ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರುಷತ್ವ ಪರೀಕ್ಷೆಗೆ ಹಾಜರಾಗದ ರಾಘವೇಶ್ವರ ಶ್ರೀಗಳು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 30 : ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಪುರುಷತ್ವ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಮಕಥಾ ಗಾಯಕಿ ಪ್ರೇಮಲತಾ ಅವರ ಮೇಲೆ ನಡೆದ ಅತ್ಯಾಚಾರ ಆರೋಪ ಪ್ರಕರಣದ ಸಂಬಂಧ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2014ರ ಡಿಸೆಂಬರ್‌ನಲ್ಲಿ ರಾಘವೇಶ್ವರ ಶ್ರೀಗಳಿಗೆ ರಕ್ತದೊತ್ತಡ, ಹೃದಯ ಬಡಿತ, ನಾಡಿ ಮಿಡಿತ, ಇಸಿಜಿ ಸೇರಿ 13 ಪರೀಕ್ಷೆಗಳನ್ನು ಮಾಡಲಾಗಿತ್ತು. ಆಗ ಪುರುಷತ್ವ ಪರೀಕ್ಷೆ ನಡೆಸಿರಲಿಲ್ಲ. ಈಗ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ನಿರ್ದೇಶನದಂತೆ ಪುರುಷತ್ವ ಪರೀಕ್ಷೆ ಮಾಡಲಾಗುತ್ತಿದೆ. [ಪುರುಷತ್ವ ಪರೀಕ್ಷೆ ಎಂದರೇನು? ಏಕೆ ಮಾಡ್ಬೇಕು?]

ramachandrapura math

ಸೆ. 30ರಂದು ಬೆಳಗ್ಗೆ 9 ಗಂಟೆಗೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ಸಿಐಡಿ ರಾಘವೇಶ್ವರ ಶ್ರೀಗಳಿಗೆ ನೋಟಿಸ್ ಜಾರಿಗೊಳಿಸಿದೆ. ಖಾಲಿ ಹೊಟ್ಟೆಯಲ್ಲಿ ಆಸ್ಪತ್ರೆಗೆ ಆಗಮಿಸುವಂತೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಶ್ರೀಗಳಿಗೆ ಸೂಚಿಸಿದ್ದಾರೆ. [ರಾಘವೇಶ್ವರ ಶ್ರೀ ವಿರುದ್ಧದ ಚಾರ್ಜ್ ಶೀಟ್ ನಲ್ಲೇನಿದೆ?]

ಶ್ರೀಗಳಿಗೆ ಇಂದು ಜನನಾಂಗ ನಿಮಿರುವಿಕೆ ಪರೀಕ್ಷೆ (ಜೆನೈಟಲ್ ಎಕ್ಸಾಮಿನೇಷನ್), ವೀರ್ಯ ವಿಶ್ಲೇಷಣೆ (ಸೆಮನ್ ಅನಾಲಿಸೆಸ್), ನಾಳಗಳಲ್ಲಿ ರಕ್ತದ ಚಲನೆ ಪ್ರಮಾಣ (ಡೋಪ್ಲರ್ ಅಲ್ಟ್ರಾ ಸೌಂಡ್) ಹಾಗೂ ಸ್ನಾಯುಗಳ ರಕ್ತ ಚಲನೆ ಪ್ರಮಾಣದ (ಪೆಪವರೈನ್) ಪರೀಕ್ಷೆಗಳನ್ನು ಮಾಡಲಾಗುವುದು ಎಂದು ವಿಕ್ಟೋರಿಯಾ ಆಸ್ಪತ್ರೆ ಮುಖ್ಯ ಅಧೀಕ್ಷಕ ಡಾ.ದುರ್ಗಣ್ಣ ಹೇಳಿದ್ದಾರೆ.

ಸಮಯ 1 ಗಂಟೆ : ರಾಘವೇಶ್ವರ ಶ್ರೀಗಳು ಇಂದು ವೈದ್ಯಕೀಯ ಪರೀಕ್ಷೆಗೆ ಹಾಜರಾಗುವುದಿಲ್ಲ ಎಂದು ಮಹಾಮಂಡಲದ ಅಧ್ಯಕ್ಷ ವೈ.ವಿ.ಕೃಷ್ಣಮೂರ್ತಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸಮಯ 11.15 : ರಾಘವೇಶ್ವರ ಶ್ರೀಗಳು ಇಂದು ಪರೀಕ್ಷೆಗೆ ಹಾಜರಾಗದಿದ್ದರೆ ಮತ್ತೊಮ್ಮೆ ದಿನಾಂಕ ನಿಗದಿಪಡಿಸಿ ಸಿಐಡಿ ನೋಟಿಸ್ ಜಾರಿಗೊಳಿಸಬಹುದಾಗಿದೆ

ಸಮಯ 10.45 : ರಾಘವೇಶ್ವರ ಶ್ರೀಗಳು ಗಿರಿನಗರದ ಮಠದಿಂದ ಇನ್ನೂ ಹೊರಬಂದಿಲ್ಲ. ಹಲವಾರು ಭಕ್ತರು ಮಠಕ್ಕೆ ಆಗಮಿಸುತ್ತಿದ್ದಾರೆ

ಸಮಯ 10.25 : ಮಂಗಳವಾರ ತಡರಾತ್ರಿ ಕಾನೂನು ತಜ್ಞರ ಸಲಹೆ ಪಡೆದ ಬಳಿಕ ರಾಘವೇಶ್ವರ ಶ್ರೀಗಳು ಸಿಐಡಿಗೆ ಈ ಪತ್ರವನ್ನು ಬರೆದಿದ್ದಾರೆ.

