• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವೇಗೌಡ ನಿವಾಸಕ್ಕೆ ಕಾಂಗ್ರೆಸ್ ನಾಯಕರ ಭೇಟಿ: ಮೈತ್ರಿಗೆ ಫುಲ್‌ಸ್ಟಾಪ್‌?

|

ಬೆಂಗಳೂರು, ಜುಲೈ 10: ಕರ್ನಾಟಕ ರಾಜಕೀಯದ ಹೈಡ್ರಾಮಾ ಕುತೂಹಲಕಾರಿ ತಿರುವು ಪಡೆದುಕೊಳ್ಳುವ ಲಕ್ಷಣ ತೋರಿಸುತ್ತಿದೆ. ರಾಜಕೀಯದ ಬೆಳವಣಿಗೆಗಳು ಸಿನಿಮೀಯ ರೀತಿಯಲ್ಲಿ ಸಾಗುತ್ತಿವೆ.

ಮುಂಬೈನಲ್ಲಿರುವ ಅತೃಪ್ತ ಶಾಸಕರನ್ನು ಭೇಟಿ ಮಾಡಿ ಅವರ ಮನವೊಲಿಸಲು ಬೆಳಿಗ್ಗೆಯೇ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಮತ್ತು ಅರಸೀಕೆರೆ ಜೆಡಿಎಸ್ ಶಾಸಕ ಕೆಎಸ್ ಶಿವಲಿಂಗೇಗೌಡ ಅವರು ಮುಂಬೈ ತಲುಪಿದ್ದಾರೆ. ಶಾಸಕರು ಉಳಿದುಕೊಂಡಿರುವ ರೆನೈಸನ್ಸ್ ಹೋಟೆಲ್ ಮುಂಭಾಗ ಕಾವಲು ಹಾಕಿರುವ ಪೊಲೀಸರು ಈ ಇಬ್ಬರು ಮುಖಂಡರಿಗೆ ಒಳಗೆ ಬಿಡಲು ನಿರಾಕರಿಸಿದ್ದಾರೆ.

ನಮ್ಮ ಬಳಿ ಯಾವುದೇ ಶಸ್ತ್ರಾಸ್ತ್ರಗಳಿಲ್ಲ. ಕೇವಲ ಹೃದಯವಿದೆ: ಡಿಕೆಶಿ

ಇದರಿಂದ ಹೋಟೆಲ್ ಎದುರು ಭಾರಿ ಡ್ರಾಮಾ ನಡೆಯುತ್ತಿದೆ. ಇತ್ತ ಡಿಕೆ ಶಿವಕುಮಾರ್ ಅವರು ಅತೃಪ್ತ ಶಾಸಕರನ್ನು ವಾಪಸ್ ಕರೆದುಕೊಂಡು ಬರಲಿದ್ದಾರೆ ಎಂಬ ನಿರೀಕ್ಷೆಗಳು ದೋಸ್ತಿ ಸರ್ಕಾರದ ಎರಡೂ ಪಕ್ಷಗಳ ಮುಖಂಡರಲ್ಲಿ ಮೂಡಿದೆ.

Live Updates Karnataka political developments mumbai bengaluru

ದೋಸ್ತಿ ಸರ್ಕಾರವನ್ನು ಉಳಿಸಲು ಅಧಿವೇಶನ ಆರಂಭವಾಗುವ ಶುಕ್ರವಾರದ ಒಳಗೆ ಅತೃಪ್ತ ಶಾಸಕರನ್ನು ಕರೆದುಕೊಂಡು ಬರುವುದು ಅವರಿಗೆ ಅನಿವಾರ್ಯವಾಗಿದೆ.

