ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರರಹಿತ ದೂರು; ಕ್ರಮಕ್ಕೆ ಮುಂದಾದ ಲೋಕಾಯುಕ್ತ

|
Google Oneindia Kannada News

ಬೆಂಗಳೂರು, ಆಗಸ್ಟ್ 09: ಕರ್ನಾಟಕ ಲೋಕಾಯುಕ್ತಕ್ಕೆ ನೀವೇನಾದರೂ ದೂರು ನೀಡುವುದಿದ್ದರೆ ಒಮ್ಮೆ ದೂರಿನೊಂದಿಗೆ ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ. ಒಂದು ವೇಳೆ ಆಧಾರರಹಿತ ದೂರುಗಳನ್ನು ನೀಡಿದರೆ ನಿಮ್ಮ ವಿರುದ್ಧ ಲೋಕಾಯುಕ್ತ ಕಾಯ್ದೆ, 1984 ರ ಸೆಕ್ಷನ್ 20 ಅಡಿಯಲ್ಲಿ ಕ್ರಮ ಕೈಗೊಂಡು ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ.

ಹೌದು, ಆಧಾರರಹಿತ, ಕ್ಷುಲ್ಲಕ, ನಿಷ್ಪ್ರಯೋಜಕ, ಪೂರಕ ದಾಖಲೆಗಳಿಲ್ಲದ ದೂರುಗಳು ಇತ್ತೀಚೆಗೆ ಲೋಕಾಯುಕ್ತ ಬರುತ್ತಿವೆ. ಇಂತಹ ನಿರುಪಯುಕ್ತ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಲೋಕಾಯುಕ್ತ ಕ್ರಮವಹಿಸಲಿದೆ.

ಬೆಂಗಳೂರು ಆಸಿಡ್ ದಾಳಿ; ಆಗಸ್ಟ್ 10ಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಬೆಂಗಳೂರು ಆಸಿಡ್ ದಾಳಿ; ಆಗಸ್ಟ್ 10ಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ

ಆಧಾರಹಿತ, ಕ್ಷುಲ್ಲಕ ದೂರುಗಳಲ್ಲಿ ತನಿಖೆ ನಡೆಸಲು ಲೋಕಾಯುಕ್ತ ಕಾಯ್ದೆ ಸೆಕ್ಷನ್ 9ರ ಅನ್ವಯ ಅಗತ್ಯವಾದ ಅಂಶಗಳು ಇಲ್ಲದ್ದನ್ನು ನ್ಯಾ. ಫಣಿಂದ್ರ ಅವರು ಗಮನಿಸಿದ್ದಾರೆ. ಇದೇ ವೇಳೆ ಲೋಕಾಯುಕ್ತಕ್ಕೆ ಕ್ಷುಲ್ಲಕ ದೂರುಗಳು ಬರುತ್ತಿವೆ. ಅವುಗಳ ಕಾರ್ಯವಿಧಾನ, ಚಟುವಟಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನ್ಯಾ.ಫಣೀಂದ್ರ ಅವರು ದಾಖಲೆ ಇಲ್ಲದ ದೂರ ನೀಡುವವರ ವಿರುದ್ಧ ಲೋಕಾಯುಕ್ತ ಕಾಯ್ದೆ, 1984 ರ ಸೆಕ್ಷನ್ 20 ಅಡಿಯಲ್ಲಿ ಕ್ರಮ ಕೈಗೊಂಡು, ತನಿಖೆ ನಡೆಸಬಾರದು? ಎಂದು ಅವರು ಪ್ರಶ್ನಿಸಿದ್ದಾರೆ.

Lokayukta will be action against baseless complaints

ಈ ರೀತಿ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ಆಧಾರರಹಿತ 2-3 ಪ್ರಕರಣಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಆಧಾರ ರಹಿತ 2 ದೂರು ಸಲ್ಲಿಕೆ; ಈ ರೀತಿ ಎರಡು ಪ್ರತ್ಯೇಕ ದೂರುಗಳು ಲೋಕಾಯುಕ್ತಕ್ಕೆ ಬಂದಿದೆ. ಈ ಪೈಕಿ ಮಂಡ್ಯ ಜಿಲ್ಲೆಯ ಯುವಕ ನಾಗರಾಜು ಎಂಬುವವರು ನಗರದಲ್ಲಿನ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಇಂಜಿನಿಯರ್ ಗಳ ವಿರುದ್ಧ ದೂರು ಕೊಟ್ಟಿದ್ದರು.