ಸಮಯ 10.17 : 'ಹಿಂದೆ ವೈದ್ಯಕೀಯ ಪರೀಕ್ಷೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಿದ್ದೇನೆ. ಈಗ ನಡೆಯಲಿರುವ ಪರೀಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಆದ್ದರಿಂದ ಪರೀಕ್ಷೆಯನ್ನು ಕೈಬಿಡಬೇಕು' ಎಂದು ಶ್ರೀಗಳು ಸಿಐಡಿಗೆ ಬರೆದಿರುವ ಪತ್ರದಲ್ಲಿ ವಿವರಣೆ ನೀಡಿದ್ದಾರೆ.

ಸಮಯ 10 ಗಂಟೆ : ವೈದ್ಯಕೀಯ ಪರೀಕ್ಷೆಯನ್ನು ಕೈಬಿಡುವಂತೆ ರಾಘವೇಶ್ವರ ಶ್ರೀಗಳು ಸಿಐಡಿ ಡಿವೈಎಸ್ಪಿ ಬಿ.ಎಸ್.ಅಶೋಕ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ

ಸಮಯ 9.40 : ಶ್ರೀಗಳ ದೇಹದ ವಿವಿಧ ಭಾಗಗಳಲ್ಲಿ ಮಚ್ಚೆ ಹಾಗೂ ಇತರೆ ಗುರುತುಗಳಿವೆ ಎಂದು ಗಾಯಕಿ ಸಿಐಡಿಗೆ ಹೇಳಿಕೆ ನೀಡಿದ್ದಾರೆ. ಯಾವ-ಯಾವ ಭಾಗದಲ್ಲಿ ಮಚ್ಚೆ ಗುರುತುಗಳಿವೆ ಎಂಬ ಬಗ್ಗೆ ಸಿಐಡಿ ಅಧಿಕಾರಿಗಳು ವೈದ್ಯರಿಂದ ವರದಿ ಕೇಳಿದ್ದಾರೆ

ಸಮಯ 9.10 : ಇಂದು ಬೆಳಗ್ಗೆ 9 ಗಂಟೆಗೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು ಎಂದು ಸಿಐಡಿ ನೋಟಿಸ್ ನೀಡಿತ್ತು. 9 ಗಂಟೆಯಿಂದ 1 ಗಂಟೆಯವರೆಗೆ ಪರೀಕ್ಷೆ ನಡೆಯಬೇಕಿತ್ತು.

ಸಮಯ 9 ಗಂಟೆ : 9 ಗಂಟೆಯಾದರೂ ಶ್ರೀಗಳು ಇನ್ನೂ ಆಸ್ಪತ್ರೆಗೆ ಆಗಮಿಸಿಲ್ಲ

ಸಮಯ 8.50 : ವೈದ್ಯಕೀಯ ಪರೀಕ್ಷೆಗಾಗಿ ಡಾ.ಚಂದ್ರಶೇಖರ್ (ಮನೋ ವೈದ್ಯಕೀಯ ವಿಭಾಗದ ಮುಖ್ಯಸ್ಥರು), ಡಾ.ಎಸ್.ವೆಂಕಟರಾಘವ (ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ), ಡಾ.ಆರ್.ಕೇಶವಮೂರ್ತಿ (ನೆಪ್ರೋ ಯುರಾಲಜಿ ಸಂಸ್ಥೆ ಮುಖ್ಯಸ್ಥ), ಡಾ.ವೀರಣ್ಣಗೌಡ ಕೆ.ಎಂ (ಮೆಡಿಸಿನ್ಸ್ ವಿಭಾಗದ ಮುಖ್ಯಸ್ಥ) ನೇತೃತ್ವದ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ.

ಸಮಯ 8.30 : ಯಕ್ಷಗಾನ ಕಲಾವಿದೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿರುವ ಸೆಷೆನ್ಸ್ ಕೋರ್ಟ್ ಇಂದು ತೀರ್ಪು ಪ್ರಕಟಿಸಲಿದೆ.

ಸಮಯ 8.10 : ಸಿಐಡಿ ಡಿವೈಎಸ್ಪಿ ಬಿ.ಎಸ್.ಅಶೋಕ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದೆ

ಸಮಯ 8 ಗಂಟೆ : ಮಂಗಳವಾರ ರಾತ್ರಿ ರಾಘವೇಶ್ವರ ಶ್ರೀಗಳಿಂದ ಮಠದ ಆಡಳಿತ ಮಂಡಳಿ ಮತ್ತು ಕಾನೂನು ತಜ್ಞರ ಜೊತೆ ಚರ್ಚೆ

ಸಮಯ 7.30 : ರಾಘವೇಶ್ವರ ಭಾರತಿ ಸ್ವಾಮೀಜಿಗಳು ಗಿರಿನಗರದ ಮಠದಲ್ಲಿದ್ದಾರೆ

ಸಮಯ 7.15 : ರಾಘವೇಶ್ವರ ಶ್ರೀಗಳ ಪರೀಕ್ಷೆ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ

English summary
Ramachandrapura math Raghaveshwara Barathi Swamiji will underwent for a potency test on Wednesday September 30th at Victoria hospital, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X