ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಚುಟುಕು ಚಿತ್ರಣ

|
Google Oneindia Kannada News

ಕರ್ನಾಟಕದ ರಾಜಕೀಯ ಹೈಡ್ರಾಮಾ ಗುರುವಾರವೂ ಮುಂದುವರೆದಿದ್ದು, ಮುಂಬೈನಲ್ಲಿ ಕೂತಿದ್ದ ಅತೃಪ್ತ ಶಾಸಕರ ದಂಡು ಸುಪ್ರಿಂ ಕೋರ್ಟ್‌ ಆದೇಶದಲ್ಲಿ ಬೆಂಗಳೂರಿಗೆ ಬಂದು ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ್ದು ಈ ದಿನದ ಹೈಲೆಟ್.

ಸುಪ್ರಿಂಕೋರ್ಟ್ ಸೂಚನೆಯಂತೆ ಅತೃಪ್ತ ಶಾಸಕರು ಸ್ಪೀಕರ್ ಅವರನ್ನು ಭೇಟಿಯಾಗಿ ಪುನಃ ರಾಜೀನಾಮೆ ಸಲ್ಲಿಸಬೇಕಿತ್ತು. ಅಂತೆಯೇ ತರಾತುರಿಯಲ್ಲಿ ವಿಶೇಷ ವಿಮಾನದಲ್ಲಿ ಬಂದ ಶಾಸಕರು ಸ್ಪೀಕರ್ ಅವರಿಗೆ ಹೊಸ ರಾಜೀನಾಮೆ ಸಲ್ಲಿಸಿ ಮತ್ತೆ ಮರಳಿ ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಿದರು.

Live Updates in Kannada Karnataka political developments mumbai bengaluru

ಬುಧವಾರದಂದು ರಾಜ್ಯ ರಾಜಕಾರಣದಲ್ಲಿ ಏನೇನೆಲ್ಲಾ ನಡೆಯಿತು ಎಂಬ ಸಮಗ್ರ ಚಿತ್ರಣ ಚಿತ್ರ ಸಹಿತ ಇಲ್ಲಿದೆ...

Newest FirstOldest First
11:37 PM, 11 Jul

ಸಾ.ರಾ.ಮಹೇಶ್-ಬಿಜೆಪಿ ನಾಯಕರ ಭೇಟಿ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ, ಅದೊಂದು ಆಕಸ್ಮಿಕ ಭೇಟಿಯಷ್ಟೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸುಭದ್ರವಾಗಿದೆ ಎಂದು ಹೇಳಿದ್ದಾರೆ.
11:36 PM, 11 Jul

ಜೆಡಿಎಸ್ ಸಚಿವ ಸಾರಾ.ಮಹೇಶ್ ಅವರು ಗೆಸ್ಟ್‌ ಹೌಸ್ ಒಂದರಲ್ಲಿ ಬಿಜೆಪಿ ನಾಯಕರಾದ ಕೆ.ಎಸ್.ಈಶ್ವರಪ್ಪ ಮತ್ತು ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ ರಾವ್ ಅವರನ್ನು ಭೇಟಿ ಆದರು. ಈ ಭೇಟಿಯು ಜೆಡಿಎಸ್‌-ಬಿಜೆಪಿ ಮೈತ್ರಿ ಬಗ್ಗೆ ಊಹಾಪೋಹ ಹುಟ್ಟಿಸಿತು.
7:50 PM, 11 Jul

ಮಿಂಚಿನ ವೇಗದಲ್ಲಿ ರಾಜೀನಾಮೆ ಅಂಗೀಕಾರ ಮಾಡಲು ಸಾಧ್ಯವಿಲ್ಲ, ರಾಜೀನಾಮೆ ಅಂಗೀಕಾರಕ್ಕೆ ಅದರದ್ದೇ ಆದ ಕೆಲವು ನಿಯಮಗಳಿವೆ, ನಿಯಮಗಳಿಗೆ ಬದ್ಧವಾಗಿಯೇ ರಾಜೀನಾಮೆ ಅಂಗೀಕಾರ ಮಾಡಬೇಕಾಗುತ್ತದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
7:38 PM, 11 Jul

ಇಂದು ಸ್ಪೀಕರ್ ಕಚೇರಿಗೆ ಅತೃಪ್ತ ಶಾಸಕರು ಆಗಮಿಸಿದ್ದು, ರಾಜೀನಾಮೆ ಸಲ್ಲಿಸಿದ್ದು, ಕಚೇರಿಯಲ್ಲಿ ನಡೆದ ಎಲ್ಲ ಕಾರ್ಯಕಲಾಪಗಳನ್ನು ಸ್ಪೀಕರ್ ಅವರು ವಿಡಿಯೋ ಮಾಡಿಸಿದ್ದು, ಅದನ್ನು ಸುಪ್ರಿಂ ಕೋರ್ಟ್‌ಗೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
7:32 PM, 11 Jul

