ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಾಪಿ ಕ್ಯಾಟ್ ಮೋದಿ' ಎಂದು ಬಿಜೆಪಿ ಪ್ರಣಾಳಿಕೆ ಲೇವಡಿ ಮಾಡಿದ ಸಿದ್ದರಾಮಯ್ಯ

|
Google Oneindia Kannada News

ನವದೆಹಲಿ, ಏಪ್ರಿಲ್ 10: ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಏರಲು ಬಯಸಿರುವ ಬಿಜೆಪಿ ಸೋಮವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ವಿವಿಧ ಕ್ಷೇತ್ರಗಳಿಗೆ ಭರಪೂರ ಭರವಸೆಗಳನ್ನು ನೀಡಿತ್ತು. ಇದನ್ನು ವಿರೋಧ ಪಕ್ಷಗಳು ಲೇವಡಿ ಮಾಡಿವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಪ್ರಣಾಳಿಕೆ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ ಮತ್ತು ಯೋಜನೆಗಳನ್ನೇ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬಳಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ಇದಕ್ಕಾಗಿ 'ಕಾಪಿ ಕ್ಯಾಟ್ ಮೋದಿ' ಎಂದು ಟ್ಯಾಗ್ ಬಳಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನಕಲು ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಬಿಜೆಪಿ ಚುನಾವಣಾ ಪ್ರಣಾಳಿಕೆ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು? ಬಿಜೆಪಿ ಚುನಾವಣಾ ಪ್ರಣಾಳಿಕೆ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?

ಬಿಜೆಪಿಯ ಚುನಾವಣಾ ಪ್ರಣಾಳಿಕೆ ಪೊಳ್ಳು ಭರವಸೆಗಳಾಗಿವೆ. ನಾನು ಮುಖ್ಯಮಂತ್ರಿಯಾಗಿ ಜಾರಿಗೊಳಿಸಿದ ಕೃಷಿ ಸಾಲಕ್ಕಿಂತಲೂ ಕಡಿಮೆ ಪ್ರಮಾಣದ ಸಾಲದ ಭರವಸೆ ನೀಡಿದ್ದಾರೆ. ಭರವಸೆಗಳನ್ನು ನೀಡುವುದರಲ್ಲಿಯೂ ಅವರು ಹಿಂದೆ ಬಿದ್ದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಈ ಬಗ್ಗೆ ಅವರು ಮಾಡಿರುವ ಸರಣಿ ಟ್ವೀಟ್‌ಗಳು ಇಲ್ಲಿವೆ.

Array

ಕಾಪಿ ಪೇಸ್ಟ್ ಮಾಡಲು ಬರುತ್ತಿದ್ದಾರೆ

ಚುನಾವಣಾ ಚೌಕಿದಾರ ನರೇಂದ್ರ ಮೋದಿ ನಮ್ಮ ಸಾಧನೆಗಳನ್ನು ಕಾಪಿ ಮಾಡಿ ಅವರ ಪ್ರಣಾಳಿಕೆ ಹಾಗೂ ಭಾಷಣಗಳಲ್ಲಿ ಪೇಸ್ಟ್ ಮಾಡಲು ನಿರಂತರವಾಗಿ ನಮ್ಮ ಬೆಂಗಳೂರಿಗೆ ಬರುತ್ತಿದ್ದಾರೆ. ಅವರು ಪಾನ್ ಇಂಡಿಯಾವನ್ನು ಕಳೆದ ಐದು ವರ್ಷಗಳಲ್ಲಿ ಕೇವಲ ಬಿಂಬಿಸಿಕೊಳ್ಳುವ ಬದಲು ಜಾರಿ ಮಾಡಿದ್ದರೆ ನಿಜಕ್ಕೂ ಅದ್ಭುತ ಕೆಲಸವಾಗುತ್ತಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ಚುನಾವಣಾ ಪ್ರಣಾಳಿಕೆ: ರಸ್ತೆ, ರೈಲು ಅಭಿವೃದ್ಧಿಗೆ ಭರಪೂರ ಘೋಷಣೆ ಬಿಜೆಪಿ ಚುನಾವಣಾ ಪ್ರಣಾಳಿಕೆ: ರಸ್ತೆ, ರೈಲು ಅಭಿವೃದ್ಧಿಗೆ ಭರಪೂರ ಘೋಷಣೆ

