ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯಪ್ರಿಯರಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಏಪ್ರಿಲ್ 1: ಮುಂದಿನ ಎರಡು ವಾರ ಲಾಕ್ ಡೌನ್ ಇದ್ದರೂ, ಕೊನೆಯ ಪಕ್ಷ ಮದ್ಯ ಮಾರಾಟದ MRP ಅಂಗಡಿಗಳು ತೆರೆಯಬಹುದು ಎನ್ನುವ ಮದ್ಯಪ್ರಿಯರ ಆಸೆಗೆ ಮುಖ್ಯಮಂತ್ರಿ ಯಡಿಯೂರಪ್ಪ ತಣ್ಣೀರು ಎರೆಚಿದ್ದಾರೆ.

ಕೇರಳದ ಮಾದರಿಯಲ್ಲಿ ಕರ್ನಾಟಕದಲ್ಲೂ ಮದ್ಯ ಮಾರಾಟಕ್ಕೆ ಸರಕಾರ ಅನುವು ಮಾಡಿಕೊಡಬಹುದು ಎನ್ನುವ ಮದ್ಯಪ್ರಿಯರ ನಿರೀಕ್ಷೆ ಹುಸಿಯಾಗಿದೆ. "ಮದ್ಯಪ್ರಿಯರು ಏಪ್ರಿಲ್ 14ರ ವರೆಗೆ ಕಾಯಲೇಬೇಕು" ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

Fact Check: ಕರ್ನಾಟಕದಲ್ಲಿ ಮದ್ಯದಂಗಡಿ ಓಪನ್‌ಗೆ ಆದೇಶ? Fact Check: ಕರ್ನಾಟಕದಲ್ಲಿ ಮದ್ಯದಂಗಡಿ ಓಪನ್‌ಗೆ ಆದೇಶ?

ರಾಜ್ಯದಲ್ಲಿ ಮದ್ಯ ಸಿಗದೇ ಸುಮಾರು ಹತ್ತಕ್ಕೂ ವ್ಯಸನಿಗಳು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು. ಸರಕಾರದ ಬೊಕ್ಕಸಕ್ಕೆ ಭರ್ಜರಿ ಇಳುವರಿ ತಂದುಕೊಡುವ ಇಲಾಖೆಗಳ ಪೈಕಿ ಅಬಕಾರಿ ಇಲಾಖೆ ಮಂಚೂಣಿಯಲ್ಲಿದೆ.

Lock Down: Liquor Shops will Open Only After April 14th, CM Yediyurappa

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪ, "ಲಾಕ್ ಡೌನ್ ನಿಂದ ನಗರದಲ್ಲಿ ಸಿಲುಕಿಕೊಂಡಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಿಲ್ಡರುಗಳೇ ಊಟ, ವಸತಿ ವ್ಯವಸ್ಥೆ ಒದಗಿಸುವಂತೆ ಸೂಚಿಸಲಾಗುವುದು" ಎಂದು ಹೇಳಿದ್ದಾರೆ.

ಕೊವಿಡ್19 ಲಾಕ್ ಡೌನ್ ನಡುವೆ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ ಕೊವಿಡ್19 ಲಾಕ್ ಡೌನ್ ನಡುವೆ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ

ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಡೆದ ಸಭೆಯ ನಂತರ ಮಾತನಾಡಿದ ಯಡಿಯೂರಪ್ಪ, "ಏಪ್ರಿಲ್ 14ರವರೆಗೆ ಮದ್ಯದಂಗಡಿ ಬಂದ್ ಇರಲಿದೆ. ಯಾರೆಲ್ಲಾ ಎಣ್ಣೆ ಕುಡಿಯಬೇಕೋ ಅಲ್ಲಿಯವರೆಗೆ ಕಾಯಬೇಕು" ಎಂದು ಮುಖ್ಯಮಂತ್ರಿಗಳು ನಗೆಚಟಾಕಿ ಹಾರಿಸಿದ್ದಾರೆ.

ಈ ವೇಳೆ ಗೋಷ್ಠಿಯಲ್ಲಿ ಹಾಜರಿದ್ದ ಕಂದಾಯ ಸಚಿವ ಆರ್.ಅಶೋಕ್, "ಲಾಕ್‌ ಡೌನ್ ಮುಗಿಯುವವರೆಗೂ ಎಣ್ಣೆ ನಿಮ್ಮದು, ಊಟ ಮಾತ್ರ ನಮ್ಮದು" ಎಂದು ಹೇಳಿದ್ದಾರೆ.

English summary
Lock Down: Liquor Shops will Open Only After April 14th, CM Yediyurappa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X