ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ದಾಳಿಯಲ್ಲಿ 7.5 ಕೋಟಿ ಅಕ್ರಮ ಆಸ್ತಿ ಪತ್ತೆ

|
Google Oneindia Kannada News

ಬೆಂಗಳೂರು, ಜ.30 : ಬುಧವಾರ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಶಾಕ್ ನೀಡಿದ್ದಾರೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಏಳು ಜಿಲ್ಲೆಯಲ್ಲಿ ಎಂಟು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಒಟ್ಟು 23 ಕಡೆ ದಾಳಿ ನಡೆದಿದ್ದು, 7.5 ಕೋಟಿ ರೂ. ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.

ಬುಧವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಲೋಕಾಯುಕ್ತ ಎಡಿಜಿಪಿ ಸತ್ಯನಾರಾಯಣ ರಾವ್‌ ದಾಳಿಯ ಬಗ್ಗೆ ಮಾಹಿತಿ ನೀಡಿದರು. ಬೆಂಗಳೂರು, ದಕ್ಷಿಣ ಕನ್ನಡ, ಹುಬ್ಬಳ್ಳಿ, ಹಾಸನ, ಬೆಳಗಾವಿ, ಬಳ್ಳಾರಿ, ಬಿಜಾಪುರ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಒಟ್ಟು 7.5ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದರು.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಎಸ್‌ಎಸ್‌ಎನ್‌ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಹಾಯಕ ಪ್ರೊಫೆಸರ್‌ ಎಸ್‌.ಎಂ.ಪಾಟೀಲ್‌, ಬಳ್ಳಾರಿ ವಿಮ್ಸ್‌ ಪ್ರೊಫೆಸರ್‌ ಹಾಗೂ ಅರವಳಿಕೆ ವಿಭಾಗದ ಮುಖ್ಯಸ್ಥ ಡಾ.ಬಿ.ದೇವಾನಂದ್‌, ಕೂಡ್ಲಗಿ ತಾಲೂಕಿನ ಗುಡಿಕೋಡೆ ಗ್ರಾಮ ಪಂಚಾಯಿತಿ ಪಿಡಿಓ ಕೆ.ಆರ್‌.ಪ್ರಕಾಶ್‌, ಬಿಜಾಪುರ ಜಿಲ್ಲೆಯ ಕೃಷ್ಣ ಭಾಗ್ಯ ಜಲನಿಗಮದ ಪ್ರಧಾನ ಲೆಕ್ಕಾಧಿಕಾರಿ ಮಹಾಂತಪ್ಪ ಈರಬಸಪ್ಪ ಸೂಲೇಬಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಯೋಜನಾ ವಿಭಾಗದ ಕಿರಿಯ ಅಭಿಯಂತರ ಸುಭಾಷ್‌ಚಂದ್ರ ಎನ್‌.ಪುಟ್ಟಣ್ಣನವರ್‌ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂದರು.

ಹಾಸನ ಜಿಲ್ಲೆಯಲ್ಲಿ ತೂಕ ಮತ್ತು ಅಳತೆ ಮಾಪನ ಇಲಾಖೆಯ ಸಹಾಯಕ ನಿಯಂತ್ರಣಾಧಿಕಾರಿ ಜಿ.ಎನ್‌.ನರಸಿಂಹಮೂರ್ತಿ, ಮಂಗಳೂರಿನ ಬಂಟ್ವಾಳ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಓಂಪ್ರಕಾಶ್‌ ಹೆಗ್ಡೆ, ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ನಿಗಮದ ಹಿರಿಯ ಸಹಾಯಕ ಎಂ.ವಿ.ರಾಜನ್‌ ನಂಬಿಯಾರ್‌ ಅವರ ಮನೆಗಳ ಮೇಲೆಯೂ ಲೋಕಾಯುಕ್ತ ದಾಳಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

23 ಸ್ಥಳಗಳಲ್ಲಿ 23 ಅಧಿಕಾರಿಗಳ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬ್ಯಾಂಕ್‌ ಖಾತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಗುರುವಾರ ಅಧಿಕಾರಿಗಳ ಆಸ್ತಿಯ ಮತ್ತಷ್ಟು ವಿವರ ಲಭ್ಯವಾಗಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಲೋಕಾಯುಕ್ತ ನ್ಯಾ. ವೈ.ಭಾಸ್ಕರ್‌ ರಾವ್‌ ಉಪಸ್ಥಿತರಿದ್ದರು. ಭ್ರಷ್ಟ ಅಧಿಕಾರಿಗಳ ಆಸ್ತಿ ವಿವರ ಇಲ್ಲಿದೆ.

