು ಜನರಲ್ಲಿ ಶೇ.8.68ರಷ್ಟು ಮಂದಿಯಷ್ಟೇ ಕೋವಿಡ್-19 ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಅಂದರೆ ಒಟ್ಟು 4,89,16,000 ಜನರಲ್ಲಿ 42,49,707 ಜನರು ಮುನ್ನೆಚ್ಚರಿಕೆ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ. 18 ರಿಂದ 59 ವಯೋಮಾನದ 4,08,74,700 ಜನರು ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದು, ಈ ಪೈಕಿ ಶೇ.0.96ರಷ್ಟು ಅಂದರೆ 3,93,383 ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 60 ವರ್ಷ ಮೇಲ್ಪಟ್ಟ 74,05,367 ಜನರು ಎರಡೂ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದರೆ, ಅದರಲ್ಲಿ ಶೇ.35.84ರಷ್ಟು ಮಂದಿ ಬೂಸ್ಟರ್ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಮೂರನೇ ಡೋಸ್ ಲಸಿಕೆ ಉಚಿತ ಇರಲಿಲ್ಲ

ದೇಶದಲ್ಲಿ ಮೂರನೇ ಡೋಸ್ ಲಸಿಕೆ ಉಚಿತ ಇರಲಿಲ್ಲ

ಭಾರತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ಮೂರನೇ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಆದರೆ 18 ವರ್ಷದಿಂದ 59 ವರ್ಷದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ನೀಡಲಾಗುತ್ತಿತ್ತು. ಹೀಗೆ ಪಡೆದುಕೊಳ್ಳುವ ಮೂರನೇ ಡೋಸ್ ಲಸಿಕೆಗೆ ಹಣವನ್ನು ಪಾವತಿ ಮಾಡಬೇಕಿತ್ತು. ಆದ್ದರಿಂದ ಮುನ್ನೆಚ್ಚರಿಕೆ ಡೋಸ್ ಲಸಿಕೆಯನ್ನು ಪಡೆದುಕೊಂಡವರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿತ್ತು. ಆದರೆ ಮುಂದಿನ 75 ದಿನಗಳವರೆಗೆ ಉಚಿತವಾಗಿ ಬೂಸ್ಟರ್ ಡೋಸ್ ಲಸಿಕೆಯನ್ನು ನೀಡಲಾಗುತ್ತಿದ್ದು, ಈ ಹಂತದಲ್ಲಿ 18 ರಿಂದ 59 ವಯೋಮಾನದವನರು ಅತಿಹೆಚ್ಚು ಲಸಿಕೆ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಆರೋಗ್ಯ ತಜ್ಞರು ವಿಶ್ಲೇಷಿಸಿದ್ದಾರೆ.

ಎಷ್ಟು ಹಂತಗಳಲ್ಲಿ ಕೊರೊನಾ ವೈರಸ್ ಲಸಿಕೆ ವಿತರಣೆ

ಎಷ್ಟು ಹಂತಗಳಲ್ಲಿ ಕೊರೊನಾ ವೈರಸ್ ಲಸಿಕೆ ವಿತರಣೆ

ಕಳೆದ 2021ರ ಜನವರಿ 16ರಂದು ಮೊದಲ ಬಾರಿಗೆ ಕೋವಿಡ್-19 ಲಸಿಕೆಯ ವಿತರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ಮೊದಲ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಫೆಬ್ರವರಿ 2ರಂದು ಎರಡನೇ ಹಂತದಲ್ಲಿ ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಿಸಲಾಯಿತು. ಮಾರ್ಚ್ 1ರಿಂದ ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟ ಅಸ್ವಸ್ಥತೆಯನ್ನು ಹೊಂದಿರುವವರಿಗೆ ಕೋವಿಡ್-19 ಲಸಿಕೆ ವಿತರಿಸಲು ಶುರು ಮಾಡಲಾಯಿತು. ತದನಂತರ ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ವಿತರಿಸಲು ಅನುಮತಿ ನೀಡಲಾಗಿತ್ತು. ಮೇ 1ರ ನಂತರದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೊನಾವೈರಸ್ ಲಸಿಕೆ ವಿತರಿಸುವುದಕ್ಕೆ ಅನುಮತಿಸಲಾಗಿತ್ತು.

ಕಳೆದ 2022ರ ಜನವರಿ 3ರಂದು 15 ರಿಂದ 18 ವಯೋಮಾನದವರಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡುವುದಕ್ಕೆ ಕೇಂದ್ರ ಸರ್ಕಾರವು ಅನುಮೋದನೆಯನ್ನು ನೀಡಿತು. ಇದರ ಬೆನ್ನಲ್ಲೇ ಮಾರ್ಚ್ 16ರಂದು 12 ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ವಿತರಿಸುವುದಕ್ಕೆ ಅನುಮತಿ ನೀಡಲಾಯಿತು. ಹೀಗೆ ಹಂತ-ಹಂತವಾಗಿ ಲಸಿಕೆ ವಿತರಣೆಗೆ ದೇಶದಲ್ಲಿ ಅನುಮತಿ ನೀಡಲಾಗಿದೆ.

ಕರುನಾಡಿನಲ್ಲಿ 1200ರ ಗಡಿ ದಾಟಿದ ಕೋವಿಡ್-19 ಪ್ರಕರಣ

ಕರುನಾಡಿನಲ್ಲಿ 1200ರ ಗಡಿ ದಾಟಿದ ಕೋವಿಡ್-19 ಪ್ರಕರಣ

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 1231 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1047 ಸೋಂಕಿತರು ಗುಣಮುಖರಾಗಿದ್ದು, ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ. ಕಳೆದೊಂದೇ ದಿನದಲ್ಲಿ ಕೊರೊನಾ ವೈರಸ್ ಪಾಸಿಟಿವಿಟಿ ಪ್ರಮಾಣವು ಶೇ.4.78ರಷ್ಟಾಗಿದೆ. ಅದೇ ರೀತಿ ಏಳು ದಿನಗಳಲ್ಲಿ ಪಾಸಿಟಿವಿಟಿ ಪ್ರಮಾಣವು ಶೇ.4.31ರಷ್ಟಿದೆ.

ಕರ್ನಾಟಕದಲ್ಲಿ ಒಟ್ಟು 3981816 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 3935088 ಸೋಂಕಿತರು ಗುಣಮುಖರಾಗಿದ್ದು, 40,083 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇದರ ಹೊತರಾಗಿ ರಾಜ್ಯದಲ್ಲಿ 6603 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

English summary
Karnataka looking to central Govt guidelines to start free Covid-19 booster dose. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X