ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಕಾಲೇ ಬಹುಕೃತ ವೇಷಂ: 'ಕೇಸರಿ' ಮೊರೆಹೋದ ಕಾಂಗ್ರೆಸ್

|
Google Oneindia Kannada News

ಕೇಸರಿ ಶಾಲು, ಪೇಟ ಹಾಕಿಕೊಂಡರೆ ನೈಜ ಹಿಂದೂಗಳಾ.. ಬಿಜೆಪಿಯವರು ಮಾತ್ರ ಹಿಂದೂಗಳಾ.. ನಾವೂ ಹಿಂದೂಗಳಲ್ವಾ ಎಂದು ಚುನಾವಣೆಗೆ ಮುನ್ನ ಅಬ್ಬರದ ಮಾತನ್ನಾಡುತ್ತಿದ್ದ ಕೆಲವು ಕಾಂಗ್ರೆಸ್ ಮುಖಂಡರು ಈಗ ಕೇಸರಿಯ ಮೊರೆಹೋಗಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಕೇಸರೀಕರಣ, ಕೇಸರಿ ಪ್ರಯೋಗಶಾಲೆ, ಸ್ಯಾಫ್ರೋನ್ ಗೂಂಡಾ.. ಎಂದು ಬಿಜೆಪಿ ಮತ್ತು ಸಂಘ ಪರಿವಾರವನ್ನು ಟೀಕಿಸಲು, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಮುಖಂಡರು ಬಳಸುತ್ತಿದ್ದ, 'ಕೇಸರಿ' ಕಲರಿನ ಶಾಲನ್ನು ಹಾಕಿಕೊಂಡು ಧುರೀಣರು ಮತಯಾಚಿಸುತ್ತಿದ್ದಾರೆ.

ಅದ್ಯಾಕೆ ದೇವೇಗೌಡ್ರು 'ದಯಮಾಡಿ' ಮತಯಾಚಿಸುತ್ತಿದ್ದಾರೆ? ಸೋಲಿನ ಮುನ್ಸೂಚನೆಯೇ?ಅದ್ಯಾಕೆ ದೇವೇಗೌಡ್ರು 'ದಯಮಾಡಿ' ಮತಯಾಚಿಸುತ್ತಿದ್ದಾರೆ? ಸೋಲಿನ ಮುನ್ಸೂಚನೆಯೇ?

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು, ಕೆಲವೊಂದು ಏರಿಯಾಗಳಲ್ಲಿ ಕೇಸರಿ ಶಾಲು, ಪೇಟಾವನ್ನು ತೊಟ್ಟುಕೊಂಡು ಮತಯಾಚಿಸುತ್ತಿರುವುದು ಗಮನಿಸಬೇಕಾದ ವಿಚಾರ. ಅಲ್ಪಸಂಖ್ಯಾತರು ಹೆಚ್ಚಾಗಿರುವ ಪ್ರದೇಶಗಳಲ್ಲಿ 'ಟೋಪಿ' ಹಾಕಿಕೊಂಡು ಮತಯಾಚಿಸುವ ಸಂಪ್ರದಾಯವನ್ನು ಕಾಂಗ್ರೆಸ್ ಅಭ್ಯರ್ಥಿಗಳು ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದಾರೆ.

ಕರಾವಳಿಯಲ್ಲಿ ಕೇಸರಿಯಾಗಿ ಬದಲಾದ ಕಾಂಗ್ರೆಸ್: ಉದ್ದೇಶವೇನು?ಕರಾವಳಿಯಲ್ಲಿ ಕೇಸರಿಯಾಗಿ ಬದಲಾದ ಕಾಂಗ್ರೆಸ್: ಉದ್ದೇಶವೇನು?

