ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ : ಕ್ಷಣ-ಕ್ಷಣದ ಫಲಿತಾಂಶದ ಮಾಹಿತಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 16 : ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಹೆಬ್ಬಾಳ ಮತ್ತು ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಿದ್ದರೆ, ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಯಗಳಿಸಿದ್ದಾರೆ. [ಹೆಬ್ಬಾಳದಲ್ಲಿ ಕಾಂಗ್ರೆಸ್ ಸೋಲಿಗೆ 7 ಕಾರಣಗಳು!]

ಹೆಬ್ಬಾಳದ ಶಾಸಕರಾಗಿದ್ದ ಜಗದೀಶ್ ಕುಮಾರ್ (ಬಿಜೆಪಿ), ಬೀದರ್ ಶಾಸಕರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ (ಕೆಜೆಪಿ) ಮತ್ತು ದೇವದುರ್ಗದ ಶಾಸಕರಾಗಿದ್ದ ವೆಂಕಟೇಶ್ ನಾಯಕ್ (ಕಾಂಗ್ರೆಸ್) ಅವರ ಅಕಾಲಿಕ ಮರಣದಿಂದಾಗಿ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ಎದುರಾಗಿತ್ತು. [2013ರ ಚುನಾವಣೆಯಲ್ಲಿ ಗೆದ್ದವರು, ಸೋತವರು]

by poll

ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಹೆಬ್ಬಾಳ ಕ್ಷೇತ್ರದ ಮತ ಎಣಿಕೆ ಕೇಂದ್ರವನ್ನು ಬಳ್ಳಾರಿ ರಸ್ತೆಯ ಜಿಕೆವಿಕೆ ಕ್ಯಾಂಪಸ್‌ನಲ್ಲಿರುವ ಡೇರಿ ಸೈನ್ಸ್ ಕಾಲೇಜಿನಲ್ಲಿ, ದೇವದುರ್ಗ ಕ್ಷೇತ್ರದ ಮತ ಎಣಿಕೆ ರಾಯಚೂರಿನ ಇನ್ಫೆಂಟ್ ಜೀಸಸ್ ಪ್ರೌಢಶಾಲೆಯಲ್ಲಿ ಮತ್ತು ಬೀದರ್ ಕ್ಷೇತ್ರದ ಮತ ಎಣಿಕೆ ಕೇಂದ್ರವನ್ನು ಬಿ.ವಿ.ಭೂಮರೆಡ್ಡಿ ಕಾಲೇಜಿನಲ್ಲಿ ನಡೆಯಿತು. ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ... [ಉಪ ಚುನಾವಣೆ ಫಲಿತಾಂಶ : ಯಾರು, ಏನು ಹೇಳಿದರು?]

ಸಮಯ 5 ಗಂಟೆ : ಅಂತಿಮ ಫಲಿತಾಂಶ : ಹೆಬ್ಬಾಳ ವೈ.ಎ.ನಾರಾಯಣಸ್ವಾಮಿ 60367 ಮತಗಳು (ಬಿಜೆಪಿ), ಬೀದರ್ ರಹೀಂ ಖಾಣ್ 70138 ಮತಗಳು (ಕಾಂಗ್ರೆಸ್), ಕೆ.ಶಿವನಗೌಡ ನಾಯಕ್ 72647 ಮತಗಳು (ಬಿಜೆಪಿ) [ಫಲಿತಾಂಶಕ್ಕಾಗಿ ಇಲ್ಲಿ ನೋಡಿ]

ಸಮಯ 2 ಗಂಟೆ : ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಠೇವಣಿ ಕಳೆದುಕೊಂಡಿದೆ. ದೇವದುರ್ಗದಲ್ಲಿ ಪಕ್ಷದ ಅಭ್ಯರ್ಥಿ ಕರಿಯಮ್ಮ ಅವರು 9,156 ಮತಗಳನ್ನು ಪಡೆದರೆ, ಬೀದರ್‌ನಲ್ಲಿ ಎಂ.ಡಿ.ಅಜಾಯ್ ಖಾನ್ ಅವರು 4,421 ಮತಗಳನ್ನು ಪಡೆದಿದ್ದಾರೆ. ಹೆಬ್ಬಾಳದಲ್ಲಿ ಇಸ್ಮಾಯಿಲ್ ಷರೀಫ್ ಅವರು 3,666 ಮತ ಪಡೆದಿದ್ದಾರೆ.

