ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಜ್ಯ ಸಾರಿಗೆಗೆ ಅವಕಾಶ, ಅಪಾಯ ಕಟ್ಟಿಟ್ಟ ಬುತ್ತಿ

|
Google Oneindia Kannada News

ಬೆಂಗಳೂರು, ಮೇ 18: ಕೊರೊನಾವೈರಸ್ ಸೋಂಕು ಹರಡದಂತೆ ಮತ್ತೊಂದು ಅವಧಿಗೆ ಲಾಕ್ಡೌನ್ ವಿಸ್ತರಿಸಲಾಗಿದೆ. ಮೇ 18ರಿಂದ ಜಾರಿಗೆ ಬರುವಂತೆ ಲಾಕ್ಡೌನ್ 4.0 ಮಾರ್ಗಸೂಚಿಯನ್ನು ಕೇಂದ್ರ ಗೃಹ ಸಚಿವಾಲಯ ನೀಡಿದೆ. ಇದರಲ್ಲಿ ಅಂತಾರಾಜ್ಯ ಸಾರಿಗೆ ಸಂಪರ್ಕಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ಈ ಬಗ್ಗೆ ಸಂಬಂಧಪಟ್ಟ ರಾಜ್ಯಗಳು ನಿರ್ಧಾರ ಕೈಗೊಳ್ಳಬಹುದಾಗಿದೆ.

ಆದರೆ, ಅಂತಾರಾಜ್ಯ ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆಗೆ ಅವಕಾಶ ಕೊಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಮಾತುಗಳು ಕೇಳಿ ಬಂದಿವೆ. ರಾಜ್ಯದಲ್ಲಿ ಒಂದೂ ಹಸಿರು ಜಿಲ್ಲೆಯಾಗಿ ಉಳಿಯೋದು ಅನುಮಾನ ಕಾಡುತ್ತಿದೆ.

ಲಾಕ್ಡೌನ್ : ಕಾರ್ಮಿಕ, ಪ್ರವಾಸಿಗ, ವಿದ್ಯಾರ್ಥಿಗಳ ನೆರವಿಗೆ ಸೇವಾ ಸಿಂಧು ಲಾಕ್ಡೌನ್ : ಕಾರ್ಮಿಕ, ಪ್ರವಾಸಿಗ, ವಿದ್ಯಾರ್ಥಿಗಳ ನೆರವಿಗೆ ಸೇವಾ ಸಿಂಧು

ಲಾಕ್ಡೌನ್ 2.0 ಮುಗಿಯುತ್ತಿದ್ದಂತೆ ಕರ್ನಾಟಕ ಸರ್ಕಾರವು ಸೇವಾಸಿಂಧು ವೇದಿಕೆ ಮೂಲಕ ಇ ಪಾಸ್ ವಿತರಿಸಲು ಮುಂದಾಯಿತು. ಇದರಿಂದ ಹೊರ ರಾಜ್ಯದ ಕನ್ನಡಿಗರು ಹಾಗೂ ಕಾರ್ಮಿಕರಿಗೆ ರಾಜ್ಯಪ್ರವೇಶಕ್ಕೆ ಅವಕಾಶ ಸಿಕ್ಕಿತು. ಆದರೆ, ಇದರಿಂದ ರಾಜ್ಯದಲ್ಲಿ ಹಸಿರು ವಲಯದಲ್ಲಿದ್ದ ಜಿಲ್ಲೆಗಳಲ್ಲಿ ಕೂಡಾ ಕೊವಿಡ್ 19 ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡಿವೆ.

 ಊರು ಸೇರಿದ ಮಂದಿ ಬೆಚ್ಚಿದ್ದಾರೆ

ಊರು ಸೇರಿದ ಮಂದಿ ಬೆಚ್ಚಿದ್ದಾರೆ

ಇ ಪಾಸ್ ಪಡೆದ ಹಲವಾರು ಮಂದಿ ತಮ್ಮ ಊರು ಸೇರಿಕೊಂಡು ನಿಟ್ಟುಸಿರು ಬಿಟ್ಟ ಬೆನ್ನಲ್ಲೇ ಕೊರೊನಾವೈರಸ್ ಸವಾರಿ ಮಾಡಿರುವುದನ್ನು ಕಂಡು ಬೆಚ್ಚಿದ್ದಾರೆ. ರಾಜ್ಯದಲ್ಲಿದ್ದ 14 ಹಸಿರು ಜಿಲ್ಲೆಗಳ ಪೈಕಿ 8 ಜಿಲ್ಲೆಗಳು ಕೆಂಪುವಲಯಕ್ಕೆ ತಿರುಗಿವೆ. ಲಾಕ್ ಡೌನ್ 2.0 ಮುಗಿಯುವ ಮೇ 4ರ ವೇಳೆ 14 ಹಸಿರು ಜಿಲ್ಲೆಗಳನ್ನು ಹೊಂದಲಾಗಿತ್ತು. ಇ ಪಾಸ್ ವಿತರಿಸಿ ನಮ್ಮವರನ್ನು ಕರೆಸಿಕೊಂಡ ಜೊತೆಗೆ ಕೊರೊನಾಕ್ಕೂ ಆಹ್ವಾನ ನೀಡಿದ್ದಂತಾಗಿದೆ.