ಇಂದು ಕಚೇರಿಗೆ ಬಂದಿದ್ದ ಅತೃಪ್ತ ಶಾಸಕರು ಹೊಸದಾಗಿ ಇಂದು ರಾಜೀನಾಮೆಯಲ್ಲಿ ಸಲ್ಲಿಸಿದ್ದಾರೆ. ಆ ರಾಜೀನಾಮೆಗಳನ್ನು ಪರಿಶೀಲಿಸಿ, ಆ ರಾಜೀನಾಮೆಗಳು ಪ್ರಮಾಣಿಕವಾದುವೇ, ಒತ್ತಡದಲ್ಲಿ ಸಲ್ಲಿಸಿದ ರಾಜೀನಾಮೆ ಅಲ್ಲವೇ ಎಂಬುದನ್ನು ನಾನು ವಿವೇಚನೆ ನಡೆಸಿ ಆ ನಂತರ ರಾಜೀನಾಮೆಯನ್ನು ಅಂಗೀಕಾರ ಮಾಡುತ್ತೇನೆ ಎಂದು ರಮೇಶ್ ಕುಮಾರ್ ಹೇಳಿದರು.
7:30 PM, 11 Jul

ಇಂದು ಹೊಸದಾಗಿ ರಾಜೀನಾಮೆ ಸಲ್ಲಿಸಿದ ಶಾಸಕರ ರಾಜೀನಾಮೆಯನ್ನು ಸದ್ಯಕ್ಕೆ ಅಂಗೀಕಾರ ಮಾಡಲಾಗುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
7:26 PM, 11 Jul

ಕೆಲಸದ ದಿನಗಳನ್ನು ಲೆಕ್ಕ ಹಾಕಿದರೆ ಕೇವಲ ಮೂರು ದಿನಗಳು ಮಾತ್ರ (ಸೋಮವಾರದಿಂದ ಬುಧವಾರ) ಆಗಿವೆ. ಆದರೆ ಇದನ್ನು ವಿಳಂಬ ಎಂದು ಹುಯಿಲು ಹೊಡೆದುಕೊಳ್ಳುತ್ತಿದ್ದಾರೆ. ಅವರು ಮುಂಬೈಗೆ ಹೋಗಿದ್ದರು, ಅಲ್ಲಿಂದ ದೆಹಲಿಗೆ ಹೋಗಿ ಸುಪ್ರಿಂ ಕೋರ್ಟ್‌ಗೆ ಹೋಗಿದ್ದಾರೆ ಆದರೆ ನನಗೆ ಅವರು ರಾಜೀನಾಮೆ ನೀಡುವ ಮುನ್ನಾ ಮಾಹಿತಿ ಸಹ ನೀಡಿರಲಿಲ್ಲ.
Advertisement
7:17 PM, 11 Jul

ನನ್ನನ್ನು ಯಾರೂ ನಿಯಂತ್ರಿಸಲು ಸಾಧ್ಯವಿಲ್ಲ, ಹಾಗೆಯೇ ನನ್ನನ್ನು ಯಾರೂ ಅವರವರ ತಾಳಕ್ಕೆ ತಕ್ಕಂತೆ ಕುಣಿಸಲು ಸಾಧ್ಯವಿಲ್ಲ. ನಾನು ಸಾರ್ವಜನಿಕ ಜೀವನಕ್ಕೆ ಬಂದು 40 ವರ್ಷವಾಯಿತು, ನಾನು ಜನರ ಭಾವನೆಗೆ, ಸಂವಿಧಾನದ ಆಶಯಕ್ಕೆ ಬದ್ಧವಾಗಿ ಮಾತ್ರವೇ ನಡೆದುಕೊಳ್ಳುತ್ತೇನೆ ಎಂದು ರಮೇಶ್ ಕುಮಾರ್ ಹೇಳಿದರು.
7:11 PM, 11 Jul

ಸ್ಪೀಕರ್‌ ಮುಂದೆ ಹಾಜರಾಗಿದ್ದ ಅತೃಪ್ತ ಶಾಸಕರು ಮರಳಿ ಎಚ್‌ಎಎಲ್‌ಗೆ ತೆರಳುತ್ತಿದ್ದು, ಅಲ್ಲಿಂದ ಮತ್ತೆ ಮುಂಬೈಗೆ ಹಾರಲಿದ್ದಾರೆ.
7:10 PM, 11 Jul

