ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರನ ಮಾಹಿತಿ: ರಾಮನಗರದಲ್ಲಿ ಎರಡು ಸಜೀವ ಬಾಂಬ್ ಪತ್ತೆ

|
Google Oneindia Kannada News

ಬೆಂಗಳೂರು, ಜೂನ್ 26: ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ಬಂಧಿತನಾದ ಉಗ್ರ ಹಬೀಬುರ್ ರಹಮಾನ್ ನೀಡಿದ ಮಾಹಿತ ಆಧಾರದಲ್ಲಿ ರಾಮನಗರದಲ್ಲಿ ಎರಡು ಸಜೀವ ಬಾಂಬ್‌ಗಳನ್ನು ಪತ್ತೆ ಹಚ್ಚಲಾಗಿದೆ ಎನ್ನಲಾಗಿದೆ.

ಕಳೆದ 3 ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಸತ್ತ ಉಗ್ರರೆಷ್ಟು?ಹುತಾತ್ಮರಾದ ಸೈನಿಕರೆಷ್ಟು? ಕಳೆದ 3 ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಸತ್ತ ಉಗ್ರರೆಷ್ಟು?ಹುತಾತ್ಮರಾದ ಸೈನಿಕರೆಷ್ಟು?

ರಾಮನಗರದ ಟಿಪ್ಪು ನಗರದ ರಾಜಕಾಲುವೆಯಲ್ಲಿ ಎರಡು ಸಜೀವ ಬಾಂಬ್ ಪತ್ತೆಯಾಗಿದೆ. ಎಂಟು ಬಾಂಬ್‌ಗಳು ಇರುವುದಾಗಿ ಆತ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಉಳಿದಿರುವ ಇನ್ನೂ ಆರು ಬಾಂಬ್ ಹುಡುಕಲು ಎನ್‌ಐಎ, ಗುಪ್ತದಳ ಮತ್ತು ಪೊಲೀಸರಿಂದ ಪತ್ತೆ ಕಾರ್ಯಾಚರಣೆ ನಡೆದಿದೆ.

ಒಂದು ವರ್ಷದ ಹಿಂದೆ ರಾಜಕಾಲುವೆಗೆ ಎರಡು ಬಾಂಬ್‌ಗಳನ್ನು ಎಸೆದಿದ್ದಾಗಿ ಹಬೀಬುರ್ ರಹಮಾನ್ ತಿಳಿಸಿದ್ದ. 2018ರ ಆಗಸ್ಟ್‌ನಲ್ಲಿ ರಾಮನಗರದಲ್ಲಿ ಮುನೀರ್ ಶೇಖ್ ಎಂಬ ಉಗ್ರನನ್ನು ಎನ್‌ಐಎ ಬಂಧಿಸಿತ್ತು. ಆತ ಹಬೀಬುರ್‌ನ ಆಪ್ತ ಸ್ನೇಹಿತನಾಗಿದ್ದ. ಮುನೀರ್‌ನನ್ನು ಬಂಧಿಸುವ ವೇಳೆ ಪತ್ನಿ ಹಬೀಬುರ್‌ಗೆ ಎರಡು ಸ್ಫೋಟಕಗಳನ್ನು ನೀಡಿದ್ದರು ಎನ್ನಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಸ್ಫೋಟ: ದೊಡ್ಡಬಳ್ಳಾಪುರದಲ್ಲಿ ಉಗ್ರನ ಬಂಧನ ಪಶ್ಚಿಮ ಬಂಗಾಳದಲ್ಲಿ ಸ್ಫೋಟ: ದೊಡ್ಡಬಳ್ಳಾಪುರದಲ್ಲಿ ಉಗ್ರನ ಬಂಧನ

