ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನದಲ್ಲಿ ನಾಟಕೀಯ ಬೆಳವಣಿಗೆ: ರಾಜೀನಾಮೆಗೆ ಪ್ರಜ್ವಲ್ ನಿರ್ಧಾರ

|
Google Oneindia Kannada News

Recommended Video

ರಾಜೀನಾಮೆಗೆ ಪ್ರಜ್ವಲ್ ರೇವಣ್ಣ ನಿರ್ಧಾರ..!

ಹಾಸನ, ಮೇ 24: ನಾಟಕೀಯ ಬೆಳವಣಿಗೆಯೊಂದರಲ್ಲಿ ಹಾಸನದಲ್ಲಿ ನೂತನವಾಗಿ ಚುನಾಯಿತರಾಗಿದ್ದ ಜೆಡಿಎಸ್ ಸಂಸದ ಪ್ರಜ್ವಲ್, ಫಲಿತಾಂಶದ ಮರುದಿನವೇ ರಾಜೀನಾಮೆಗೆ ಮುಂದಾಗಿದ್ದಾರೆ.

ತಾತ, ಮಾಜಿ ಪ್ರಧಾನಿ ದೇವೇಗೌಡ ಅವರ ಸೋಲಿನಿಂದ ತೀವ್ರ ನೋವಾಗಿದೆ. ಹೀಗಾಗಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.

ಚೊಚ್ಚಲ ಪ್ರಯತ್ನದಲ್ಲೇ ಸಂಸತ್ತಿಗೆ ಆಯ್ಕೆಯಾದ ದೇವೇಗೌಡರ ಮೊಮ್ಮಗ ಚೊಚ್ಚಲ ಪ್ರಯತ್ನದಲ್ಲೇ ಸಂಸತ್ತಿಗೆ ಆಯ್ಕೆಯಾದ ದೇವೇಗೌಡರ ಮೊಮ್ಮಗ

ಈ ಮೂಲಕ ಪ್ರಜ್ವಲ್ ಅವರು ತಮಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ದೇಚೇಗೌಡರಿಗಾಗಿ ತಮ್ಮ ಕ್ಷೇತ್ರವನ್ನು ತ್ಯಾಗ ಮಾಡಲು ಮುಂದಾಗಿದ್ದಾರೆ.

ತಮ್ಮ ರಾಜೀನಾಮೆ ಕುರಿತಂತೆ ತಂದೆ ಎಚ್.ಡಿ. ರೇವಣ್ಣ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿಲ್ಲ. ಕುಟುಂಬದವರಿಂದ ನನ್ನ ಮೇಲೆ ಯಾವುದೇ ಒತ್ತಡ ಬಂದಿಲ್ಲ. ಯಾರಿಗೂ ಈ ಬಗ್ಗೆ ಕೇಳಿಲ್ಲ. ನನ್ನ ಮನಸಿನಲ್ಲಿರುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಕಾಂಗ್ರೆಸ್ ಮತ್ತು ಜೆಡಿಎಸ್ ಹಿರಿಯ ನಾಯಕರೊಂದಿಗೆ ಚರ್ಚಿಸಿ ಎಲ್ಲರೂ ಹೋಗಿ ದೇವೇಗೌಡರ ಮನವೊಲಿಸಲಾಗುವುದು ಎಂದು ಪ್ರಜ್ವಲ್ ತಿಳಿಸಿದ್ದಾರೆ.

ಗೆದ್ದರೂ ಅನರ್ಹರಾಗುತ್ತಾರಾ? ಪ್ರಜ್ವಲ್ ರೇವಣ್ಣ ತಾತ್ಕಾಲಿಕ ಎಂಪಿ?ಗೆದ್ದರೂ ಅನರ್ಹರಾಗುತ್ತಾರಾ? ಪ್ರಜ್ವಲ್ ರೇವಣ್ಣ ತಾತ್ಕಾಲಿಕ ಎಂಪಿ?

