ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಲೋಕ ಸಮರ LIVE: ಮೊದಲ ಹಂತದ ಮತದಾನ ಶಾಂತಿಯುತ

|
Google Oneindia Kannada News

ಬೆಂಗಳೂರು, ಏಪ್ರಿಲ್ 18: ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾನ ಜಾರಿಯಲ್ಲಿದೆ.

ರಾಜ್ಯದ ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಉಡುಪಿ-ಚಿಕ್ಕಮಗಳೂರು, ಮೈಸೂರು-ಕೊಡಗು, ಚಿತ್ರದುರ್ಗ, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.

ಲೋಕಸಭೆ ಚುನಾವಣೆ LIVE:ಇದುವರೆಗೆ ಕರ್ನಾಟಕದಲ್ಲಿ ಕಡಿಮೆ ಮತದಾನಲೋಕಸಭೆ ಚುನಾವಣೆ LIVE:ಇದುವರೆಗೆ ಕರ್ನಾಟಕದಲ್ಲಿ ಕಡಿಮೆ ಮತದಾನ

ಮೊದಲ ಹಂತದ ಚುನಾವಣೆ ಇದಾಗಿದ್ದು, ಮಂಡ್ಯ, ಹಾಸನ, ಬೆಂಗಳೂರು ದಕ್ಷಿಣ, ತುಮಕೂರು ಕ್ಷೇತ್ರಗಳು ಭಾರಿ ಜಿದ್ದಾ-ಜಿದ್ದಿನ ಕಣವಾಗಿದ್ದು, ದೇಶದ ಗಮನ ಸೆಳೆದಿವೆ.

Karnataka phase one lok sabha elections 2019 LIVE

ಪರಮೇಶ್ವರ್, ಸಿದ್ದರಾಮಯ್ಯ, ಸುಧಾಮೂರ್ತಿ, ನಾರಾಯಣಮೂರ್ತಿ ಸೇರಿದಂತೆ ಹಲವು ಗಣ್ಯರು ಈಗಾಗಲೇ ತಮ್ಮ ಮತ ಚಲಾಯಿಸಿದ್ದಾರೆ. ಬೆಳಿಗ್ಗೆ 9 ಗಂಟೆ ವರೆಗೆ ಕರ್ನಾಟಕದಲ್ಲಿ 1.14% ನಷ್ಟು ಮಾತ್ರವೇ ಮತದಾನವಾಗಿದೆ.

Newest FirstOldest First
6:21 PM, 18 Apr

ರಾಜ್ಯದಲ್ಲಿ ಸಂಜೆ ಐದು ಗಂಟೆ ವರೆಗೆ 61.84% ಮತಚಲಾವಣೆ ಆಗಿದೆ. ಪ್ರಸ್ತುತ ಮತದಾನದ ಅವಧಿ ಮುಕ್ತಾಯವಾಗಿದ್ದು, ಒಟ್ಟಾರೆ ಮತಚಲಾವಣೆ ಪ್ರಮಾಣ ಸ್ವಲ್ಪ ಏರಿಕೆ ಆಗುವ ನಿರೀಕ್ಷೆ ಇದೆ.
6:05 PM, 18 Apr

ಲೋಕಸಭೆ ಚುನಾವಣೆ ಮತದಾನದ ಸಮಯ ಮುಕ್ತಾಯವಾಗಿದೆ. ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರನ್ನು ಮತಗಟ್ಟೆ ಒಳಗೆ ಕರೆದು ಮತ ಹಾಕಿಸಲಾಗುತ್ತದೆ, ಆರು ಗಂಟೆ ನಂತರ ಮತಹಾಕಲು ಹೋದ ಮತದಾರರಿಗೆ ಅವಕಾಶ ಇರುವುದಿಲ್ಲ.
6:01 PM, 18 Apr

ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕು ಹೊನ್ನೂರು ಗ್ರಾಮದ ಚುನಾವಣಾ ಮತಗಟ್ಟೆ ಬಳಿ ಗಲಾಟೆ, ಬಿಜೆಪಿ ಬೆಂಬಲಿಗ ಜೈಯಣ್ಣ ಎಂಬುವರಿಗೆ ದೊಣ್ಣೆಯಿಂದ ಹಲ್ಲೆ. ಗಾಯಾಳು ಜಯಣ್ಣ ಆಸ್ಪತ್ರೆಗೆ ದಾಖಲು.
5:40 PM, 18 Apr

ಮತದಾನ ಮುಗಿಯಲು ಕೇವಲ 25 ನಿಮಿಷ ಬಾಕಿ ಇದ್ದು, ಅಂತಿಮ ಸಮಯದಲ್ಲಿ ಮತದಾನ ಚುರುಕುಗೊಂಡಿದೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಈಗಾಗಲೇ 70% ಮತದಾನ ವಾಗಿದ್ದು, ಮತದಾರರು ಇನ್ನೂ ಸರತಿ ಸಾಲಿನಲ್ಲಿ ನಿಂತಿದ್ದಾರೆ.
5:08 PM, 18 Apr

ರಕ್ತದೊತ್ತಡ ಕಡಿಮೆಯಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕೊಂಬಾರು ಗ್ರಾಮದ ಮುಗೇರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಡಿಕೇರಿ ಮೂಲದ ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ (42) ಕುಸಿದು ಬಿದ್ದಿದ್ದಾರೆ. ಈ ಪರಿಣಾಮ ಅವರ ತಲೆಗೆ ಗಾಯವಾಗಿದ್ದು ಅವರನ್ನುಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
4:50 PM, 18 Apr

ಪದ್ಮ ಪ್ರಶಸ್ತಿ ಪ್ರಶಸ್ತಿಗೆ ಇತ್ತೀಚೆಗೆ ಭಾಜನರಾದ ಸಾಲುಮರದ ತಿಮ್ಮಕ್ಕ ಅವರು ಸಹಾಕರೊಂದಿಗೆ ಬಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದರು. ಸಾಲುಮರದ ತಿಮ್ಮಕ್ಕನದ್ದು 107ರ ವಯಸ್ಸಿನಲ್ಲೂ ಕುಂದದ ಉತ್ಸಾಹ.
4:10 PM, 18 Apr

ಮೂರು ಗಂಟೆ ಹೊತ್ತಿಗೆ ರಾಜ್ಯದಾದ್ಯಂತ 48.97% ಮತದಾನ ನಡೆದಿದೆ, ಸಂಜೆ ಆರು ಗಂಟೆ ವರೆಗೂ ಮತದಾನ ಬಾಕಿಇದೆ.
Advertisement
2:22 PM, 18 Apr

ಮಧ್ಯಾಹ್ನ ಒಂದು ಗಂಟೆ ವೇಳೆಗೆ ಕರ್ನಾಟಕದಾದ್ಯಂತ 20.62% ಮತದಾನ ನಡೆದಿದೆ. ಸಂಜೆ ಆರು ಗಂಟೆ ವರೆಗೆ ಮತದಾನ ನಡೆಯಲಿದೆ.
2:11 PM, 18 Apr

ಕೆ.ಆರ್.ಪುರಂ ನಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಮಾರಾಮಾರಿ ನಡೆದಿದೆ. ಮತಗಟ್ಟೆ ಬಳಿ ಟೇಬಲ್ ಹಾಕುವ ವಿಚಾರಕ್ಕೆ ಈ ಗಲಾಟೆ ನಡೆದಿದೆ. ಫಾರುಕ್ ಮತ್ತು ನಯೀಮ್ ಪಾಷಾ ನಡುವೆ ಗಲಾಟೆ ನಡೆದಿದೆ. ಲಾಂಗ್‌ ಗಳ ಮೂಲಕ ಹೊಡೆದಾಡಿಕೊಂಡಿದ್ದಾರೆ.
1:33 PM, 18 Apr

ಅಂಬರೀಶ್ ಹುಟ್ಟೂರಾದ ದೊಡ್ಡರಸಿನಕೆರೆಯಲ್ಲಿ ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಬೆಂಬಲಿಗರ ನಡುವೆ ಮಾರಾ-ಮಾರಿ ನಡೆದಿದೆ.
1:13 PM, 18 Apr