 ಒಂದೇ ಒಂದು ಸೋಕಿಂತ ಪ್ರಕರಣ ಇರಲಿಲ್ಲ

ಒಂದೇ ಒಂದು ಸೋಕಿಂತ ಪ್ರಕರಣ ಇರಲಿಲ್ಲ

ಕೆಲ ವಾರಗಳ ಹಿಂದೆ ರಾಜ್ಯ 14 ಜಿಲ್ಲೆಗಳಲ್ಲಿ ಒಂದೇ ಒಂದು ಸೋಕಿಂತ ಪ್ರಕರಣ ಇರಲಿಲ್ಲ. ಈಗ 14 ಜಿಲ್ಲೆಗಳ ಪೈಕಿ 8 ಜಿಲ್ಲೆಗಳಿಗೆ ಕರೋನಾ ಎಂಟ್ರಿಯಾಗಿದೆ. ಈ 8 ಜಿಲ್ಲೆಗಳಲ್ಲೇ ಕಳೆದ 15 ದಿನಗಳಲ್ಲಿ 153 ಪ್ರಕರಣ ವರದಿಯಾಗಿದೆ. ಈ ಎಲ್ಲಾ ಪ್ರಕರಣಗಳ ಮೂಲ ವಿದೇಶ ಹಾಗೂ ಹೊರ ರಾಜ್ಯದ ಹಿನ್ನಲೆಯವರಾಗಿದ್ದಾರೆ.

ಇ- ಪಾಸ್ ಆಗಿ ಆರೋಗ್ಯ ಸೇತು ಆಪ್ ಬಳಸಲು ಮೋದಿ ಕರೆಇ- ಪಾಸ್ ಆಗಿ ಆರೋಗ್ಯ ಸೇತು ಆಪ್ ಬಳಸಲು ಮೋದಿ ಕರೆ

 ಹಸಿರು ಜಿಲ್ಲೆಗಳಾಗಿ ಉಳಿದಿರುವ ಪ್ರದೇಶಗಳು

ಹಸಿರು ಜಿಲ್ಲೆಗಳಾಗಿ ಉಳಿದಿರುವ ಪ್ರದೇಶಗಳು

ಸುಲಭವಾಗಿ ಇಪಾಸ್ ಪಡೆಯಬಹುದಾದ ಹಿನ್ನಲೆ ಹೆಚ್ಚಿನ ಮಂದಿ ರಾಜ್ಯ ಪ್ರವೇಶಿಸಿದ್ದಾರೆ. ಇ ಪಾಸ್ ನೀಡಿದ್ದು ತಪ್ಪಲ್ಲ, ಆದರೆ, ಇಲ್ಲಿಗೆ ಬಂದವರಿಗೆ ಸರಿಯಾದ ವೈದ್ಯಕೀಯ ಪರೀಕ್ಷೆ, ಕ್ವಾರಂಟೈನ್ ಸೌಲಭ್ಯ ಒದಗಿಸಿಲ್ಲ ಎಂಬ ದೂರು ಕೇಳಿ ಬಂದಿದೆ.

ರಾಮನಗರ, ರಾಯಚೂರು, ಚಿಕ್ಕಮಗಳೂರು, ಕೊಡಗು, ಚಾಮರಾಜನರ, ಕೊಪ್ಪಳ, ಕೊಡಗು ಸದ್ಯ ಹಸಿರು ಜಿಲ್ಲೆಗಳಾಗಿ ಉಳಿದಿವೆ. ಕೊಡಗು ಜಿಲ್ಲೆಯಲ್ಲಿ ಸೋಮವಾರ ಮತ್ತೆ ಪ್ರಕರಣ ಕಾಣಿಸಿಕೊಂಡಿದೆ. ಪಕ್ಕದ ಜಿಲ್ಲೆ ಮೈಸೂರು ಸದ್ಯ ಕರೋನಾ ಮುಕ್ತವಾಗಿದೆ.

 ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗಿದೆ.

ಈಗ ಕೇಂದ್ರ ಸರ್ಕಾರ ಅಂತಾರಾಜ್ಯ ಸಾರಿಗೆಗೆ ಅವಕಾಶ ಕಲ್ಪಿಸಿದೆ. ಕೇಂದ್ರ ಗೃಹ ಇಲಾಖೆ ನೀಡಿರುವ ಲಾಕ್ಡೌನ್ 4.0 ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಆದರೆ, ಅಂತಾರಾಜ್ಯ ಸಾರಿಗೆ ಸಂಪರ್ಕ, ಹೆಚ್ಚಿನ ಮಟ್ಟದ ಕ್ವಾರಂಟೈನ್, ವೈದ್ಯಕೀಯ ಪರೀಕ್ಷೆ ವಿಧಾನವನ್ನು ಆಯಾ ರಾಜ್ಯವೇ ಅನುಸರಿಸಬಹುದಾಗಿದೆ. ಇದರಲ್ಲಿ ನಿರ್ಲಕ್ಷ್ಯ ತೋರಿದರೆ, ರಾಜ್ಯದ ಎಲ್ಲಾ ಜಿಲ್ಲೆಗಳೂ ರೆಡ್ ಝೋನ್ ಪ್ರವೇಶಿಸುವ ಆತಂಕ ಉಂಟಾಗಬಹುದು ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ.

ಸರಕಾರದ ಪ್ರಮುಖ ಘೋಷಣೆ: 8 ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಬೇಕಿಲ್ಲಸರಕಾರದ ಪ್ರಮುಖ ಘೋಷಣೆ: 8 ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಬೇಕಿಲ್ಲ

English summary
Inter-state movement of passenger vehicles, buses will be allowed with mutual consent of states involved during the COVID-19 lockdown 4.0. But, it is a dangerous move it may increase more positive cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X