• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿವಿಧ ಪಂಚಾಯಿತಿ, ಪುರಸಭೆ, ನಗರಸಭೆಗಳ ಚುನಾವಣೆ ದಿನಾಂಕ ಪ್ರಕಟ

|

ಬೆಂಗಳೂರು, ಜನವರಿ 14: ವಿವಿಧ ಕಾರಣಕ್ಕೆ ತೆರವಾಗಿದ್ದ ಒಂದು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯ ಹತ್ತು ಸ್ಥಾನಗಳಿಗೆ ಹಾಗೂ ಒಟ್ಟು ಆರು ನಗರಸಭೆ, ಪುರಸಭೆಗಳ ಚುನಾವಣೆಗೆ ರಾಜ್ಯ ಚುನಾವಣೆ ಆಯೋಗವು ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದೆ.

ಬೆಳಗಾವಿ ಜಿಲ್ಲಾ ಪಂಚಾಯಿತಿಯ ಹೆಬ್ಬಾಳ ಕ್ಷೇತ್ರ, ಹಾಗೂ ಬೆಂಗಳೂರು ಉತ್ತರ ತಾಲ್ಲೂಕಿನ ಆಚೋಹಳ್ಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರ, ಚೆನ್ನಪಟ್ಟಣ ತಾಲ್ಲೂಕಿನ ಮತ್ತೀಕೆರೆ ಕ್ಷೇತ್ರ, ಮಾಲೂರು ತಾಲ್ಲೂಕಿನ ಲಕ್ಕೂರು ಕ್ಷೇತ್ರ, ಚಿಂತಾಮಣಿಯ ಕುರಬೂರು, ಗೌರಿಬಿದನೂರಿನ ಅಲಕಾಪುರ, ಗಂಗಾಪುರ, ಶಾಂಪುರ, ರಾಮದುರ್ಗ ತಾಲ್ಲೂಕಿನ ಕಟಕೋಳ, ಹಾಣಗಲ್ ತಾಲ್ಲೂಕಿನ ತಿಳವಳ್ಳಿ, ಸಿರಗುಪ್ಪದ ಕರೂರು ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಮಾಡಲಾಗಿದೆ.

ಗ್ರಾಮ ಪಂಚಾಯಿತಿ ಚುನಾವಣೆ ವೇಳಾಪಟ್ಟಿ ಪ್ರಕಟ: ನಿಜವೇ?

ಇದರ ಜೊತೆಗೆ ಹೊಸಕೋಟೆ, ಚಿಕ್ಕಬಳ್ಳಾಪುರ, ಹುಣಸೂರು, ಸಿರಗುಪ್ಪ ನಗರಸಭೆಗಳು, ಸಿಂಧಗಿ ಪುರಸಭೆ ಮತ್ತು ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಗೂ ಚುನಾವಣೆ ಘೋಷಿಸಲಾಗಿದೆ. ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಒಂದೇ ದಿನಾಂಕ ನಿಗದಿ ಮಾಡಲಾಗಿದೆ.

ಇದೇ ತಿಂಗಳ 25 ರಂದು ಜಿಲ್ಲಾಧಿಕಾರಿಗಳು ಚುನಾವಣೆಯ ಅಧಿಸೂಚನೆ ಹೊರಡಿಸುತ್ತಾರೆ. ಜನವರಿ 28 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ. ಜನವರಿ 29 ನಾಮಪತ್ರ ಪರಿಶೀಲನೆ ದಿನ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಜನವರಿ 30 ಆಗಿದೆ.

ಬಿಬಿಎಂಪಿ ಚುನಾವಣಾ ತಯಾರಿಗಾಗಿ ಎಎಪಿ ಅಧ್ಯಕ್ಷರ ನೇಮಕ

ಮತದಾನ ಅವಶ್ಯಕವಾಗಿದ್ದರೆ ಫೆಬ್ರವರಿ 9 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ಮತದಾನ ಮಾಡಬೇಕಾಗಿದೆ. ಮರುಮತದಾನ ಅವಶ್ಯಕತೆ ಇದ್ದಲ್ಲಿ ಫೆಬ್ರವರಿ 10 ರಂದು ನಡೆಸಲಾಗುತ್ತದೆ. ಮತ ಎಣಿಕೆ ಫೆಬ್ರವರಿ 11 ರಂದು ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Muncipality, Panchayat and other local body elections has been annouced by state election commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more