ಒಂದು ವರ್ಷದ ಹಿಂದೆ ರಾಜಕಾಲುವೆಗೆ ಎರಡು ಬಾಂಬ್‌ಗಳನ್ನು ಎಸೆದಿದ್ದಾಗಿ ಹಬೀಬುರ್ ರಹಮಾನ್ ತಿಳಿಸಿದ್ದ. 2018ರ ಆಗಸ್ಟ್‌ನಲ್ಲಿ ರಾಮನಗರದಲ್ಲಿ ಮುನೀರ್ ಶೇಖ್ ಎಂಬ ಉಗ್ರನನ್ನು ಎನ್‌ಐಎ ಬಂಧಿಸಿತ್ತು. ಆತ ಹಬೀಬುರ್‌ನ ಆಪ್ತ ಸ್ನೇಹಿತನಾಗಿದ್ದ. ಮುನೀರ್‌ನನ್ನು ಬಂಧಿಸುವ ವೇಳೆ ಪತ್ನಿ ಹಬೀಬುರ್‌ಗೆ ಎರಡು ಸ್ಫೋಟಕಗಳನ್ನು ನೀಡಿದ್ದರು ಎನ್ನಲಾಗಿದೆ.

ದೊಡ್ಡಬಳ್ಳಾಪುರದ ಮಸೀದಿಯೊಂದರ ಸಮೀಪದ ಬಾಡಿಗೆ ಮನೆಯಲ್ಲಿ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ ಸಂಘಟನೆಯ ಉಗ್ರ ಹಬೀಬುರ್ ರೆಹಮಾನ್‌ನನ್ನು ಮಂಗಳವಾರ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಬಂಧಿಸಿದ್ದರು.

live bombs found ramanagar west bengal explosion terrorist nia habibul rahman doddaballapur

ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಖಗ್ರಾಗಡ ಎಂಬಲ್ಲಿ 2014ರ ಅಕ್ಟೋಬರ್ 2ರಂದು ಹಸನ್ ಚೌಧರಿ ಎಂಬಾತನ ನಿವಾಸದಲ್ಲಿ ಕಚ್ಚಾ ಬಾಂಬ್ ತಯಾರಿಸುವ ಸಂದರ್ಭದಲ್ಲಿ ಸ್ಫೋಟ ಸಂಭವಿಸಿತ್ತು. ಇದರಲ್ಲಿ ಇಬ್ಬರು ಮೃತಪಟ್ಟು, ಒಬ್ಬ ಗಾಯಗೊಂಡಿದ್ದ. ಈ ಬಾಂಬ್ ತಯಾರಿಕೆಯಲ್ಲಿ ಭಾಗಿಯಾಗಿದ್ದ ಹಬೀಬುಲ್ ರೆಹಮಾನ್ ತಲೆಮರೆಸಿಕೊಂಡಿದ್ದ.

ಶಾಪಿಯಾನ್ ಎನ್‌ಕೌಂಟರ್‌: ನಾಲ್ವರು ಉಗ್ರರ ಹತ್ಯೆಗೈದ ಭಾರತೀಯ ಸೇನೆಶಾಪಿಯಾನ್ ಎನ್‌ಕೌಂಟರ್‌: ನಾಲ್ವರು ಉಗ್ರರ ಹತ್ಯೆಗೈದ ಭಾರತೀಯ ಸೇನೆ

ಈ ಪ್ರಕರಣದ ಕುರಿತು ಬುರ್ದ್ವಾನ್ ಜಿಲ್ಲಾ ಪೊಲೀಸರು ತನಿಖೆ ನಡೆಸಿದ್ದರು. ನಂತರ ಪಶ್ಚಿಮ ಬಂಗಾಳದ ಸಿಐಡಿಗೆ ವರ್ಗಾಯಿಸಲಾಗಿತ್ತು. ಕೊನೆಗೆ ಎನ್‌ಐಗೆ ವಹಿಸಲಾಗಿತ್ತು. ಹಬೀಬುರ್ ಜಾಡು ಹುಡುಕುತ್ತಿದ್ದ ಎನ್‌ಐಎ ಅಧಿಕಾರಿಗಳಿಗೆ ಕೊನೆಗೂ ಆತ ದೊಡ್ಡಬಳ್ಳಾಪುರಕ್ಕೆ ಬಂದು ಆಶ್ರಯ ಪಡೆದಿರುವುದು ಗೊತ್ತಾಗಿತ್ತು.

English summary
Two live bombs found in Ramanagar after police and NIA conducted searches on the basis of informations given by suspected terrorist Habibul Rahman who was arrested on Tuesday in Doddaballapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X