ಹೋರಾಟವೇ ಜೀವನ ಎಂದುಕೊಂಡಿದ್ದ ದೇವೇಗೌಡರಿಗೆ ಸೋಲಾಗಿದೆ. ದೇವೇಗೌಡರಿಗೆ ಮತ್ತೆ ಶಕ್ತಿ ತುಂಬುವುದು ನನ್ನ ಉದ್ದೇಶ. ಇದರ ಕುರಿತು ಹಾಸನದ ಜನತೆ ತಪ್ಪು ತಿಳಿಯಬಾರದು ಎಂದು ಅವರು ಹೇಳಿದ್ದಾರೆ.

ರಾಜ್ಯಕ್ಕೆ ದೇವೇಗೌಡರ ಅಗತ್ಯವಿದೆ

ರಾಜ್ಯಕ್ಕೆ ದೇವೇಗೌಡರ ಅಗತ್ಯವಿದೆ

ರಾಜ್ಯಕ್ಕೆ ದೇವೇಗೌಡರ ಅಗತ್ಯವಿದೆ. ಬಡವರು, ರೈತರ ಕೆಲಸಕ್ಕಾಗಿ ದೇವೇಗೌಡರು ಸಂಸತ್‌ನಲ್ಲಿ ಇರಬೇಕಿದೆ. ಅವರಿಗೆ ಹೋರಾಟದ ಶಕ್ತಿ ಇನ್ನೂ ಇದೆ. ಎಲ್ಲರಿಗೂ ಅವರು ಬೇಕಾಗಿದ್ದಾರೆ. ಅವರಿಗೆ ನನ್ನ ಸ್ಥಾನವನ್ನು ಬಿಟ್ಟುಕೊಡುತ್ತೇಬೆ. ನಾವೆಲ್ಲ ಅವರ ಬಗ್ಗೆ ಚರ್ಚೆ ಮಾಡಿದ್ದೇವೆ. ಮಧ್ಯಾಹ್ನ ಒಂದು ಗಂಟೆಗೆ ಅವರನ್ನು ಭೇಟಿ ಮಾಡಿ ಮನವೊಲಿಸಲಾಗುವುದು.

ಸೋಲಿನಿಂದ ಎಲ್ಲರಿಗೂ ಬೇಸರವಾಗಿದೆ

ಸೋಲಿನಿಂದ ಎಲ್ಲರಿಗೂ ಬೇಸರವಾಗಿದೆ

ದೇವೇಗೌಡರ ಸೋಲಿನಿಂದ ಹಾಸನದಲ್ಲಿ ಎಲ್ಲರಿಗೂ ಬೇಸರವಾಗಿದೆ. ಈ ಸೋಲು ಆಕಸ್ಮಿಕ. ತುಮಕೂರಿನಲ್ಲಿಯೂ ಬೇಸರವಿದೆ. ಸಂಸತ್ ಚುನಾವಣೆಯಲ್ಲಿ ಹನ್ನೊಂದು ಸಾವಿರದ ಸೋಲು ದೊಡ್ಡ ಅಂತರವೇನಲ್ಲ. ತುಮಕೂರಿನ ಜನತೆ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಇದು ನನ್ನ ಮನಸಿನ ನಿರ್ಧಾರ. ಕೇವಲ ಅಭಿಪ್ರಾಯ ಅಲ್ಲ.

ತುಮಕೂರಿನಲ್ಲಿ ದೊಡ್ಡ ಗೌಡರನ್ನು ಅಡ್ಡಡ್ಡ ಕೆಡವಿದ್ದು ಇವೇ ಯಡವಟ್ಟುಗಳು!ತುಮಕೂರಿನಲ್ಲಿ ದೊಡ್ಡ ಗೌಡರನ್ನು ಅಡ್ಡಡ್ಡ ಕೆಡವಿದ್ದು ಇವೇ ಯಡವಟ್ಟುಗಳು!

