ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ಪ್ರಕರಣ: ಕೈ ತೊಳೆದುಕೊಂಡ ಸಿದ್ದು

|
Google Oneindia Kannada News

ಬೆಂಗಳೂರು, ಜೂ. 28: ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ತನಿಖೆಯನ್ನು ಸ್ವತಂತ್ರ ಸಂಸ್ಥೆಯೊಂದಕ್ಕೆ ವಹಿಸಬೇಕು ಎಂದು ಸ್ವತಃ ಲೋಕಾಯುಕ್ತ ನ್ಯಾ. ವೈ.ಭಾಸ್ಕರ್‌ರಾವ್‌ ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ಸಲ್ಲಿಕೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಮೊದಲೇ ಹೇಳಿದಂತೆ ತನಿಖೆಯಲ್ಲಿ ನಾನು ತಪ್ಪಿತಸ್ಥ ಎಂದು ಕಂಡುಬಂದರೆ ಕೂಡಲೇ ರಾಜೀನಾಮೆ ನೀಡುತ್ತೇನೆ. ನನ್ನ ಪುತ್ರ ಅಶ್ವಿ‌ನ್‌ರಾವ್ ಯಾವ ಭ್ರಷ್ಟಾಚಾರ ನಡೆಸಿಲ್ಲ ಎಂದು ಆರೋಪಗಳನ್ನು ತಳ್ಳಿಹಾಕಿದರು. ಇಲ್ಲಿ ಹಣದ ಬೇಡಿಕೆ ಇಟ್ಟವರು ಯಾರು ಎಂಬುದೇ ನನಗೆ ಗೊತ್ತಿಲ್ಲ. ಹಣ ಕೇಳಿದ ಅಧಿಕಾರಿಗಳ ಹೆಸರೇ ಲೋಕಾಯುಕ್ತದಲ್ಲಿಲ್ಲ ಎಂದು ಹೇಳಿದರು.[ಲೋಕಾಯುಕ್ತದಲ್ಲೇ ಭ್ರಷ್ಟಾಚಾರ, ಮುಂದೇನು?]

lokayukta

ಆದರೆ ಇದಕ್ಕೆ ಉತ್ತರಿಸಿರುವ ಸಿದ್ದರಾಮಯ್ಯ, ಎಲ್ಲ ಪ್ರಕರಣಗಳನ್ನು ಸಿಬಿಐ ಗೆ ಒಪ್ಪಿಸಲು ಸಾಧ್ಯವಿಲ್ಲ. ಸರ್ಕಾರಕ್ಕೂ ಇದ್ಕಕ್ಕೂ ಸಂಬಂಧವೇ ಇಲ್ಲ. ಲೋಕಾಯುಕ್ತದಲ್ಲಿ ಹಗರಣ ನಡೆದರೆ ಸರ್ಕಾರ ಏನು ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿ ಕೈ ತೊಳೆದುಕೊಂಡಿದ್ದಾರೆ.

ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಘಟನೆ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು ನಂಬಿಕೆಯಿಲ್ಲದ ಲೋಕಾಯುಕ್ತ ಸಂಸ್ಥೆ ಮುಚ್ಚುವುದು ಒಳಿತು ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ಎವ್. ಡಿ. ದೇವೇಗೌಡ ಆರೋಪ ಬಂದ ಮೇಲೆ ಸ್ಥಾನದಲ್ಲಿರುವುದಕ್ಕಿಂತ ಭಾಸ್ಕರ್ ರಾವ್ ರಾಜೀನಾಮೆ ನೀಡುವುದು ಒಳ್ಳೆಯದು ಎಂದು ಹೇಳಿದ್ದಾರೆ.[ಲೋಕಾಯುಕ್ತದಲ್ಲಿ ಕೋಟಿ ಡೀಲ್, ಸಿಸಿಬಿ ತನಿಖೆ]

ಯಾಕೆ ಸಿಸಿಬಿ ಬೇಡ?
ಸದ್ಯ ತನಿಖೆಯ ನೇತೃತ್ವ ವಹಿಸಿರುವ ಕೆಲ ಅಧಿಕಾರಿಗಳ ಮೇಲೆ ಹಿಂದೆ ಲೋಕಾಯುಕ್ತ ರೈಡ್ ಮಾಡಲಾಗಿತ್ತು. ಅಲ್ಲದೇ ಅವರ ಮೇಲೆ ಆರೋಪಗಳಿವೆ. ಹಾಗಾಗಿ ತನಿಖೆ ದಿಕ್ಕು ತಪ್ಪಬಹುದು. ಈ ಕಾರಣಕ್ಕೆ ಸ್ವತಂತ್ರ ಸಂಸ್ಥೆಗೆ ವಹಿಸುವುದು ಸೂಕ್ತ ಎಂಬುದು ಭಾಸ್ಕರ್‌ರಾವ್‌ ಒತ್ತಾಯ.

English summary
Bengaluru: The allegation of corruption in Lokayukta probe must handover to a independent institution like CBI Lokayukta Y Bhaskar Rao' urged in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X