ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸುದ್ದಿ ಸ್ವಾರಸ್ಯ : ಜನಶತಾಬ್ದಿ ಎಕ್ಸ್ ಪ್ರೆಸ್ ರೈಲಲ್ಲಿ ಕನ್ನಡವೇ ಮಾಯ

|
Google Oneindia Kannada News

Recommended Video

      ಹಾಸನದಲ್ಲಿ ಕಣ್ಣೀರ ಕೋಡಿ, ಶಿವಮೊಗ್ಗದಲ್ಲಿ ಹರಿಯುತಿದೆ ಅಕ್ರಮ ಮದ್ಯ

      ಬೆಂಗಳೂರು, ಮಾರ್ಚ್ 14 : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹಾಸನ ಲೋಕಸಭಾ ಕ್ಷೇತ್ರವನ್ನು ತಮ್ಮ ಮುದ್ದಿನ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಡುತ್ತಿರುವುದಾಗಿ, ಭಾವುಕತೆಯಿಂದಲೇ ಘೋಷಿಸುತ್ತಿದ್ದಂತೆ ಪ್ರಜ್ವಲ್ ಮತ್ತು ರೇವಣ್ಣ ಸೇರಿದಂತೆ ಸಹಜವಾಗಿ ಕಂಬನಿ ಮಿಡಿದಿದ್ದಾರೆ.

      ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿ 85ನೇ ವಯಸ್ಸಿನಲ್ಲಿ ತಮ್ಮ ಪ್ರೀತಿಯ ಕ್ಷೇತ್ರವನ್ನು ಬಿಟ್ಟುಕೊಡುತ್ತಿದ್ದರೆ ಭಾವುಕರಾಗದೆ ಇನ್ನೇನು ಆಗಲು ಸಾಧ್ಯ? ಆದರೆ, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ವಸ್ತುವಾಗಿದೆ. ಫೇಸ್ ಬುಕ್ ನಲ್ಲಂತೂ ತರಹೇವಾರಿ ಡೈಲಾಗುಗಳು ಪುಂಖಾನುಪುಂಖವಾಗಿ ಹೊರಬರುತ್ತಿವೆ.

      ಕಣ್ಣೀರ 'ಹೊಳೆ' ಹರಿಸಿ, ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದ ದೇವೇಗೌಡ್ರುಕಣ್ಣೀರ 'ಹೊಳೆ' ಹರಿಸಿ, ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದ ದೇವೇಗೌಡ್ರು

      ಕೆಲವರು ಲೋಕಸಭೆ ಚುನಾವಣೆಗೂ ಮುನ್ನ ದೇವೇಗೌಡರು ಸರಿದಾದ ದಾಳ ಉರುಳಿಸಿದ್ದಾರೆ, ಉಳಿದ ಪಕ್ಷಗಳು ಆದಷ್ಟು ಬೇಗನೆ ಎಚ್ಚೆತ್ತುಕೊಳ್ಳುವುದು ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ. ಈ ಬಾರಿ ಪ್ರಜ್ವಲ್ ಅವರನ್ನು ಹಾಸನದಿಂದ ಮತ್ತು ಕುಮಾರಸ್ವಾಮಿ ಅವರ ಮಗನಾದ ನಿಖಿಲ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಿರುವ ಗೌಡರು ಅವರಿಬ್ಬರನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದಾರೆ.

       Lok Sabha Elections 2019 : Karnataka political news round up

      ಏನೇ ಆಗಲಿ, ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಏಪ್ರಿಲ್ 18ರಂದು 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿರುವುದರಿಂದ, ಟಿಕೆಟ್ ಗಳು ವಿತರಣೆಯಾಗುತ್ತಿವೆ, ಕೆಲವು ಬಿಕರಿಯೂ ಆಗುತ್ತಿವೆ. ಎದುರಾಳಿಗಳನ್ನು ಹೇಗೆ ಸದೆಬಡಿಯಬೇಕೆಂದು ಸ್ಟ್ರಾಟಜಿಗಳು ನಡೆಯುತ್ತಿವೆ. ಈ ನಡುವೆ ರಾಜ್ಯದಲ್ಲಿ ನಡೆಯುತ್ತಿರುವ ಹಲವಾರು ಘಟನೆಗಳು ನೋಟ ಇಲ್ಲಿದೆ.

      Newest FirstOldest First
      12:38 PM, 14 Mar

      ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಸಂಚರಿಸುವ ಜನಶತಾಬ್ದಿ ಎಕ್ಸ್ ಪ್ರೆಸ್ (12079/80) ರೈಲಿನ ಹೆಸರಿನ ಪ್ಲೇಟ್ ಮೇಲೆ ಕನ್ನಡವೇ ಮಾಯವಾಗಿದೆಯಲ್ಲ ಎಂದು 'ಕರ್ನಾಟಕ ರೈಲು ಬಳಕೆದಾರರು' ಟ್ವಿಟ್ಟರ್ ಖಾತೆ ಆಕ್ಷೇಪ ವ್ಯಕ್ತಪಡಿಸಿದೆ. ಕನ್ನಡ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಇತ್ತ ಗಮನ ಹರಿಸುವುದೆ?
      12:12 PM, 14 Mar

      ಕೊಪ್ಪಳ ಜಿಲ್ಲೆಯ ಹಟ್ಟಿ ಗ್ರಾಮದಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಮತದಾನ ಮಾಡುವಾಗ ಹೇಗೆ ಬಳಸಬೇಕೆಂಬುದನ್ನು ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ತೋರಿಸಿಕೊಟ್ಟರು.
      11:12 AM, 14 Mar

      ಶಿವಮೊಗ್ಗ ಸರ್ಕಲ್ ನಲ್ಲಿ ಮಾರ್ಚ್ 12ರಂದು ಅಬಕಾರಿ ಇಲಾಖೆ ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದ ಅಕ್ರಮ ಮದ್ಯ, ಎರಡು ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಏಳು ಜನರನ್ನು ಬಂಧಿಸಲಾಗಿದೆ. ಒಟ್ಟು 18 ಪ್ರದೇಶಗಳಲ್ಲಿ ದಾಳಿ ನಡೆದಿದ್ದು, 7526.160 ಲೀಟರ್ ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
      11:12 AM, 14 Mar

      ಮಂಡ್ಯದಿಂದ ಪಕ್ಷೇತರರಾಗಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ನಟಿ ಸುಮಲತಾ ಅಂಬರೀಶ್ ಅವರಿಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಅವರಿಗೆ ವಿರುದ್ಧವಾಗಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಅವರು ಸ್ಪರ್ಧಿಸಲಿದ್ದಾರೆ. ಆದರೆ, ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟವಿದ್ದರೂ ಸುಮಲತಾಗೆ ಕಾಂಗ್ರೆಸ್ ಕಾರ್ಯಕರ್ತರ ಬೆಂಬಲ ಸಿಗುತ್ತಿದೆ, ನಿಖಿಲ್ ಅವರಿಗೆ ಸಿಗುತ್ತಿಲ್ಲ. ಈ ಕಾರಣದಿಂದಾಗಿ ಜೆಡಿಎಸ್ ನಿಂದ ಬೇರೆ ಕ್ಷೇತ್ರಕ್ಕೆ ಸುಮಲತಾ ಅವರಿಗೆ ಟಿಕೆಟ್ ನೀಡುವ ಸುದ್ದಿ ಹರಿದಾಡುತ್ತಿದ್ದು ಅದನ್ನು ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

      English summary
      Lok Sabha Elections 2019 : Karnataka political news round up in Kannada.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X