Newest First Oldest First
11:53 PM, 10 Jul
ಸಭೆ ನಡೆಸಿದ ಕಾಂಗ್ರೆಸ್ ನ ಪ್ರಮುಖ ಮುಖಂಡರು ಒಂದೇ ವಾಹನದಲ್ಲಿ ದೇವೇಗೌಡ ಅವರ ಮನೆಗೆ ತೆರಳಿದ್ದು, ಮಹತ್ವದ ಚರ್ಚೆಯಲ್ಲಿ ನಡೆಸಿದ್ದಾರೆ. ಮೈತ್ರಿ ಸರ್ಕಾರದ ಕಾಲ ಸನ್ನಿಹಿತವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
11:52 PM, 10 Jul
ಬೆಂಗಳೂರಿಗೆ ವಾಪಸ್ಸಾದ ಡಿಕೆ.ಶಿವಕುಮಾರ್, ಪೊಲೀಸ್ ಬಲ ಬಳಸಿ ನನ್ನನ್ನು ಕಾನೂನು ಬಾಹಿರವಾಗಿ ತಡೆದಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಅಲ್ಲಿ ಬಿಜೆಪಿ ಬಂಧನದಲ್ಲಿರುವ ನಮ್ಮ ಸ್ನೇಹಿತರು ವಾಪಸ್ ಬರುತ್ತಾರೆಂಬ ವಿಶ್ವಾಸ ನನಗಿದೆ ಎಂದರು.
7:10 PM, 10 Jul
ರಾಜೀನಾಮೆ ನೀಡಿರುವ ಶಾಸಕ ಸುಧಾಕರ್ ಅನ್ನು ಭೇಟಿ ಆದ ನಂತರ ಮಾತನಾಡಿದ ಸಿದ್ದರಾಮಯ್ಯ, 'ಸುಧಾಕರ್ ನಮ್ಮ ಶಾಸಕ, ಆತನನ್ನು ಯಾರೂ ಬಂಧಿಸಿರಲಿಲ್ಲ, ಬಲವಂತ ಮಾಡಿಲ್ಲ. ಬಿಜೆಪಿಯವರು ರೌಡಿಗಳಂತೆ ವರ್ತಿಸುತ್ತಿದ್ದಾರೆ' ಎಂದರು.
6:33 PM, 10 Jul
ಕಾಂಗ್ರೆಸ್ ಮುಖಂಡರಿಂದ ವಿಧಾನಸೌಧದಲ್ಲಿ ಬಂಧನಕ್ಕೆ ಒಳಗಾಗಿರುವ ಶಾಸಕ ಸುಧಾಕರ್ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸುಧಾಕರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಬಂದಾಗ ಕಾಂಗ್ರೆಸ್ ಶಾಸಕರು ಅವರನ್ನು ಎಳೆದೊಯ್ದು ಕೊಠಡಿಯಲ್ಲಿ ಕೂಡಿ ಹಾಕಿದ್ದರು.
6:15 PM, 10 Jul
ಅತೃಪ್ತ ಶಾಸಕರ ಭೇಟಿಗೆ ಮುಂಬೈಗೆ ತೆರಳಿದ್ದ ಡಿ.ಕೆ.ಶಿವಕುಮಾರ್ ಅವರು ವಾಪಸ್‌ ಆಗುತ್ತಿದ್ದಾರೆ. ಬೆಂಗಳೂರಿಗೆ ಬಂದು ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ.
6:03 PM, 10 Jul
ತಮ್ಮ ವಶದಿಂದ ಬಿಡುಗಡೆ ಮಾಡಿರುವ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ಬಲವಂತವಾಗಿ ವಿಮಾನ ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದು, ಬೆಂಗಳೂರಿಗೆ ಮರಳುವಂತೆ ಒತ್ತಡ ಹೇರುತ್ತಿದ್ದಾರೆ.
6:01 PM, 10 Jul
ಜಾರ್ಜ್ ಕೊಠಡಿ ಮುಂದೆ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆಗೆ ಬಿಜೆಪಿ ನಿರ್ಧಾರ
6:00 PM, 10 Jul
