• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏನಿದೆಯೋ ಸದನದಲ್ಲಿಯೇ ಎದುರಿಸುತ್ತೇನೆ: ಕುಮಾರಸ್ವಾಮಿ

|

ಬೆಂಗಳೂರು, ಜುಲೈ 12: ಅತೃಪ್ತ ಶಾಸಕರ ರಾಜೀನಾಮೆ ಮತ್ತು ಅನರ್ಹತೆಯ ಕುರಿತಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರಕ್ಕೆ ಮುಂದೂಡಿದೆ. ಅಲ್ಲಿಯವರೆಗೂ ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದೆ.

ಸುಪ್ರೀಂಕೋರ್ಟ್ ಆದೇಶ : ಮೈತ್ರಿ ಸರ್ಕಾರ, ಅತೃಪ್ತ ಶಾಸಕರು ಸೇಫ್

ಇದರ ನಡುವೆ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ತಾವು ವಿಶ್ವಾಸಮತ ಯಾಚನೆಗೆ ಸಿದ್ಧರಾಗಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ವಿಶ್ವಾಸ ಮತ ಯಾಚನೆ ತಮಗೆ ಅನಿವಾರ್ಯವಾಗಿದ್ದು, ಅದಕ್ಕಾಗಿ ಸಮಯಾವಕಾಶ ನಿಗದಿಪಡಿಸುವಂತೆ ಕುಮಾರಸ್ವಾಮಿ ಅವರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಕೋರಿದ್ದಾರೆ.

Live Updates in Kannada Karnataka political crisis developments friday mumbai bengaluru

ಅತೃಪ್ತ ಶಾಸಕರ ಅನರ್ಹತೆ ಕುರಿತಾದ ಅರ್ಜಿ ಹಾಗೂ ರಾಜೀನಾಮೆ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಶಾಸಕರ ಪರ ವಕೀಲ ಮುಕುಲ್ ರೋಹಟಗಿ, ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಮುಖ್ಯಮಂತ್ರಿ ಪರ ವಕೀಲ ರಾಜೀವ್ ಧವನ್ ವಾದ ಮಂಡಿಸಿದರು. ಈ ದಿನ ಮುಂದೇನು ನಡೆಯಲಿದೆ? ಈ ಎಲ್ಲ ವಿದ್ಯಮಾನಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

