ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ಪರಿಷತ್ ಸ್ಥಾನ ತೆರವು, ಮೇಲ್ಮನೆ ಸ್ಥಾನಕ್ಕೆ ಪ್ರಬಲ ಪೈಪೋಟಿ!

By Gururaj
|
Google Oneindia Kannada News

ಬೆಂಗಳೂರು, ಜುಲೈ 20 : 2013ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ವಿಧಾನ ಪರಿಷತ್ ಸದಸ್ಯತ್ವದ ಮೇಲೆ ಕಣ್ಣಿಟ್ಟಿದ್ದಾರೆ. ಆಗಸ್ಟ್‌ನಲ್ಲಿ ಹಲವು ಸ್ಥಾನಗಳು ಖಾಲಿ ಆಗಲಿದ್ದು, ಸದಸ್ಯರಾಗಲು ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಪೈಪೋಟಿ ನಡೆಯುತ್ತಿದೆ.

ವಿಧಾನಪರಿಷತ್ತಿಗೆ ನಾಮ ನಿರ್ದೇಶನಗೊಂಡ ಮೂವರು ಸದಸ್ಯರ ಅವಧಿ ಆಗಸ್ಟ್ 9ರಂದು ಅಂತ್ಯಗೊಳ್ಳಲಿದೆ. ರಾಜ್ಯಪಾಲರು ಮೂವರು ಸದಸ್ಯರನ್ನು ನೇಮಕ ಮಾಡಲಿದ್ದಾರೆ. ಮೂರು ಸ್ಥಾನಗಳಿಗೆ 6ಕ್ಕೂ ಹೆಚ್ಚು ನಾಯಕರು ಲಾಬಿ ಆರಂಭಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ತಾರಾ ಅನುರಾಧ ವಿದಾಯದ ಭಾಷಣವಿಧಾನ ಪರಿಷತ್ತಿನಲ್ಲಿ ತಾರಾ ಅನುರಾಧ ವಿದಾಯದ ಭಾಷಣ

ಆಗಸ್ಟ್‌ 9ರಂದು ಮೂರು ನಾಮ ನಿರ್ದೇಶಿತ ಸದಸ್ಯರು ಸೇರಿ ಒಟ್ಟು 7 ಸ್ಥಾನಗಳು ತೆರವಾಗಲಿವೆ. ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಹಲವು ನಾಯಕರು ಪರಿಷತ್ ಸದಸ್ಯರಾಗಲು ಪೈಪೋಟಿ ಆರಂಭಿಸಿದ್ದಾರೆ.

Lobbying for 7 Legislative Council seat

ಯಾರ ನಿವೃತ್ತಿ? : ವಿ.ಸೋಮಣ್ಣ, ಡಾ.ಜಿ.ಪರಮೇಶ್ವರ, ಕೆ.ಎಸ್.ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಸ್ಥಾನಗಳು ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ತೆರವಾಗಿವೆ.

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಎಸ್‌.ಆರ್. ಪಾಟೀಲ್ ಹೆಸರು ಅಂತಿಮ?ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಎಸ್‌.ಆರ್. ಪಾಟೀಲ್ ಹೆಸರು ಅಂತಿಮ?

ವಿಧಾನಪರಿಷತ್ತಿಗೆ ನಾಮರ್ದೇಶನಗೊಂಡಿದ್ದ ಕಾಂಗ್ರೆಸ್‌ನ ಎಂ.ಡಿ.ಲಕ್ಷ್ಮೀ ನಾರಾಯಣ ಅವರು 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಾಮ ನಿರ್ದೇಶಿತ ಸದಸ್ಯರಾದ ತಾರಾ ಅನುರಾಧ ಮತ್ತು ಕೆ.ಬಿ.ಶಾಣಪ್ಪ ಅವರು ಆಗಸ್ಟ್ 9ರಂದು ನಿವೃತ್ತರಾಗಲಿದ್ದಾರೆ.

3 ನಾಮ ನಿರ್ದೇಶನ : ಸಂವಿಧಾನದ 171ನೇ ಕಾಲಂ ಅನ್ವಯ ರಾಜ್ಯಪಾಲರು ಮೂವರು ಸದಸ್ಯರನ್ನು ನಾಮ ನಿರ್ದೇಶನ ಮಾಡಲಿದ್ದಾರೆ. ಕಲೆ, ಸಾಹಿತ್ಯ, ಸಹಕಾರ, ಸಮಾಜ ಸೇವೆ ಕ್ಷೇತ್ರದ ಗಣ್ಯರನ್ನು ರಾಜ್ಯಪಾಲರು ನಾಮ ನಿರ್ದೇಶನ ಮಾಡಬಹುದು.

ಯಾರ-ಯಾರ ಹೆಸರು? : ಪರಿಷತ್ ಸದಸ್ಯರಾಗಲು ಕಾಂಗ್ರೆಸ್‌ನಲ್ಲಿ ಹಲವು ನಾಯಕರ ಹೆಸರು ಕೇಳಿಬರುತ್ತಿದೆ. ನಿವೇದಿತಾ ಆಳ್ವಾ, ಕೆ.ಇ.ರಾಧಾಕೃಷ್ಣ, ಯು.ಬಿ.ವೆಂಕಟೇಶ್, ಎಂ.ಸಿ.ವೇಣುಗೋಪಾಲ್ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

English summary
3 nominated members of the Karnataka Legislative Council will be vacant in the month of August. Several Congress workers and office-bearers are lobbying for the posts. Overall 7 council seats will fall vacant by August 9, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X