ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆ: ಮೂಲ ಬಿಜೆಪಿಗರಲ್ಲಿ ಹತ್ತು ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ

|
Google Oneindia Kannada News

ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಯಾರ್ಯಾರ ಆಸೆಯನ್ನು ಈಡೇರಿಸಲು ಸಾಧ್ಯವಿಲ್ಲವೋ, ಅವರನ್ನೆಲ್ಲಾ ಒಂದು ಕಡೆ ಸಮಾಧಾನ ಮಾಡಿಕೊಂಡು ಬರುತ್ತಿರುವ ಸಿಎಂ ಯಡಿಯೂರಪ್ಪನವರಿಗೆ ಹೊಸಹೊಸ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇರುವುದು ತಲೆನೋವಾಗಿ ಪರಿಣಮಿಸುತ್ತಿದೆ.

ಗುರುವಾರ ಸಂಪುಟ ವಿಸ್ತರಣೆಗೆ ಸಿಎಂ ಮಹೂರ್ತ ಫಿಕ್ಸ್ ಮಾಡಿದ ನಂತರ, ಈ ಸಂಬಂಧದ ಚಟುವಟಿಕೆಗಳು ಗರಿಗೆದರುತ್ತಿವೆ. ಕೊನೆಯ ಕ್ಷಣದ ಲಾಬಿಗಳು ಜೋರಾಗಿ ನಡೆಯುತ್ತಿವೆ.

ಸಂಪುಟ ವಿಸ್ತರಣೆ ಕಗ್ಗಂಟು: 2ನೇ ಬ್ರಹ್ಮಗಂಟನ್ನು ಯಶಸ್ವಿಯಾಗಿ ಬಿಡಿಸಿದ ಸಿಎಂ ಬಿಎಸ್ವೈಸಂಪುಟ ವಿಸ್ತರಣೆ ಕಗ್ಗಂಟು: 2ನೇ ಬ್ರಹ್ಮಗಂಟನ್ನು ಯಶಸ್ವಿಯಾಗಿ ಬಿಡಿಸಿದ ಸಿಎಂ ಬಿಎಸ್ವೈ

ಕೊಟ್ಟ ಆಶ್ವಾಸನೆಯಂತೆ, ಗೂಟದ ಕಾರಿನ ಕನಸುಕಟ್ಟಿಕೊಂಡಿದ್ದ ಮೂವರಾದ ಆರ್.ಶಂಕರ್, ಎಂ.ಟಿ.ಬಿ ನಾಗರಾಜ್, ಮಹೇಶ್ ಕುಮಠಳ್ಳಿ ಅವರನ್ನು ಯಡಿಯೂರಪ್ಪ, ಮುಂದೆ ನೋಡೋಣ ಎಂದು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಎಸ್ವೈ ದೆಹಲಿಯಿಂದ ವಾಪಸ್ ಆಗುತ್ತಿದ್ದಂತೆಯೇ ಮೌನಕ್ಕೆ ಶರಣಾದ ಸಾಹುಕಾರ ಜಾರಕಿಹೊಳಿಬಿಎಸ್ವೈ ದೆಹಲಿಯಿಂದ ವಾಪಸ್ ಆಗುತ್ತಿದ್ದಂತೆಯೇ ಮೌನಕ್ಕೆ ಶರಣಾದ ಸಾಹುಕಾರ ಜಾರಕಿಹೊಳಿ

ಆದರೆ, ಏನು ಮಾಡುವುದು. ಹೊಸಹೊಸ ಆಕಾಂಕ್ಷಿಗಳು ಹುಟ್ಟತ್ತಲೇ ಇರುವುದು, ಬಿಜೆಪಿಗೆ ಇರಿಸುಮುರಿಸು ತರಿಸುತ್ತಿದೆ. ಈಗ ಇರುವ ದೊಡ್ಡ ಆಕಾಂಕ್ಷಿಗಳ ಪಟ್ಟಿಗೆ ಇನ್ನೋರ್ವರು ಸೇರಿಕೊಂಡಿದ್ದು, ಇವರಲ್ಲಿ ಎಷ್ಟು ಜನರ ದಾಹವನ್ನು ಯಡಿಯೂರಪ್ಪ ನೀಗಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಪಟ್ಟಿ ಹೀಗಿದೆ (ಮೂಲ ಬಿಜೆಪಿಗರು:

