• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ ಬಿಜೆಪಿಗೆ 25, ಮೂರು ಸ್ಥಾನ ಹಂಚಿಕೊಂಡ ಇತರರು

|

ಬೆಂಗಳೂರು, ಮೇ 23: ಹದಿನೇಳನೇ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕದಲ್ಲಿ ಬಿಜೆಪಿಗೆ 25 ಸ್ಥಾನಗಳು ಲಭ್ಯವಾಗಿದೆ, ಇನ್ನುಳಿದ ಮೂರು ಸ್ಥಾನವನ್ನು ಇತರರು ಹಂಚಿಕೊಂಡಿದ್ದಾರೆ.

ಏಪ್ರಿಲ್ 18 ಹಾಗೂ 23ರಂದು ಎರಡು ಹಂತದಲ್ಲಿ ನಡೆದ ಚುನಾವಣೆಯನ್ನು ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ರಚಿಸಿಕೊಂಡು ಒಮ್ಮತದ ಅಭ್ಯರ್ಥಿಗಳನ್ನು ಹಾಕಿದ್ದರು.

ಲೋಕಸಭೆ ಚುನಾವಣೆ 2019 ಫಲಿತಾಂಶ LIVE : ಯಾರ ಕೈಗೆ ಭಾರತದ ಲಗಾಮು?

ಬಿಜೆಪಿಯು 2014ರ 17 ಸೀಟುಗಳಿಂದ 20ರ ಗಟಿ ದಾಟುವುದನ್ನು ನಿರೀಕ್ಷಿಸುತ್ತಿದ್ದರು, ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟವು ಸರ್ಕಾರದ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಅರ್ಧದಷ್ಟು ಸೀಟುಗಳನ್ನಾದರೂ ಪಡೆಯುವ ಬಯಕೆಯಲ್ಲಿದ್ದರು ಆದರೆ ಬಿಜೆಪಿಗೆ ನಿರೀಕ್ಷೆಗೂ ಮೀರಿ ಫಲಿತಾಂಶ ಬಂದಿದೆ.

Lok Sabha Election Results 2019 Karnataka Live Updates in Kannada

2014ರಲ್ಲಿ ಬಿಜೆಪಿ 17 ಸೀಟು ಗೆದ್ದಿದ್ದರೆ ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಸೀಟುಗಳನ್ನು ಗೆದ್ದಿತ್ತು ಆಗ ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಈ ಬಾರಿ ರಾಜ್ಯದ 27 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ಸ್ಪರ್ಧೆ ಇದೆ.

ಆದರೆ ಮಂಡ್ಯದಲ್ಲಿ ಮಾತ್ರ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಹಾಗೂ ಮೈತ್ರಿಕೂಟದ ನಿಖಿಕ್ ಕುಮಾರಸ್ವಾಮಿ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಏಪ್ರಿಲ್ 11ರಿಂದ ಮೇ 19ರವರೆಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆದಿತ್ತು.