ಬಿಜೆಪಿ ಅತ್ಯಂತ ಪಭಲವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ 'ಕೇಸರಿ ಪ್ರಯೋಗ'ಕ್ಕೆ ಮುಂದಾಗಿದೆ. ಕಾಂಗ್ರೆಸ್ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರು ಹೇಳಿಕೊಟ್ಟ ಹಿಂದುತ್ವವನ್ನು ಪಾಲಿಸುತ್ತದೆ. ಆದರೆ ಬಿಜೆಪಿಯದ್ದು ಬೇರೆಯದ್ದೇ ಹಿಂದುತ್ವ ಎಂದು ಕಾಂಗ್ರೆಸ್ ಮುಖಂಡರು, ಕೇಸರಿ ಶಾಲು ಧರಿಸುವುದನ್ನು ಸಮರ್ಥಿಸಿಕೊಳ್ಳುತ್ತಾರೆ. ಯಾವ ಯಾವ ಕಾಂಗ್ರೆಸ್ ಅಭ್ಯರ್ಥಿಗಳು ಕೇಸರಿ ಮೊರೆಹೋಗಿದ್ದಾರೆ, ಮುಂದೆ ಓದಿ..

ದಕ್ಷಿಣಕನ್ನಡ ಕ್ಷೇತ್ರದಿಂದ ಮಿಥುನ್ ರೈ ಮತ್ತು ಉಡುಪಿ-ಚಿಕ್ಕಮಗಳೂರಿನಿಂದ ಪ್ರಮೋದ್ ಮಧ್ವರಾಜ್

ದಕ್ಷಿಣಕನ್ನಡ ಕ್ಷೇತ್ರದಿಂದ ಮಿಥುನ್ ರೈ ಮತ್ತು ಉಡುಪಿ-ಚಿಕ್ಕಮಗಳೂರಿನಿಂದ ಪ್ರಮೋದ್ ಮಧ್ವರಾಜ್

ಕರಾವಳಿಯ ಜಿಲ್ಲೆಗಳು ಬಿಜೆಪಿಯ ಭದ್ರಕೋಟೆ ಎಂದೇ ಹೇಳಲಾಗುತ್ತಿದೆ. ಮಂಗಳೂರು ಮತ್ತು ಉಡುಪಿ, ಹಿಂದುತ್ವದ ಪ್ರಯೋಗಶಾಲೆ ಎನ್ನುವ ಪದ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಚಾಲನೆಗೆ ಬಂತು. ಈ ಹಿನ್ನೆಲೆಯಲ್ಲಿ ಮತ ಬೇಟೆಗೆ ಕಾಂಗ್ರೆಸ್ ಕೂಡಾ ಕೇಸರಿಯನ್ನು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಳಸಲು ಆರಂಭಿಸಿತು. ದಕ್ಷಿಣಕನ್ನಡ ಕ್ಷೇತ್ರದಿಂದ ಮಿಥುನ್ ರೈ ಮತ್ತು ಉಡುಪಿ-ಚಿಕ್ಕಮಗಳೂರಿನಿಂದ ಪ್ರಮೋದ್ ಮಧ್ವರಾಜ್ ಸ್ಪರ್ಧಿಸುತ್ತಿದ್ದಾರೆ.

ಸೆಂಟ್ರಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್

ಸೆಂಟ್ರಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್, ಕೇಸರಿ ಪೇಟ ಧರಿಸಿಕೊಂಡು ಮತಯಾಚಿಸಿದ್ದರು. ಬಿಜೆಪಿ ಅಭ್ಯರ್ಥಿ ಪಿ ಸಿ ಮೋಹನ್ ವಿರುದ್ದ ಕಣಕ್ಕಿಳಿದಿರುವ ರಿಜ್ವಾನ್ ಬಿರುಸಿನ ಪ್ರಚಾರ ನಡೆಸಿದ್ದಾರೆ. ಕ್ಷೇತ್ರದ ವ್ಯಾಪ್ತಿಯ ಕೆಲವೊಂದು ಅಸೆಂಬ್ಲಿ ಪ್ರದೇಶಗಳಲ್ಲಿ ರಿಜ್ವಾನ್ ಕೇಸರಿ ಪ್ರಯೋಗ ಮಾಡಿದ್ದರು. ರಾಮನವಮಿಯಂದು ದೇವಸ್ಥಾನಕ್ಕೂ ಹೋಗಿದ್ದ ರಿಜ್ವಾನ್, ಸಿ ವಿ ರಾಮನ್ ನಗರ ವ್ಯಾಪ್ತಿಯಲ್ಲಿ ಬರುವ ದೇವಾಲಯಕ್ಕೂ ಭೇಟಿ ನೀಡಿದ್ದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಿಥುನ್ ರೈ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಿಥುನ್ ರೈ

