ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜ್ವಲ್ ಸ್ಪರ್ಧಿಸಿದರೆ ಬೆಂಬಲ ನೀಡೊಲ್ಲ: ಎ ಮಂಜು

|
Google Oneindia Kannada News

Recommended Video

ಎ. ಮಂಜು: ಪ್ರಜ್ವಲ್​ ಸ್ಪರ್ಧಿಸಿದ್ರೆ ನಾವ್ಯಾರೂ ಪ್ರಚಾರಕ್ಕೆ ಹೋಗಲ್ಲ | Oneindia Kannada

ಬೆಂಗಳೂರು, ಜನವರಿ 30: ಹಾಸನ ಲೋಕಸಭೆ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರೆ ನಾವು ಯಾರೂ ಅವರ ಪರ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಮಾಜಿ ಸಚಿವ ಎ.ಮಂಜು ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ಅವರು ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ ತಾವೇ ಅಭ್ಯರ್ಥಿ ಎಂದು ಕ್ಷೇತ್ರದಿಂದ ಪ್ರಚಾರ ನಡೆಸುತ್ತಿದ್ದಾರೆ. ಇದು ಸರಿಯಲ್ಲ. ಪ್ರಜ್ವಲ್ ಅವರನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಅಭ್ಯರ್ಥಿಯನ್ನಾಗಿ ಸ್ಪರ್ಧೆಗೆ ಇಳಿಸಿದರೆ ಅವರ ಪರವಾಗಿ ನಾವು ಕೆಲಸ ಮಾಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ದಲಿತರು ಎದುರು ಬಂದರೆ ರೇವಣ್ಣ ಮನೆಗೆ ಹೋಗಿ ಸ್ನಾನ ಮಾಡಿ ಬರುತ್ತಾರೆ, ಎ ಮಂಜುದಲಿತರು ಎದುರು ಬಂದರೆ ರೇವಣ್ಣ ಮನೆಗೆ ಹೋಗಿ ಸ್ನಾನ ಮಾಡಿ ಬರುತ್ತಾರೆ, ಎ ಮಂಜು

ನಮ್ಮ ಕ್ಷೇತ್ರದಲ್ಲಿ ದೇವೇಗೌಡರು ಸ್ಪರ್ಧಿಸಿದರೆ ಯಾವುದೇ ತಕರಾರು ಇಲ್ಲ. ಅಲ್ಲದೆ, ಸೀಟು ಹೊಂದಾಣಿಕೆ ಬಗ್ಗೆ ಇನ್ನೂ ಅಂತಿಮ ತೀರ್ಮಾನವೇ ಆಗಿಲ್ಲ. ಈ ಬಗ್ಗೆ ಇನ್ನೂ ತೀರ್ಮಾನವೇ ಆಗದೆ ಇರುವಾಗ ಪ್ರಜ್ವಲ್ ಹೇಗೆ ತಾವೇ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತಾರೆ ಎಂದು ಮಂಜು ಪ್ರಶ್ನಿಸಿದ್ದಾರೆ.

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಜ್ವಲ್ ರೇವಣ್ಣ, ಹಾಸನ ಕ್ಷೇತ್ರದೆಲ್ಲೆಡೆ ಸಭೆಗಳನ್ನು ನಡೆಸುತ್ತಿದ್ದಾರೆ.

ಬ್ಲಾಕ್ ಮೇಲ್ ಮಾಡುವುದು ಸರಿಯಲ್ಲ

ಬ್ಲಾಕ್ ಮೇಲ್ ಮಾಡುವುದು ಸರಿಯಲ್ಲ

ಕುಮಾರಸ್ವಾಮಿ ಅವರು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮಂಜು, ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರು ಹೀಗೆ ಹೇಳಿಕೆ ನೀಡಬಾರದು. ಮಿತ್ರಪಕ್ಷವನ್ನು ಬ್ಲಾಕ್ ಮೇಲ್ ಮಾಡಲು ರಾಜೀನಾಮೆ ನೀಡುತ್ತೇನೆ ಎಂದು ಹೇಳಿಕೆ ನೀಡುವುದು ಸರಿಯಲ್ಲ. ರಾಜೀನಾಮೆ ನೀಡಿ ಎಂದು ನಮ್ಮ ಪಕ್ಷದ ನಾಯಕರು ಅಥವಾ ಶಾಸಕರೇನಾದರೂ ಕೇಳಿದ್ದಾರಾ? ಎಂದು ಖಾರವಾಗಿ ಪ್ರಶ್ನಿಸಿದರು.

ರಾಜೀನಾಮೆಗೆ ಸಿದ್ಧ: ಎಚ್ಡಿಕೆ ಶಾಕಿಂಗ್ ಹೇಳಿಕೆಗೆ ಕಾರಣವೇನು?ರಾಜೀನಾಮೆಗೆ ಸಿದ್ಧ: ಎಚ್ಡಿಕೆ ಶಾಕಿಂಗ್ ಹೇಳಿಕೆಗೆ ಕಾರಣವೇನು?