ಸಮಯ 12.33 : ಹೆಬ್ಬಾಳದಲ್ಲಿ ಬಿಜೆಪಿಯ ವೈ.ಎ.ನಾರಾಯಣ ಸ್ವಾಮಿ, ದೇವದುರ್ಗದಲ್ಲಿ ಬಿಜೆಪಿಯ ಶಿವನಗೌಡ ನಾಯಕ್ ಮತ್ತು ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಹೀಂಖಾನ್ ಅವರು ಜಯಗಳಿಸಿದ್ದಾರೆ.

ಸಮಯ 12.3 : ಆಡಳಿತ ಪಕ್ಷ ಕಾಂಗ್ರೆಸ್‌ ಮುಖಭಂಗ ತಪ್ಪಿಸಿದ ರಹೀಂಖಾನ್, ಬೀದರ್‌ನಲ್ಲಿ ಕಾಂಗ್ರೆಸ್‌ಗೆ ಗೆಲುವು

ಸಮಯ 12.30 : ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಹೀಂಖಾನ್ ಅವರು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಪ್ರಕಾಶ್ ಖಂಡ್ರೆ ಅವರ ವಿರುದ್ಧ ರಹೀಂಖಾನ್ ಅವರು ಜಯಗಳಿಸಿದ್ದಾರೆ.

ಸಮಯ 12.11 : ಹೆಬ್ಬಾಳದಲ್ಲಿ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರು ಗೆಲುವು ಸಾಧಿಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಷರೀಫ್ ಅವರು ಮೊಮ್ಮಗ ರೆಹಮಾನ್ ಷರೀಫ್ ಅವರನ್ನು ಗೆಲ್ಲಿಸಲು ವಿಫಲರಾಗಿದ್ದಾರೆ.

ಸಮಯ 12 ಗಂಟೆ : ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. 16 ಸಾವಿರಕ್ಕೂ ಅಧಿಕ ಮತಗಳಿಂದ ಅವರು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ನಾಯಕ್ ವಿರುದ್ಧ ಜಯಗಳಿಸಿದ್ದಾರೆ.

ಸಮಯ 11.49 : ದೇವದುರ್ಗ ಕ್ಷೇತ್ರದ ಫಲಿತಾಂಶ 15ನೇ ಸುತ್ತಿನ ಬಳಿಕ : ಬಿಜೆಪಿಯ ಶಿವನಗೌಡ ನಾಯಕ್ 61,399, ಕಾಂಗ್ರೆಸ್‌ನ ರಾಜಶೇಖರ್ ನಾಯಕ್ 46,843, ಜೆಡಿಎಸ್‌ನ ಕರಿಯಮ್ಮ 8030 ಮತಗಳನ್ನು ಪಡೆದಿದ್ದಾರೆ. [ಸಿದ್ದರಾಮಯ್ಯ ಸರ್ಕಾರಕ್ಕೆ ತೀವ್ರ ಮುಖಭಂಗ, ಟೈಂ ಸರಿ ಇಲ್ಲ ಕಂಡ್ರಿ!]

ಸಮಯ 11.47 : ಹೆಬ್ಬಾಳ ಕ್ಷೇತ್ರದ ಫಲಿತಾಂಶ : ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರು 42,028, ಕಾಂಗ್ರೆಸ್‌ನ ರೆಹಮಾನ್ ಷರೀಫ್ 22,930, ಜೆಡಿಎಸ್‌ನ ಇಸ್ಮಾಯಿಲ್ ಷರೀಫ್ 2,831 ಮತಗಳು

ಸಮಯ 11.45 : ಬೀದರ್ ಕ್ಷೇತ್ರದ ಫಲಿತಾಂಶ 15ನೇ ಸುತ್ತಿನ ಬಳಿಕ : ಕಾಂಗ್ರೆಸ್‌ನ ರಹೀಂ ಖಾನ್ 48,926, ಬಿಜೆಪಿಯ ಪ್ರಕಾಶ್ ಖಂಡ್ರೆ ಅವರು 29, 960, ಮತ್ತು ಜೆಡಿಎಸ್‌ನ ಮೊಹಮದ್ ಅಯಾಜ್ 2698 ಮತಗಳು.