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ತಂತ್ರಗಾರಿಕೆಯನ್ನು ಬದಲಾಯಿಸಿತ್ತು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯರ್ತರು ಕೇಸರಿ ಶಾಲು ಹಾಕಿ ಮತ ಯಾಚನೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಪಕ್ಷದ ಅಭ್ಯರ್ಥಿ ಮಿಥುನ್ ರೈ ಸಾಮಾನ್ಯವಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ನಾಯಕರು ಹಾಕಿಕೊಳ್ಳುವ ತ್ರಿವರ್ಣ ಶಾಲನ್ನು ಹಾಕಿಕೊಳ್ಳದೇ ಕೆಲವೆಡೆ ಬಿಜೆಪಿ ಹಾಗೂ ಸಂಘಪರಿವಾರದ ನಾಯಕರು ಧರಿಸುವ ಕೇಸರಿ ಶಾಲನ್ನು ಹೆಚ್ಚು ಧರಿಸಿ ಮತಯಾಚಿಸಿದ್ದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್

ದೇವರು, ದೈವಗಳನ್ನು ಹೆಚ್ಚಾಗಿ ನಂಬುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಕೂಡಾ ಅಲ್ಲಲ್ಲಿ ಜೆಡಿಎಸ್- ಕಾಂಗ್ರೆಸ್ ಶಾಲಿನ ಜೊತೆಗೆ, ಕೇಸರಿ ಶಾಲನ್ನೂ ಹಾಕಿ ಪ್ರಚಾರ ನಡೆಸಿದ್ದರು. ಕಳೆದ ಸಿದ್ದರಾಮಯ್ಯನವರ ಸರಕಾರದಲ್ಲಿ ಸಚಿವರೂ ಆಗಿದ್ದ ಪ್ರಮೋದ್ ಮಧ್ವರಾಜ್, ಬದಲಾದ ಪರಿಸ್ಥಿತಿಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಚುನಾವಣಾ ಕಾಲೇ ಬಹುಕೃತ ವೇಷಂ ಎಂದು ಚರ್ಚೆಯ ವಿಷಯವಾಗಿತ್ತು.

ಬೆಂಗಳೂರು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್

ಬೆಂಗಳೂರು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್

ಬೆಂಗಳೂರು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಪರ ಪ್ರಚಾರದಲ್ಲೂ ಕಾರ್ಯಕರ್ತರು ಅಲ್ಲಲ್ಲಿ ಕೇಸರಿ ಶಾಲನ್ನು ಹಾಕಿಕೊಂಡು ಕ್ಯಾಂಪೇನ್ ಮಾಡುತ್ತಿದ್ದರು. ತೇಜಸ್ವಿ ಸೂರ್ಯ ಬಿಜೆಪಿಯಿಂದ ಇಲ್ಲಿ ಕಣಕ್ಕಿಳಿದಿದ್ದಾರೆ. ನನ್ನನ್ನು ಆಯ್ಕೆಮಾಡಿದರೆ ಬೆಂಗಳೂರಿನ ಗತವೈಭವವನ್ನು ಮತ್ತೆ ತರುತ್ತೇನೆಂದು ಬಿ ಕೆ ಹರಿಪ್ರಸಾದ್ ವಾಗ್ದಾನ ಮಾಡಿದ್ದಾರೆ.

English summary
Loksabha elections 2019: Some of the Congress candidates using saffron while campaigning, generally BJP is using saffron.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X