ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ಕ್ಷೇತ್ರಗಳಿಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

|
Google Oneindia Kannada News

Recommended Video

Lok Sabha Elections 2019 : 20 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕರ್ನಾಟಕ ಕಾಂಗ್ರೆಸ್

ಬೆಂಗಳೂರು, ಮಾರ್ಚ್ 14 : ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಉಭಯ ಪಕ್ಷಗಳ ನಡುವಿನ ಸೀಟು ಹಂಚಿಕೆ ಪ್ರಕ್ರಿಯೆ ಅಂತ್ಯಗೊಂಡಿದೆ. 20 ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ. 8 ಸ್ಥಾನಗಳಲ್ಲಿ ಜೆಡಿಎಸ್ ಕಣಕ್ಕಿಳಿಯಲಿವೆ.

ಹಲವಾರು ಸುತ್ತಿನ ಸಭೆಯ ಬಳಿಕ ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಠ ಸಾಧಿಸಿದ್ದು, ಮೈಸೂರು-ಕೊಡಗು ಕ್ಷೇತ್ರವನ್ನು ಕಾಂಗ್ರೆಸ್‌ ಬಳಿಯೇ ಉಳಿಸಿಕೊಂಡಿದ್ದಾರೆ. ಆದರೆ, ಹಾಲಿ ಕಾಂಗ್ರೆಸ್ ಸಂಸದರಿದ್ದ ತುಮಕೂರು ಜೆಡಿಎಸ್ ಪಾಲಾಗಿದೆ.

ಶಾಮನೂರು ಕುಟುಂಬಕ್ಕಿಲ್ಲ ದಾವಣಗೆರೆ ಟಿಕೆಟ್, 'ಕೈ' ಅಭ್ಯರ್ಥಿ ಯಾರು?ಶಾಮನೂರು ಕುಟುಂಬಕ್ಕಿಲ್ಲ ದಾವಣಗೆರೆ ಟಿಕೆಟ್, 'ಕೈ' ಅಭ್ಯರ್ಥಿ ಯಾರು?

20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, 8 ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ತವರು ಕ್ಷೇತ್ರ ತುಮಕೂರು ಜೆಡಿಎಸ್ ಪಾಲಾಗಿದೆ. ಇದರಿಂದಾಗಿ ಬಿಜೆಪಿಗೆ ಸಹಾಯಕವಾಗಲಿದೆಯೇ? ಕಾದು ನೋಡಬೇಕು.

ಮೈಸೂರು ಉಳಿಸಿಕೊಂಡು, ತುಮಕೂರು ಬಿಟ್ಟುಕೊಟ್ಟ ಕಾಂಗ್ರೆಸ್‌!ಮೈಸೂರು ಉಳಿಸಿಕೊಂಡು, ತುಮಕೂರು ಬಿಟ್ಟುಕೊಟ್ಟ ಕಾಂಗ್ರೆಸ್‌!

ಲೋಕಸಭಾ ಚುನಾವಣೆ ಸೀಟು ಹಂಚಿಕೆ ಅಂತಿಮವಾಗುತ್ತಿದ್ದಂತೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಮಾ.16ರಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆ 2019 : ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಲೋಕಸಭಾ ಚುನಾವಣೆ 2019 : ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಎಲ್ಲಿಗೆ ಯಾರು ಅಭ್ಯರ್ಥಿಗಳು?

ಎಲ್ಲಿಗೆ ಯಾರು ಅಭ್ಯರ್ಥಿಗಳು?

* ದಕ್ಷಿಣ ಕನ್ನಡ - ರಮಾನಾಥ ರೈ, ಬಿ.ಕೆ.ಹರಿಪ್ರಸಾದ್
* ಮೈಸೂರು-ಕೊಡಗು - ವಿಜಯ ಶಂಕರ್, ಸೂರಜ್ ಹೆಗ್ಡೆ
* ಬೆಂಗಳೂರು ದಕ್ಷಿಣ - ಪ್ರಿಯಕೃಷ್ಣ, ರಾಮಲಿಂಗಾ ರೆಡ್ಡಿ
* ದಾವಣಗೆರೆ - ಎಸ್.ಎಸ್.ಮಲ್ಲಿಕಾರ್ಜುನ್, ಎಚ್.ಬಿ.ಮಂಜಪ್ಪ
* ಚಿಕ್ಕೋಡಿ - ಪ್ರಕಾಶ್ ಹುಕ್ಕೇರಿ

ಸಂಭಾವ್ಯ ಅಭ್ಯರ್ಥಿಗಳು

ಸಂಭಾವ್ಯ ಅಭ್ಯರ್ಥಿಗಳು

* ಬಾಗಲಕೋಟೆ - ವೀಣಾ ಕಾಶಪ್ಪನವರ್, ಮಹಾಂತೇಶ್ ಉದುಪುಡಿ
* ಕೊಪ್ಪಳ - ಬಸವರಾಜ್ ಹಿಟ್ನಾಳ್, ಬಸನಗೌಡ ಬಾದರ್ಲಿ, ವಿರೂಪಾಕ್ಷಪ್ಪ
* ಬೆಳಗಾವಿ - ಅಂಜಲಿ ನಿಬಾಂಳ್ಕರ್, ವಿವೇಕರಾವ್ ಪಾಟೀಲ್, ಚನ್ನರಾಜ್ ಹೆಬ್ಬಾಳ್ಕರ್
* ಬೀದರ್ - ಈಶ್ವರ್ ಖಂಡ್ರೆ
* ಬೆಂಗಳೂರು ಗ್ರಾಮಾಂತರ - ಡಿ.ಕೆ.ಸುರೇಶ್

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

* ಕಲಬುರಗಿ - ಮಲ್ಲಿಕಾರ್ಜುನ ಖರ್ಗೆ
* ಬೆಂಗಳೂರು ಸೆಂಟ್ರಲ್ - ರಿಜ್ವಾನ್ ಅರ್ಷದ್, ರೋಷನ್ ಬೇಗ್, ಎಚ್.ಟಿ.ಸಾಂಗ್ಲಿಯಾನ
* ಗದಗ -ಹಾವೇರಿ - ಬಸವರಾಜ್ ಶಿವಣ್ಣವರ, ಡಿ.ಆರ್.ಪಾಟೀಲ್
* ಧಾರವಾಡ - ವಿಜಯ್ ಕುಲಕರ್ಣಿ, ಶಾಕೀರ್ ಸನದಿ, ಸಂತೋಷ್ ಲಾಡ್
* ರಾಯಚೂರು - ಬಿ.ವಿ.ನಾಯಕ್

ಹಾಲಿ ಸಂಸದರ ಕ್ಷೇತ್ರಗಳು

ಹಾಲಿ ಸಂಸದರ ಕ್ಷೇತ್ರಗಳು

* ಬಳ್ಳಾರಿ - ವಿ.ಎಸ್.ಉಗ್ರಪ್ಪ
* ಚಿತ್ರದುರ್ಗ - ಬಿ.ಎನ್.ಚಂದ್ರಪ್ಪ
* ಚಾಮರಾಜನಗರ - ಧ್ರುವ ನಾರಾಯಣ
* ಚಿಕ್ಕಬಳ್ಳಾಪುರ - ವೀರಪ್ಪ ಮೊಯ್ಲಿ
* ಕೋಲಾರ - ಕೆ.ಎಚ್.ಮುನಿಯಪ್ಪ

English summary
After seat-sharing talks with JD(S) Congress announced probable candidate list for the 20 Lok sabha seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X