ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಯರ್ ಕೇಳೋವರೆ ಇಲ್ಲ, ಕಂಟ್ರಿ ಸಾರಾಯಿಯೇ ಎಲ್ಲಾ!

|
Google Oneindia Kannada News

ಬೆಂಗಳೂರು, ಮೇ 22: ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ತಂದು ಕೊಡುವ ಅಬಕಾರಿ ಇಲಾಖೆ ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಜಾರಿದೆ. 48 ದಿನ ಮದ್ಯ ಮಾರಾಟಕ್ಕೆ ಸಂಪೂರ್ಣ ತಡೆ ನೀಡಿದ್ದರಿಂದ ಆದಾಯಕ್ಕೆ ಕತ್ತರಿ ಬಿದ್ದಿದೆ.

ಬೊಕ್ಕಸಕ್ಕೆ ಹಣ ಹರಿದು ಬರಲಿ ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಕೆಲವು ಷರತ್ತುಗಳ ಮೇಲೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ, ಬಿಯರ್ ಮಾರಾಟ ಸಂಪೂರ್ಣ ಕುಸಿದಿರುವುದಾಗಿ ಅಬಕಾರಿ ಇಲಾಖೆ ಹೇಳಿದೆ.

ಬೆಂಗಳೂರಿಗರೇ ಚಿಯರ್ಸ್ ವಿತ್ ಬಿಯರ್: ಕಂಡೀಷನ್ಸ್‌ ಅಪ್ಲೈ ಬೆಂಗಳೂರಿಗರೇ ಚಿಯರ್ಸ್ ವಿತ್ ಬಿಯರ್: ಕಂಡೀಷನ್ಸ್‌ ಅಪ್ಲೈ

ಕೊರೊನಾ ಹಾವಳಿಯಿಂದ ರಾಜ್ಯದಲ್ಲಿ ಬಿಯರ್ ಮಾರಾಟ ಶೇ 69 ರಷ್ಟು ಕುಸಿತ ಕಂಡಿದೆ.

ಕೇವಲ 7.76 ಲಕ್ಷ ಬಿಯರ್ ಬಾಕ್ಸ್ ಮಾರಾಟ

ಕೇವಲ 7.76 ಲಕ್ಷ ಬಿಯರ್ ಬಾಕ್ಸ್ ಮಾರಾಟ

ಲಾಕ್‌ಡೌನ್ ನಿಂದ ಜನ ಮನೆಯಲ್ಲಿದ್ದಾರೆ. ಬಾರ್, ಪಬ್‌ಗಳು ಮುಚ್ಚಿವೆ. ಇದರಿಂದ ಬಿಯರ್ ಪ್ರಿಯರು ಬಿಯರ್‌ನಿಂದ ದೂರ ಹೋದಂತಾಗಿದೆ. ಕಳೆದ ವರ್ಷದ ಮೇ 1 ರಿಂದ 20 ರವರೆಗೆ 21.31 ಲಕ್ಷ ಬಿಯರ್ ಬಾಕ್ಸ (ಕೇಸ್) ಮಾರಾಟವಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ ಕೇವಲ 7.76 ಲಕ್ಷ ಬಿಯರ್ ಬಾಕ್ಸ್ ಮಾರಾಟವಾಗಿವೆ.

ಕಾರಣ ಏನು?

ಕಾರಣ ಏನು?

ಬಿಯರ್ ಮಾರಾಟದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಇಳಿಕೆ ಕಾಣುವುದಕ್ಕೆ ಕೊರೊನಾ ಲಾಕ್‌ಡೌನ್ ಬಹುಮುಖ್ಯ ಕಾರಣವಾಗಿದೆ. ಬಾರ್ ರೆಸ್ಟೊರಂಟ್‌ ಹಾಗೂ ಪಬ್ ಗಳು ಮುಚ್ಚಿರುವುದರಿಂದ ಬಿಯರ್ ಪ್ರಿಯರು ಬಿಯರ್‌ನಿಂದ ದೂರ ಉಳಿಯುವಂತಾಗಿದೆ. ಅಲ್ಲದೇ, ಬಿಯರ್ ದರವೂ ಹೆಚ್ಚಳವಾಗಿರುವುದು ಒಂದು ಕಾರಣವಾಗಿದೆ. ದೇಶಿ ಮದ್ಯವೇ ಜಾಸ್ತಿ ಮಾರಾಟವಾಗುತ್ತಿದೆ.

ಅವಧಿ ಮೀರಿದ ಬಿಯರ್‌ಗಳನ್ನು ನಾಶಪಡಿಸಲೇಬೇಕಾಗುತ್ತದೆ

ಅವಧಿ ಮೀರಿದ ಬಿಯರ್‌ಗಳನ್ನು ನಾಶಪಡಿಸಲೇಬೇಕಾಗುತ್ತದೆ

ಲಾಕ್‌ಡೌನ್ ನಿಂದ ಮದ್ಯ ಮಾರಾಟಕ್ಕೆ 48 ದಿನ ಬ್ರೇಕ್ ಬಿದ್ದಿತ್ತು. ಹೀಗಾಗಿ 3.2 ಲಕ್ಷ ಲೀಟರ್ ಬಿಯರ್ ಉಗ್ರಾಣಗಳಲ್ಲಿ ಶೇಕರಿಸಿಡಲಾಗಿತ್ತು. ಸದ್ಯ ಬಿಯರ್ ಹೆಚ್ಚು ಮಾರಾಟವಾಗುತ್ತಿಲ್ಲವಾದ್ದರಿಂದ ಅವಧಿ ಮೀರಿದ ಬಿಯರ್‌ಗಳನ್ನು ನಾಶಪಡಿಸಲೇಬೇಕಾಗುತ್ತದೆ. ಬಿಯರ್ ಬಾಟಲ್‌ ಅವಧಿ ಆರು ತಿಂಗಳು ಮಾತ್ರ ಆಗಿರುತ್ತದೆ.

40 ಕೋಟಿ ರುಪಾಯಿಯ ಬಿಯರ್ ನಾಶ

40 ಕೋಟಿ ರುಪಾಯಿಯ ಬಿಯರ್ ನಾಶ

ಕಳೆದ ವರ್ಷ ಸುಮಾರು 40 ಕೋಟಿ ರುಪಾಯಿಯ ಬಿಯರ್ ನಾಶ ಪಡಿಸಲಾಗಿತ್ತು. ಈ ವರ್ಷ ಇದು ಇನ್ನೂ ಹೆಚ್ಚಾಗುವ ಸಂಭವವಿದೆ. ಲಾಕ್‌ಡೌನ್ ಪರಿಣಾಮವಾಗಿ ಮಾರಾಟವಾಗದೇ ಉಳಿದಿರುವ ಬಿಯರ್‌ ಅವಧಿ ಮುಗಿಯುತ್ತಾ ಬರುತ್ತಿದೆ.

English summary
Lockdown Effect: 69 Per Cent Decreased Beer Sale In Karnataka. rvenue also Decreased for excise department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X