ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟ ಸರ್ಕಾರಿ ಅಧಿಕಾರಿಗಳ ಆಸ್ತಿ 7 ಕೋಟಿ

By Srinath
|
Google Oneindia Kannada News

ಬೆಂಗಳೂರು, ಸೆ. 26: ರಾಜ್ಯದ ಭ್ರಷ್ಟ ಅಧಿಕಾರಿಗಳಿಗೆ ಗುರುವಾರ ಲೋಕಾಯುಕ್ತರು ಬಿಸಿ ಮುಟ್ಟಿಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಹಿನ್ನೆಲೆಯಲ್ಲಿ ಐಟಿ-ಬಿಟಿ ಸಚಿವರ ಆಪ್ತ ಸಹಾಯಕ ಸಹಿತ ಏಳು ಮಂದಿ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಗುರುವಾರ ಬೆಳ್ಳಂಬೆಳಗ್ಗೆ ಬೆಂಗಳೂರು, ಚಿತ್ರದುರ್ಗ, ಚಿಕ್ಕಮಗಳೂರು, ಗುಲ್ಬರ್ಗ, ಬೀದರ್, ವಿಜಾಪುರ ಹಾಗೂ ಬಾಗಲಕೋಟ ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಸೇರಿದಂತೆ ಒಟ್ಟು 21 ಕಡೆ ದಾಳಿ ನಡೆಸಲಾಗಿದೆ.

ಈ ದಾಳಿಗಳಿಂದ ಒಟ್ಟು 7.5ಕೋಟಿ ರೂ. ಅಕ್ರಮ ಆಸ್ತಿ ಪ್ರಾಥಮಿಕವಾಗಿ ದೊರಕಿದ್ದು, ಲೋಕಾಯುಕ್ತ ಅಧಿಕಾರಿಗಳು ಇನ್ನೂ ದಾಳಿಗೆ ಒಳಗಾದ ಅಧಿಕಾರಿಗಳ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಅಧಿಕಾರಿಗಳ ಬಗ್ಗೆ ಹಲವು ತಿಂಗಳಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಪರಾಮರ್ಶೆ ನಡೆಸಿ, ದಾಳಿ ನಡೆಸಲಾಗಿದೆ. ಎಲ್ಲಾ ಏಳೂ ಮಂದಿ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತ ಎಡಿಜಿಪಿ ಎಚ್.ಎನ್.ಸತ್ಯನಾರಾಯಣ ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆಸ್ತಿ ವಿವರಗಳು

ಗುಲ್ಬರ್ಗದಲ್ಲಿ ಲೋಕಾಯುಕ್ತ ದಾಳಿ

ಗುಲ್ಬರ್ಗದಲ್ಲಿ ಲೋಕಾಯುಕ್ತ ದಾಳಿ

ಗುಲ್ಬರ್ಗಾ ಜಿಲ್ಲೆಯ ಚಿಂಚೋಳಿ ಸರ್ಕಾರಿ ಅಸ್ಪತ್ರೆಯ ಕಿರಿಯ ಆರೋಗ್ಯ ಸಹಾಯಕ ಸಿದ್ದಣ್ಣ ರೇವಪ್ಪ ಪಾಟೀಲ್ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಇವರ ವಾರ್ಷಿಕ ಆದಾಯ- 40 ಲಕ್ಷ ರೂ. ಆಗಿದೆ.
ಇವರ ಬಳಿ ಒಟ್ಟು ಆಸ್ತಿ- 1.30 ಕೋಟಿ ರೂ. ಆಸ್ತಿ ದೊರಕಿದ್ದು, ಇದರಲ್ಲಿ
ಶೇ. 245.81 ರಷ್ಟು ಅಕ್ರಮ ಆಸ್ತಿ ಇದೆ.

ಗೃಹ ಮಂಡಳಿ ಇಂಜಿನಿಯರ್ ಮೇಲೆ ದಾಳಿ

ಗೃಹ ಮಂಡಳಿ ಇಂಜಿನಿಯರ್ ಮೇಲೆ ದಾಳಿ

ಗುಲ್ಬರ್ಗಾದಲ್ಲಿ ಗೃಹ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ಮಲ್ಲಣ್ಣ ಸಿದ್ರಾಮಪ್ಪ ತಾಯಮಗೋಳ ಮನೆ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿದರು.
ಇವರ ವಾರ್ಷಿಕ ಆದಾಯ- 40 ಲಕ್ಷ ರೂ.ಆಗಿದ್ದು, ಒಟ್ಟು ಆಸ್ತಿ- 1.04 ಕೋಟಿ ರೂ.ಆಸ್ತಿ ಪತ್ತೆಯಾಗಿದೆ. ಇದರಲ್ಲಿ ಶೇ. 160.24 ಅಕ್ರಮ ಆಸ್ತಿಯಾಗಿದೆ.

