ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ನಲ್ಲಿ ಧರಂಸಿಂಗ್‌ಗೆ ಕೈಕೊಟ್ಟ ಮತದಾರ

By Ashwath
|
Google Oneindia Kannada News

ಬೀದರ್‌,ಮೇ.16: ಎರಡನೇ ಬಾರಿ ಸಂಸತ್‌ನ ಪ್ರವೇಶದ ಕನಸು ಕಾಣುತ್ತಿದ್ದ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್‌ ಕನಸು ನುಚ್ಚು ನೂರಾಗಿದೆ. ಬೀದರ್‌ನ ಜನತೆ ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಕೈ ಹಿಡಿಯುವ ಮೂಲಕ ಕಾಂಗ್ರೆಸ್‌ಗೆ ಕೈ ಕೊಟ್ಟಿದ್ದಾರೆ.

ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ 92,222 ಮತಗಳಿಂದ ಧರಂ ಸಿಂಗ್‌ರನ್ನು ಸೋಲಿಸುವ ಮೂಲಕ ಪ್ರಥಮ ಬಾರಿಗೆ ಸಂಸತ್‌ಗೆ ಆಯ್ಕೆಯಾಗಿದ್ದಾರೆ.

ಬೀದರ್‌‌ನಲ್ಲಿ ನರೇಂದ್ರ ಮೋದಿ ಮಾಡಿದ ಚುನಾವಣಾ ಪ್ರಚಾರ ಭಾಷಣ ಭಗವಂತ್ ಖೂಬಾ ಜಯಗಳಿಸಲು ನೆರವಾಗಿದೆ. ಆರಂಭದಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ಗೊಂದಲ ಮೂಡಿದ್ದರೂ ಬೀದರ್‌ ಜನತೆ ಐದನೇ ಬಾರಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ.

2009ರ ಲೋಕಸಭಾ ಚುನಾವಣೆಯಲ್ಲಿ 39,619 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ‌ ಗುರುಪಾದಪ್ಪ ನಾಗಮಾರಪಲ್ಲಿ ಸೋಲಿಸಿದ್ದ ಧರಂಸಿಂಗ್‌ ಈ ಬಾರಿ 92,222 ಮತಗಳ ಅಂತರದಿಂದ ಸೋತಿದ್ದಾರೆ. 2009ರ ಚುನಾವಣೆಯಲ್ಲಿ ಶೇ.53ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.60.15ರಷ್ಟು ಮತದಾನ ಬೀದರ್‌ನಲ್ಲಾಗಿತ್ತು.

Bhagwant Khuba
ಬೀದರ್‌ ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ಭಗವಂತ್ ಖೂಬಾ 1 ಬಿಜೆಪಿ 4,59,290
ಧರಂ ಸಿಂಗ್‌
2 ಕಾಂಗ್ರೆಸ್ 3,67,068
ಬಂಡೆಪ್ಪ ಕಾಶಂಪೂರ 3 ಜೆಡಿಎಸ್ 58,728
ಶಂಕರ್ ಭಯ್ಯ 4 ಬಿಎಸ್‌ಪಿ 13,079
English summary
BJP candidate, Bhagwant Khuba - wins Bidar. He defeated Dharam Singh Congress. Bhagwant Khuba secured votes 554417, while Dharam Singh got 4,78,557.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X