ಉಡುಪಿ-ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ-ಪ್ರಮೋದ್ ಮಧ್ವರಾಜ್

ಹಾಸನ: ಎ ಮಂಜು-ಪ್ರಜ್ವಲ್ ರೇವಣ್ಣ

ದಕ್ಷಿಣ ಕನ್ನಡ: ನಳಿನ್ ಕುಮಾರ್ ಕಟೀಲ್, ಮಿಥುನ್ ರೈ

ಚಿತ್ರದುರ್ಗ: ಎ ನಾರಾಯಣಸ್ವಾಮಿ, ಬಿಎನ್ ಚಂದ್ರಪ್ಪ

ತುಮಕೂರು: ಜಿಎಸ್ ಬಸವರಾಜು, ಎಚ್‌ಡಿ ದೇವೇಗೌಡರ

ಮಂಡ್ಯ: ಸುಮಲತಾ ಅಂಬರೀಶ್, ನಿಖಿಲ್ ಕುಮಾರಸ್ವಾಮಿ

ಮೈಸೂರು: ಪ್ರತಾಪ್ ಸಿಂಹ, ವಿಜಯಶಂಕರ್

ಚಾಮರಾಜನಗರ: ಶ್ರೀನಿವಾಸ್ ಪ್ರಸಾದ್, ಆರ್ ದ್ರುವನಾರಾಯಣ

ಬೆಂಗಳೂರು ಗ್ರಾಮೀಣ: ಅಶ್ವತ್ಥನಾರಾಯಣ, ಡಿಕೆ ಸುರೇಶ್

ಬೆಂಗಳೂರು ಉತ್ತರ: ಡಿವಿ ಸದಾನಂದ ಗೌಡ, ಕೃಷ್ಣ ಬೈರೇಗೌಡ

ಬೆಂಗಳೂರು ಕೇಂದ್ರ: ಪಿಸಿ ಮೋಹನ್, ರಿಜ್ವಾನ್ ಅರ್ಷದ್

ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ, ಬಿಕೆ ಹರಿಪ್ರಸಾದ್

ಚಿಕ್ಕಬಳ್ಳಾಪುರ: ಬಿಎನ್ ಬಚ್ಚೇಗೌಡ, ಎಂ ವೀರಪ್ಪ ಮೊಯಿಲಿ

ಕೋಲಾರ: ಎಸ್ ಮುನಿಸ್ವಾಮಿ, ಕೆಎಚ್ ಮುನಿಯಪ್ಪ

ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ, ಪ್ರಕಾಶ್ ಹುಕ್ಕೇರಿ

ಬೆಳಗಾವಿ: ಸುರೇಶ್ ಅಂಗಡಿ, ವಿರೂಪಾಕ್ಷಿ ಸಾಧುನ್ನವರ್

ಬಾಗಲಕೋಟೆ: ಪಿಸಿ ಗದ್ದೀಗೌಡರ್, ವೀಣಾ ಕಾಶಪ್ಪನವರ್

ವಿಜಯಪುರ: ರಮೇಶ್ ಜಿಗಜಣಗಿ, ಸುನಿತಾ ಚೌಹಾಣ್

ಕಲಬುರಗಿ: ಉಮೇಶ್ ಜಾಧವ್, ಮಲ್ಲಿಕಾರ್ಜುನ ಖರ್ಗೆ

ರಾಯಚೂರು: ರಾಜಾ ಅಮರೇಶ್ ನಾಯಕ್, ಬಿವಿ ನಾಯಕ್

ಬೀದರ್: ಭಗವಾನ್ ಖೂಬಾ, ಈಶ್ವರ್ ಖಂಡ್ರೆ

ಕೊಪ್ಪಳ: ಸಂಗಣ್ಣ ಕರಡಿ, ರಾಜಶೇಖರ್ ಹಿಟ್ನಾಳ್

ಬಳ್ಳಾರಿ: ದೇವೇಂದ್ರಪ್ಪ, ವಿಎಸ್ ಉಗ್ರಪ್ಪ

ಹಾವೇರಿ: ಶಿವಕುಮಾರ್ ಉದಾಸಿ, ಬಿಆರ್ ಪಾಟೀಲ್

ಧಾರವಾಡ: ಪ್ರಹ್ಲಾದ್ ಜೋಶಿ, ವಿನಯ್ ಕುಲಕರ್ಣಿ

ಉತ್ತರ ಕನ್ನಡ : ಅನಂತ್‌ಕುಮಾರ್ ಹೆಗಡೆ, ಆನಂದ್ ಅಸ್ನೋಟಿಕರ್

ದಾವಣಗೆರೆ: ಜಿಎಂ ಸಿದ್ದೇಶ್ವರ, ಎಚ್‌ಡಿ ಮಂಜಪ್ಪ

ಶಿವಮೊಗ್ಗ: ಬಿವೈ ರಾಘವೇಂದ್ರ, ಮಧು ಬಂಗಾರಪ್ಪ

Newest First Oldest First
11:10 PM, 23 May
ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆ, ಬಿಜೆಪಿ 25 ಕ್ಷೇತ್ರದಲ್ಲಿ ಜಯ, ಕಾಂಗ್ರೆಸ್ 1, ಜೆಡಿಎಸ್ 1 , ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಜಯ.
4:37 PM, 23 May
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಭರ್ಜರಿ ಗೆಲುವು
2:27 PM, 23 May
ಸುಮಲತಾ ಅಂಬರೀಶ್‌ಗೆ 68 ಸಾವಿರ ಮತಗಳಿಂದ ಭಾರಿ ಮುನ್ನಡೆ
1:58 PM, 23 May
ವಿಧಾನಸಭೆ ಉಪ ಚುನಾವಣೆ, ಚಿಂಚೋಳಿಯಲ್ಲಿ ಅವಿನಾಶ್ ಜಾಧವ್ ಗೆಲುವು
1:47 PM, 23 May
ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಗೆಲುವು
1:19 PM, 23 May
ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಗೆಲುವಿನತ್ತ ದಾಪುಗಾಲು
1:00 PM, 23 May
40 ಸಾವಿರ ಮತಗಳಿಂದ ಸುಮಲತಾ ಮುನ್ನಡೆ
12:46 PM, 23 May
ಸುಮಲತಾ 20 ಸಾವಿರ ಮತಗಳಿಂದ ಮುನ್ನಡೆ
12:21 PM, 23 May
ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಗೆಲುವು, ಅಧಿಕೃತ ಘೋಷಣೆಯೊಂದೇ ಬಾಕಿ
12:20 PM, 23 May
ನಿಖಿಲ್ ಕುಮಾರ ಸ್ವಾಮಿ 126027 ಮತಗಳು, ಸುಮಲತಾ ಅಂಬರೀಶ್‌ಗೆ 126718 ಮತ ಲಭ್ಯವಾಗಿದೆ