ಸಮಯ 11.40 : ಉಪ ಚುನಾವಣೆ ಫಲಿತಾಂಶದ ಬಗ್ಗೆ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, 'ಹೆಬ್ಬಾಳದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ದೇವದುರ್ಗ ಕ್ಷೇತ್ರದ ಬಗ್ಗೆ ನಿರೀಕ್ಷೆ ಇರಲಿಲ್ಲ. ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.

siddaramaiah

ಸಮಯ 11.38 : ಬೀದರ್ ಕ್ಷೇತ್ರದಲ್ಲಿ 16ನೇ ಸುತ್ತಿನ ಬಳಿಕ ಕಾಂಗ್ರೆಸ್‌ನ ರಹೀಂಖಾನ್ ಅವರಿಗೆ 18,966 ಮತಗಳ ಮುನ್ನಡೆ

ಸಮಯ 11.33 : ಉಪ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಭಾರೀ ಹಿನ್ನಡೆ

ಸಮಯ 11.26 : ಹೆಬ್ಬಾಳ ಕ್ಷೇತ್ರದ ಫಲಿತಾಂಶ : ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರು 16,171 ಮತಗಳ ಮುನ್ನಡೆ ಸಾಧಿಸಿದ್ದಾರೆ. ವೈ.ಎ.ನಾರಾಯಣಸ್ವಾಮಿ 37,640, ರೆಹಮಾನ್ ಷರೀಫ್ 21,469, ಇಸ್ಮಾಯಿಲ್ ಷರೀಫ್ 2,515 ಮತಗಳು

ಸಮಯ 11.18 : ದೇವದುರ್ಗ ಕ್ಷೇತ್ರದಲ್ಲಿ 13ನೇ ಸುತ್ತಿನ ಮತ ಎಣಿಕೆ ಬಳಿಕ ಬಿಜೆಪಿಯ ಶಿವನಗೌಡ ನಾಯಕ್ ಅವರು 12,398 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಸಮಯ 11.14 : ಬೀದರ್ ಕ್ಷೇತ್ರದ ಫಲಿತಾಂಶ 12ನೇ ಸುತ್ತಿನ ಬಳಿಕ : ಕಾಂಗ್ರೆಸ್‌ನ ರಹೀಂ ಖಾನ್ 42,452, ಬಿಜೆಪಿಯ ಪ್ರಕಾಶ್ ಖಂಡ್ರೆ ಅವರು 21,328 ಮತ್ತು ಜೆಡಿಎಸ್‌ನ ಮೊಹಮದ್ ಅಯಾಜ್ 2344 ಮತಗಳು.

ಸಮಯ 11.11 : ದೇವದುರ್ಗ ಕ್ಷೇತ್ರದ ಫಲಿತಾಂಶ 12ನೇ ಸುತ್ತಿನ ಬಳಿಕ : ಬಿಜೆಪಿಯ ಶಿವನಗೌಡ ನಾಯಕ್ 48,715, ಕಾಂಗ್ರೆಸ್‌ನ ರಾಜಶೇಖರ್ ನಾಯಕ್ 36,994, ಜೆಡಿಎಸ್‌ನ ಕರಿಯಮ್ಮ 6,735

ಸಮಯ 11.05 : ಹೆಬ್ಬಾಳ ಕ್ಷೇತ್ರದ ಫಲಿತಾಂಶ 9ನೇ ಸುತ್ತಿನ ಬಳಿಕ : ಬಿಜೆಪಿಯ ವೈ.ಎ.ನಾರಾಯಣಸ್ವಾಮಿ 34,269, ಕಾಂಗ್ರೆಸ್‌ನ ರೆಹಮಾನ್ ಷರೀಫ್ 18,926, ಜೆಡಿಎಸ್‌ನ ಇಸ್ಮಾಯಿಲ್ ಷರೀಫ್ 2,298 ಮತಗಳು

