• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದಲ್ಲಿ ‘ಕೊರೊನಾ ವಾರಿಯರ್ಸ್’ಗಳಿಗೆ ಲಂಡನ್ ರೈಲ್ವೆಯ ಗೌರವ

|

ಬೆಂಗಳೂರು, ಸೆಪ್ಟೆಂಬರ್ 25: ಮಾರ್ಚ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಭಾರತೀಯರು ತಮ್ಮ ಮನೆಗಳ ಆವರಣಕ್ಕೆ ಬಂದು 'ಕೊರೊನಾ ವಾರಿಯರ್ಸ್'ಗಳಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದರು. ವಿವಿಧ ಆಸ್ಪತ್ರೆಗಳ ಮೇಲೆ ಪುಷ್ಪ ವೃಷ್ಟಿ ಸುರಿಸಿ ಗೌರವ ಸಮರ್ಪಣೆ ಮಾಡಲಾಗಿತ್ತು.

ಆದರೆ ಲಂಡನ್ ನಲ್ಲಿ ರೈಲ್ವೆ ಕಂಪನಿಯೊಂದು 116 ಭಾಷೆಗಳಲ್ಲಿ 'ಧನ್ಯವಾದ' ಹೇಳುವ ಮೂಲಕ ಕೊರೊನಾ ಯೋಧರಿಗೆ ಗೌರವ ಸಮರ್ಪಿಸಿದ್ದು, ಈ ಭಾಷೆಗಳ ಪೈಕಿ ಕನ್ನಡ, ಕೊಂಕಣಿ ಕೂಡ ಸೇರಿರುವುದು ಗಮನಾರ್ಹವಾಗಿದೆ.

ಕೊರೊನಾ ವಾರಿಯರ್ಸ್‌ಗೆ ಶೌರ್ಯ ಪ್ರಶಸ್ತಿ, ನಗದು ಬಹುಮಾನ ನೀಡಲು ಆಗ್ರಹ

ಗ್ರೇಟ್ ವೆಸ್ಟರ್ನ್ ರೈಲ್ವೆ (ಜಿಡಬ್ಲ್ಯುಆರ್) ಜುಲೈನಲ್ಲಿ ತನ್ನ ರೈಲುಗಳ ಮೇಲೆ ವಿಶೇಷವಾಗಿ 'ಧನ್ಯವಾದ'ಗಳನ್ನು ಬರೆಯಿಸುವ ಮೂಲಕ ಸಾಂಕ್ರಾಮಿಕ ರೋಗದ ಸಮಯದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ ‍ಗಳಿಗೆ ಅಭಿನಂದಿಸಿದೆ. ಈ ಧನ್ಯವಾದದ ಬರಹಗಳನ್ನು ರೈಲು ಸಂಖ್ಯೆ 802020 ಇಂಟರ್ ‍ಸಿಟಿ ಎಕ್ಸ್ ಪ್ರೆಸ್ ಮೇಲೆ ಬರೆಸಲಾಗಿದೆ.

ಜಿಡಬ್ಲ್ಯುಆರ್ ನೆಟ್‍ವರ್ಕ್ ಸಾಮಾಜಿಕ ಜಾಲತಾಣದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮೂವರು ಬಾಲಕರು ಈ ಆಲೋಚನೆಯನ್ನು ಹಂಚಿಕೊಂಡಿದ್ದರು. ಗ್ಲೌಸೆಸ್ಟರ್ ‍ಶೈರ್ ‍ನ 13 ವರ್ಷದ ಸ್ಯಾಮ್ ಸ್ಮಿತ್ 'ರಾಷ್ಟ್ರವು ಧನ್ಯವಾದ ಹೇಳುತ್ತದೆ' ಎಂದು ರೈಲುಗಳ ಮೇಲೆ ಬರೆಯಿಸಲು ತಿಳಿಸಿದ್ದರು. ಇದಕ್ಕೆ ವಿವಿಧ ಭಾಷೆಗಳಲ್ಲಿ 'ಧನ್ಯವಾದಗಳು' ಎಂದು ಬರೆಸಲು ನ್ಯೂಟನ್ ಅಬಾಟ್ ‍ನ 15 ವರ್ಷದ ಸ್ಯಾಮ್ ಮೂರಿ ಪ್ರಸ್ತಾಪಿಸಿದರು. ಮತ್ತು ಒಟ್ಟಾರೆ ವಿನ್ಯಾಸವನ್ನು 16 ವರ್ಷದ ನೆಡ್ ಥಾಂಪ್ಸನ್ ರಚಿಸಿದ್ದಾರೆ.

   Karnataka ಮತ್ತೊಮ್ಮೆ Lockdown ಆಗಲಿದೆಯೇ ? ಕಂಪ್ಲೀಟ್ ವಿವರ | Oneindia Kannada

   166 ದೇಶಗಳ 116 ಭಾಷೆಗಳನ್ನು ಇಲ್ಲಿ ಬಳಸಲಾಗಿದ್ದು, ಇದರಲ್ಲಿ ಭಾರತದ ಕನ್ನಡ, ಕೊಂಕಣಿ, ಹಿಂದಿ ಕೂಡ ಸೇರಿದೆ ಎಂದು ಜಿಡಬ್ಲ್ಯುಆರ್ ಯೋಜನಾ ಸಂವಹನ ವ್ಯವಸ್ಥಾಪಕ ಪಾಲ್ ಜಂಟಲ್ಮನ್ ದೃಢಪಡಿಸಿದ್ದಾರೆ.

   English summary
   A railway company in London paid tribute to Corona warriors by saying thanks in 116 languages, notably Kannada and Konkani language is also there.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X