ಮೂಲ ಬಿಜೆಪಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ - 1

ಮೂಲ ಬಿಜೆಪಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ - 1

1. ಹಾಲಪ್ಪ ಆಚಾರ್ ಬಸಪ್ಪ
ಪ್ರತಿನಿಧಿಸುತ್ತಿರುವ ಕ್ಷೇತ್ರ: ಯಲಬುರ್ಗ

2. ಜಿ.ಎಚ್. ತಿಪ್ಪಾರೆಡ್ಡಿ
ಪ್ರತಿನಿಧಿಸುತ್ತಿರುವ ಕ್ಷೇತ್ರ: ಚಿತ್ರದುರ್ಗ

(ಚಿತ್ರದಲ್ಲಿ: ತಿಪ್ಪಾ ರೆಡ್ಡಿ)

ಮೂಲ ಬಿಜೆಪಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ - 2

ಮೂಲ ಬಿಜೆಪಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ - 2

3. ನರಸಿಂಹ ನಾಯಕ ಆಲಿಯಾಸ್ ರಾಜು ಗೌಡ
ಪ್ರತಿನಿಧಿಸುತ್ತಿರುವ ಕ್ಷೇತ್ರ: ಸುರಪುರ

4. ಹಾಲಾಡಿ ಶ್ರೀನಿವಾಸ ಶೆಟ್ಟಿ
ಪ್ರತಿನಿಧಿಸುತ್ತಿರುವ ಕ್ಷೇತ್ರ: ಕುಂದಾಪುರ

(ಚಿತ್ರದಲ್ಲಿ: ಹಾಲಾಡಿ ಶ್ರೀನಿವಾಸ ಶೆಟ್ಟಿ)

ಮೂಲ ಬಿಜೆಪಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ - 3

ಮೂಲ ಬಿಜೆಪಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ - 3

5. ಎಸ್. ಅಂಗಾರ
ಪ್ರತಿನಿಧಿಸುತ್ತಿರುವ ಕ್ಷೇತ್ರ: ಸುಳ್ಯ

6. ಅರವಿಂದ ಲಿಂಬಾವಳಿ
ಪ್ರತಿನಿಧಿಸುತ್ತಿರುವ ಕ್ಷೇತ್ರ: ಮಹದೇವಪುರ (ಬೆಂಗಳೂರು)

(ಚಿತ್ರದಲ್ಲಿ: ಎಸ್. ಅಂಗಾರ)

ಮೂಲ ಬಿಜೆಪಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ - 4

ಮೂಲ ಬಿಜೆಪಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ - 4

7. ಉಮೇಶ್ ವಿಶ್ವನಾಥ್ ಕತ್ತಿ
ಪ್ರತಿನಿಧಿಸುತ್ತಿರುವ ಕ್ಷೇತ್ರ: ಹುಕ್ಕೇರಿ

8. ಮುರುಗೇಶ್ ರುದ್ರಪ್ಪ ನಿರಾಣಿ
ಪ್ರತಿನಿಧಿಸುತ್ತಿರುವ ಕ್ಷೇತ್ರ: ಬೀಳಗಿ

(ಚಿತ್ರದಲ್ಲಿ: ಉಮೇಶ್ ಕತ್ತಿ)

ಮೂಲ ಬಿಜೆಪಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ - 5

ಮೂಲ ಬಿಜೆಪಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ - 5

9. ಸಿ.ಪಿ,ಯೋಗೀಶ್ವರ್
ಪ್ರತಿನಿಧಿಸುತ್ತಿರುವ ಕ್ಷೇತ್ರ: ಚನ್ನಪಟ್ಟಣದಲ್ಲಿ ಸೋಲು

10. ಎಂ.ಪಿ. ಕುಮಾರಸ್ವಾಮಿ
ಪ್ರತಿನಿಧಿಸುತ್ತಿರುವ ಕ್ಷೇತ್ರ: ಮೂಡಿಗೆರೆ

(ಚಿತ್ರದಲ್ಲಿ: ಯೋಗೀಶ್ವರ್)

English summary
List Of Ten BJP Leaders Demanding For Ministership To CM Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X