ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ದಾಳಿಗೆ ಭರ್ಜರಿ ಇಳುವರಿ

By Srinath
|
Google Oneindia Kannada News

lokayukta-raid-yields-rs-10-cr-value-illegal-assets-from-10-officers
ಬೆಂಗಳೂರು, ಡಿ.21: ರಾಜ್ಯದ 9 ಜಿಲ್ಲೆಗಳೂ ಸೇರಿದಂತೆ ನೆರೆಯ ಆಂಧ್ರದಲ್ಲೂ 10 ಭ್ರಷ್ಟ ಅಧಿಕಾರಿಗಳಿಗೆ ಧನುರ್ಮಾಸದ ಚಳಿ ಬಿಡಿಸಿದ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿ, ಅಪಾರ ಇಳುವರಿ ಪಡೆದಿದ್ದಾರೆ.

ಒಟ್ಟು 32 ಸ್ಥಳಗಳಲ್ಲಿ ಶುಕ್ರವಾರ ಬೆಳಗ್ಗೆಯೇ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಈ ಭ್ರಷ್ಟ ಅಧಿಕಾರಿಗಳು ಸಂಪಾದಿಸಿದ್ದ 15.5 ಕೋಟಿ ರೂ. ವೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆಪಾದಿತರ ಬ್ಯಾಂಕ್ ಖಾತೆ ಮತ್ತಿತರ ದಾಖಲೆಗಳ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ ಎಂದು ಲೋಕಾಯುಕ್ತ ಎಡಿಜಿಪಿ (Additional Director General of Police -Lokayukta) ಎಚ್ಎನ್ ಸತ್ಯನಾರಾಯಣ ರಾವ್ ತಿಳಿಸಿದ್ದಾರೆ. ಲೋಕಾಯುಕ್ತ ಬಲೆಗೆ ಬಿದ್ದ ಭಷ್ಟ ಅಧಿಕಾರಿಗಳ ವಿವರ:

1. ನರೇಂದ್ರ ಕುಮಾರ್: ಬಿಡಿಎ ಸರ್ವೇಯರ್ ಅಗಿರುವ ಇವರು ಒಟ್ಟು 3.33 ಕೋಟಿ ರೂ. ಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದು, ನಿಗದಿತ ಆದಾಯಕ್ಕಿಂತ ಶೇ. 171 ರಷ್ಟು ಬೃಹತ್ ಪ್ರಮಾಣದ ಅಕ್ರಮ ಆಸ್ತಿ ಗಳಿಸಿರುವುದು ಬೆಳಕಿಗೆ ಬಂದಿದೆ.

2. ಪ್ರಸನ್ನ ಕುಮಾರ್: ಬಿಬಿಎಂಪಿ ಕಂದಾಯ ಮಾಪಕ ಕುಮಾರ್, ಒಟ್ಟು 52.33 ಲಕ್ಷ ರೂ. ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಶೇ. 122ರಷ್ಟು ಪ್ರಮಾಣದ ಅಕ್ರಮ ಆಸ್ತಿ ಗಳಿಸಿರುವುದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ಬಯಲಾಗಿದೆ.

3. ಡಾ. ನಂದೀಶ್: ಮಂಡ್ಯ ವೈದ್ಯಕೀಯ ವಿದ್ಯಾಲಯದ ಮುಖ್ಯಸ್ಥ ಡಾ. ನಂದೀಶ್ ಅವರು ಒಟ್ಟು 2.56 ಕೋಟಿ ರೂ. ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದು, ಶೇ. 235ರಷ್ಟು ಬೃಹತ್ ಪ್ರಮಾಣದ ಅಕ್ರಮ ಆಸ್ತಿ ಪಾಸ್ತಿ ಗಳಿಸಿರುವುದು ತನಿಖೆಯಿಂದ ಬಯಲಾಗಿದೆ.

4. ಸುಬ್ರಮಣ್ಯ ರೆಡ್ಡಿ: ಬಳ್ಳಾರಿ ಭೂ ಸೇನಾ ನಿಗಮದಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ರೆಡ್ಡಿ ಕರ್ನಾಟಕ ಸೇರಿದಂತೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಗಿದ್ದಲೂರಿನಲ್ಲಿಯೂ ಅಕ್ರಮ ಆಸ್ತಿ ಸಂಪಾದಿಸಿರುವುದು ಬೆಳಕಿಗೆ ಬಂದಿದೆ.
ಇವರು ಒಟ್ಟು 2.17 ಕೋಟಿ ರೂ. ಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಗಳಿಸಿರುವುದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತನಿಖೆಯಿಂದ ಗೊತ್ತಾಗಿದೆ. ನಿಗದಿತ ಆದಾಯಕ್ಕಿಂತ ಶೇ. 136ರಷ್ಟು ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ.

