ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕ ಅದಾಲತ್‌ನಲ್ಲಿ ದಾಖಲೆಯ 7.65 ಲಕ್ಷ ಕೇಸ್ ಇತ್ಯರ್ಥ!

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಜೂ.27: ರಾಜ್ಯಾದ್ಯಂತ ನಡೆದ ಬೃಹತ್ ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ ದಾಖಲೆಯ 7.65 ಲಕ್ಷ ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.

ಈವರೆಗೆ ಗರಿಷ್ಠ ಎಂದರೆ 5.6 ಲಕ್ಷ ಗರಿಷ್ಠ ಕೇಸ್ ಇತ್ಯರ್ಥವಾಗಿದ್ದವು, ಆದರೆ ಇದೇ ಮೊದಲ ಬಾರಿಗೆ 7 ಲಕ್ಷ ಕೇಸ್ ಗಡಿ ದಾಟಿದೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸುಮಾರು 508 ಕೋಟಿ ಗೂ ಅಧಿಕ ಹಣ ಉಳಿತಾಯ ಮಾಡಿದಂತಾಗಿದೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ರಾಷ್ಟ್ರೀಯ ಲೋಕ್‌ ಅದಾಲತ್‌ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹೈಕೋರ್ಟ್‌ ಪೀಠಗಳಲ್ಲಿ 20 ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ 964 ಕಲಾಪಗಳನ್ನು ನಡೆಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ 2.64 ಲಕ್ಷಕ್ಕೂ ಹೆಚ್ಚು ಹಾಗೂ ವ್ಯಾಜ್ಯ ಪೂರ್ವ 5 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಸೇರಿ ಒಟ್ಟಾರೆ ಒಂದೇ ದಿನದಲ್ಲಿ(ಕಳೆದ ಶನಿವಾರ ಜೂನ್ 26,2022) 7.65 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಚೆಕ್ ಬೌನ್ಸ್ ಪ್ರಕರಣಗಳ ಪರಿಹಾರ ನಿಗದಿಗೆ ವಿವೇಚನೆ ಬಳಸಲು ಹೈಕೋರ್ಟ್ ತಾಕೀತು ಚೆಕ್ ಬೌನ್ಸ್ ಪ್ರಕರಣಗಳ ಪರಿಹಾರ ನಿಗದಿಗೆ ವಿವೇಚನೆ ಬಳಸಲು ಹೈಕೋರ್ಟ್ ತಾಕೀತು

ಇಷ್ಟು ಪ್ರಕರಣಗಳನ್ನು ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳ್ಳಬೇಕಿದ್ದರೆ ಸಾವಿರಕ್ಕೂ ಹೆಚ್ಚು ನ್ಯಾಯಾಧೀಶರಿಗೆ ಒಂದು ವರ್ಷ ಅವಧಿಗೆ ಹಿಡಿಯುತ್ತಿತ್ತು. ಅಲ್ಲದೇ ಸಾವಿರಾರು ಕೋಟಿಗೂ ಹೆಚ್ಚು ಹಣವನ್ನು ದಂಡ ರೂಪದಲ್ಲಿ ಸಂಗ್ರಹಿಸಲಾಗಿದೆ, ಪರಿಹಾರ ರೂಪದಲ್ಲಿ ಸಂತ್ರಸ್ತರಿಗೆ ನೀಡಲಾಗಿದೆ ಎಂದರು.

Lok Adalat has disposed 7.6lakh cases: Highest ever cases disposed in a single day

ಒಂದಾದ 107 ದಂಪತಿ: ವೈವಾಹಿಕ ಪ್ರಕರಣಗಳನ್ನು ಹೆಚ್ಚು ಇತ್ಯರ್ಥಪಡಿಸುವಂತೆ ಜಿಲ್ಲಾಕಾನೂನು ಸೇವಾ ಪ್ರಾಧಿಕಾರಗಳಿಗೆ ಉತ್ತೇಜಿಸಲಾಗಿತ್ತು. ಅದರಂತೆ, ಈ ಬಾರಿಯ ಲೋಕ್‌ ಅದಾಲತ್‌ನಲ್ಲಿ 1,128 ವೈವಾಹಿಕ ಪ್ರಕರಣ ಇತ್ಯರ್ಥಪಡಿಸಲಾಗಿದ್ದು, 107ಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ ದಂಪತಿ ಪರಸ್ಪರ ರಾಜಿ-ಸಂಧಾನದ ಮೂಲಕ ಪುನಃ ಒಂದಾಗಿದ್ದಾರೆ.

