ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್ ನಷ್ಟವನ್ನು ರೈತರಿಗೆ ತುಂಬಿಕೊಡಿ; ರೈತ ಸಂಘ ಆಗ್ರಹ

|
Google Oneindia Kannada News

ಬೆಂಗಳೂರು, ಮೇ 28; ಲಾಕ್‌ಡೌನ್‌ನಿಂದಾಗಿ ಕೃಷಿ ಉತ್ಪನ್ನಗಳು ನಷ್ಟವಾಗಿದೆ. ಈ ಬಗ್ಗೆ ವರದಿ ಮಂಡಿಸಿ ರೈತರಿಗೆ ಪರಿಹಾರವನ್ನು ಸರ್ಕಾರ ತುಂಬಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.

ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಲಾಕ್‌ಡೌನ್ ಪರಿಣಾಮ ರೈತರು ಬೆಳೆದಿರುವ ಕೃಷಿ ಉತ್ಪನ್ನಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಕೆಲವು ಕಡೆ ಮಾರುಕಟ್ಟೆ ಇಲ್ಲದೇ ಸಂಪೂರ್ಣ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ಕರಾಳ ದಿನ: ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ 6 ತಿಂಗಳುಕರಾಳ ದಿನ: ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ 6 ತಿಂಗಳು

ಸರ್ಕಾರ ನಷ್ಟ ಪರಿಹಾರವನ್ನು ರೈತರಿಗೆ ತುಂಬಿ ಕೊಡಬೇಕು. ಸರ್ಕಾರ ಸಮಿತಿ ನೇಮಿಸಿ, ವರದಿ ಪಡೆದು ರೈತರಿಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೆೈತ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

ವಾರದಲ್ಲಿ ಒಂದೆರಡು ದಿನ ಹಾಲು ಖರೀದಿ ಸ್ಥಗಿತ? ವಾರದಲ್ಲಿ ಒಂದೆರಡು ದಿನ ಹಾಲು ಖರೀದಿ ಸ್ಥಗಿತ?

 Lockdown Loss Govt Should Announce Compensation For Farmers

ಸಂಘವು ಸಂಗ್ರಹಿಸಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ರೈತರಿಗೆ 1 ಲಕ್ಷ ಕೋಟಿ ನಷ್ಟವಾಗಿದೆ. ಮೈಸೂರು ಜಿಲ್ಲೆಯೊಂದರಲ್ಲೇ ಬಾಳೆ, ಹೂ, ಟೊಮೆಟೊ, ಭತ್ತ ಮತ್ತು ತರಕಾರಿ ಉತ್ಪನ್ನಗಳಿಗೆ 1600 ಕೋಟಿ ನಷ್ಟವಾಗಿದೆ ಎಂದು ರೈತ ಸಂಘ ಹೇಳಿದೆ.

ದಾಳಿಂಬೆ, ಪಪ್ಪಾಯಿ ಬೆಳೆದು ಸಂಕಷ್ಟಕ್ಕೆ ಸಿಲುಕಿದ ರೈತ ದಾಳಿಂಬೆ, ಪಪ್ಪಾಯಿ ಬೆಳೆದು ಸಂಕಷ್ಟಕ್ಕೆ ಸಿಲುಕಿದ ರೈತ

ರಾಜ್ಯದ ಬೆೇರೆ-ಬೆೇರೆ ಜಿಲ್ಲೆಗಳಲ್ಲಿಯೂ ಹಣ್ಣು, ತರಕಾರಿ, ಹೂ, ಅರಿಶಿಣ, ಶುಾಂಠಿ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದು ಮಾರುಕಟ್ಟೆ ಇಲ್ಲವಾಗಿದೆ. ಈಗಿನ ವರದಿ ಪ್ರಕಾರ ಸುಮಾರು 1 ಲಕ್ಷ ಕೋಟಿ ನಷ್ಟವನ್ನು ರೈತರು ಅನುಭವಿಸುತ್ತಿದ್ದಾರೆ.

ಭತ್ತ ಖರೀದಿ ಕೇಂದ್ರ; ಭತ್ತದ ಕಟಾವು ಆಗಿದೆ, ಕೂಡಲೆೇ ಸರ್ಕಾರ ಭತ್ತ ಬೆಳೆಯುವ ಎಲ್ಲಾ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಲ್ಲಿ ಸಂಪೂರ್ಣ ಭತ್ತವನ್ನು ಖರೀದಿ ಮಾಡಬೇಕು ಎಂದು ರೈತ ಸಂಘ ಒತ್ತಾಯಿಸಿದೆ.

ಈಗಾಗಲೇ ಕೇಂದ್ರಗಳ ಮೂಲಕ ಖರೀದಿ ಮಾಡಿರುವ ಭತ್ತ, ರಾಗಿ, ಜೋಳ ಈ ಉತ್ಪನ್ನಗಳ ಹಣವನ್ನು ರೈತರ ಬ್ಯಾಂಕ್ ಖಾತೆಗೆಗ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

Recommended Video

UT Khader Exclusive Interview with lavanya | ಜನ BJP ಅವರಿಗೆ ಬುದ್ಧಿ ಕಲಿಸುತ್ತಾರೆ! | Oneindia Kannada

ಹಾಲು ಖರೀದಿ ನಿಲ್ಲಿಸಬೇಡಿ; ಹಾಲನ್ನು ಮಾರಾಟ ಮಾಡದೇ ಬೀದಿಗೆ ಸುರಿಯಲು ಸಾಧ್ಯವಿಲ್ಲ. ಹೆಚ್ಚಿನ ಹಾಲು ಬರುತ್ತಿದೆ, ಮಾರಾಟ ಕಡಿಮಯಾಗಿದೆ ಎಂಬ ನೆಪ ಹೆೇಳಿ ಖರೀದಿಯನ್ನು ನಿಲ್ಲಿಸಲು ಚಿಂತಿಸುತ್ತಿರುವ ಕೆಎಂಎಫ್ ಆಲೋಚನೆ ಸರಿಯಲ್ಲ ಎಂದು ರೈತ ಸಂಘ ಹೇಳಿದೆ.

English summary
Karnataka rajya raitha sangha urged the Karnataka govt to announce compensation for farmers who suffer the loss due to lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X