5. ಮೂಡಲ ಗಿರಿಯಪ್ಪ: ಚಿತ್ರದುರ್ಗ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಮೂಡಲಗಿರಿಯಪ್ಪ ಒಟ್ಟು 83.80 ಲಕ್ಷ ರೂ. ಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದು, ನಿಗದಿತ ಆದಾಯಕ್ಕಿಂತ ಶೇ. 139ರಷ್ಟು ಪ್ರಮಾಣದ ಅಕ್ರಮ ಆಸ್ತಿ ಗಳಿಸಿದ್ದಾರೆ.

6. ಮಂಜುನಾಥ ಗುಡಪ್ಪ ದಾಸಪ್ಪನವರ್: ಧಾರವಾಡ ಜಿಲ್ಲೆ ಕುಂದಗೋಳ್ ಉಪ ತಹಶೀಲ್ದಾರ್ ಗುಡಪ್ಪ ದಾಸಪ್ಪನವರ್ ನಿವಾಸ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರಿಗೆ ಚಿನ್ನಾಭರಣ, ನಗದು ಸೇರಿದಂತೆ ಒಟ್ಟು 40.64 ಲಕ್ಷ ರೂ. ಮೊತ್ತದ ಅಕ್ರಮ ಆಸ್ತಿ ದೊರೆತಿದೆ.

7. ಆಂಥೋಣಿ ಕುಂಜನಾಥ್: ಉತ್ತರ ಕನ್ನಡ ಜಿಲ್ಲೆ ಸಿರಸಿಯಲ್ಲಿ ಹೆಸ್ಕಾಂ ಕಿರಿಯ ಇಂಜಿನಿಯರ್ ಆಗಿರುವ ಆಂಥೋಣಿ ಒಟ್ಟು 1.86 ಕೋಟಿ ರೂ. ಮೊತ್ತದ ಶೇ. 538ರಷ್ಟು ಬೃಹತ್ ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ.

8. ಬಸವರಾಜ ಬಂಡಿವಡ್ಡರ್: ಕೊಪ್ಪಳ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಬಂಡಿವಡ್ಡರ್ ಒಟ್ಟು 1.14 ಕೋಟಿ ರೂ. ಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದು, ಶೇ. 194ರಷ್ಟು ಪ್ರಮಾಣದ ಅಕ್ರಮ ಆಸ್ತಿ ಗಳಿಸಿರುವುದು ಗೊತ್ತಾಗಿದೆ.

9. ಎಂಎಂ ಉಮೇಶ್: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕೊಂಡ್ಲಿ ವಿಎಸ್‌ಎಸ್ಎನ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಮೇಶ್ ಒಟ್ಟು 99.18 ಲಕ್ಷ ರೂ. ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದು, ಶೇ. 268ರಷ್ಟು ಬೃಹತ್ ಪ್ರಮಾಣದ ಅಕ್ರಮ ಆಸ್ತಿ ಗಳಿಸಿದ್ದಾರೆ.

10. ನಾರಾಯಣ ಖಾರ್ವಿ: ಉಡುಪಿಯ ಬಂದರು ಮತ್ತು ಮೀನುಗಾರಿಕೆ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಾರಾಯಣ ಖಾರ್ವಿ ಅವರು ಒಟ್ಟು 1.70 ಕೋಟಿ ರೂಪಾಯಿ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದು, ನಿಗದಿತ ಆದಾಯಕ್ಕಿಂತ ಶೇ. 133ರಷ್ಟು ಪ್ರಮಾಣದ ಅಕ್ರಮ ಆಸ್ತಿ ಗಳಿಸಿದ್ದಾರೆಂದು ತಿಳಿಸಲಾಗಿದೆ.

English summary
Lokayukta raid yields Rs 14 cr value illegal assets from 10 officers. A surveyor with the Bangalore Development Authority (BDA) and an assessor with the Bruhat Bengaluru Mahananagar Palike were among 10 government servants raided by the Karnataka Lokayukta police here on Friday in simultaneous operations at 32 premises. Additional Director General of Police (Lokayukta) HN Sathyanarayana Rao said that raids were conducted on the premises of 10 accused persons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X