Newest First Oldest First
5:18 PM, 12 Jul
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ವಿಜಯನಗರ ಕ್ಷೇತ್ರದ ಅತೃಪ್ತ ಶಾಸಕ ಆನಂದ್ ಸಿಂಗ್.
5:17 PM, 12 Jul
ಅತೃಪ್ತ ಶಾಸಕ ಮಹೇಶ್ ಕುಮಟ್ಟಳಿ ಅವರ ನಿವಾಸದ ಎದುರು ಕಾಂಗ್ರೆಸ್ ಪ್ರತಿಭಟನೆ
5:16 PM, 12 Jul
ವಿಶ್ವಾಸ ಮತಯಾಚನೆಗೆ ಸಮಯ ನಿಗದಿಪಡಿಸಲು ಸ್ಪೀಕರ್‌ಗೆ ಸಿಎಂ ಮನವಿ. ಸಲಹಾ ಸಮಿತಿ ಸಭೆಯಲ್ಲಿ ವಿಪಕ್ಷ ನಾಯಕರು ಭಾಗಿಯಾಗಿಲ್ಲ. ಅವರ ಅನುಪಸ್ಥಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದು ವಾಡಿಕೆ ಅಲ್ಲ ಎಂದ ರಮೇಶ್ ಕುಮಾರ್
4:51 PM, 12 Jul
ಸರ್ಕಾರಕ್ಕೆ ಬೆಂಕಿ ಹೊತ್ತಿದ್ದೇ ಬೆಳಗಾವಿಯಿಂದ. ಅತೃಪ್ತರ ಬೆಂಕಿಯನ್ನು ಆರಿಸಲು ಪ್ರಯತ್ನಿಸುತ್ತಿದ್ದೇವೆ- ಸತೀಶ್ ಜಾರಕಿಹೊಳಿ
4:50 PM, 12 Jul
ಬಿಜೆಪಿಯವರಿಗೆ ಅವರ ಶಾಸಕರ ಮೇಲೆ ನಂಬಿಕೆ ಇಲ್ಲ. ಅದಕ್ಕೆ ರೆಸಾರ್ಟ್‌ಗೆ ಹೋಗುತ್ತಿದ್ದಾರೆ- ಸಿದ್ದರಾಮಯ್ಯ
4:41 PM, 12 Jul
ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಏನೂ ಮಾತಾಡೊಲ್ಲ- ಸಿದ್ದರಾಮಯ್ಯ
4:37 PM, 12 Jul
ಮುನಿರತ್ನ ಅವರ ಮನವೊಲಿಸಿ ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಮಾಡುವುದಾಗಿ ಡಿಕೆ ಶಿವಕುಮಾರ್ ಅವರು ಸಿಎಂಗೆ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
4:37 PM, 12 Jul
ನಾಲ್ವರು ಅತೃಪ್ತ ಶಾಸಕರ ಜತೆ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
4:25 PM, 12 Jul
ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಿಲ್ಲ. ಕಾಂಗ್ರೆಸ್-ಜೆಡಿಎಸ್ ಎಂಬುದಿಲ್ಲ, ನಾವೆಲ್ಲ ಒಂದು- ಯುಟಿ ಖಾದರ್
4:17 PM, 12 Jul
ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ. ಗೌರವವಿದ್ದಿದ್ದರೆ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ವಿಶ್ವಾಸಮತ ಯಾಚನೆಗೆ ನಾವು ಸಿದ್ಧರಿದ್ದೇವೆ, ಕಳೆದ ಒಂದು ತಿಂಗಳಿನಿಂದ ಕಾಂಗ್ರೆಸ್-ಜೆಡಿಎಸ್ ನಾಯಕರು ನಮ್ಮ ಶಾಸಕರನ್ನು ಕರೆಯುತ್ತಿದ್ದಾರೆ. ಹೀಗಾಗಿ ರೆಸಾರ್ಟ್‌ಗೆ ಹೋಗುತ್ತಿದ್ದೇವೆ. ಪಕ್ಷೇತರ ಶಾಸಕರ ಬೆಂಬಲ ನಮಗಿದೆ- ಆರ್. ಅಶೋಕ್
4:10 PM, 12 Jul
ವಿಚಾರಣೆಗೆ ಶಾಸಕರು ಬಾರದೆ ಕಾದು ಕಾದು ಸಮಿತಿ ಸಭೆಗೆ ತೆರಳಿದ ರಮೇಶ್ ಕುಮಾರ್
4:06 PM, 12 Jul
ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದಿಲ್ಲ. ಈಗಲೂ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದೇನೆ- ಬಿಎಸ್‌ಪಿ ಶಾಸಕ ಎನ್ ಮಹೇಶ್
4:05 PM, 12 Jul
ನಮ್ಮ ಎಲ್ಲ ಶಾಸಕರೂ ಒಟ್ಟಿಗೆ ಇದ್ದರೆ ಸೂಕ್ತ ಎಂದು ಅಭಿಪ್ರಾಯಪಟ್ಟರು. ಹೀಗಾಗಿ ನಾವೆಲ್ಲರೂ ಒಟ್ಟಾಗಿ ರೆಸಾರ್ಟ್‌ನಲ್ಲಿ ಇರಲಿದ್ದೇವೆ. ಸೋಮವಾರ ಒಟ್ಟಿಗೆ ಕಲಾಪಕ್ಕೆ ಬರಲಿದ್ದೇವೆ- ಯಡಿಯೂರಪ್ಪ
4:04 PM, 12 Jul
ಅನೇಕ ರೀತಿ ವಾದಗಳೂ ನಡೆದಿವೆ. ಮುಂಬೈನಲ್ಲಿರುವ ಶಾಸಕರು ನಮ್ಮ ಸ್ನೇಹಿತರನ್ನು ಸಂಪರ್ಕಿಸಿದ್ದರು. ಮಂಗಳವಾರ ತೀರ್ಮಾನ ಬರುತ್ತದೆ. ಸಿಎಂ ವಿಶ್ವಾಸಮತ ಯಾಚಿಸುತ್ತಾರೆ, ಏನು ಮಾತನಾಡುತ್ತಾರೆ ಎಂಬುದನ್ನು ನೋಡಿ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ- ಯಡಿಯೂರಪ್ಪ
4:03 PM, 12 Jul
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸ್ಪೀಕರ್ ಅವರ ಹತ್ತು ಜನ ಶಾಸಕರ ರಾಜೀನಾಮೆ, ಅನರ್ಹತೆ ವಿಚಾರ ತೀರ್ಮಾನಿಸುವಂತಿಲ್ಲ. ನಿರ್ಣಯ ಕೈಗೊಳ್ಳುವಂತಿಲ್ಲ. ವಿಪ್ ಕೊಟ್ಟರೂ ಅದು ಅನ್ವಯವಾಗುವುದಿಲ್ಲ. ಮುಂಬೈನಲ್ಲಿರುವ ಹತ್ತು ಜನ ಶಾಸಕರಿಗೆ ನೈತಿಕ ಶಕ್ತಿ ಬಂದಿದೆ- ಯಡಿಯೂರಪ್ಪ
3:49 PM, 12 Jul
ಸ್ಪೀಕರ್ ಎದುರು ವಿಚಾರಣೆಗೆ ಹಾಜರಾಗದ ಮೂವರು ಅತೃಪ್ತ ಶಾಸಕರು. ನಾರಾಯಣ ಗೌಡ, ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರು ಇಂದು ವಿಚಾರಣೆಗೆ ಹಾಜರಾಗಬೇಕಿತ್ತು.
3:45 PM, 12 Jul
ಯಾವುದೇ ಸಂದರ್ಭವಿದ್ದರೂ ಸದನದಲ್ಲಿ ವಿಶ್ವಾಸಮತ ಯಾಚನೆ ಮೂಲಕ ಎದುರಿಸುತ್ತೇನೆ. ನೋಡೋಣ ಏನಾಗುತ್ತದೆ ಎಂದು- ಕುಮಾರಸ್ವಾಮಿ
3:36 PM, 12 Jul
ಕಾರ್ಯಕಲಾಪ ಸಲಹಾ ಸಮಿತಿ ಸಭೆಗೆ ಬಿಜೆಪಿ ಶಾಸಕರ ಗೈರು ಸಾಧ್ಯತೆ
3:22 PM, 12 Jul
ವಿಧಾನಸೌಧದ ಮೊಗಸಾಲೆಯಲ್ಲಿ ಸಚಿವರ ಜತೆ ಕುಮಾರಸ್ವಾಮಿ ಚರ್ಚೆ
3:20 PM, 12 Jul
ವಿಧಾನಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
3:08 PM, 12 Jul
ರಾಜೀನಾಮೆ ನೀಡಿದ ಮೂವರು ಶಾಸಕರನ್ನು ಇಂದು ವಿಚಾರಣೆಗೆ ಕರೆದಿದ್ದೆ. ಅವರು ಬಂದರೆ ವಿಚಾರಣೆ ಮಾಡುತ್ತೇನೆ. ಇಲ್ಲದಿದ್ದರೆ ಮನೆಗೆ ಹೋಗಿ ಮಲಗುತ್ತೇನೆ- ರಮೇಶ್ ಕುಮಾರ್
3:04 PM, 12 Jul
ನಮ್ಮ ಶಾಸಕ ಸ್ಥಾನದಿಂದ ಅನರ್ಹರಾದರೂ ತೊಂದರೆ ಇಲ್ಲ. ಈ ಸರ್ಕಾರ ಉಳಿಯಲೇಬಾರದು. ಏನು ಬೇಕಾದರೂ ಆಗಲಿ. ನಮ್ಮನ್ನು ಅಡ್ಡಡ್ಡಾ ಸೀಳಿದರೂ ಪರವಾಗಿಲ್ಲ- ರಮೇಶ್ ಜಾರಕಿಹೊಳಿ
3:01 PM, 12 Jul