ಜಾರ್ಜ್ ಕೊಠಡಿಯಿಂದ ಹೊರಬಂದ ಸಿದ್ದರಾಮಯ್ಯ
5:59 PM, 10 Jul
ರಕ್ಷಣೆ ಮಾಡಬೇಕಾದವರೇ ಈ ರೀತಿ ನಡೆದುಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರ ಉಳಿಸಲು ಈ ಪ್ರಯತ್ನ ಮಾಡಿದ್ದೇವೆ. ಸರ್ಕಾರ ಉಳಿಯುತ್ತದೆ ಎಂಬ ನಂಬಿಕೆ ಇದೆ- ಡಿಕೆ ಶಿವಕುಮಾರ್
5:54 PM, 10 Jul
ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಗ್ರಹಿಸಿದ ಬಿಜೆಪಿ.
5:53 PM, 10 Jul
ಪಕ್ಷ ಅವರಿಗೆ ಟಿಕೆಟ್ ನೀಡಿ ಗೆಲ್ಲಿಸಿದೆ. ಅವರನ್ನು ಕೇಳಬಾರದಾ? ಕೇಳಿದರೆ ತಪ್ಪಾಗುತ್ತದೆಯಾ? ಸುಧಾಕರ್ ನಮ್ಮ ಪಕ್ಷದವರು. ಅವರನ್ನು ಕರೆದುಕೊಂಡು ಹೋಗಿ ಚರ್ಚೆ ಮಾಡಬಾರದಾ? - ಯುಟಿ ಖಾದರ್
5:52 PM, 10 Jul
ಹೋಟೆಲ್ ಒಳಗೆ ತೆರಳಲು ಪೊಲೀಸರು ಬಿಟ್ಟಿಲ್ಲ. ಬಲಪ್ರಯೋಗ ಮಾಡಿದರು. ಬಿಜೆಪಿಯವರ ನಿರ್ದೇಶನದ ಮೇಲೆ ಹೀಗೆ ಮಾಡಿದ್ದಾರೆ- ಡಿಕೆ ಶಿವಕುಮಾರ್
5:52 PM, 10 Jul
ದಯವಿಟ್ಟು ನನ್ನ ಪತಿಯನ್ನು ರಕ್ಷಿಸಿ ಎಂದು ಸುಧಾಕರ್ ಪತ್ನಿ ದೂರವಾಣಿ ಮೂಲಕ ಕೋರಿದ್ದಾರೆ- ಯಡಿಯೂರಪ್ಪ
5:51 PM, 10 Jul
ಪೊಲೀಸರ ವಶದಿಂದ ಬಿಡುಗಡೆಯಾದ ಡಿಕೆ ಶಿವಕುಮಾರ್.
5:50 PM, 10 Jul
ರಾಜ್ಯಪಾಲರು, ಪೊಲೀಸರು ಸುಧಾಕರ್ ಅವರನ್ನು ರಕ್ಷಿಸಲಿ- ಯಡಿಯೂರಪ್ಪ.
5:49 PM, 10 Jul
ಶಾಸಕರಿಗೆ ಭದ್ರತೆ ನೀಡಿ ಎಂದು ಸುಧಾಕರ್ ಬೆಂಬಲಿಗರಿಂದ ವಿಧಾನಸೌಧದ ಮೂರನೇ ಮಹಡಿಯಲ್ಲಿ ಧರಣಿ
5:45 PM, 10 Jul
ಸುಧಾಕರ್ ಅವರನ್ನು ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ಕಾಂಗ್ರೆಸ್‌ನವರಿಂದ ಗೂಂಡಾಗಿರಿ ನಡೆದಿದೆ. ಸುಧಾಕರ್ ಅವರನ್ನು ರಕ್ಷಣೆ ಮಾಡಬೇಕು. ಕಾಂಗ್ರೆಸ್ ದುಸ್ಥಿಗೆ ತಲುಪಿದೆ- ಯಡಿಯೂರಪ್ಪ
5:40 PM, 10 Jul
ಈಗ ಗೊತ್ತಾಯ್ತು, ದಿನೇಶ್ ಗುಂಡೂರಾವ್ ಮತ್ತು ಪ್ರಿಯಾಂಕ ಖರ್ಗೆ ಅವತಾರ ನೋಡಿದ ಮೇಲೆ ಯಾಕೆ ಕಾಂಗ್ರೆಸ್ ಸದಸ್ಯರು ಸದನಕ್ಜೆ ರಾಜಿನಾಮೆ ಕೊಡುತ್ತಿದ್ದಾರೆಂದು- ಸುರೇಶ್ ಕುಮಾರ್
5:39 PM, 10 Jul
ವಿಧಾನಸೌಧದಲ್ಲಿ ಉದ್ವಿಗ್ನ ಪರಿಸ್ಥಿತಿ. ಒಳಗೆ ಪ್ರವೇಶಿಸಿದ ಪೊಲೀಸ್ ಪಡೆ.
5:37 PM, 10 Jul
ವಿಧಾನಸೌಧಕ್ಕೆ ಆಗಮಿಸಿದ ಪೊಲೀಸ್ ಆಯುಕ್ತ ಅಲೋಕ್ ಕುಮಾರ್.
5:35 PM, 10 Jul
