• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಿ ಹೆಲಿಕಾಪ್ಟರ್ ಕಪ್ಪುಪೆಟ್ಟಿಗೆಯಲ್ಲಿ ಏನಿತ್ತು?: ನಿವೃತ್ತ ಅಧಿಕಾರಿ ಹೇಳಿದ್ದೇನು?

|
   Lok Sabha Elections 2019: ಮೋದಿಯವರ ಬಿಗ್ ಬಾಕ್ಸ್ ಹಿಂದಿನ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ನಿವೃತ್ತ ಡಿವೈಎಸ್‌ಪಿ

   ನವದೆಹಲಿ, ಏಪ್ರಿಲ್ 15: ಚಿತ್ರದುರ್ಗಕ್ಕೆ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದ ಸಂದರ್ಭದಲ್ಲಿ ಅವರ ಹೆಲಿಕಾಪ್ಟರ್‌ನಿಂದ ಕಪ್ಪು ಪೆಟ್ಟಿಗೆಯನ್ನು ಭದ್ರತಾ ಸಿಬ್ಬಂದಿ ಸಾಗಿಸಿದ್ದರ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿತ್ತು. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆದಿದ್ದವು.

   ಕಪ್ಪು ಪೆಟ್ಟಿಗೆಯಲ್ಲಿ ಹಣ ಅಥವಾ ಹೆಂಡವನ್ನು ಹಂಚಲು ತರಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ವಿಚಾರಣೆ ನಡೆಸುವಂತೆ ಕಾಂಗ್ರೆಸ್ ಮುಖಂಡರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದರು.

   ಮೋದಿ ಹೆಲಿಕಾಪ್ಟರ್ ನಲ್ಲಿದ್ದ ಆ 'ಕಪ್ಪು ಟ್ರಂಕ್' ಬಗ್ಗೆ ಕಾಂಗ್ರೆಸ್ ದೂರು

   ರಾಜ್ಯದ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕಪ್ಪು ಪೆಟ್ಟಿಗೆಯೊಳಗಿನ 'ರಹಸ್ಯ'ದ ಬಗ್ಗೆ ಮಾಹಿತಿ ನೀಡಿದ್ದಾರೆ.

   ಪ್ರಧಾನಿ ರಾಜ್ಯಕ್ಕೆ ಬಂದಾಗ ಹಲವು ಬಾರಿ ಅವರಿಗೆ ಭದ್ರತೆ ಒದಗಿಸುವ ಕಾರ್ಯವನ್ನು ನಿರ್ವಹಿಸಿದ ಅನುಭವ ಇರುವ ಅವರು, ಆ ಕಪ್ಪುಪೆಟ್ಟಿಗೆಯಲ್ಲಿ ಹಣ ಸಾಗಿಸಲಾಗಿದೆ ಎಂಬ ಆರೋಪವನ್ನು ಲೇವಡಿ ಮಾಡಿದ್ದಾರೆ.

   ಅವರು ಫೇಸ್‌ಬುಕ್‌ನಲ್ಲಿ ಬರೆಹ ಬರಹ ಇಲ್ಲಿದೆ...

   ಹಣ ಹಂಚಲು ತಂದಿದ್ದ ಮೋದಿಯ #ಬ್ಲ್ಯಾಕ್_ಬಾಕ್ಸ್ ! ಆ ಬ್ಲ್ಯಾಕ್ ಬಾಕ್ಸ್ ನಲ್ಲಿ ಎಷ್ಟು ಹಣ ಇದ್ದಿರಬಹುದು ?

   ಹಣ ಹರವಲು ಲಜ್ಜೆಗೇಡಿ ಪ್ರಧಾನಿ ಹೀಗೂ ಮಾಡಬಹುದೇ ?

   ಟೀವಿಯವರು ಒಂದೇ ಸಮನೆ ಹರಿದುಕೊಳ್ಳುತ್ತಿದ್ದರು. ಮಂತ್ರಿ ಸ್ಥಾನದವರೂ ತನಿಖೆ ಮಾಡಿ ಕ್ರಮ ಕೈಗೊಳ್ಳಲು ಆಯೋಗಕ್ಕೆ ದೂರು ಬೇರೆ ನೀಡಿದ್ದಾರೆ. ಇನ್ನೇನು ಕ್ಷಣಗಣನೆ ಆರಂಭ. ಅವಮಾನಕರವಾಗಿ ಪಟ್ಟದಿಂದ ಪ್ರಧಾನಿ ಕೆಳಗಿಳಿಯುವ ಕಾಲ ಬಂದೇಬಿಟ್ಟಿತು ! ಅದರ ಇನ್ನೊಂದಷ್ಟು ರೋಚಕ ಫೋಟೋಗಳು ಕೂಡ ಇವೆಯಂತೆ !