ದೂರು ಸಲ್ಲಿಸಲು 45 ದಿನ ವಿಳಂಬ, ಕೇಸಿನ ಎಫ್‌ಐಆರ್ ರದ್ದು ದೂರು ಸಲ್ಲಿಸಲು 45 ದಿನ ವಿಳಂಬ, ಕೇಸಿನ ಎಫ್‌ಐಆರ್ ರದ್ದು

ಮೈಸೂರು, ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ 50 ವರ್ಷಗಳಿಂದ ಪ್ರತ್ಯೇಕವಾಗಿದ್ದ 85 ವರ್ಷದ ಪತಿ ಹಾಗೂ 80 ವರ್ಷದ ಪತ್ನಿ ಪುನಃ ಒಂದಾಗಿರುವುದು, ಕೋಲಾರದ 35 ವರ್ಷಗಳ ಹಳೆಯ ವ್ಯಾಜ್ಯ ಇತ್ಯರ್ಥ ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.

ಲೋಕ್ ಅದಾಲತ್‌ನ ಹೈಲೈಟ್ಸ್

  • 2.23 ಲಕ್ಷ ಟ್ರಾಫಿಕ್‌ ಚಲನ್‌ ಪ್ರಕರಣ ಇತ್ಯರ್ಥಪಡಿಸಿ 22.36 ಕೋಟಿ ರೂ. ದಂಡ ಸಂಗ್ರಹ: ಒಟ್ಟು 1.46 ಲಕ್ಷ ಕಂದಾಯ ಪ್ರಕರಣ ಇತ್ಯರ್ಥವಾಗಿದೆ.
  • 5,585 ಬ್ಯಾಂಕ್‌ ವಸೂಲಾತಿ ಪ್ರಕರಣಗಳನ್ನು ಇತ್ಯರ್ಥಪಡಿಸಿ 36.24 ಕೋಟಿ ಮೊತ್ತ ವಸೂಲು ಮಾಡಲಾಗಿದೆ.
  • 11,842 ವಿದ್ಯುತ್‌ ಬಿಲ್ಲಿನ ಪ್ರಕರಣಗಳಲ್ಲಿ 3.10 ಕೋಟಿ ರೂ. ಹಾಗೂ 99,866 ನೀರಿನ ಬಿಲ್‌ ವಸೂಲಿ ಪ್ರಕರಣಗಳಲ್ಲಿ 25.04 ಕೋಟಿ ರೂ. ವಸೂಲು.
  • ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ) ಮುಂದೆ ಬಾಕಿ ಇದ್ದ 222 ಪ್ರಕರಣಗಳನ್ನು ಇತ್ಯರ್ಥಪಡಿಸಿ 5.85 ಕೋಟಿ ರೂ. ಪರಿಹಾರ.
  • ಮಾಹಿತಿ ಹಕ್ಕು ಕಾಯ್ದೆಯಡಿಯ 97 ಪ್ರಕರಣಗಳನ್ನು ಇತ್ಯರ್ಥ.

    ಪತಿ ವಿರುದ್ಧ ಆಧಾರರಹಿತ ನಪುಂಸಕ ಆರೋಪವೂ ಮಾನಸಿಕ ಕ್ರೌರ್ಯ!

  • ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ 194 ಪ್ರಕರಣಗಳನ್ನು ಇತ್ಯರ್ಥಪಡಿಸಿ 6.17 ಕೋಟಿ ರೂ. ಪರಿಹಾರ ವಿತರಣೆ.
  • 4,076 ಮೋಟಾರು ವಾಹನ ಅಪಘಾತ ಪ್ರಕರಣ ಒಟ್ಟು 184 ಕೋಟಿ ರೂ. ಪರಿಹಾರ ವಿತರಣೆ.
  • 226 ವಾಣಿಜ್ಯ ದಾವೆಗಳನ್ನು ಇತ್ಯರ್ಥಪಡಿಸಿ 7.96 ಕೋಟಿ ರೂ. ಪರಿಹಾರ ಪಾವತಿ.
  • ಹೈಕೋರ್ಟ್‌ನಲ್ಲಿದ್ದ ಮೋಟಾರು ವಾಹನ ಕಾಯ್ದೆಯಡಿಯ ಪ್ರಕರಣವೊಂದರಲ್ಲಿ ಅತಿ ಹೆಚ್ಚು 1.97 ಕೋಟಿ ರೂ. ಪರಿಹಾರ.
  • ಲಘು ವ್ಯಾಜ್ಯಗಳ ನ್ಯಾಯಾಲಯದ ಪ್ರಕರಣವೊಂದರಲ್ಲಿ 2.03 ಕೋಟಿ ರೂ. ಪರಿಹಾರ.
  • ಚೆಕ್‌ ಬೌನ್ಸ್‌ ಪ್ರಕರಣವೊಂದರಲ್ಲಿ7.75 ಕೋಟಿ ರೂ. ಮೊತ್ತಕ್ಕೆ ಇತ್ಯರ್ಥ.
English summary
Lok Adalat has disposed 7.6lakh cases: Highest ever cases disposed in a single day in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X