ರಾಜ್ಯ ಕಾಂಗ್ರೆಸ್ ಶಾಸಕರನ್ನು ದೇವನಹಳ್ಳಿ ಸಮೀಪದ ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಷನ್ ರೆಸಾರ್ಟ್‌ಗೆ ವರ್ಗಾಯಿಸಲು ನಿರ್ಧರಿಸಲಾಗಿದೆ.
2:49 PM, 12 Jul
ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರೊಂದಿಗೆ ಚರ್ಚಿಸಿದ ಬಳಿಕ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ನಿರ್ಧಾರ ತೆಗೆದುಕೊಂಡಿದ್ದಾರೆ.
2:48 PM, 12 Jul
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೋಮವಾರವೇ ವಿಶ್ವಾಸಮತ ಯಾಚನೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
2:45 PM, 12 Jul
ಬಿಜೆಪಿಯ ನಾಲ್ವರು ಶಾಸಕರನ್ನು ಸೆಳೆದುಕೊಳ್ಳಲು ಜೆಡಿಎಸ್ ಪ್ರಯತ್ನಿಸಿದ್ದರಿಂದ ತನ್ನ ಶಾಸಕರನ್ನು ಉಳಿಸಿಕೊಳ್ಳಲು ಬಿಜೆಪಿ ರೆಸಾರ್ಟ್‌ಗೆ ಅವರನ್ನು ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
2:42 PM, 12 Jul
ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ಗೆ ರವಾನಿಸಲು ತೀರ್ಮಾನ. ಬಿಡದಿ ಬಳಿಯ ಈಗಲ್‌ಟನ್ ರೆಸಾರ್ಟ್‌ಗೆ ಕಾಂಗ್ರೆಸ್ ಶಾಸಕರನ್ನು ಕರೆದೊಯ್ಯಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
2:40 PM, 12 Jul
ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಜತೆಯಲ್ಲಿಯೇ ಒಗ್ಗಟ್ಟಾಗಿ ಇರುತ್ತೇವೆ- ಭೈರತಿ ಬಸವರಾಜ್
2:38 PM, 12 Jul
ಸುಪ್ರೀಂಕೋರ್ಟ್ ಆದೇಶ ಸ್ವಾಗತಿಸುತ್ತೇವೆ, ಪಾಲಿಸುತ್ತೇವೆ. ಮುಂಬೈಗೆ ಬಂದಿದ್ದೇವೆ. ದೇವರ ದರ್ಶನ ಮಾಡಿ ಮತ್ತೆ ರೆಸಾರ್ಟ್‌ಗೆ ಹೋಗುತ್ತೇವೆ. ಮಂಗಳವಾರದವರೆಗೂ ಕಾಯುತ್ತೇವೆ- ಮುಂಬೈನಲ್ಲಿ ಅತೃಪ್ತ ಶಾಸಕರು
2:36 PM, 12 Jul
ಸಿಎಂ ಅವರು ಮನಸಿನ ಮಾತನ್ನು ಹಠಾತ್ತಾಗಿ ಹೇಳಿದ್ದಾರೆ. ಅವರು ಎಂದು ವಿಶ್ವಾಸಮತ ಯಾಚನೆಗೆ ಎಂದು ಸಮಯ ಕೇಳುತ್ತಾರೆಯೋ ಮುರುದಿನ ಅದನ್ನು ಕಲಾಪ ಸಮಿತಿ ಮುಂದೆ ಇಡುತ್ತೇನೆ- ರಮೇಶ್ ಕುಮಾರ್
READ MORE

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka political crisis highlights Live Updates in Kannada: Karnataka Political developments in Mumbai and Bengaluru on Friday. Supreme Court may give its order on pleas of rebel MLAs and speaker. Congress and JDS issued whip to all their MLAs to attend assembly sessions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more