ಬೆಳಗಾವಿಯಲ್ಲಿ ಸಿಕ್ಕ ಅಕ್ರಮ ಆಸ್ತಿ

ಬೆಳಗಾವಿಯಲ್ಲಿ ಸಿಕ್ಕ ಅಕ್ರಮ ಆಸ್ತಿ

ಶಿವನಗೌಡ ಮಲಗೌಡ ಪಾಟೀಲ [ಸಹ ಪ್ರಾಧ್ಯಾಪಕ, ಎಸ್‌ಎಸ್‌ಎನ್‌ ಕಾಲೇಜ್‌]
ಒಟ್ಟು ಆಸ್ತಿ : 3.21 ಲಕ್ಷ ರೂ
ಒಟ್ಟು ಖರ್ಚು : 56.50 ಲಕ್ಷ
ಒಟ್ಟು ಆದಾಯ : 1.48 ಕೋಟಿ ರೂ.
ಅಸಮತೋಲನ ಆಸ್ತಿ : 2.30 ಕೋಟಿ ರೂ.

ಬಳ್ಳಾರಿಯಲ್ಲಿ ಸಿಕ್ಕಿದ್ದೆಷ್ಟು

ಬಳ್ಳಾರಿಯಲ್ಲಿ ಸಿಕ್ಕಿದ್ದೆಷ್ಟು

ಡಾ.ಬಿ.ದೇವಾನಂದ [ ಪ್ರೊಫೆಸರ್‌, ವಿಮ್ಸ್‌, ಬಳ್ಳಾರಿ]
ಒಟ್ಟು ಆಸ್ತಿ : ಸುಮಾರು 2 ಕೋಟಿ
ಒಟ್ಟು ಖರ್ಚು : 32.65 ಲಕ್ಷ ರೂ.
ಒಟ್ಟು ಆದಾಯ : 1.83 ಕೋಟಿ ರೂ.

ಪಿಡಿಓ ಬಳಿ 48 ಲಕ್ಷ ರೂ

ಪಿಡಿಓ ಬಳಿ 48 ಲಕ್ಷ ರೂ

ಕೆ.ಆರ್‌.ಪ್ರಕಾಶ್‌ [ಪಿಡಿಓ, ಗುಡೆಕೋಟೆ ಗ್ರಾ.ಪಂ. ಕೂಡ್ಲಿಗಿ, ಬಳ್ಳಾರಿ]
ಒಟ್ಟು ಆಸ್ತಿ : 62 ಲಕ್ಷ ರೂ.
ಒಟ್ಟು ಖರ್ಚು : 9.40 ಲಕ್ಷ ರೂ.
ಒಟ್ಟು ಆದಾಯ : 23.50 ಲಕ್ಷ ರೂ.
ಅಸಮತೋಲನ ಆಸ್ತಿ : 48 ಲಕ್ಷ ರೂ.

ಮಂಗಳೂರಿನಲ್ಲಿ ಎಷ್ಟು ಸಿಕ್ತು

ಮಂಗಳೂರಿನಲ್ಲಿ ಎಷ್ಟು ಸಿಕ್ತು

ಎಂ.ವಿ.ರಾಜನ್‌ ನಂಬಿಯಾರ್‌ [ಹಿರಿಯ ಸಹಾಯಕ, ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ]

ಒಟ್ಟು ಆಸ್ತಿ : 56.39 ಲಕ್ಷ ರೂ.
ಒಟ್ಟು ಖರ್ಚು : 28.35 ಲಕ್ಷ ರೂ.
ಒಟ್ಟು ಆದಾಯ : 20 ಲಕ್ಷ ರೂ.
ಅಸಮತೋಲನ ಆಸ್ತಿ : 64.74 ಲಕ್ಷ ರೂ.

