ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂ ಹಗರಣ : ಸಚಿವ ಖಮರುಲ್‌ ಇಸ್ಲಾಂ ವಿರುದ್ಧ ತನಿಖೆ

|
Google Oneindia Kannada News

ಬೆಂಗಳೂರು, ಅ.17 : ವಕ್ಫ್ ಆಸ್ತಿ ಕಬಳಿಕೆ ಹಗರಣ ಸಚಿವ ಖಮರುಲ್‌ ಇಸ್ಲಾಂ ಕೊರಳಿಗೆ ಸುತ್ತಿಕೊಂಡಿದೆ. ಭೂ ಕಬಳಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಕೋಲಾರದ ತಬ್ರೇಜ್‌ ಪಾಷಾ ಎಂಬುವವರು ನ್ಯಾಯಾಲಯದಲ್ಲಿ ಸಚಿವರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು.

ಸಚಿವ ಖಮರುಲ್ ಇಸ್ಲಾಂ ವಿರುದ್ಧ ತನಿಖೆಗೆ ಆದೇಶ ನೀಡಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಜಿ.ಬೋಪಯ್ಯ ಅವರು, ಡಿ. 31ರೊಳಗೆ ವರದಿ ಸಲ್ಲಿಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಗುಲ್ಬರ್ಗದ ಬಡೇಪುರ ಪ್ರದೇಶದ ಸರ್ವೆ ನಂಬರ್‌ 12ರಲ್ಲಿ ಖಾಜಾ ಬಂದೇನವಾಜ್‌ ದರ್ಗಾಕ್ಕೆ ಸೇರಿದ 8.34 ಎಕರೆ ಜಮೀನನ್ನು ಸಚಿವರು ಆಕ್ರಮವಾಗಿ ಕಬಳಿಸಿದ್ದಾರೆ ಎಂಬುದು ಆರೋಪ.

Qamar ul Islam

ರಾಜ್ಯದಲ್ಲಿ ವಕ್ಫ್ ಆಸ್ತಿ ದುರ್ಬಳಕೆ ಕುರಿತು 2012ರಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಂದಿನ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ನೀಡಿದ್ದ ವರದಿ ಆಧರಿಸಿ ಕೋಲಾರದ ತಬ್ರೇಜ್‌ ಪಾಷಾ 2013ರ ಜೂನ್‌ನಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಸಚಿವರ ವಿರುದ್ಧ ದೂರು ಸಲ್ಲಿಸಿದ್ದರು. [ವಕ್ಫ್ ಆಸ್ತಿ 2.5 ಲಕ್ಷ ಕೋಟಿ ಹಂಚಲು ಆಗ್ರಹ]

ಆರೋಪವೇನು? : ಖಾಜಾ ಬಂದೇನವಾಜ್‌ ದರ್ಗಾಕ್ಕೆ 1974ರಲ್ಲಿ 8.34 ಎಕರೆ ವಕ್ಫ್ ಜಮೀನು ಮಂಜೂರು ಆಗಿತ್ತು. ಆದರೆ, ದರ್ಗಾದ ಮುಖ್ಯಸ್ಥರಿಂದ ಆಸ್ತಿಯ ಜಿಪಿಎ (ಜನರಲ್‌ ಪವರ್‌ ಆಫ್ ಅಟಾರ್ನಿ) ಪಡೆದುಕೊಂಡಿದ್ದ ಖಮರುಲ್‌ ಇಸ್ಲಾಂ 1998ರ ಅವಧಿಯಲ್ಲಿ ಈ ಜಮೀನನ್ನು ಅಕ್ರಮವಾಗಿ ಕಬಳಿಸಿದ್ದರು.

8.34 ಎಕರೆ ಜಮೀನನ್ನು ವಸತಿ ಬಡಾವಣೆಯಾಗಿ ಪರಿವರ್ತಿಸಿದ್ದ ಸಚಿವರು ಸುಮಾರು 198 ನಿವೇಶನಗಳನ್ನು ಮಾಡಿ ಪ್ರತಿ ನಿವೇಶನವನ್ನು 6 ರಿಂದ 20 ಲಕ್ಷ ರೂ. ವರೆಗೆ ಮಾರಾಟ ಮಾಡಿದ್ದಾರೆ. ಈ ಪ್ರಕರಣದಲ್ಲಿ ಖಾಜಾ ಬಂದೇನವಾಜ್‌ ದರ್ಗಾದ ಮುಖ್ಯಸ್ಥರು ಸಹ ಭಾಗಿಯಾಗಿದ್ದಾರೆ ಎಂಬುದು ಆರೋಪ.

English summary
The Special Lokayukta Court Bangalore ordered for enquiry against Minister for Minority Welfare and Wakf, Qamar-ul-Islam in Wakf Board Land Scam in Gulbarga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X