ಹಾಸನದಲ್ಲಿ ಸಂತಸ ಮೂಡಿಸುವುದೇ ಉದ್ದೇಶ

ಹಾಸನದಲ್ಲಿ ಸಂತಸ ಮೂಡಿಸುವುದೇ ಉದ್ದೇಶ

ಇದು ನನ್ನ ನಿರ್ಧಾರ. ಅವರ ಮನವೊಲಿಸಿ ಮತ್ತೆ ಹಾಸನಕ್ಕೆ ಕರೆದುಕೊಂಡು ಬಂದು ನಮ್ಮ ಜಿಲ್ಲೆಯ ಜನರಿಗೆ ಮತ್ತೆ ಸಂತಸ ಮೂಡಿಸುವುದು ನನ್ನ ಉದ್ದೇಶ. ಹಾಸನ ಜಿಲ್ಲೆಯ ಜನತೆಗೆ ಅವರ ಮೇಲೆ ಭಾರಿ ವಿಶ್ವಾಸವಿದೆ. ಅವರು ಪಟ್ಟಿರುವ ಶ್ರಮ, ಅವರ ಹೋರಾಟ ಹಾಸನದ ಮನೆ ಮನೆಗೂ ಗೊತ್ತಿದೆ. ಅವರ ಮತ್ತೆ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ.

ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರುಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು

ಇದು ತ್ಯಾಗ ಅಲ್ಲ, ಗೌರವ

ಇದು ತ್ಯಾಗ ಅಲ್ಲ, ಗೌರವ

ನನ್ನ ರಾಜೀನಾಮೆ ನಿರ್ಧಾರ ಯಾವುದೇ ರೀತಿಯ ತ್ಯಾಗ ಅಲ್ಲ. ಇದು ಅವರ ರಾಜಕೀಯ ಜೀವನದಲ್ಲಿ ಮಾಡಿರುವ ಹೋರಾಟಕ್ಕೆ ನಾನು ಮತ್ತು ಪಕ್ಷದ ಹಿರಿಯ ಕಾರ್ಯಕರ್ತರು ನೀಡುತ್ತಿರುವ ಗೌರವ. ಈ ಬಗ್ಗೆ ಅವರ ಮನವೊಲಿಸುವ ವಿಶ್ವಾಸ ಇದೆ. ಮುಖ್ಯಮಂತ್ರಿ ಮುಖಂಡರನ್ನು ಭೇಟಿ ಮಾಡುತ್ತೇನೆ. ಅವರನ್ನು ಒಪ್ಪಿಸುವ ನಂಬಿಕೆ ಇದೆ.

ತುಮಕೂರಿನಲ್ಲಿ ದೇವೇಗೌಡರ ಸೋಲು, ಮೊದಲ ಪ್ರತಿಕ್ರಿಯೆ ತುಮಕೂರಿನಲ್ಲಿ ದೇವೇಗೌಡರ ಸೋಲು, ಮೊದಲ ಪ್ರತಿಕ್ರಿಯೆ

ತುಮಕೂರಿನ ಜನತೆಗೆ ಧನ್ಯವಾದ

ತುಮಕೂರಿನ ಜನತೆಗೆ ಧನ್ಯವಾದ

ಸೋಲು ಗೆಲುವು ಎಲ್ಲ ಪಕ್ಷಕ್ಕೂ, ಎಲ್ಲ ಕಡೆಯೂ ಇರುತ್ತದೆ. ಇಂಥದ್ದೇ ಕಾರಣಕ್ಕೆ ಸೋಲುತ್ತಾರೆ ಎಂದು ಹೇಳಲಾಗದು. ದೇವೇಗೌಡರಿಗೆ ತುಮಕೂರಿನಲ್ಲಿ ಪ್ರಚಾರ ಮಾಡಲು ಸಾಕಷ್ಟು ಸಮಯಾವಕಾಶ ಸಿಗದೇ ಇರವುದು ಕೂಡ ಸೋಲಿಗೆ ಕಾರಣ ಇರಬಹುದು. ಆದರೆ, ತುಮಕೂರು ಜಿಲ್ಲೆಯ ಜನರಿಗೆ ಧನ್ಯವಾದ ಹೇಳುತ್ತೇನೆ. ಅವರು ಐದೂವರೆ ಲಕ್ಷ ಮತ ಕೊಟ್ಟು ಗೌರವ ನೀಡಿದ್ದಾರೆ. ಅವರಿಗೆ ಚಿರಋಣಿ ಆಗಿರುತ್ತೇನೆ ಎಂದು ಪ್ರಜ್ವಲ್ ಹೇಳಿದರು.

English summary
Lok Sabha Election Results: Prajwal Revanna decided to resign to his MP seat. He has decided to sacrifice his seat to HD Devegowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X