ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರ್ಯಾದೆ ಇದ್ರೆ ಅಧಿಕಾರದಿಂದ ಕೆಳಗಿಳಿಯಿರಿ : ಮೈತ್ರಿಗೆ ಡಿವಿಎಸ್ ಸವಾಲು

|
Google Oneindia Kannada News

Recommended Video

LIVE : Lok Sabha Election results Updates 2019

ಬೆಂಗಳೂರು, ಮೇ 23 : ಕರ್ನಾಟಕದ ಮೈತ್ರಿ (ಜೆಡಿಎಸ್-ಕಾಂಗ್ರೆಸ್) ಸರಕಾರಕ್ಕೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದ್ದರೆ ಜನಾದೇಶಕ್ಕೆ ಮನ್ನಣೆ ನೀಡಿ ಅಧಿಕಾರ ಬಿಟ್ಟು ಕೆಳಗಿಳಿಯಲಿ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಕುಮಾರಸ್ವಾಮಿ ಸರಕಾರಕ್ಕೆ ಸವಾಲು ಹಾಕಿದ್ದಾರೆ.

ಮೈತ್ರಿ ನಾಯಕರೇ ನಿಮ್ಮ ಬಳಿ ಯಾವುದಾದರೂ ಮುಖ ಉಳಿದಿದೆಯಾ? ದುರಹಂಕಾರ ಮಣ್ಣು ಪಾಲಾಯಿತು, ಬಿಳಿ ಕಾಲರ್ ಸುಕ್ಕಾಯಿತು ಎಂದು ಬೆಂಗಳೂರು ಉತ್ತರ ಕ್ಷೇತ್ರದಿಂದ ಗೆಲುವಿನತ್ತ ಸಾಗಿರುವ ಸದಾನಂದ ಗೌಡ ಅವರು ಟ್ವೀಟ್ ಮಾಡಿದ್ದಾರೆ.

ಅಮೇಥಿ ಲೋಕಸಭಾ ಫಲಿತಾಂಶ : ಸ್ಮೃತಿ ವಿರುದ್ಧ ಸೋಲಿನ ಹಾದಿಯಲ್ಲಿ ರಾಹುಲ್ಅಮೇಥಿ ಲೋಕಸಭಾ ಫಲಿತಾಂಶ : ಸ್ಮೃತಿ ವಿರುದ್ಧ ಸೋಲಿನ ಹಾದಿಯಲ್ಲಿ ರಾಹುಲ್

ದೇಶದಲ್ಲಿ ಜನ ಬಿಜೆಪಿ ಪರ ಇದ್ದಾರೆ. ಕೇಂದ್ರದಲ್ಲಿ ಯಾವುದೇ ಹಗರಣ ಮಾಡದೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ದೇಶದಲ್ಲಿ ಬಿಜೆಪಿ ಅಲೆ ಸಾಕಷ್ಟಿದೆ ಎನ್ನುವುದು ಈ ದಿಗ್ವಿಜಯದಿಂದ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

Lok Sabha Election Results 2019 : DVS challenges coalition govt to step down

ಇಡೀ ದೇಶದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಶ್ರಮ ಫಲಿಸಿದೆ. ಇನ್ನು ರಾಜ್ಯದಲ್ಲಿ ಎಲ್ಲಾ ನಾಯಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇದು ನಾಯಕರ ಶ್ರಮ ಮಾತ್ರವಲ್ಲ ಕಾರ್ಯಕರ್ತರ ಶ್ರಮದ ಫಲ. ಮಾಧ್ಯಮಗಳು ಸಹಾ ಒಳ್ಳೆಯ ಸಹಕಾರ ನೀಡಿವೆ. ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಅವರು ನುಡಿದರು.

ಬೆಂಗಳೂರು ಉತ್ತರದಿಂದ ಎರಡನೇ ಬಾರಿ ಸ್ಪರ್ಧಿಸಿರುವ ಡಿವಿ ಸದಾನಂದ ಗೌಡ ಅವರು, ಕಾಂಗ್ರೆಸ್ ನಾಯಕ ಕೃಷ್ಣ ಬೈರೇ ಗೌಡ ಅವರ ವಿರುದ್ಧ ಸ್ಪರ್ಧಿಸಿದ್ದಾರೆ. ಸದಾನಂದ ಗೌಡ ಅವರ ಗೆಲುವು ಹೆಚ್ಚೂಕಡಿಮೆ ನಿಶ್ಚಿತವಾಗಿದೆ.

English summary
Lok Sabha Election Results 2019 : DV Sadananda Gowda, who has contested from Bangalore North, has challenged coalition government in Karnataka to step down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X