ಸಮಯ 10.50 : ಹೆಬ್ಬಾಳ ಕ್ಷೇತ್ರದ ಫಲಿತಾಂಶ : ಬಿಜೆಪಿಯ ವೈ.ಎ.ನಾರಾಯಣ ಸ್ವಾಮಿ 30,787 ಮತಗಳು, ಕಾಂಗ್ರೆಸ್‌ನ ರೆಹಮಾನ್ ಷರೀಫ್ 17,192 ಮತಗಳು, ಜೆಡಿಎಸ್‌ನ ಇಸ್ಮಾಯಿಲ್ ಷರೀಫ್ 2073 ಮತಗಳು

ಸಮಯ 10.46 : ದೇವದುರ್ಗ ಕ್ಷೇತ್ರದ ಫಲಿತಾಂಶ : ಬಿಜೆಪಿಯ ಶಿವನಗೌಡ ನಾಯಕ್ 40,447 ಮತಗಳು, ಕಾಂಗ್ರೆಸ್‌ನ ಎ.ರಾಜಶೇಖರ್ ನಾಯಕ್ 31,808, ಜೆಡಿಎಸ್‌ ಕರಿಯಮ್ಮ 5,529 ಮತಗಳು

ಸಮಯ 10.43 : ಬೀದರ್ ಫಲಿತಾಂಶ 10ನೇ ಸುತ್ತಿನ ಬಳಿಕ : ಕಾಂಗ್ರೆಸ್‌ನ ರಹೀಂಖಾನ್ 34,844, ಬಿಜೆಪಿಯ ಪ್ರಕಾಶ್ ಖಂಡ್ರೆ 19,274, ಜೆಡಿಎಸ್‌ನ ಮೊಹಮದ್ ಅಯಾಜ್ 1,829 ಮತಗಳು

ಸಮಯ 10.30 : ಹೆಬ್ಬಾಳದಲ್ಲಿ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರು 10,834 ಮತಗಳ ಮುನ್ನಡೆ ಸಾಧಿಸಿದ್ದಾರೆ. ವೈ.ಎ.ನಾರಾಯಣಸ್ವಾಮಿ 26,550, ಕಾಂಗ್ರೆಸ್‌ನ ರೆಹಮಾನ್ ಷರೀಫ್ 15,716 ಮತಗಳು, ಜೆಡಿಎಸ್ ಇಸ್ಮಾಯಿಲ್ ಷರೀಫ್ 1953 ಮತಗಳು

ಸಮಯ 10.23 : ಬೀದರ್ ಕ್ಷೇತ್ರದ ಫಲಿತಾಂಶ 8ನೇ ಸುತ್ತಿನ ಬಳಿಕ : ಕಾಂಗ್ರೆಸ್‌ನ ರಹೀಂಖಾನ್ 25,684, ಬಿಜೆಪಿಯ ಪ್ರಕಾಶ್ ಖಂಡ್ರೆ 17,524, ಜೆಡಿಎಸ್‌ನ ಮೊಹಮದ್ ಅಯಾಜ್ 1358 ಮತಗಳು

ಸಮಯ 10.19 : ದೇವದುರ್ಗ ಕ್ಷೇತ್ರದ ಫಲಿತಾಂಶ : ಬಿಜೆಪಿಯ ಶಿವನಗೌಡ ನಾಯಕ್ 32, 478, ಕಾಂಗ್ರೆಸ್‌ನ ರಾಜಶೇಖರ್ ನಾಯಕ್ 25, 704, ಜೆಡಿಎಸ್‌ನ ಕರಿಯಮ್ಮ 4,227 ಮತಗಳು