Array

ಭರವಸೆ ನೀಡುವುದರಲ್ಲಿಯೂ ಹಿಂದೆ

ರೈತರಿಗೆ ಶೂನ್ಯ ಬಡ್ಡಿದರದಲ್ಲಿ 1 ಲಕ್ಷ ರೂಪಾಯಿವರೆಗೆ ಸಾಲ ನೀಡುವ ಬಿಜೆಪಿಯ ಚುನಾವಣಾ ಭರವಸೆಯನ್ನು 2013ರಲ್ಲಿ ನನ್ನ ಸರ್ಕಾರವೇ 3 ಲಕ್ಷದವರೆಗೆ ಸಾಲ ನೀಡುವ ಮೂಲಕ ಜಾರಿಮಾಡಿತ್ತು. ಭರವಸೆಗಳನ್ನು ನೀಡುವುದರಲ್ಲಿಯೂ ಅವರು ಹಿಂದೆ ಬೀಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ ಪಾಕಿಸ್ತಾನದ ಭಾಷೆಯಂತಿದೆ: ನರೇಂದ್ರ ಮೋದಿ ಕಾಂಗ್ರೆಸ್ ಪ್ರಣಾಳಿಕೆ ಪಾಕಿಸ್ತಾನದ ಭಾಷೆಯಂತಿದೆ: ನರೇಂದ್ರ ಮೋದಿ

ಪಿಂಚಣಿ ನಾವು ನೀಡುತ್ತಿದ್ದೇವೆ

ಕಡಿಮೆ ಆದಾಯದ ಕುಟುಂಬದ ವೃದ್ಧರಿಗೆ ನಮ್ಮ ಸರ್ಕಾರ 600 ರೂಪಾಯಿ ನೀಡುತ್ತಿತ್ತು. ಅದನ್ನು ಸಮ್ಮಿಶ್ರ ಸರ್ಕಾರ 800 ರೂಪಾಯಿಗೆ ಹೆಚ್ಚಿಸಿದೆ. ಮೋದಿ ಅವರು ಸಣ್ಣ ರೈತರಿಗೆ ಪಿಂಚಣಿ ನೀಡುವುದಾಗಿ ಹೇಳಿದೆ. ಅದನ್ನು ರಾಜ್ಯ ಸರ್ಕಾರ ಈಗಾಗಲೇ ನೀಡುತ್ತಿದೆ ಎಂದಿದ್ದಾರೆ.

ಮೋದಿ ಮೇಲೆ ಮಳೆ ಹೊಯ್ದಂಗೆ

ನರೇಂದ್ರ ಮೋದಿ ಅವರು ಗ್ರಾಮೀಣ ರಸ್ತೆಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಲು ಆಗ ಭಾಷಣ ಮತ್ತು ಈಗ ಪ್ರಣಾಳಿಕೆ ಸಿದ್ಧಪಡಿಸುವಾಗಲೇ ನಮ್ಮ ಹೊಲ ನಮ್ಮ ದಾರಿ ಮತ್ತು ನಮ್ಮ ಗ್ರಾಮ ನಮ್ಮ ರಸ್ತೆ ಅಡಿ 14,000 ಕಿ.ಮೀಗೂ ಹೆಚ್ಚು ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗಿದೆ. ಇದನ್ನು ನಾನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಇದು 'ಮೋದಿ ಮೇಲೆ ಮಳೆ ಹೊಯ್ದಂಗೆ' ಎಂದು ಗಾದೆ ಮಾತನ್ನು ಬಳಸಿಕೊಂಡಿದ್ದಾರೆ.

English summary
lok sabha elections 2019: Congress leader Siddaramaiah slams BJP election manifesto and called it Copy of Congress programmes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X