ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಿಎಂ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ: ಐಪಿಎಸ್ ಅಧಿಕಾರಿ ರೂಪಾ

|
Google Oneindia Kannada News

ಬೆಂಗಳೂರು, ಮೇ 23: ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡುವುದು ಸಾಧ್ಯವಿಲ್ಲ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಹೇಳಿದ್ದಾರೆ.

ಇವಿಎಂ ದುರ್ಬಳಕೆ ಸಾಧ್ಯವೇ? ಅದಕ್ಕೆ ಇರುವ ಭದ್ರತೆ ಏನು? ಇಲ್ಲಿದೆ ಮಾಹಿತಿ ಇವಿಎಂ ದುರ್ಬಳಕೆ ಸಾಧ್ಯವೇ? ಅದಕ್ಕೆ ಇರುವ ಭದ್ರತೆ ಏನು? ಇಲ್ಲಿದೆ ಮಾಹಿತಿ

ಇವಿಎಂಗಳನ್ನು ಹ್ಯಾಕ್ ಮಾಡುವುದು ಅಸಾಧ್ಯ. ದೇಶದಾದ್ಯಂತ ರಾಜ್ಯ ಆಡಳಿತ ಸೇವೆಯಲ್ಲಿರುವ ಎಲ್ಲ ಐಎಎಸ್ ಅಧಿಕಾರಿಗಳೂ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂಬುದನ್ನು ತಿಳಿದಿದ್ದಾರೆ. ಏಕೆಂದರೆ ಚುನಾವಣೆ ಸಂದರ್ಭದಲ್ಲಿ ಅವರು ರಿಟರ್ನಿಂಗ್ ಅಧಿಕಾರಿಗಳಾಗಿ ಕೆಲಸ ಮಾಡುತ್ತಾರೆ. ಹ್ಯಾಕ್ ಮಾಡಲು ಅವಕಾಶ ನೀಡುವ ಮೂಲಕ ಅವರು ತಮ್ಮ ಕೆಲಸಕ್ಕೆ ಕುತ್ತು ತಂದುಕೊಳ್ಳುತ್ತಾರೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಇವಿಎಂ-ವಿವಿಪ್ಯಾಟ್ ತಾಳೆ: ವಿಪಕ್ಷಗಳ ಮನವಿ ತಿರಸ್ಕರಿಸಿದ ECಇವಿಎಂ-ವಿವಿಪ್ಯಾಟ್ ತಾಳೆ: ವಿಪಕ್ಷಗಳ ಮನವಿ ತಿರಸ್ಕರಿಸಿದ EC

ಆಡಳಿತ ಯಂತ್ರದ ಮೂಲಕ ಚುನಾವಣೆಗಳನ್ನು ನಡೆಸಲಾಗುತ್ತಿದೆ ಎಂಬುದನ್ನು ನಾವು ಮರೆಯುತ್ತಿದ್ದೇವೆ. ತಮ್ಮ ಸುಪರ್ದಿಯಲ್ಲಿರುವ ಇವಿಎಂ ಹ್ಯಾಕ್ ಆಗಿದೆ ಎನ್ನುವುದು ಅಧಿಕಾರಿಗಳಿಗೆ ಕಪ್ಪುಚುಕ್ಕೆಯಾಗುತ್ತದೆ. ಚುನಾವಣೆ ಆರಂಭಕ್ಕೂ ಮುಂಚೆಯಿಂದ ಚುನಾವಣೆ ನಡೆದು ಫಲಿತಾಂಶ ಹೊರಬರುವವರೆಗೂ ಅವರ ಅಧೀನದಲ್ಲಿಯೇ ಯಂತ್ರಗಳು ಇರುತ್ತವೆ. ದೇಶದ ಎಲ್ಲ ಅಧಿಕಾರಿಗಳೂ ಇದರಲ್ಲಿ ರಾಜಿಯಾಗಲು ಸಾಧ್ಯವೇ? ಎಂದಿದ್ದಾರೆ.

Lok Sabha Elections 2019 evm hacking is not possible ips officer d roopa

ಇವಿಎಂ ಯಂತ್ರಗಳನ್ನು ಬದಲಿಸಲು ಸಾಧ್ಯವಿಲ್ಲ. ಬ್ಯಾಲಟ್ ಬಾಕ್ಸ್‌ಗಳನ್ನು ಕೂಡ. ಇವಿಎಂಗಳು ರಿಟರ್ನಿಂಗ್ ಆಫೀಸರ್ ಬಳಿ ಬಂದಾಗ ಅದರ ಸೀರಿಯಲ್ ನಂಬರ್‌ಗಳನ್ನು ಅಭ್ಯರ್ಥಿಗಳಿಗೆ ನೀಡಿರಲಾಗುತ್ತದೆ. ಹ್ಯಾಕ್ ಮಾಡುವುದಾದರೆ ಸೀರಿಯಲ್ ನಂಬರ್ ಆಧಾರದಲ್ಲಿಯೇ ಹ್ಯಾಕರ್‌ಗಳ ಬಳಿ ಇವಿಎಂ ಕಳುಹಿಸಿ ಫಲಿತಾಂಶಕ್ಕೆ ಮುನ್ನ ರೀಪ್ರೋಗ್ರಾಮಿಂಗ್ ಮಾಡಲು ಕಳುಹಿಸಬೇಕಾಗುತ್ತದೆ. ಇದೆಲ್ಲ ಸಾಧ್ಯವೇ ಇಲ್ಲ.

ಈ ರೀತಿ ಹ್ಯಾಕ್ ಮಾಡಿದರೆ ಲಕ್ಷಾಂತರ ಇವಿಎಂಗಳಿಗೆ ಮಾಡಬೇಕಾಗುತ್ತದೆ. ಏಕೆಂದರೆ ನಾಮಪತ್ರ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಅಭ್ಯರ್ಥಿಗಳಿಗೆ ಸೀರಿಯಲ್ ನಂಬರ್ ನೀಡಲಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಮುನ್ನ ಇವಿಎಂಗಳು ಜಿಲ್ಲೆಗೆ ಬಂದು ಅಧಿಕಾರಿಗಳ ವಶದಲ್ಲಿ ಸುರಕ್ಷಿತವಾಗಿರುತ್ತವೆ. ವಿಭಿನ್ನ ಸ್ಥಳಗಳಲ್ಲಿ ವಿಭಿನ್ನ ಪಕ್ಷಗಳ ಅಭ್ಯರ್ಥಿಗಳಿಗೆ ನೀಡಲಾಗುವ ಸೀರಿಯಲ್ ನಂಬರ್ ವಿಭಿನ್ನವಾಗಿರುತ್ತದೆ ಎಂದು ರೂಪಾ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

English summary
Lok Sabha Elections 2019: IPS officer D Roopa said that EVM's hacking is not possible. Because during polls EVM's are under controll of Returning Officers. Can all officers all over country get compromised?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X