ವಿಧಾನಸೌಧದಲ್ಲಿ ಗಲಾಟೆ ಹಿನ್ನೆಲೆಯಲ್ಲಿ ವಿಧಾನಸೌಧದತ್ತ ಧಾವಿಸಿದ ಬಿಜೆಪಿ ನಾಯಕರು
5:34 PM, 10 Jul
ಬೆಂಗಾವಲು ವಾಹನ ಬಿಟ್ಟು ಅಜ್ಞಾತ ಸ್ಥಳಕ್ಕೆ ತೆರಳಿದ ಮುಖ್ಯಮಂತ್ರಿ ಕುಮಾರಸ್ವಾಮಿ.
5:23 PM, 10 Jul
ಜಾರ್ಜ್ ಕೊಠಡಿಗೆ ನುಗ್ಗಲು ಬಿಜೆಪಿ ಮುಖಂಡರ ಯತ್ನ.
5:20 PM, 10 Jul
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 13 ತಿಂಗಳಾಯಿತು. ರಾಜೀನಾಮೆ ನೀಡಿದ ಶಾಸಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ- ರೇಣುಕಾಚಾರ್ಯ
5:19 PM, 10 Jul
ರೇಣುಕಾಚಾರ್ಯ, ಯುಟಿ ಖಾದರ್ ಜಟಾಪಟಿ. ರೇಣುಕಾಚಾರ್ಯ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ನಡೆದ ಘಟನೆ.
5:18 PM, 10 Jul
ಸುಧಾಕರ್ ಅವರನ್ನು ತಡೆದು, ಕತ್ತಿನ ಪಟ್ಟಿ ಹಿಡಿದು ಗೂಂಡಾಗಿರಿ ಮಾಡಿ ಕೂಡಿ ಹಾಕಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ- ಯಡಿಯೂರಪ್ಪ
5:16 PM, 10 Jul
ನನ್ನನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ನಾನು ಇಲ್ಲದ ಸಮಯದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ಇಬ್ಬರನ್ನೂ ಜುಲೈ 17ರಂದು ವಿಚಾರಣೆಗೆ ಬರುವಂತೆ ಸೂಚಿಸಿದ್ದೇನೆ- ರಮೇಶ್ ಕುಮಾರ್
5:12 PM, 10 Jul
ಕೆ. ಸುಧಾಕರ್ ಅವರನ್ನು ಬಿಟ್ಟು ಕಳುಹಿಸುವಂತೆ ಅವರ ಬೆಂಬಲಿಗರಿಂದ ಪ್ರತಿಭಟನೆ.
5:11 PM, 10 Jul
ವಿಧಾನಸೌಧದ ಮೂರನೇ ಮಹಡಿಗೆ ತೆರಳಿದ ಸಿದ್ದರಾಮಯ್ಯ. ಸುಧಾಕರ್ ಅವರ ಜತೆ ಚರ್ಚಿಸಿ ಮನವೊಲಿಸಲು ಪ್ರಯತ್ನ.
5:07 PM, 10 Jul
ವಿಧಾನಸೌಧಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
READ MORE

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Live Updates of Karnataka Political development in Mumbai and Bengaluru DK Shivakumar to meet rebel Congress and JDS MLAs. ಮುಂಬೈಗೆ ದೌಡಾಯಿಸಿದ ಡಿಕೆಶಿಗೆ ತೆರೆಯದ ಬಾಗಿಲು Live Updates
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more