ಸ್ಪೀಕರ್ ಅವರ ಕಾರ್ಯಕ್ಷಮತೆ ಬಗ್ಗೆ, ವಿಳಂಬ ನೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಮತ್ತು ಸ್ಪೀಕರ್‌ ನಡೆ ವಿರುದ್ಧ ವರದಿ ಮಾಡಿದ್ದ ಮಾಧ್ಯಮಗಳ ಬಗ್ಗೆ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿ, ಆರನೇ ತಾರೀಖಿನಿಂದ ಆದ ಘಟನಾವಳಿಗಳನ್ನು ವಿವರಸಿ ತಾವು ನಿಯಮಬದ್ಧವಾಗಿ ನಡೆದುಕೊಂಡಿರುವುದಾಗಿ ಹೇಳಿದರು.
6:30 PM, 11 Jul

ವಿಡಿಯೋ: ಮುಂಬೈನಿಂದ ಆಗಮಿಸಿದ ಅತೃಪ್ತ ಶಾಸಕರಲ್ಲಿ ಒಬ್ಬರಾಗಿರುವ ಭೈರತಿ ಬಸವರಾಜು ಅವರು ಮೊದಲಿಗರಾಗಿ ಓಡೋಡಿ ಬಂದು ಸ್ಪೀಕರ್ ಕಚೇರಿ ಸೇರಿದರು.
6:28 PM, 11 Jul

ಮುಂಬೈನಿಂದ ಆಗಮಿಸಿರುವ ಅತೃಪ್ತ ಶಾಸಕರ ವಿಚಾರಣೆಯನ್ನು ನಡೆಸುತ್ತಿರುವ ಸ್ಪೀಕರ್ ರಮೇಶ್ ಕುಮಾರ್ ಅವರು, ವಿಚಾರಣೆ ಮತ್ತು ಹೊಸ ರಾಜೀನಾಮೆ ಸ್ವೀಕರಿಸಿದ ಬಳಿಕ ಏಳು ಗಂಟೆ ವೇಳೆಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ.
Advertisement
6:21 PM, 11 Jul

ಸ್ಪೀಕರ್ ಕಚೇರಿಗೆ ಹಲವು ವಕೀಲರು ಆಗಮಿಸಿದ್ದಾರೆ. ಸ್ಪೀಕರ್ ಅವರೇ ವಕೀಲರನ್ನು ಕರೆಸಿರುವ ಸಾಧ್ಯತೆ ಇದೆ.
6:17 PM, 11 Jul

ಮುಂಬೈನಿಂದ ಬಂದಿಳಿದ ಅತೃಪ್ತ ಶಾಸಕರು ತರಾತುರಿಯಲ್ಲಿ ವಿಧಾನಸೌಧದ ಸ್ಪೀಕರ್ ಅವರ ಕಚೇರಿಗೆ ಧಾವಿಸಿದರು.
6:13 PM, 11 Jul

ಮುಂಬೈನಿಂದ ಬಂದ ಎಲ್ಲ ಅತೃಪ್ತ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಅವರ ಕಚೇರಿಗೆ ಹೋದರು. ಕ್ರಮಬದ್ಧವಾಗಿಲ್ಲದ ರಾಜೀನಾಮೆ ಕೊಟ್ಟಿದ್ದ ಶಾಸಕರು ಈಗ ಪುನಃ ರಾಜೀನಾಮೆ ಸಲ್ಲಿಸಲಿದ್ದಾರೆ. ಕ್ರಮಬದ್ಧವಾದ ರಾಜೀನಾಮೆ ಸಲ್ಲಿಸಿರುವ ಶಾಸಕರು ರಮೇಶ್ ಕುಮಾರ್ ಅವರ ವಿಚಾರಣೆ ಎದುರಿಸಲಿದ್ದಾರೆ.
6:07 PM, 11 Jul

ತರಾತುರಿಯಲ್ಲಿ ಸ್ಪೀಕರ್ ಕಚೇರಿಯತ್ತ ಓಡುತ್ತಿರುವ ಶಾಸಕರು.
6:06 PM, 11 Jul

ಸದನಕ್ಕೆ ಹಾಜರಾಗದೆ ಇದ್ದರೆ, ಸರ್ಕಾರದ ಪರವಾಗಿ ಮತ ಚಲಾಯಿಸದೆ ಇದ್ದರೆ ಅನುಚ್ಛೇದ 10ರ ಅಡಿಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
6:05 PM, 11 Jul

ನಾಳೆಯಿಂದ ವಿಧಾನಸಭೆ ಅಧಿವೇಶನ. ಕಲಾಪದಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಸರ್ಕಾರದ ಮುಖ್ಯ ಸಚೇತಕರಿಂದ ವಿಪ್ ಜಾರಿ.
6:01 PM, 11 Jul