ತಮ್ಮ ಡಿಕೆ.ಸುರೇಶ್‌ ಗೆಲುವಿಗಾಗಿ ಮತ ಚಲಾಯಿಸಿದ ಸಚಿವ ಡಿ.ಕೆ.ಶಿವಕುಮಾರ್. ಕನಕಪುರ ತಾಲ್ಲೂಕು ದೊಡ್ಡಹಲಹಳ್ಳಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ಕುಟುಂಬ ಸಮೇತರಾಗಿ ಮತ ಚಲಾಯಿಸಿದರು.
12:44 PM, 18 Apr

ಕೆ.ಆರ್.ಪೇಟೆ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಕೆಲಕಾಲ ಮತದಾನ ಸ್ಥಗಿತಗೊಳಿಸಲಾಗಿತ್ತು. ಇವಿಎಂ ಮತ ಯಂತ್ರವನ್ನು ಬದಲಾಗಿ ಇಟ್ಟು ಮತದಾರರಿಗೆ ಅಧಿಕಾರಿಗಳು ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಸಹ ಮತದಾರರು ದೂರಿದರು.
Advertisement
12:43 PM, 18 Apr

ಮೈಸೂರು ಕೃಷ್ಣರಾಜನಗರದಲ್ಲಿ ಮತದಾರರ ಪಟ್ಟಿಯಲ್ಲಿ ಕೆಲವು ಮತದಾರರ ಹೆಸರು ನಾಪತ್ತೆ, ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ ಮತದಾರರು.
12:31 PM, 18 Apr

ಮಂಡ್ಯ ಲೋಕಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ದೊಡ್ಡರಸಿನಕೆರೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮೊದಲ ಬಾರಿಗೆ ನನಗೆ ನಾನು ಮತಚಲಾಯಿಸುತ್ತಿದ್ದೇನೆ, ಗೆಲ್ಲುವ ವಿಶ್ವಾಸವಿದೆ ಎಂದರು.
12:05 PM, 18 Apr

ಸಿದ್ದರಾಮನ ಹುಂಡಿಯಲ್ಲಿ ಮತಚಲಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಪುತ್ರ ಯತೀಶ್ ಸಿದ್ದರಾಮಯ್ಯ. ಈ ಸಮಯ ಮಾತನಾಡಿದ ಅವರು, 14 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ನಮ್ಮೂರಲ್ಲಿ ಜನ ನಿಧಾನವಾಗಿ ಬಂದು ಮತದಾನ ಮಾಡುತ್ತಾರೆ. ಶೇ. 80 ರಿಂದ 90 ರಷ್ಟು ಮತದಾನ ಆಗುತ್ತೆ. ಬಿಸಿಲು ಜಾಸ್ತಿ ಇದೆ ಮಳೆ ಬರಲಿ ಅಂತ ಬೇಡಿಕೊಳ್ಳುತ್ತೇನೆ ಎಂದು ಹೇಳಿದರು.
10:52 AM, 18 Apr

ಇವಿಎಂ ದೋಷದಿಂದಾಗಿ ಹಾಸನದ ಹೊಳೆನರಸಿಪುರದಲ್ಲಿ ಎರಡು ಕಡೆ ಮತದಾನವನ್ನು ಸ್ಥಗಿತಗೊಳಿಸಲಾಗಿದೆ. ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲಾ ಚುನಾವಣಾಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
10:52 AM, 18 Apr

ಹಾನಸದಲ್ಲಿ ದೇವೇಗೌಡ ಅವರು ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದರು. ನಂತರ ಮಾತನಾಡಿದ ಅವರು, ನಾನು, ನಿಖಿಲ್, ಪ್ರಜ್ವಲ್ ಮೂವರು ಗೆಲ್ಲುವುದು ಶತಸಿದ್ಧ ಎಂದರು.
10:27 AM, 18 Apr

