ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳು ಕಡೆ ಲೋಕಾಯುಕ್ತ ದಾಳಿ, ಏಳು ಕೋಟಿ ಆಸ್ತಿ ಪತ್ತೆ

|
Google Oneindia Kannada News

ಬೆಂಗಳೂರು, ಜೂ. 28 : ಶುಕ್ರವಾರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ರಾಜ್ಯದ 23 ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಐಎಫ್‌ಎಸ್ ಅಧಿಕಾರಿ ಎ.ಸಿ.ಕೇಶವಮೂರ್ತಿ ಸಹಿತ ಏಳು ಮಂದಿ ಸರ್ಕಾರಿ ನೌಕರರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ ವೇಳೆ 7ಕೋಟಿ ರೂ.ಗಿಂತಲೂ ಹೆಚ್ಚಿನ ಅಕ್ರಮ ಆಸ್ತಿ ಪತ್ತೆಯಾಗಿದೆ.

ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಲೋಕಾಯುಕ್ತ ಎಡಿಜಿಪಿ ಎಚ್.ಎನ್.ಸತ್ಯನಾರಾಯಣ ರಾವ್ ಬೆಂಗಳೂರು, ತುಮಕೂರು, ಧಾರವಾಡ, ಬೆಳಗಾವಿ ಸಹಿತ ಏಳು ಜಿಲ್ಲೆಗಳ ಒಟ್ಟು 23 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಆರೋಪಿಗಳ ಮೇಲೆ ಭ್ರಷ್ಟಾಚಾರ ನಿರ್ಮೂಲನೆ ಅಧಿನಿಯಮ 1988ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Lokayukta

ಬೆಳಗಾವಿ ಮಹಾನಗರ ಪಾಲಿಕೆ ಸಹಾಯಕ ಎಂಜಿನಿಯರ್‌ ಇರ್ಶಾದ್ ಅಹ್ಮದ್‌, ಶಿವಮೊಗ್ಗ-ಚಿಕ್ಕಮಗಳೂರು ವಿಭಾಗದ ರಾಜ್ಯ ಪೊಲೀಸ್‌ ಗೃಹ ನಿರ್ಮಾಣ ನಿಗಮದ ಸಹಾಯಕ ಎಂಜಿನಿಯರ್‌ ಇ.ಹಾಲೇಶಪ್ಪ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ವ್ಯವಸ್ಥಾಪಕ ಪರಮೇಶ್ವರ ಹುಚ್ಚಪ್ಪಗೌಡ ವಿಭೂತಿ, ಗುಲ್ಬರ್ಗದ ರಾಜ್ಯ ಗೃಹ ನಿರ್ಮಾಣ ಮಂಡಳಿ ಕಚೇರಿ ಅಧೀಕ್ಷಕ ಶಿವಪುತ್ರಪ್ಪ ಹಲಚೇರಿ ಅವರ ನಿವಾಸಗಳ ಮೇಲೆ ದಾಳಿ ನಡೆದಿದೆ.

ಇನ್ನು ಗುಲ್ಬರ್ಗ ಜಿಲ್ಲೆಯ ಅಫ್ಜಲ್‌ ಪುರ ತಾಲೂಕು ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶರಣಬಸಪ್ಪ, ಬೆಂಗಳೂರಿನ ಮೈಸೂರು ಸ್ಯಾಂಡಲ್‌ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಎ.ಸಿ.ಕೇಶವಮೂರ್ತಿ ಹಾಗೂ ಯಾದಗಿರಿ ಜಿಲ್ಲೆ ಶಹಪೂರದ ಪಂಚಾಯತ್‌ ರಾಜ್‌ ಇಲಾಖೆ ಕಿರಿಯ ಎಂಜಿನಿಯರ್‌ ಸುಭಾಸಚಂದ್ರ ಎಚ್‌.ಶರ್ಮಾ ಮನೆಗಳ ಮೇಲೆಯೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

ಆಸ್ತಿ ವಿವರಗಳು
* ಇರ್ಶಾದ್‌ ಅಹ್ಮದ್‌ ( ಬೆಳಗಾವಿ ಮಹಾನಗರ ಪಾಲಿಕೆ ಸಹಾಯಕ ಎಂಜಿನಿಯರ್‌)
ಒಟ್ಟು ಆಸ್ತಿ - 1.76 ಕೋಟಿ ರೂ.
ಒಟ್ಟು ವೆಚ್ಚ- 16.39 ಲಕ್ಷ ರೂ.
ಒಟ್ಟು ಆದಾಯ- 55.52 ಲಕ್ಷ ರೂ.
ಅಕ್ರಮ ಆಸ್ತಿ- 1.37 ಕೋಟಿ ರೂ.