ಸಮಯ 10.10 : ಬೀದರ್ ಕ್ಷೇತ್ರದಲ್ಲಿ 7ನೇ ಸುತ್ತಿನ ನಂತರದ ಫಲಿತಾಂಶ : ಕಾಂಗ್ರೆಸ್‌ನ ರಹೀಂಖಾನ್ 21,527 ಮತಗಳು, ಬಿಜೆಪಿಯ ಪ್ರಕಾಶ್ ಖಂಡ್ರೆ 16,252 ಮತಗಳು, ಜೆಡಿಎಸ್‌ನ ಮೊಹಮದ್ ಅಯಾಜ್ 1205 ಮತಗಳು

ಸಮಯ 10.06 : ಹೆಬ್ಬಾಳ ಕ್ಷೇತ್ರದ ಫಲಿತಾಂಶ 5ನೇ ಸುತ್ತಿನ ನಂತರ : ಬಿಜೆಪಿಯ ವೈ.ಎ.ನಾರಾಯಣಸ್ವಾಮಿ 19,830, ಕಾಂಗ್ರೆಸ್‌ನ ರೆಹಮಾನ್ ಷರೀಫ್ 10,830 ಮತ್ತು ಜೆಡಿಎಸ್‌ನ ಇಸ್ಮಾಯಿಲ್ ಷರೀಫ್ 1,427

ಸಮಯ 10 ಗಂಟೆ : 7ನೇ ಸುತ್ತಿನ ಮತ ಎಣಿಕೆ ನಂತರವೂ ಬೀದರ್‌ನಲ್ಲಿ ಕಾಂಗ್ರೆಸ್‌ನ ರಹೀಂಖಾನ್ ಅವರು 4,577 ಮತಗಳ ಮುನ್ನಡೆ ಸಾಧಿಸಿದ್ದಾರೆ.

raheem khan

ಸಮಯ 9.57 : ಹೆಬ್ಬಾಳ ಕ್ಷೇತ್ರದ ಸದ್ಯದ ಫಲಿತಾಂಶ : ಬಿಜೆಪಿಯ ವೈ.ಎ.ನಾರಾಯಣಸ್ವಾಮಿ 16,598 ಮತಗಳು, ಕಾಂಗ್ರೆಸ್‌ನ ರೆಹಮಾನ್ ಷರೀಫ್ 7,752 ಮತಗಳು, ಜೆಡಿಎಸ್‌ನ ಇಸ್ಮಾಯಿಲ್ ಷರೀಫ್ 1038 ಮತಗಳು

ಸಮಯ 9.54 : 5ನೇ ಸುತ್ತಿನ ಮತ ಎಣಿಕೆ ಬಳಿಕ ಹೆಬ್ಬಾಳ ಕ್ಷೇತ್ರದಲ್ಲಿ ಬಿಜೆಪಿಯ ವೈ.ಎ.ನಾರಾಯಣ ಸ್ವಾಮಿ ಅವರು 8,864 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಸಮಯ 9.50 : ದೇವದುರ್ಗ ಕ್ಷೇತ್ರದ ಸದ್ಯದ ಫಲಿತಾಂಶ : ಬಿಜೆಪಿಯ ಶಿವನಗೌಡ ನಾಯಕ್ 47,591, ಕಾಂಗ್ರೆಸ್‌ನ ರಾಜಶೇಖರ ನಾಯಕ್ 40200, ಜೆಡಿಎಸ್‌ನ ಕರಿಯಮ್ಮ ನಾಯಕ್ 6,712 ಮತಗಳು

ಸಮಯ 9.45 : ಹೆಬ್ಬಾಳ ಕ್ಷೇತ್ರದ ಸದ್ಯದ ಫಲಿತಾಂಶ : ಬಿಜೆಪಿಯ ವೈ.ಎ.ನಾರಾಯಣಸ್ವಾಮಿ 12,702, ಕಾಂಗ್ರೆಸ್‌ನ ರೆಹಮಾನ್ ಷರೀಫ್ 6,236, ಜೆಡಿಎಸ್‌ನ ಇಸ್ಮಾಯಿಲ್ ಷರೀಫ್ 930 ಮತಗಳು