ಚನ್ನಪಟ್ಟಣದಲ್ಲಿ ನೀರಿನ ತೆರಿಗೆ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ನೀಡಿದ್ದರು. ಪ್ರಕರಣ ಕುರಿತು ದಾಖಲೆ ಪರಿಶೀಲಿಸಿದ ಲೋಕಾಯುಕ್ತ ಅಧಿಕಾರಿಗಳಿಗೆ ದಾಖಲೆಗಳು ಪೂರಕವಾಗಿಲ್ಲ ಎಂಬುದು ಗೊತ್ತಾಗಿದೆ.

Lokayukta will be action against baseless complaints

ದೂರುದಾರರು ರಾಮನಗರ ಮತ್ತು ಚನ್ನಪಟ್ಟಣಕ್ಕೆ ನೀರು ಸರಬರಾಜಿನ ಯೋಜನೆಯಲ್ಲಿ ಗುತ್ತಿಗೆ ತನಗೆ ಇಷ್ಟವಾದ ವ್ಯಕ್ತಿಯ ಪರವಾಗಿ ಪರಿಗಣಿಸಿಲ್ಲ ಎಂದು ಆಕ್ರೋಶ ಗೊಂಡಿದ್ದ. ಈ ಕಾರಣಕ್ಕೆ ಅಕ್ರಮ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದ. ಅಲ್ಲದೇ ಈಗಾಗಲೇ ಎರಡು ಸಲ ದೂರು ಸಹ ನೀಡಿದ್ದು, ಇದು ಮೂರನೇ ದೂರು ಆಗಿದೆ.

ಇನ್ನೂಂದು ಪ್ರತ್ಯೇಕ ಪ್ರಕರಣವಾದ ಚಿತ್ರದುರ್ಗದಲ್ಲಿ ಮೇಗಲಕೊಟ್ಟಿಗೆಯ ಜಿ.ಶಾಂತಪ್ಪ ಎಂಬಾತ, ಚಿತ್ರದುರ್ಗದಲ್ಲಿ ಯೋಜನೆಯೊಂದರ ಅಡಿ ಕಳಪೆ ಗುಣಮಟ್ಟದ ಕಾಮಗಾರಿ ನಡೆಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಗಿಡಗಳನ್ನು ಬೆಳೆಸುವುದಕ್ಕಾಗಿ ನೀಡಿದ್ದ ಅನುದಾನದಲ್ಲಿ ಅಕ್ರಮ ಎಸಲಾಗಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ಇತ್ತೀಚೆಗೆ ದೂರು ಸಲ್ಲಿಸಿದ್ದರು. ಆದರೆ ಶಾಂತಪ್ಪ ಅವರ ಆರೋಪಗಳಿಗೆ ಪೂರಕ ಆಧಾರಗಳು ಲಭ್ಯವಾಗಲಿಲ್ಲ.

ಈ ಕುರಿತು ದೂರುದಾರ ಶಾಂತಪ್ಪನನ್ನು ಉಪ ಲೋಕಾಯುಕ್ತರ ಬಳಿ ವಿಚಾರಣೆ ಸಹ ನಡೆಸಲಾಗಿತ್ತು. ಆಗ ಆತ ನಾನೇ ತಪ್ಪು ಮಾಹಿತಿ ಆಧರಿಸಿ ತಮಗೆ ದೂರು ನೀಡಿದ್ದೇನೆ. ತಾನು ಕಿಡಿಗೇಡಿಗಳ ಮಾತು ಕೇಳಬಾರದಿತ್ತು ಎಂದು ಹೇಳಿಕೆ ನೀಡಿದ್ದ ಎಂಬುದು ಅಧಿಕಾರಿಗಳ ತನೀಖೆಯಿಂದ ತಿಳಿದು ಬಂದಿದೆ.

Recommended Video

Bihar Politics : ಬಿಹಾರದ ಸಿಎಂ ನಿತೀಶ್ ಕುಮಾರ್ ಮಹಾ ಪಲ್ಟಿ ರಾಜಕೀಯ | Oneindia Kannada

English summary
Karnataka Lokayukta will take action against baseless complaints
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X