ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ಕಿಗೆ ಸಾಲ ಬಾಧೆ: ಕುಟುಂಬ ಸಮೇತ ಆತ್ಮಹತ್ಯೆ

By Srinath
|
Google Oneindia Kannada News

loan-burden-techie-ravi-and-his-family-commit-suicide-hoskote
ಹೊಸಕೋಟೆ, ಡಿ.21: ಸಾಲದ ಹೊರೆ ತಾಳಲಾರದೆ ಟೆಕ್ಕಿಯೊಬ್ಬರು ಪತ್ನಿ ಹಾಗೂ ಮಗನೊಂದಿಗೆ ನ್ಯಾನೋ ಕಾರಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸಕೋಟೆ ಬಳಿ ಶುಕ್ರವಾರ ಮುಂಜಾನೆ ನಡೆದಿದೆ.

ಸಾಲದ ಸುಳಿಗೆ ಸಿಲುಕಿ ಹೀಗೆ ಬದುಕನ್ನು ಅಂತ್ಯಗೊಳಿಸಿದವರು ಬೆಂಗಳೂರಿನ ಕೆಆರ್ ಪುರಂ ಸಮೀಪದ ದ್ಯಾವಸಂದ್ರ ನಿವಾಸಿ ರವಿ (45), ಪತ್ನಿ ಕಲ್ಪನಾ (38) ಹಾಗೂ 17 ವರ್ಷದ ಮಗ ಸುಕೇಶ್‌ ಎಂದು ಗುರುತಿಸಲಾಗಿದೆ.

ಕುಟುಂಬದ ಮೂವರು ಪೂರ್ವ ನಿರ್ಧಾರದಂತೆ ಟಾಟಾ ನ್ಯಾನೋ ಕಾರನಲ್ಲಿ ಮನೆಯಿಂದ ಹೊರಟಿದ್ದಾರೆ. ದಾರ ಮಧ್ಯೆ ಗೊಟ್ಟಿಪುರ ಗೇಟ್‌ ಬಳಿ ಕಾರನ್ನು ನಿಲ್ಲಿಸಿ, ತಂಪು ಪಾನೀಯದಲ್ಲಿ ವಿಷ ಬೆರೆಸಿ ಮೂವರು ಅದನ್ನು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಹಳ ಸಮಯವಾದರೂ ಕಾರು ಚಲಿಸದ ಕಾರಣ ಸಂಶಯಗೊಂಡ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ.

ಸಾಲದ ಹೊರೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರಿನಲ್ಲಿ ಸಿಕ್ಕಿರುವ ಡೆತ್ ನೋಟ್ ನಿಂದ ತಿಳಿದುಬಂದಿದೆ. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕಾರು ಸಮೀಪದ ಟೋಲ್‌ ಗೇಟ್ ನಿಂದ ಶುಕ್ರವಾರ ಬೆಳಗ್ಗೆ 4 ಗಂಟೆ ಸಮಯದಲ್ಲಿ ಪಾಸ್‌ ಆಗಿರುವುದು ಪತ್ತೆಯಾಗಿದೆ.

English summary
Loan burden- Techie Ravi and his family commit suicide Hoskote on Dec 20 morning. Burdened by debt, a techie, his wife and son committed suicide by consuming poison. The bodies of Ravi, 45, and his wife Kalpana (39), and Son Sukesh (17) were found in an abondened nano car at Hoskote on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X