ಸಮಯ 9.39 : ಬೀದರ್ ಕ್ಷೇತ್ರ : ಕಾಂಗ್ರೆಸ್‌ನ ರಹೀಂ ಖಾನ್ 11,331, ಬಿಜೆಪಿಯ ಪ್ರಕಾಶ್ ಖಂಡ್ರೆ 9,646, ಜೆಡಿಎಸ್‌ನ ಮೊಹಮದ್ ಅಯಾಜ್ 487 ಮತಗಳು

ಸಮಯ 9.30 : ದೇವದುರ್ಗ ಕ್ಷೇತ್ರ : ಕಾಂಗ್ರೆಸ್‌ನ ರಾಜಶೇಖರ್ ನಾಯಕ್ 9,749, ಬಿಜೆಪಿಯ ಶಿವನಗೌಡ ನಾಯಕ್ 11,720 ಮತಗಳು

shivanagowda nayak

ಸಮಯ 9.26 : ಬೀದರ್ ಕ್ಷೇತ್ರ : ಕಾಂಗ್ರೆಸ್‌ನ ರಹೀಂ ಖಾನ್ 8,650, ಬಿಜೆಪಿಯ ಪ್ರಕಾಶ್ ಖಂಡ್ರೆ 6,848, ಮೊಹಮದ್ ಅಯಾಜ್ 395 ಮತಗಳು

ಸಮಯ 9.18 : ಹೆಬ್ಬಾಳದಲ್ಲಿ ಮೂರನೇ ಸುತ್ತಿನಲ್ಲಿಯೂ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರು ಮುನ್ನಡೆ ಸಾಧಿಸಿದ್ದಾರೆ

ya narayana swamy

ಸಮಯ 9.15 : ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿಯ ಶಿವನಗೌಡ ನಾಯಕ್ ಅವರು 2,100 ಮತಗಳ ಮುನ್ನಡೆ ಸಾಧಿಸಿದ್ದಾರೆ

ಸಮಯ 9.10 : ಹೆಬ್ಬಾಳ ಕ್ಷೇತ್ರ : ಬಿಜೆಪಿಯ ವೈ.ಎ.ನಾರಾಯಣಸ್ವಾಮಿ 11,491 ಮತಗಳು, ಕಾಂಗ್ರೆಸ್‌ನ ರೆಹಮಾನ್ ಷರೀಫ್ 6,700 ಮತಗಳು, ಜೆಡಿಎಸ್‌ನ ಇಸ್ಮಾಯಿಲ್ ಷರೀಫ್ 912 ಮತಗಳು

ಸಮಯ 9 ಗಂಟೆ : ಹೆಬ್ಬಾಳ ಕ್ಷೇತ್ರದಲ್ಲಿ ಎರಡನೇ ಸುತ್ತಿನ ಮತ ಎಣಿಕೆ ಆರಂಭವಾಗಿದ್ದು ಬಿಜೆಪಿಯ ವೈ.ಎ.ನಾರಾಯಣ ಸ್ವಾಮಿ ಅವರು 2 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಸಾಧಿಸಿದ್ದಾರೆ.

ಸಮಯ 8.56 : ಬೀದರ್ ಕ್ಷೇತ್ರ : ಕಾಂಗ್ರೆಸ್‌ನ ರಹೀಂ ಖಾನ್‌ 2,428 ಮತ, ಬಿಜೆಪಿಯ ಪ್ರಕಾಶ್ ಖಂಡ್ರೆ 2036 ಮತ, ಜೆಡಿಎಸ್‌ನ ಮೊಹಮದ್ ಅಯಾಜ್ 161 ಮತಗಳನ್ನು ಪಡೆದಿದ್ದಾರೆ.