   ಮೋದಿ ಹೆಲಿಕಾಪ್ಟರ್ ನಿಂದ ಇಳಿಸಿದ(?) ಆ ನಿಗೂಢ ಬಾಕ್ಸ್ ನ ರಹಸ್ಯವೇನು?

   ಏಳೆಂಟು ಬಾರಿ ಪ್ರಧಾನಿಗಳ ಬಂದೋಬಸ್ತ್ ಕಾರ್ಯವನ್ನು ಹತ್ತಿರದಲ್ಲಿದ್ದು ನಿರ್ವಹಿಸಿರುವ ನನ್ನ ಅನುಭವ ಹೀಗಿದೆ.

   ಅಂತಹ ಬಾಕ್ಸ್ ಪ್ರಧಾನಿಯವರ ಜೊತೆಗೆ ಯಾವಾಗಲೂ ಇರುತ್ತದೆ. ನೋಡಿಕೊಳ್ಳಲು ಪ್ರತ್ಯೇಕ technical team ಮತ್ತು ಭದ್ರತಾ ಸಿಬ್ಬಂದಿಯೂ ಇರುತ್ತಾರೆ. ಹಾಗಿದ್ದರೆ ಅದರೊಳಗೆ ನಿಜವಾಗಿಯೂ ಏನೇನು ವಸ್ತುಗಳಿರುತ್ತವೆ ?

   ಬರೀ hard cash ಮಾತ್ರ ಇರುತ್ತದೆಯೋ?

   ಟೆಕ್ಕಿಟ್ ( technical kit) ಎನ್ನುವ ಇದರಲ್ಲಿ, ಜಾಮರ್ ಗಳು (ಯಾವುದೇ ನಿಸ್ತಂತು ಸಂಪರ್ಕವನ್ನೂ -ಜಾಮ್- ಕಡಿತಗೊಳಿಸುತ್ತವೆ) , ಅತ್ಯಾಧುನಿಕ ವೈರ್‌ಲೆಸ್‌ ಸೆಟ್‌ಗಳು, ಫಂಕ್ಷನ್ ನಡೆಯುವ ಸ್ಥಳದಲ್ಲಿ ತಕ್ಷಣಕ್ಕೆ- install -ಸ್ಥಾಪಿಸುವ ಅನೇಕ ಉಪಕರಣಗಳಿರುತ್ತವೆ. ಪ್ರಪಂಚದ ಯಾವುದೇ ಭಾಗದ ಯಾವುದೇ ವ್ಯಕ್ತಿಯನ್ನು ಪ್ರಧಾನಿಯವರು ತಕ್ಷಣ ಸಂಪರ್ಕಿಸಬಹುದು. ತಾತ್ಕಾಲಿಕವಾಗಿ ಅಂತಹ ವ್ಯವಸ್ಥೆ ಮಾಡಲು ಬೇಕಾದ ಎಲ್ಲ ಉಪಕರಣಗಳೂ ಅದರಲ್ಲಿ ಇರುತ್ತವೆ.

   ಪ್ರವಾಸದ ಯಾವುದೇ ಗಂಟೆಯಲ್ಲೂ ಪ್ರಧಾನಿಗಳು ಸ್ವತಂತ್ರವಾಗಿರುವುದಿಲ್ಲ. ಊಟ ತಿಂಡಿ ನಿದ್ದೆಯಿಂದ ಹಿಡಿದು ಪ್ರತಿಯೊಂದು ಕ್ಷಣವೂ ಭದ್ರತಾ ಸಿಬ್ಬಂದಿಯ ಕಣ್ಗಾವಲಿನಲ್ಲಿ ಇರುತ್ತದೆ. ಒಂದು ರೀತಿಯಲ್ಲಿ ಅವರು ಸಾದಾ ಬಂಧನದಲ್ಲಿದ್ದಂತೆ. ಪರಿಸ್ಥಿತಿ ಹೀಗಿದ್ದಾಗ ಹಣ ಹರಹುವ ಹರಕತ್ತು ಮಾಡಲಾದೀತೇ ? ಎಂದು ರಂಗಸ್ವಾಮಿ ಅವರು ತಮ್ಮ ಅನುಭವದ ಆಧಾರದಲ್ಲಿ ವಿವರಣೆ ನೀಡಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Lok Sabha elections 2019: Former DySP of Karnataka State Police JB Rangaswamy explained about Black box trunk spotted in Chitradurga while Prime Minister Narendra Modi came to campaign. He said in his Facebook account that, it was a Technical kit used to emergency communication.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more