ಆರು ಗಂಟೆಯಾದರೂ ವಿಧಾನಸೌಧ ತಲುಪದ ಅತೃಪ್ತ ಶಾಸಕರು
5:58 PM, 11 Jul

ಸುಪ್ರೀಂಕೋರ್ಟ್ ನೀಡಿರುವ ಸಮಯ ಮೀರುತ್ತಿರುವುದಿಂದ ಗಡಿಬಿಡಿಯಲ್ಲಿ ದೌಡಾಯಿಸುತ್ತಿರುವ ಶಾಸಕರು.
5:45 PM, 11 Jul

ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೂವರು ಅತೃಪ್ತ ಶಾಸಕರಿರುವ ಮತ್ತೊಂದು ವಿಮಾನ.
5:41 PM, 11 Jul

ಝೀರೋ ಟ್ರಾಫಿಕ್‌ನಲ್ಲಿ ವಿಧಾನಸೌಧದತ್ತ ಆಗಮಿಸುತ್ತಿರುವ ಅತೃಪ್ತ ಶಾಸಕರ ವಾಹನ
5:22 PM, 11 Jul

ಸ್ಪೀಕರ್ ಕಚೇರಿಯಲ್ಲಿ ವಿಎಸ್ ಉಗ್ರಪ್ಪ ಮತ್ತು ಕೋನರೆಡ್ಡಿ. ಇಬ್ಬರನ್ನೂ ಹೊರಕ್ಕೆ ಕಳುಹಿಸುವಂತೆ ಬಿಜೆಪಿ ಆಗ್ರಹ. ನಮ್ಮನ್ನೂ ಸ್ಪೀಕರ್ ಕಚೇರಿ ಒಳಗೆ ಬಿಡಿ ಎಂದು ಪಟ್ಟು ಹಿಡಿದ ಬಿಜೆಪಿ
5:16 PM, 11 Jul

ಮೊದಲ ವಿಮಾನದಲ್ಲಿ ಆರು ಮಂದಿ ಶಾಸಕರ ಆಗಮನ. ಉಳಿದ ಮೂವರು ಮತ್ತೊಂದು ವಿಮಾನದಲ್ಲಿ ಬರಲಿದ್ದಾರೆ.
5:14 PM, 11 Jul

ಶಾಸಕರು ಸಾಗುವ ಮಾರ್ಗದಲ್ಲಿ ಸೇರಿರುವ ಪ್ರತಿಭಟನಾಕಾರರು. ಶಾಸಕರು ಹಣಕ್ಕಾಗಿ ಮಾರಿಕೊಂಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಶಾಸಕರ ವಿರುದ್ಧ ಘೋಷಣೆ.
5:13 PM, 11 Jul

ಪ್ರತಿಕೂಲ ಹವಾಮಾನದ ಕಾರಣದಿಂದ ಅತೃಪ್ತ ಶಾಸಕರ ಆಗಮನ ವಿಳಂಬ
5:04 PM, 11 Jul

ವಿಧಾನಸೌಧ ಪ್ರವೇಶಿಸಲು ಪಶ್ಚಿಮ ಬಾಗಿಲಿನಿಂದ ಬಂದ ಬಿಜೆಪಿ ನಾಯಕರಿಗೆ ತಡೆ. ಉತ್ತರ ಅಥವಾ ದಕ್ಷಿಣ ಬಾಗಿಲಿನಿಂದ ಹೋಗುವಂತೆ ಸೂಚನೆ
5:03 PM, 11 Jul

ವಿಧಾನಸೌಧದ ಪಕ್ಕದಲ್ಲಿರುವ ವಿಕಾಸಸೌಧಕ್ಕೆ ಯಾರೂ ಪ್ರವೇಶಿಸದಂತೆ ನಿರ್ಬಂಧ.
4:59 PM, 11 Jul

ವಿಧಾನಸೌಧಕ್ಕೆ ವಕೀಲರಾದ ರಮೇಶ್ ಬಾಬು, ಎಪಿ ರಂಗನಾಥ್ ಆಗಮನ. ಮೂವರು ಜೆಡಿಎಸ್ ಶಾಸಕರ ಅನರ್ಹತೆಗೆ ಜೆಡಿಎಸ್ ಪರ ಸ್ಪೀಕರ್ ಮುಂದೆ ವಾದ ಮಂಡಿಸಲಿರುವ ವಕೀಲರು.
4:50 PM, 11 Jul

ಅತೃಪ್ತರ ವಿಚಾರಣೆಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಅದಕ್ಕಾಗಿ ವಿಡಿಯೋ ಕ್ಯಾಮೆರಾ ತರಿಸಿರುವ ಸ್ಪೀಕರ್ ಕಚೇರಿ ಸಿಬ್ಬಂದಿ
READ MORE

English summary
Live Updates in Kannada of Karnataka Political development in Mumbai and Bengaluru. More MLAs likely to resign on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X