ಚಿತ್ರದುರ್ಗದ ನಗರಘಟ್ಟದಲ್ಲಿ ಮೂಲಸೌಕರ್ಯಕ್ಕೆ ಒತ್ತಾಯಿಸಿ ಮತದಾನ ಬಹಿಷ್ಕಾರ ಮಾಡಲಾಗಿದೆ. ಸ್ಥಳೀಯ ಅಧಿಕಾರಿಗಳು ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
10:24 AM, 18 Apr

ಮತದಾನದ ಶೇಕಡವಾರು ಪ್ರಮಾಣ, ಬೆಳಗ್ಗೆ 9:00 ಗಂಟೆ ವರೆಗೆ ೇ 7.79%
10:24 AM, 18 Apr

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮುಂಜಾನೆ 9 ಗಂಟೆ ವರೆಗೆ ಶೇಕಡ 14 % ಮತದಾನ ದಾಖಲು. ⁣ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆ ಶೇಕಡವಾರು 9.80 % ಮತದಾನ
10:16 AM, 18 Apr

ಮತದಾನ ಮಾಡಿದ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಟುಂಬ ರಾಜಕೀಯ ಈಗಿನ ಚುನಾವಣೆಯ ವಿಷಯವಸ್ತುವಲ್ಲ, ಅದು ಅಷ್ಟೋಂದು ಮುಖ್ಯವೂ ಅಲ್ಲ. ಈಗಿನ ಸಮಸ್ಯೆ ರಾಷ್ಟ್ರದ ಹಿತ. ಕುಟುಂಬ ರಾಜಕಾರಣದಿಂದಲೇ ದೇಶದ ಹಲವು ಪ್ರಾದೇಶಿಕ ಪಕ್ಷಗಳು ಬೆಳೆದಿವೆ ಮತ್ತು ಉಳಿದಿವೆ.
10:09 AM, 18 Apr

ಚಾಮರಾಜನಗರ ಮತಗಟ್ಟೆ ಸಂಖ್ಯೆ 48 ರಲ್ಲಿ ಹೃದಯಾಘಾತದಿಂದ ಮತಗಟ್ಟೆ ಅಧಿಕಾರಿಯೊಬ್ಬರು ನಿಧನರಾಗಿದ್ದಾರೆ. ಮೃತರನ್ನು ಶಾಂತಮೂರ್ತಿ (48) ಎಂದು ಗುರುತಿಸಲಾಗಿದೆ.
10:03 AM, 18 Apr

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 91 ವರ್ಷದ ಶ್ರೀನಿವಾಸ್ ಮತ್ತು 84 ಮಂಜುಳಾ ಅವರು ಮತ ಚಲಾಯಿಸಿದರು.
9:59 AM, 18 Apr

ಸಿಎಂ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಕೇತಿಗಾನಹಳ್ಳಿಗೆ ಮತ ಚಲಾಯಿಸಿದ್ದಾರೆ.
9:58 AM, 18 Apr

ಹಾನಸದ ಅರಕಲಗೂಡಿನ ಕಟ್ಟೇಪುರದಲ್ಲಿ ಮತಯಂತ್ರ ಗೊಂದಲ, ಏಳು ಮತ ಹಾಕಿದ್ದರೆ 10 ಮತ ಎಂದು ತೋರಿಸುತ್ತಿರುವ ಇವಿಎಂ. ಸ್ಥಳದಲ್ಲಿ ಗೊಂದಲದ ವಾತಾವರಣ.
9:58 AM, 18 Apr

ಬೆಳಿಗ್ಗೆ ಒಂಬತ್ತು ಗಂಟೆ ವರೆಗೆ ರಾಜ್ಯದಲ್ಲಿ ಕಡಿಮೆ ಮತದಾನ ದಾಖಲಾಗಿದೆ. ಒಂಬತ್ತು ಗಂಟೆ ವೇಳೆಗೆ ದೊರಕಿರುವ ಮಾಹಿತಿ ಪ್ರಕಾರ 1.14% ರಷ್ಟು ಮಾತ್ರವೇ ಮತದಾನವಾಗಿದೆ.

English summary
Karnataka phase one lok sabha elections 2019 starts today. voting happing in 14 lok sabha constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X