ಸಮಯ 8.49 : ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿಯ ಶಿವನಗೌಡ ನಾಯಕ್ ಅವರಿಗೆ ಆರಂಭಿಕ ಮುನ್ನಡೆ

ಸಮಯ 8.47 : ಹೆಬ್ಬಾಳ ಕ್ಷೇತ್ರದಲ್ಲಿ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರಿಗೆ 1061 ಮತಗಳ ಮುನ್ನಡೆ ಸಿಕ್ಕಿದೆ

ಸಮಯ 8.45 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ವಿವಾದ ಉಪ ಚುನಾವಣೆ ಮೇಲೆ ಪ್ರಭಾವ ಬೀರಿದೆಯೇ? [ಸಿದ್ದರಾಮಯ್ಯನವರ ಕೈಗಡಿಯಾರದ ಟೈಂ ಲೈನ್]

ಸಮಯ 8.43 : ಹೆಬ್ಬಾಳ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಇಸ್ಮಾಯಿಲ್ ಷರೀಫ್ ಅವರು ಮತ ಎಣಿಕೆ ಆರಂಭವಾಗುತ್ತಿದ್ದಂತೆ ಮತ ಎಣಿಕೆ ಕೇಂದ್ರದಿಂದ ಹೊರ ನಡೆದಿದ್ದಾರೆ.

ಸಮಯ 8.40 : ದೇವದುರ್ಗ ಕ್ಷೇತ್ರದಲ್ಲಿ 16 ಅಂಚೆ ಮತಗಳು ಚಲಾವಣೆಯಾಗಿದ್ದು, ಸಿಬ್ಬಂದಿಗಳು ಅದನ್ನು ಎಣಿಕೆ ಮಾಡುತ್ತಿದ್ದಾರೆ

ಸಮಯ 8.35 : ಬೀದರ್ ಕ್ಷೇತ್ರದಲ್ಲಿ ಮೊದಲ ಸುತ್ತಿನ ಎಣಿಕೆ ಆರಂಭವಾಗಿದ್ದು ಕಾಂಗ್ರೆಸ್‌ನ ರಹೀಂಖಾನ್ ಮುನ್ನಡೆ ಸಾಧಿಸಿದ್ದಾರೆ.

ಸಮಯ 8.30 : ಬೀದರ್ ಕ್ಷೇತ್ರದಲ್ಲಿ 52 ಅಂಚೆ ಮತಗಳನ್ನು ತಿರಸ್ಕಾರ ಮಾಡಲಾಗಿದೆ. ಅಂಚೆ ಮತಗಳ ಮೇಲೆ ಸಹಿ ಇಲ್ಲದ ಕಾರಣ ಎಲ್ಲಾ ಮತಗಳು ತಿರಸ್ಕೃತಗೊಂಡಿವೆ.

ಸಮಯ 8 ಗಂಟೆ : ಮೂರು ಕ್ಷೇತ್ರಗಳ ಮತ ಎಣಿಕೆ ಕಾರ್ಯ ಆರಂಭ, ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದೆ

ಸಮಯ 7.30 : ಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಿ.ಕೆ.ಅಬ್ದುಲ್ ರೆಹಮಾನ್ ಷರೀಫ್, ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಮತ್ತು ಜೆಡಿಎಸ್‌ನ ಇಸ್ಮಾಯಿಲ್ ಷರೀಫ್ ಸೇರಿ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸಮಯ 7.25 : ದೇವದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎ.ರಾಜಶೇಖರ ನಾಯಕ್, ಬಿಜೆಪಿಯ ಶಿವನಗೌಡ ನಾಯಕ್ ಮತ್ತು ಜೆಡಿಎಸ್‌ನ ಕರಿಯಮ್ಮ ಅವರು ಕಣದಲ್ಲಿರುವ ಪ್ರಮುಖರು.

ಸಮಯ 7.15 : ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಹೀಂಖಾನ್, ಬಿಜೆಪಿಯ ಪ್ರಕಾಶ್ ಖಂಡ್ರೆ, ಜೆಡಿಎಸ್‌ನ ಎಂ.ಡಿ.ಅಯಾಜ್ ಖಾನ್ ಕಣದಲ್ಲಿರುವ ಪ್ರಮುಖರು.

English summary
Hebbal, Bidar, Devadurga by-elections results Live updates : By election result announced on Tuesday, February 16, 2016. Congress wins in Bidar, BJP takes Hebbal and Devadurga. The by-election was held following the death of sitting MLAs who were elected in 2013 Karnataka assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X