12:20 PM, 23 May
ನಿಖಿಲ್ ಕುಮಾರ ಸ್ವಾಮಿ 126027 ಮತಗಳು, ಸುಮಲತಾ ಅಂಬರೀಶ್‌ಗೆ 126718 ಮತ ಲಭ್ಯವಾಗಿದೆ
12:19 PM, 23 May
ನಿಖಿಲ್ ಕುಮಾರ ಸ್ವಾಮಿ 126027 ಮತಗಳು, ಸುಮಲತಾ ಅಂಬರೀಶ್‌ಗೆ 126718 ಮತ ಲಭ್ಯವಾಗಿದೆ
12:07 PM, 23 May
ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಗೆಲುವು, ಅಧಿಕೃತ ಘೋಷಣೆ ಬಾಕಿ
11:59 AM, 23 May
ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಗೆಲುವು, ಅಧಿಕೃತ ಘೋಷಣೆಯೊಂದೇ ಬಾಕಿ
11:58 AM, 23 May
ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಗೆಲುವು
11:57 AM, 23 May
ಮಂಡ್ಯದಲ್ಲಿ 2383 ಮತಗಳಿಂದ ಸುಮಲತಾ ಅಂಬರೀಶ್ ಮುನ್ನಡೆ
11:56 AM, 23 May
ಕೋಲಾರದಲ್ಲಿ ಮುನಿಸ್ವಾಮಿ, ಬಳ್ಳಾರಿಯಲ್ಲಿ ದೇವೇಂದ್ರಪ್ಪ ಗೆಲುವು, ಅಧಿಕೃತ ಘೋಷಣೆಯೊಂದೇ ಬಾಕಿ
11:47 AM, 23 May
ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ 1 ಲಕ್ಷ 31 ಮತಗಳಿಂದ ಭಾರಿ ಮುನ್ನಡೆ
11:44 AM, 23 May
ಶಿವಮೊಗ್ಗದಲ್ಲಿ 10ನೇ ಸುತ್ತಿನ ಮತೆಣಿಕೆ ಮುಕ್ತಾಯ, ಬಿವೈ ರಾಘವೇಂದ್ರಗೆ ಭಾರಿ ಮುನ್ನಡೆ
11:43 AM, 23 May
ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಗೆಲುವು, ಅಧಿಕೃತ ಘೋಷಣೆಯೊಂದೇ ಬಾಕಿ
11:34 AM, 23 May
ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಗೆಲುವು
11:33 AM, 23 May
ಉತ್ತರ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ ಗೆಲುವು
11:33 AM, 23 May
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಗೆಲುವು
11:26 AM, 23 May
ತುಮಕೂರಿನಲ್ಲಿ ಎಚ್‌ಡಿ ದೇವೇಗೌಡ ಎದುರು ಜಿಎಸ್ ಬಸವರಾಜು 19 ಸಾವಿರ ಮತಗಳಿಂದ ಮುನ್ನಡೆ
11:17 AM, 23 May
ಮಂಡ್ಯದಲ್ಲಿ 2016 ಮತಗಳಿಂದ ಮುನ್ನಡೆ ಸಾಧಿಸಿದ ಸುಮಲತಾ ಅಂಬರೀಶ್
11:06 AM, 23 May
97200 ಮತಗಳಿಂದ ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲು ಮುನ್ನಡೆ
11:02 AM, 23 May
ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪಗೆ ಮುನ್ನಡೆ
11:01 AM, 23 May
ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ರಿಜ್ವಾನ್ ಅರ್ಷದ್ 20000 ಮತಗಳಿಂದ ಮುನ್ನಡೆ
10:39 AM, 23 May
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ 946 ಮತಗಳಿಂದ ಮುನ್ನಡೆ
10:35 AM, 23 May
ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿಗೆ ಮುನ್ನಡೆ
READ MORE

English summary
Lok Sabha Election Results 2019 Karnataka Live Updates in Kannada, Karnataka had 2 phase voting on April 18 and 23rd Today Election commission is going to announce 28 constituencies winners.The Seven phase Lok sabha elections in India concluded on May 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more