ಚಿತ್ರದುರ್ಗದಲ್ಲೂ ದಾಳಿ

ಚಿತ್ರದುರ್ಗದಲ್ಲೂ ದಾಳಿ

ಚಿತ್ರದುರಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯನಿರ್ವಾಹಕ ಎಂಜಿನಿಯರ್ ಸೇವ್ಯಾನಾಯ್ಕ ಮನೆಯ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಾರ್ಷಿಕ ಆದಾಯ- 56 ಲಕ್ಷ ರೂ.
ಒಟ್ಟು ಆಸ್ತಿ- 1.29 ಕೋಟಿ ರೂ.
ಅಕ್ರಮ ಆಸ್ತಿ ಪ್ರಮಾಣ-ಶೇ. 160.62

ಬೀದರ್ ನಲ್ಲಿಯೂ ದಾಳಿ

ಬೀದರ್ ನಲ್ಲಿಯೂ ದಾಳಿ

ಅಬಕಾರಿ ಇಲಾಕೆ ಉಪ ಆಯುಕ್ತ ಎಸ್.ಎಸ್.ಸಾವಳಗಿ ಅವರ ಬೀದರ್ ನಿವಾಸದ ಮೇಲೆಯೂ ದಾಳಿ ನಡೆದಿದೆ.
ವಾರ್ಷಿಕ ಆದಾಯ- 75 ಲಕ್ಷ ರೂ.
ಒಟ್ಟು ಆಸ್ತಿ- 1.70 ಕೋಟಿ ರೂ.
ಅಕ್ರಮ ಆಸ್ತಿ ಪ್ರಮಾಣ-ಶೇ. 293.31

ಬಿಜಾಪುರದಲ್ಲೂ ದಾಳಿ

ಬಿಜಾಪುರದಲ್ಲೂ ದಾಳಿ

ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥ್ ನಾಗೇಂದ್ರಸಾ ಮಲಜಿ ಅವರ ಬಿಜಾಪುರ ನಿವಾಸದ ಮೇಲೆಯೂ ದಾಳಿ ನಡೆದಿದೆ.
ವಾರ್ಷಿಕ ಆದಾಯ- 60 ಲಕ್ಷ ರೂ.
ಒಟ್ಟು ಆಸ್ತಿ- 1.75 ಕೋಟಿ ರೂ.
ಅಕ್ರಮ ಆಸ್ತಿ ಪ್ರಮಾಣ-ಶೇ. 293.31

ಬಾಗಲಕೋಟೆಯಲ್ಲಿ ದಾಳಿ

ಬಾಗಲಕೋಟೆಯಲ್ಲಿ ದಾಳಿ

ಬಾಗಲಕೋಟೆ ಜಿಲ್ಲಾ ಖಜಾನೆ ಮುಖ್ಯ ಲೆಕ್ಕಾಧಿಕಾರಿ ಬಾಳಪ್ಪ ಬೈರಪ್ಪ ಅಥಣಿ ಅವರ ನಿವಾಸದ ಮೇಲೆಯೂ ದಾಳಿ ನಡೆದಿದೆ.
ವಾರ್ಷಿಕ ಆದಾಯ- 84.05 ಲಕ್ಷ ರೂ.
ಒಟ್ಟು ಆಸ್ತಿ- 1.53 ಕೋಟಿ ರೂ.
ಅಕ್ರಮ ಆಸ್ತಿ ಪ್ರಮಾಣ-ಶೇ. 102

ಬೆಂಗಳೂರಿನಲ್ಲೂ ದಾಳಿ

ಬೆಂಗಳೂರಿನಲ್ಲೂ ದಾಳಿ

ಬೆಂಗಳೂರಿನ ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಎಚ್.ವಿ.ಓಂಕಾರಮೂರ್ತಿ ನಿವಾಸದ ಮೇಲೂ ದಾಳಿ ನಡೆದಿದೆ.
ವಾರ್ಷಿಕ ಆದಾಯ- 40 ಲಕ್ಷ ರೂ.
ಒಟ್ಟು ಆಸ್ತಿ- 1.21 ಕೋಟಿ ರೂ.
ಅಕ್ರಮ ಆಸ್ತಿ ಪ್ರಮಾಣ-ಶೇ. 102

English summary
The Lokayukta police on Thursday, Sep 26 conducted raids on 21 premises belonging to seven government officials in Bangalore, Bagalkot, Bijapur, Bidar, Chitradurga, Hassan and Gulbarga. They carried out simultaneous raids on offices and properties of the officials and unearthed assets worth Rs 7.50 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X