* ಹಾಲೇಶಪ್ಪ ( ಶಿವಮೊಗ್ಗ-ಚಿಕ್ಕಮಗಳೂರು ವಿಭಾಗ, ರಾಜ್ಯ ಪೊಲೀಸ್‌ ಗೃಹ ನಿರ್ಮಾಣ ನಿಗಮದ ಸಹಾಯಕ ಎಂಜಿನಿಯರ್‌)
ಒಟ್ಟು ಆಸ್ತಿ - 1.03 ಕೋಟಿ ರೂ.
ಒಟ್ಟು ವೆಚ್ಚ - 10 ಲಕ್ಷ ರೂ.
ಒಟ್ಟು ಆದಾಯ - 50 ಲಕ್ಷ ರೂ.
ಅಕ್ರಮ ಆಸ್ತಿ- 63.84 ಲಕ್ಷ ರೂ.3

* ಪರಮೇಶ್ವರಪ್ಪ ಹುಚ್ಚಪ್ಪ ವಿಭೂತಿ ( ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ವ್ಯವಸ್ಥಾಪಕ)
ಒಟ್ಟು ಆಸ್ತಿ - 85.22 ಲಕ್ಷ ರೂ.
ಒಟ್ಟು ವೆಚ್ಚ- 29.50 ಲಕ್ಷ ರೂ.
ಒಟ್ಟು ಆದಾಯ - 43 ಲಕ್ಷ ರೂ.
ಅಕ್ರಮ ಆಸ್ತಿ- 71.71 ಲಕ್ಷ ರೂ.

* ಸುಭಾಷ್‌ ಚಂದ್ರ ಎಚ್‌.ಶರ್ಮಾ (ಪಂಚಾಯಿತಿ ರಾಜ್‌ ಇಲಾಖೆ ಕಿರಿಯ ಎಂಜಿನಿಯರ್‌, ಯಾದಗಿರಿ)
ಒಟ್ಟು ಆಸ್ತಿ - 38.22 ಲಕ್ಷ ರೂ. }
ಒಟ್ಟು ಆದಾಯ - 26.30 ಲಕ್ಷ ರೂ.
ಅಕ್ರಮ ಆಸ್ತಿ- 73.32 ಲಕ್ಷ ರೂ.5

* ಶರಣಬಸಪ್ಪ (ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಗುಲ್ಬರ್ಗ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ )
ಒಟ್ಟು ಆಸ್ತಿ - 64.24 ಲಕ್ಷ ರೂ.
ಒಟ್ಟು ವೆಚ್ಚ - 26.69 ಲಕ್ಷ ರೂ.
ಒಟ್ಟು ಆದಾಯ - 33.50 ಲಕ್ಷ ರೂ.
ಅಕ್ರಮ ಆಸ್ತಿ- 57.43 ಲಕ್ಷ ರೂ.

* ಶಿವಪುತ್ರಪ್ಪ ಹಲಚೇರಿ ( ಕರ್ನಾಟಕ ಹೌಸಿಂಗ್‌ ಬೋರ್ಡ್‌ ಅಧೀಕ್ಷಕ ಗುಲ್ಬರ್ಗ )
ಒಟ್ಟು ಆಸ್ತಿ - 1.12 ಕೋಟಿ ರೂ.
ಒಟ್ಟು ವೆಚ್ಚ - 25 ಲಕ್ಷ ರೂ.
ಒಟ್ಟು ಆದಾಯ - 56 ಲಕ್ಷ ರೂ.
ಅಕ್ರಮ ಆಸ್ತಿ - 81.80 ಲಕ್ಷ ರೂ.

* ಕೇಶವಮೂರ್ತಿ ( ವ್ಯವಸ್ಥಾಪಕ, ಮೈಸೂರು ಸ್ಯಾಂಡಲ್‌ ಸೋಪ್‌ ಕಾರ್ಖಾನೆ )
ಒಟ್ಟು ಆಸ್ತಿ - 1.47ಕೋಟಿ ರೂ.
ಒಟ್ಟು ವೆಚ್ಚ- 42 ಲಕ್ಷ ರೂ.
ಒಟ್ಟು ಆದಾಯ - 95 ಲಕ್ಷ ರೂ.
ಅಕ್ರಮ ಆಸ್ತಿ- 1.91 ಕೋಟಿ ರೂ.

English summary
Karnataka Lokayukta police on Friday, June 27 raided the office and residences of seven government servants including an IFS officer, in seven districts and found Rs seven crore illegal assets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X