ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಇತಿಹಾಸದಲ್ಲಿಯೇ ಅಧಿಕ ಮತದಾನದ ದಾಖಲೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಮತದಾರರು ದಾಖಲೆ ನಿರ್ಮಿಸಿದ್ದಾರೆ. ಇದುವರೆಗಿನ ಚುನಾವಣೆಗಳಲ್ಲಿಯೇ ಅತ್ಯಧಿಕ ಮತದಾನ ಮಾಡುವ ಮೂಲಕ ರಾಜ್ಯದ ಚುನಾವಣಾ ಇತಿಹಾಸದಲ್ಲಿ ಸಾಧನೆ ಮಾಡಿದ್ದಾರೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮತದಾನದ ಶೇಕಡಾವಾರು ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆಯಾಗಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

1951ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಪ್ರಸಕ್ತ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನ ದಾಖಲಾಗಿದೆ. ರಾಜ್ಯದಲ್ಲಿ 28 ಲೋಕಸಭೆ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿದ್ದು, ಒಟ್ಟು ಶೇ 68.6ರಷ್ಟು ಮತದಾನವಾಗಿದೆ. ಇದು ಕಳೆದ 2014ರ ಚುನಾವಣೆಗಿಂತ ಶೇ 1.4ರಷ್ಟು (67.2%) ಹೆಚ್ಚು. ಇದಕ್ಕೂ ಮೊದಲು 1999ರಲ್ಲಿ ಶೇ 67.6ರಷ್ಟು ಮತದಾನ ನಡೆದಿದ್ದೇ ಗರಿಷ್ಠ ಪ್ರಮಾಣವಾಗಿತ್ತು.

ಕರ್ನಾಟಕ ಲೋಕಸಮರ 2ನೇ ಹಂತ ಅಂತ್ಯ: ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?ಕರ್ನಾಟಕ ಲೋಕಸಮರ 2ನೇ ಹಂತ ಅಂತ್ಯ: ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಶೇ 80ಕ್ಕಿಂತ ಹೆಚ್ಚು ಮತದಾನ ನಡೆದಿದೆ. ರಾಯಚೂರಿನಲ್ಲಿ ಅತ್ಯಂತ ಕಡಿಮೆ, ಶೇ 57.85ರಷ್ಟು ಮತದಾನ ನಡೆದಿದೆ ಎಂದು ವರದಿಯಾಗಿದೆ.

Lok Sabha elections 2019 highest voting recorded since 1951 in karnataka

ಏಪ್ರಿಲ್ 18ರಂದು ನಡೆದ ಮೊದಲ ಹಂತದ ಮತದಾನದಲ್ಲಿ 68.80% ಮತದಾನವಾಗಿತ್ತು. ಏಪ್ರಿಲ್ 23ರಂದು ನಡೆದ ಎರಡನೆಯ ಹಂತದ ಮತದಾನದಲ್ಲಿ 67.21% ಮತದಾನವಾಗಿದೆ.

ಮತದಾನಕ್ಕೆ ಲಂಡನ್ನಿಂದ ಬಂದ ಮಗ: ಸಂಭ್ರಮ ಹಂಚಿಕೊಂಡ ಗಾಲಿ ರೆಡ್ಡಿಮತದಾನಕ್ಕೆ ಲಂಡನ್ನಿಂದ ಬಂದ ಮಗ: ಸಂಭ್ರಮ ಹಂಚಿಕೊಂಡ ಗಾಲಿ ರೆಡ್ಡಿ

ಎರಡನೆಯ ಹಂತದ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ 76.26% , ಚಿಕ್ಕೋಡಿಯಲ್ಲಿ 74.08% ಮತದಾನ ನಡೆದಿತ್ತು.

ರಾಜ್ಯದಲ್ಲಿನ 28 ಲೋಕಸಭೆ ಕ್ಷೇತ್ರಗಳ ಪೈಕಿ ಮೊದಲ ಹಂತ ಮತ್ತು ಎರಡನೆಯ ಹಂತಗಳಲ್ಲಿ ತಲಾ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿತ್ತು.

ಕರ್ನಾಟಕದಲ್ಲಿ ಅಂದಾಜು 67.67%, ಮಂಡ್ಯ 79.98% ಲೋಕಸಭೆ ಮತದಾನ ಕರ್ನಾಟಕದಲ್ಲಿ ಅಂದಾಜು 67.67%, ಮಂಡ್ಯ 79.98% ಲೋಕಸಭೆ ಮತದಾನ

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದು, ಕಾಂಗ್ರೆಸ್ 21 ಮತ್ತು ಜೆಡಿಎಸ್ 7 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 27 ಕ್ಷೇತ್ರಗಳಲ್ಲಿ ಬಿಜೆಪಿ, ಮೈತ್ರಿಕೂಟದ ಅಭ್ಯರ್ಥಿಗಳ ಎದುರು ಸ್ಪರ್ಧಿಸುತ್ತಿದೆ. ಮಂಡ್ಯ ಕ್ಷೇತ್ರದಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ನೀಡಿದೆ.

English summary
Lok Sabha elections 2019: Highest percentage of voting recorded in Karnataka in this elections since 1951 first general election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X