ಹಾಸನದಲ್ಲಿ ಸಿಕ್ಕಿದ್ದಿಷ್ಟು

ಹಾಸನದಲ್ಲಿ ಸಿಕ್ಕಿದ್ದಿಷ್ಟು

6. ಹೆಸರು : ಜಿ.ಎನ್‌.ನರಸಿಂಹಮೂರ್ತಿ [ ಸಹಾಯಕ ನಿಯಂತ್ರಕ, ಕಾನೂನು ಮಾಪನ ಶಾಸ್ತ್ರ]

ಒಟ್ಟು ಆಸ್ತಿ : 1.06 ಕೋಟಿ ರೂ.
ಒಟ್ಟು ಖರ್ಚು : 23 ಲಕ್ಷ ರೂ.
ಒಟ್ಟು ಆದಾಯ : 69 ಲಕ್ಷ ರೂ.
ಅಸಮತೋಲನ ಆಸ್ತಿ : 16.85 ಲಕ್ಷ ರೂ.

ವಿಜಾಪುರದಲ್ಲಿ ಸಿಕ್ಕಿದ್ದಿಷ್ಟು

ವಿಜಾಪುರದಲ್ಲಿ ಸಿಕ್ಕಿದ್ದಿಷ್ಟು

ಮಹಾಂತಪ್ಪ ಈರಬಸಪ್ಪ ಸೂಳಿಭಾವಿ [ಪ್ರಧಾನ ಲೆಕ್ಕಾಧಿಕಾರಿ, ಕೃಷ್ಣ ಭಾಗ್ಯ ಜಲನಿಗಮ]
ಒಟ್ಟು ಆಸ್ತಿ : 83.42 ಲಕ್ಷ ರೂ.
ಒಟ್ಟು ಖರ್ಚು : 35 ಲಕ್ಷ ರೂ.
ಒಟ್ಟು ಆದಾಯ : 50 ಲಕ್ಷ ರೂ.
ಅಸಮತೋಲನ ಆಸ್ತಿ : 68.42 ಲಕ್ಷ ರೂ.

ಹುಬ್ಬಳ್ಳಿಯಲ್ಲಿ 1 ಕೋಟಿ ಪತ್ತೆ

ಹುಬ್ಬಳ್ಳಿಯಲ್ಲಿ 1 ಕೋಟಿ ಪತ್ತೆ

ಸುಭಾಷ್‌ಚಂದ್ರ ಎನ್‌.ಪುಟ್ಟಣವರ [ಕಿರಿಯ ಎಂಜಿನಿಯರ್‌, ನಗರ ಯೋಜನ ಶಾಖೆ, ಹು-ಧಾ ಮಹಾನಗರ ಪಾಲಿಕೆ]
ಒಟ್ಟು ಆಸ್ತಿ : 1.44 ಕೋಟಿ
ಒಟ್ಟು ಖರ್ಚು : 32.80 ಲಕ್ಷ ರೂ.
ಒಟ್ಟು ಆದಾಯ : 66.60 ಲಕ್ಷ
ಅಸಮತೋಲನ ಆಸ್ತಿ : 1.10 ಕೋಟಿ ರೂ.

ಬಂಟ್ವಾಳದಲ್ಲಿ ಎಷ್ಟು ಸಿಕ್ತು

ಬಂಟ್ವಾಳದಲ್ಲಿ ಎಷ್ಟು ಸಿಕ್ತು

ಓಂ ಪ್ರಕಾಶ್‌ ಹೆಗ್ಡೆ [ಪ್ರಥಮದರ್ಜೆ ಸಹಾಯಕ, ಬಂಟ್ವಾಳ ತಾಲೂಕು ಕಚೇರಿ]
ಒಟ್ಟು ಆಸ್ತಿ : 72.34 ಲಕ್ಷ ರೂ.
ಒಟ್ಟು ಖರ್ಚು : 22.17 ಲಕ್ಷ ರೂ.
ಒಟ್ಟು ಆದಾಯ : 33.20 ಲಕ್ಷ ರೂ.
ಅಸಮತೋಲನ ಆಸ್ತಿ : 61.31 ಲಕ್ಷ ರೂ.

English summary
The Lokayukta police on Wednesday raided 23 premises of eight government officials in Belgaum, Bellary, Bijapur, Hassan, Dharwad and Dakshina Kannada districts and unearthed illegal assets worth Rs 7.50 core.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X