ಸಿದ್ದರಾಮಯ್ಯ ನಮ್ಮ ಸಿಎಂ ಎಂದರೆ ತಪ್ಪೇನು?

ಸಿದ್ದರಾಮಯ್ಯ ನಮ್ಮ ಸಿಎಂ ಎಂದರೆ ತಪ್ಪೇನು?

ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ಅವರು ನಮ್ಮ ನಾಯಕ ಎಂದು ಹೇಳಿಕೊಳ್ಳದೆ ದೇವೇಗೌಡ, ಕುಮಾರಸ್ವಾಮಿ ಅಥವಾ ರೇವಣ್ಣ ನಮ್ಮ ನಾಯಕ ಎಂದು ಹೇಳಿಕೊಳ್ಳಲು ಆಗುತ್ತದೆಯೇ. ಸಿದ್ದರಾಮಯ್ಯ ಅವರೇ ನಮಗೆ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು.

ಸಚಿವ ರೇವಣ್ಣ ಅವರ ಹಾಡಿ ಹೊಗಳಿದ ಜಯಮಾಲಾ, ಎ.ಮಂಜು ಕಿಡಿ ಸಚಿವ ರೇವಣ್ಣ ಅವರ ಹಾಡಿ ಹೊಗಳಿದ ಜಯಮಾಲಾ, ಎ.ಮಂಜು ಕಿಡಿ

ಮೊದಲು ಅವರು ಕಂಟ್ರೋಲ್‌ ಇರಿಸಿಕೊಳ್ಳಲಿ

ಮೊದಲು ಅವರು ಕಂಟ್ರೋಲ್‌ ಇರಿಸಿಕೊಳ್ಳಲಿ

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ನಿಮ್ಮ ಶಾಸಕರನ್ನು ಹಿಡಿತದಲ್ಲಿ ಇರಿಸಿಕೊಳ್ಳಿ ಎಂದು ನಮಗೆ ಏಕೆ ಹೇಳಬೇಕು? ಅವರು ಮೊದಲು ಸಿ.ಎಸ್. ಪುಟ್ಟರಾಜು ಅವರನ್ನು ಹಿಡಿತದಲ್ಲಿ ಇರಿಸಿಕೊಳ್ಳಲಿ. ಬಳಿಕ ಬೇಕಾದರೆ ನಮ್ಮ ಶಾಸಕರನ್ನು ಕಂಟ್ರೋಲ್‌ನಲ್ಲಿ ಇರಿಸಿಕೊಳ್ಳುವುದರ ಬಗ್ಗೆ ಮಾತನಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈತ್ರಿ ಆದರೂ ದೇವೇಗೌಡ ಕುಟುಂಬಕ್ಕೆ ಬೆಂಬಲ ಇಲ್ಲ: ಎ ಮಂಜು ಮೈತ್ರಿ ಆದರೂ ದೇವೇಗೌಡ ಕುಟುಂಬಕ್ಕೆ ಬೆಂಬಲ ಇಲ್ಲ: ಎ ಮಂಜು

ಭೂಕಬಳಿಕೆ ಆರೋಪ

ಭೂಕಬಳಿಕೆ ಆರೋಪ

ದೇವೇಗೌಡರ ಕುಟುಂಬದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಮಾಜಿ ಸಚಿವ ಎ. ಮಂಜು, ಪ್ರಜ್ವಲ್ ರೇವಣ್ಣ ಭೂಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಹಾಸನ ತಾಲ್ಲೂಕಿನ ದುದ್ದ ಹೋಬಳಿಯ ಸೋಮಹಳ್ಳಿ ಕಾವಲಿನಲ್ಲಿರುವ 54.29 ಎಕರೆ ಸರ್ಕಾರಿ ಜಾಗವನ್ನು ಪ್ರಜ್ವಲ್ ರೇವಣ್ಣ ಮತ್ತು ಕುಟುಂದವರು ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು.

ದೇವೇಗೌಡರ ಕುಟುಂಬದ ಮೇಲೆ ಭೂಕಬಳಿಕೆ ಆರೋಪ ಮಾಡಿದ ಕಾಂಗ್ರೆಸ್‌ ಮಾಜಿ ಸಚಿವ ಎ.ಮಂಜುದೇವೇಗೌಡರ ಕುಟುಂಬದ ಮೇಲೆ ಭೂಕಬಳಿಕೆ ಆರೋಪ ಮಾಡಿದ ಕಾಂಗ್ರೆಸ್‌ ಮಾಜಿ ಸಚಿವ ಎ.ಮಂಜು

English summary
Former minister A Manju said that, his team will not support to grandson of Deve Gowda, Prajwal Revanna if he contest from Hassan lok sabha constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X